Kannada serial TRP: ಕನ್ನಡ ಕಿರುತೆರೆಯ ಟಾಪ್ 5 ಸೀರಿಯಲ್‌ಗಳು ಯಾವುವು?
Kannada serial TRP: ಕನ್ನಡ ಕಿರುತೆರೆ ಲೆಕ್ಕಾಚಾರಗಳು ನಿಂತಿರೋದು ಟಿಆರ್‌ಪಿ ಆಧಾರದ ಮೇಲೆ. ಪ್ರತಿವಾರ ರಿಲೀಸ್ ಆಗುವ ಟಿವಿ ರೇಟಿಂಗ್ ಲೆಕ್ಕ ಹಾಕೋದು ವೀಕ್ಷಣೆ ಆಧಾರದ ಮೇಲಾಗಿದೆ. ಜೀ ಕನ್ನಡ ತನ್ನ ನಂಬರ್ ಒನ್, ಸ್ಟಾರ್ ಸುವರ್ಣ (Star su ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದೆ. ಕಲರ್ಸ್ ಕನ್ನಡ 3ನೇ ಸ್ಥಾನದಲ್ಲಿ ಹಾಗೂ 4ನೇ ಸ್ಥಾನದಲ್ಲಿ ಸನ್ ಉದಯ ಇದೆ. ಹಾಗಿದ್ದರೆ, ಈ ನಾಲ್ಕು ವಾಹಿನಿಗಳ ಟಿಆರ್‌ಪಿ ರೇಟಿಂಗ್ ಹೀಗಿದೆ.
ಕನ್ನಡ ಕಿರುತೆರೆ ಧಾರಾವಾಹಿ -
ಕನ್ನಡ ಕಿರುತೆರೆ (Kannada Serial) ಲೆಕ್ಕಾಚಾರಗಳು ನಿಂತಿರೋದು ಟಿಆರ್‌ಪಿ ಆಧಾರದ ಮೇಲೆ. ಪ್ರತಿವಾರ ರಿಲೀಸ್ ಆಗುವ ಟಿವಿ ರೇಟಿಂಗ್ ಲೆಕ್ಕ ಹಾಕೋದು ವೀಕ್ಷಣೆ ಆಧಾರದ ಮೇಲಾಗಿದೆ. ಜೀ ಕನ್ನಡ (Zee Kannada) ತನ್ನ ನಂಬರ್ ಒನ್, ಸ್ಟಾರ್ ಸುವರ್ಣ (Star su ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದೆ. ಕಲರ್ಸ್ ಕನ್ನಡ 3ನೇ ಸ್ಥಾನದಲ್ಲಿ ಹಾಗೂ 4ನೇ ಸ್ಥಾನದಲ್ಲಿ ಸನ್ ಉದಯ ಇದೆ. ಹಾಗಿದ್ದರೆ, ಈ ನಾಲ್ಕು ವಾಹಿನಿಗಳ ಟಿಆರ್‌ಪಿ ರೇಟಿಂಗ್ ಹೀಗಿದೆ.
ಅಣ್ಣಯ್ಯ - 5.1 ಕರ್ಣ - 5.1 ಸರಿಗಮಪ ಲಿಟಲ್ ಚಾಂಪ್ಸ್ - 4.7 ಲಕ್ಷ್ಮಿ ನಿವಾಸ - 4.4 ಅಮೃತಧಾರೆ 4.3 ರೇಟ್ ಸಿಕ್ಕಿದೆ.
