ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಮಿಂಚು ಕಿಡ್ನಾಪ್‌, ಗೌತಮ್‌ ಪೊಲೀಸ್‌ ಕಸ್ಟಡಿಗೆ! ಜೈದೇವ್‌ ಅಬ್ಬರ ಶುರು

Amruthadhaare Serial: ಜೈದೇವ್‌ನ ಕುತಂತ್ರದಿಂದ ಮಿಂಚು ಕಾಣೆಯಾಗಿದ್ದು, ಆಕೆಯ ನಿಜವಾದ ಪೋಷಕರು ಎಂದು ಹೇಳಿಕೊಂಡು ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಗೌತಮ್‌ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಗೌತಮ್‌ ಅವರನ್ನು ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಹಾಗಾದ್ರೆ ಮಿಂಚು ಕಥೆ ಏನು?

ಮಿಂಚು ಕಿಡ್ನಾಪ್‌, ಗೌತಮ್‌ ಪೊಲೀಸ್‌ ಕಸ್ಟಡಿಗೆ! ಜೈದೇವ್‌ ಅಬ್ಬರ ಶುರು

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jun 4, 2026 10:40 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare) ವೀಕ್ಷಕರು ಊಹಿಸಿರದ ಟ್ವಿಸ್ಟ್‌ ಪ್ರಸಾರ ಕಂಡಿದೆ. ಜೈದೇವ್‌ನ ಕುತಂತ್ರದಿಂದ ಮಿಂಚು ಕಾಣೆಯಾಗಿದ್ದು, ಆಕೆಯ ನಿಜವಾದ ಪೋಷಕರು ಎಂದು ಹೇಳಿಕೊಂಡು ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಗೌತಮ್‌ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಗೌತ ಅವರನ್ನು ಪೊಲೀಸ್‌ ಕಸ್ಟಡಿಗೆ (Police Custody) ಪಡೆದುಕೊಂಡಿದ್ದಾರೆ. ಹಾಗಾದ್ರೆ ಮಿಂಚು ಕಥೆ ಏನು?

ಸ್ಕೂಲ್‌ನಿಂದ ಮಿಂಚು ಕಾಣೆ

ಜೈದೇವ್‌ ಬಳಿ ಮಿಂಚು ಇದ್ದಾಳೆ. ಮಿಂಚು ಸ್ಕೂಲ್‌ನಿಂದ ನೇರವಾಗಿ ಮನೆಯಿಂದ ಆಚೆ ಹೋಗಲು ನಿರ್ಧಾರ ಮಾಡಿದ್ದಾಳೆ. ಮಹಿಮಾ ಜೊತೆ ಇರಲು ಇಷ್ಟ ಪಡದ ಮಿಂಚು ಮನೆಯನ್ನೇ ಬಿಟ್ಟು ಹೋಗಿದ್ದಾಳೆ. ಈಗ ಸ್ಕೂಲ್‌ನಿಂದ ಮಿಂಚು ಕಾಣೆಯಾಗಿದ್ದಾಳೆ ಎಂದು ಕಾಲ್‌ ಬಂದಿದೆ.

ಇದನ್ನೂ ಓದಿ: Shubha Poonja: ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು? ವಿಚ್ಛೇದನಕ್ಕೆ ಮೊರೆ ಹೋದ್ರಾ ದಂಪತಿ?

ಅಷ್ಟೊತ್ತಿಗೆ ಗೌತಮ್‌ ಮನೆಗೆ ಅಪರಚಿತ ದಂಪತಿ ಬಂದಿದ್ದಾರೆ. ಮಿಂಚು ದತ್ತು ಕೊಡುತ್ತಿರುವ ಸಂದರ್ಭದಲ್ಲಿ ದಿವಾನ್ ಮನೆಗೆ ಇಬ್ಬರ ಆಗಮನವಾಗಿದೆ. ಈ ಇಬ್ಬರು ಮಿಂಚು ನಮ್ಮ ಮಗಳು ಎಂದು ಹೇಳಿದ್ದಾರೆ. ನಾವು ಮಗುವನ್ನು ಬಿಟ್ಟು ಹೋಗಿದ್ದೀವಿ.

ಯಾರೋ ಆಕೆಯನ್ನು ಸಾಕಿದ್ದರು. ನಂತರ ಅವರು ವಿದೇಶಕ್ಕೆ ತೆರಳುವಾಗ ಮಗಳನ್ನು ಬಿಟ್ಟು ಹೋಗಿದ್ದರು. ಆನಂತರ ಯಾರೋ ಡ್ರೈವರ್ ಮಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಜೈದೇವ್ ಹೇಳಿಕೊಟ್ಟಂತೆ ಹೇಳಿದ್ದಾರೆ. ಪೊಲೀಸರು ಈಗ ಗೌತಮ್‌ ಮನೆಗೆ ಬಂದಿದ್ದಾರೆ.

ನಾನು ಮಗು ಕೇಳಿಕೊಂಡು ಬರ್ತೇವೆ ಅಂತ ಮಗುವನ್ನು ಅಡಗಿಸಿ ಇಟ್ಟಿದ್ದಾರೆ ಎಂದು ಪೊಲೀಸರ ಬಳಿ ಹೇಳಿದ್ದಾರೆ. ಇಷ್ಟು ವರ್ಷ ಯಾರೂ ಮಗಳನ್ನು ಹುಡುಕಿಕೊಂಡು ಬಂದಿಲ್ಲ. ನಮ್ಮ ಜೊತೆ ಬೆಳೆದಳು ಅಂತ ಗೌತಮ್‌ ಹೇಳಿದ್ದಾನೆ. ಆದರೆ ಕಾನೂನು ಪ್ರಕಾರ ತಪ್ಪಾಗಿದ್ದರಿಂದ ಮಗು ಸಿಗೋ ತನಕ ಗೌತಮ್‌ ಪೊಲೀಸ್‌ ಕಸ್ಟಡಿಗೆ ಇರಬೇಕಾಗಿದೆ.



ಇನ್ನೊಂದು ಕಡೆ ಜೈದೇವ್‌, ಮಿಂಚುಳನ್ನು ಒಂದು ರೂಮ್ನಲ್ಲಿ ಕೂಡಿ ಹಾಕಿದ್ದಾನೆ. ಭೂಮಿಕಾ-ಗೌತಮ್ ಬೇಡ ಅಂದ್ರೂ ಮಿಂಚು ಶಾಲೆಗೆ ಹೋಗಿದ್ದಳು. ಈ ವೇಳೆ ಮಿಂಚುಳನ್ನು ಜೈದೇವ್‌ ಕರೆದುಕೊಂಡು ಹೋಗಿದ್ದಾನೆ. ಮಿಂಚು ಜನ್ಮರಹಸ್ಯ ತಿಳಿದ್ರೆ ಮಾತ್ರ ಕತೆ ಕೊನೆಯಾಗಬಹುದು.

ಜ್ಯೋತಿಷ್ಯರು ನುಡಿದಂತೆ ಮಗಳಿಂದ ಗೌತಮ್‌ಗೆ ಕಂಟಕ ಎದುರಾಗಿದ್ದಾರೆ. ಗೌತಮ್‌ ಈಗ ಪೊಲೀಸರ ಬಳಿ ಇದ್ದು, ಮಗಳನ್ನು ಹೇಗೆ ರಕ್ಷಿಸಿಕೊಳ್ತಾನೆ? ಇನ್ನು ಲಕ್ಷ್ಮೀಕಾಂತ್ ಕಥೆ ಗೌತಮ್‌ಗೆ ಇಲ್ಲಿಯವರೆಗೆ ಗೊತ್ತಾಗಿಲ್ಲ. ಗೌತಮ್‌ ಕೈಗೆ ಲಕ್ಷ್ಮೀಕಾಂತ್ ಸಿಕ್ತಾನಾ..? ಭೂಮಿಕಾ ಮುಂದೆ ಏನು ಮಾಡ್ತಾಳೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial: ಕೆಡಿ ಜೈದೇವ್‌ ಮಾಸ್ಟರ್‌ ಪ್ಲ್ಯಾನ್‌; ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ!

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