ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಜೇಡಿಯ ದರ್ಪಕ್ಕೆ ಸಿಡಿದೆದ್ದ ಗೌತಮ್ ದಿವಾನ್! ಶಕುಂತಲಾ ಶಾಕ್‌

Amruthadhaare Kannada Serial: ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಜೇಡಿಯ ದರ್ಪಕ್ಕೆ ಗೌತಮ್ ದಿವಾನ್ ಸಿಡಿದ್ದೆದ್ದಿದ್ದಾನೆ. ಜೈದೇವ್‌ ಮಾಡಿರುವ , ಮಾಡುತ್ತಿರುವ ಕುತಂತ್ರ ಒಂದೆರಡಲ್ಲ. ಮಲ್ಲಿ ವಿರುದ್ಧ ಸುನಿಯನ್ನು ಎತ್ತಿಕೊಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾನೆ. ಸಾಲದೇ ಗೌತಮ್‌ನಿಂದ ಆಸ್ತಿಯನ್ನ ಪೂರ್ತಿ ಕಬಳಿಸಿದರೂ ಇನ್ನೂ ತನ್ನ ಹಳೆ ಬುದ್ಧಿಯನ್ನು ಬಿಡುತ್ತಿಲ್ಲ. ಗೌತಮ್ ಅಪ್ಪನ ಕಾರ್ಯಕ್ಕಾಗಿ ಮನೆಗೆ ಹಿಂತಿರುಗಿದ್ದಾನೆ. ಅಲ್ಲಿ ಜೈದೇವ್ ಅಪ್ಪನ ಬಗ್ಗೆ ಅಗೌರವದಿಂದ ಮಾತನಾಡಿದ್ದಕ್ಕೆ, ಗೌತಮ್ ಅವನ ಕೆನ್ನೆಗೆ ಬಾರಿಸಿ ಸಿಡಿದೆದ್ದಿದ್ದಾನೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare Kannada Serial) ಜೇಡಿಯ ದರ್ಪಕ್ಕೆ ಗೌತಮ್ ದಿವಾನ್ ಸಿಡಿದ್ದೆದ್ದಿದ್ದಾನೆ. ಜೈದೇವ್‌ ಮಾಡಿರುವ , ಮಾಡುತ್ತಿರುವ ಕುತಂತ್ರ ಒಂದೆರಡಲ್ಲ. ಮಲ್ಲಿ (Malli) ವಿರುದ್ಧ ಸುನಿಯನ್ನು ಎತ್ತಿಕೊಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾನೆ. ಸಾಲದೇ ಗೌತಮ್‌ನಿಂದ ಆಸ್ತಿಯನ್ನ ಪೂರ್ತಿ ಕಬಳಿಸಿದರೂ ಇನ್ನೂ ತನ್ನ ಹಳೆ ಬುದ್ಧಿಯನ್ನು ಬಿಡುತ್ತಿಲ್ಲ. ಗೌತಮ್ ಅಪ್ಪನ ಕಾರ್ಯಕ್ಕಾಗಿ ಮನೆಗೆ ಹಿಂತಿರುಗುತ್ತಾನೆ. ಅಲ್ಲಿ ಜೈದೇವ್ (Jaidev) ಅಪ್ಪನ ಬಗ್ಗೆ ಅಗೌರವದಿಂದ ಮಾತನಾಡಿದ್ದಕ್ಕೆ, ಗೌತಮ್ ಅವನ ಕೆನ್ನೆಗೆ ಬಾರಿಸಿ ಸಿಡಿದೆದ್ದಿದ್ದಾನೆ. ಶಕುಂತಲಾ (Shakuntala) ಶಾಕ್‌ ಆಗಿದ್ದಾಳೆ.

ಗೌತಮ್‌ ಬಂದದ್ದು ನೋಡಿ ಶಕುಂತಲಾಗೂ ಶಾಕ್

ಭೂಮಿ ಮನೆಯಲ್ಲಿ ಗೌತಮ್‌ಗೆ ಮಾವನ ಕಾರ್ಯ ಇದೆ ಎಂದು ಹೇಳುತ್ತಾಳೆ. ಗೌತಮ್‌ ಕೂಡ ಮನೆಯವರೊಂದಿಗೆ ತಂದೆಯ ಕಾರ್ಯಕ್ಕೆ ಹೋಗುತ್ತಾನೆ. ಗೌತಮ್‌ ಬಂದದ್ದು ನೋಡಿ ಶಕುಂತಲಾಗೂ ಶಾಕ್​ ಆಗಿದೆ. ಇನ್ನು ಜೈದೇವ್​ ಅಪ್ಪನ ಕಾರ್ಯಕ್ಕೆ ಬಂದಿರುವುದಕ್ಕೆ ಗೌತಮ್‌ ಮೇಲೆ ಸಿಡಿಮಿಡಿಗೊಂಡಿದ್ದಾನೆ. ಗೌತಮ್​ಗೆ ಮನೆ ಬಿಟ್ಟು ಹೋಗುವಂತೆ ಹೇಳಿದ್ದಾನೆ.

ಇದನ್ನೂ ಓದಿ: 70th Filmfare Awards: ಯಾರಿಗೆ ಕನ್ನಡದ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ? ಫಿಲ್ಮ್‌ಫೇರ್ ಅವಾರ್ಡ್‌ ಕಂಪ್ಲೀಟ್‌ ಲಿಸ್ಟ್ ಔಟ್‌

ಆಗ ಜೈದೇವ್‌ ಇದ್ದವನು ಮೊದಲು ಗೌತಮ್‌ ಕೆಲಸವನ್ನು ಮಾಡಿ ಮುಗಿಸಿ ಕಳುಹಿಸಿ ಎಂದು ಪುರೋಹಿತರಿಗೆ ಹೇಳುತ್ತಾನೆ. ಹಾಗೆಲ್ಲ ಎರಡು ಸಲ ಪಿಂಡವನ್ನು ಮಾಡಿ ಬಿಡಬಾರದು ಎನ್ನುತ್ತಾರೆ ಪುರೋಹಿತರು. ಇದಾದ ಬಳಿಕ ತಂದೆಯ ಸಮಾಧಿಯ ಬಳಿ ಗೌತಮ್‌ ಬಂದು ಪೂಜೆ ಮಾಡುತ್ತಾನೆ. ಅಲ್ಲಿಯೂ ಬಂದು ಜೈದೇವ್‌ ಕೂಗಾಡುತ್ತಾನೆ.

ಇಲ್ಲಿ ಪೂಜೆ ಮಾಡೋ ಹಕ್ಕು ನನಗೆ ಮಾತ್ರ ಇದೆ. ಅಪ್ಪ ಅಂತೆ ಅಪ್ಪ ಇವನೂ ಒಬ್ಬ ಅಪ್ಪನಾ ಅಂತ ರೇಗಾಡಿದ್ದಾನೆ. ಜೈದೇವ್‌ ಹಾಗೇ ಹೇಳುತ್ತಲೇ ಗೌತಮ್‌ ಪಿತ್ತ ನೆತ್ತಿಗೇರಿದೆ. ಜೈದೇವ್‌ ಕಪಾಳಕ್ಕೆ ಬಾರಿಸುತ್ತಾನೆ. ನನಗೆ ಏನು ಬೇಕಾದರೂ ಅನ್ನು. ಆದರೆ ಅಪ್ಪನಿಗೆ ಗೌರವ ಕೊಡೋದು ಕಲಿತಿಕೋ ಅಂತ ಗೌತಮ್‌ ಜೈದೇವ್‌ ಮೇಲೆ ರೇಗಿದ್ದಾನೆ. ಒಟ್ಟಿನಲ್ಲಿ ಅಪ್ಪನ ತಿಥಿ ಕಾರ್ಯದಲ್ಲಿ ಸಹೋದರರು ಇಬ್ಬರೂ ಸಿಡಿದೆದ್ದಿದ್ದಾರೆ.



ಗೌತಮ್‌ ದಿವಾನ್‌ ಹೊಸ ಹೆಜ್ಜೆ

ಅಮ್ಮನ ಮಾತಿಗೆ ಬೆಲೆ ಕೊಟ್ಟು ಗೌತಮ್‌ ದಿವಾನ್‌ ಹೊಸ ಬ್ಯುಸಿನೆಸ್‌ ಶುರು ಮಾಡಬೇಕು ಅಂತ ನಿರ್ಧಾರ ಮಾಡಿದ್ದಾನೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ನಡೆಸುತ್ತಿದ್ದಾನೆ. ಗೌತಮ್‌ನ ಸಾಮ್ರ್ಯಾಜ್ಯ ಜೈದೇವ್‌ ಕುತಂತ್ರದಿಂದ ಎಲ್ಲವೂ ಅವನ ಪಾಲಾಯ್ತು. ಅದೆಷ್ಟೋ ವರುಷ ಗೌತಮ್‌ ಹಾಗೂ ಭೂಮಿ ದೂರ ದೂರ ಇರೋ ಹಾಗಾಯ್ತು. ಆದರೆ ಈಗ ಹಾಗಲ್ಲ. ಭೂಮಿ ಗೌತಮ್‌ ಒಂದಾಗಿದ್ದಾರೆ. ಗೌತಮ್‌ ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಭೂಮಿ ಸಾಥ್‌ ಇದ್ದೆ ಇರುತ್ತದೆ.

ಜೈದೇವ್‌ ಮಾತು ದಿನೇ ದಿನೇ ಮಿತಿ ಮೀರುತ್ತಿದೆ. ಹೀಗಾಗಿ ಗೌತಮ್‌ ಮತ್ತೆ ಜೈದೇವ್‌ ಆಸ್ತಿಯನ್ನ ವಾಪಸ್ಸ್‌ ಪಡೆದುಕೊಳ್ಳೋದರಲ್ಲಿಯೂ ಆಶ್ವರ್ಯ ಇಲ್ಲ.

ಇನ್ನೊಂದು ಕಡೆ ಗೌತಮ್‌ ದಿವಾನ್‌ಗೆ ಕೊಟ್ಟಿದ್ದನ್ನು ಮರಳಿ ಪಡೆಯೋ ವ್ಯಕ್ತಿತ್ವವೂ ಅವನದ್ದಲ್ಲ. ಹೀಗಾಗಿ ಮುಂದೆ ಗೌತಮ್‌ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾನೆ ಅನ್ನೋದು ವೀಕ್ಷಕರಲ್ಲಿ ಇರುವ ಕುತೂಹಲ.

ಇದನ್ನೂ ಓದಿ: Actor Darshan: ದರ್ಶನ್ ಲಾಕ್ ಆಗಬಾರದಿತ್ತು, ಅವ್ರು ಪಟ್ಟ ಕಷ್ಟ ಕಡಿಮೆಯೇನಲ್ಲ; ಖಳನಟ ಕಿಲ್ಲರ್‌ ವೆಂಕಟೇಶ್‌

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author