ಇದನ್ನೂ ಓದಿ: Aamir Khan: ನಾನು ಮದುವೆ ಆಗುತ್ತಿರುವುದು ನಿಜ; ಒಪ್ಪಿಕೊಂಡ ಆಮಿರ್ ಖಾನ್
ಇತ್ತೀಚೆಗೆ ಸ್ಟಾರ್ ಸುವರ್ಣ ಅವರ ಟಾಪ್ ಲಿಸ್ಟ್‌ನಲ್ಲಿದ್ದ ಭಕ್ತಿ ಪ್ರಧಾನ ಧಾರಾವಾಹಿಗಳಿಗೆ ಬ್ರೇಕ್ ಹಾಕಿದೆ.'ನಿನ್ನ ಜೊತೆ ನನ್ನ ಕಥೆ' ಸ್ಟಾರ್ ಸುವರ್ಣದ ಟಾಪ್ ಧಾರಾವಾಹಿಯಾಗಿ ಹೊರ ಹೊಮ್ಮಿದೆ.ನಿನ್ನ ಜೊತೆ ನನ್ನ ಕಥೆ - 3.4 ಶಾರದೆ - 3.3 ಆಸೆ - 3.3 ಜೈ ಲಲಿತಾ - 2.9 ಉದೋ ಉದೋ ಶ್ರೀರೇಣುಕಾ ಯಲ್ಲಮ್ಮ- 2.6 ಸಿಕ್ಕಿದೆ.
ಕಲರ್ಸ್ ಕನ್ನಡದಲ್ಲಿ ಶ್ರೀಗಂಧದ ಗುಡಿ- 4.6 ನಂದಗೋಕುಲ - 4.2 ಮುದ್ದು ಸೊಸೆ - 3.9 ಗೌರಿ ಕಲ್ಯಾಣ - 3.9 ಪವಿತ್ರ ಬಂಧನ - 3.5, ಉದಯ ಟಿವಿಯಲ್ಲಿ ಮೈನಾ - 2.2 ಶಾಂಭವಿ 2.2 ಸೂರ್ಯವಂಶ 2.0 ಶಾಂತಿ ನಿವಾಸ- 1.9 ಮುಗೂತಿ ಮಲ್ಲಿ-1.9 ರೇಟಿಂಗ್ ಇದೆ.
ಕರ್ಣ ಧಾರಾವಾಹಿ ಸುಧಾರಿಸಿಕೊಂಡಿದೆ. ‘ಶ್ರೀಗಂಧದ ಗುಡಿ’ ಕೂಡ ಕಳೆದ ವಾರಕ್ಕಿಂತ ಹೆಚ್ಚು ಟಿಆರ್‌ಪಿ ಪಡೆದಿವೆ. ಉಳಿದಂತೆ ಕಳೆದ ವಾರಕ್ಕಿಂತ ಈ ವಾರ ಸ್ವಲ್ಪಮಟ್ಟಿಗೆ ರೇಟಿಂಗ್ ಹೆಚ್ಚಿದೆ.
ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಮುಖ್ಯ ಭೂಮಿಕೆಯಲ್ಲಿರುವ ‘ಕರ್ಣ’ ಧಾರಾವಾಹಿಗೆ ಭರ್ಜರಿ ರೆಸ್ಪಾನ್ಸ್ ಲಭ್ಯವಾಗುತ್ತಿದೆ.
ಇದನ್ನೂ ಓದಿ: Pahlaj Nihalani death: ಬಾಲಿವುಡ್‌ನ ಯಶಸ್ವಿ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ
ದಿನೇ ದಿನೇ ಡಾಕ್ಟರ್ ‘ಕರ್ಣ’ನಿಗೆ ಫ್ಯಾನ್ ಫಾಲೋವಿಂಗ್ ಹೆಚ್ಚಾಗುತ್ತಿದೆ. ರಾಜೇಶ್ ನಟರಂಗ, ಛಾಯಾ ಸಿಂಗ್ ಅಭಿನಯದ ‘ಅಮೃತಧಾರೆ’ ಸೀರಿಯಲ್‌ಗೆ ಸದ್ಯ ಹೊಸ ತಿರುವು ನೀಡಲಾಗಿದೆ. ಇದು ಕಥೆಗೆ ಹೊಸತನವನ್ನ ನೀಡಿದ್ದು, ‘ಅಮೃತಧಾರೆʼ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ.