ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare serial) ವೀಕ್ಷಕರಿಗೆ ಗೌತಮ್ ಮೇಲೆ ಅನುಮಾನ ಮೂಡಲು ಶುರುವಾಗಿದೆ. ದೀಪಿಕಾ- ಭೂಮಿಕಾ (Deepika Bhoomika) ವಿಚಾರ ಗೊತ್ತಿದ್ದೇ ಮನೆಗೆ ಎಂಟ್ರಿ ಕೊಟ್ಟನಾ ಅನ್ನೋ ಅನುಮಾನ ವೀಕ್ಷಕರದ್ದು. ಅದು ಅಲ್ಲದೇ ಭೂಮಿಕಾಳ ಬದಲಾವಣೆ ಕಂಡು ಅನುಮಾನಗೊಂಡ ಗೌತಮ್, ಪಾರ್ಥನ ಜೊತೆ ಸೇರಿ ಪಾರ್ಟಿಯಲ್ಲಿ ಆಕೆಗೆ ಮದ್ಯ ಕುಡಿಸುತ್ತಾನೆ. ನಶೆಯಲ್ಲಿ ದೀಪಿಕಾ ಅರ್ಧ ಸತ್ಯ ಹೇಳುತ್ತಾಳೆ. ಇದರಿಂದ ಗೌತಮ್ಗೆ (Gowtham Diwan) ಮತ್ತಷ್ಟು ಅನುಮಾನ ಶುರುವಾಗಿದೆ. ನೋಡುಗರಿಗೆ ಕುತೂಹಲ ಅನಿಸಿದ್ರೂ ಎಲ್ಲವೂ ಗೊತ್ತಿದ್ದೇ ಗೌತಮ್ ಮಾಡ್ತಾ ಇದ್ದಾನಾ?
ಸತ್ಯ ಗೊತ್ತಿದ್ದೇ ಗೌತಮ್ ಡ್ರಾಮಾ ಮಾಡ್ತಾ ಇದ್ದಾನಾ?
ಪತ್ನಿಯಲ್ಲಾದ ಬದಲಾವಣೆಗೆ ಕಾರಣ ಏನು ಎಂದು ತಿಳಿದುಕೊಳ್ಳಲು ಸೋದರ ಪಾರ್ಥ ಜೊತೆ ಕೈ ಜೋಡಿಸಿ ಜ್ಯೂಸ್ನಲ್ಲಿ ಮದ್ಯ ಸೇರಿಸಿದ್ದಾರೆ. ಹಳೆಯ ಘಟನಗಳು ನೆನಪಿಗೆ ತೆಗೆದುಕೊಂಡು ಬರುವ ಉದ್ದೇಶದಿಂದ ಗೆಳೆಯ ಆನಂದ್ ಮನೆಯಲ್ಲಿ ಗೌತಮ್ ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ದಾನೆ.
ಈ ಸಮಯದಲ್ಲಿ ಭೂಮಿಕಾ ಕುಡಿಯುವ ಜ್ಯೂಸ್ನಲ್ಲಿ ಮದ್ಯವನ್ನು ಮಿಕ್ಸ್ ಮಾಡಿದ್ದಾನೆ.ಮನೆಯಲ್ಲಿರೋದು ದೀಪಿಕಾ ಎಂಬ ಸತ್ಯ ಮಲ್ಲಿ, ಭೂಮಿ ಬಿಟ್ಟು ಯಾರಿಗೂ ಗೊತ್ತಿಲ್ಲ. ಭೂಮಿಕಾಗೆ ಮದ್ಯ ಮಿಶ್ರಿತ ಜ್ಯೂಸ್ ಕುಡಿಸಿದ್ದಾರೆ. ಈ ವೇಳೆ ತನಗೆ ಯಾವುದೇ ಅಪಘಾತ ಆಗಿರಲಿಲ್ಲ ಎಂಬ ಸತ್ಯವನ್ನು ಹೇಳಿದ್ದಾಳೆ. ಹಾಗೆಯೇ ಜೈದೇವ್ನನ್ನು ನಾನು ಮನೆಗೆ ಕರೆದುಕೊಂಡು ಬಂದಿಲ್ಲ. ಅವರೇ ನನ್ನನ್ನು ದಿವಾನ್ ಮನೆಗೆ ಕರೆದುಕೊಂಡು ಬಂದಿರೋ ಸತ್ಯವನ್ನು ಭೂಮಿಕಾ ಹೇಳಿದ್ದಾಳೆ.
ಇದನ್ನೂ ಓದಿ: Ramayana Movie: ‘ರಾಮಾಯಣ’ ಹಾಡುಗಳ ಬಗ್ಗೆ ಟೀಕೆ; ಎಆರ್ ರೆಹಮಾನ್ ತಿರುಗೇಟು
ಭೂಮಿಕಾ ಆಗಿ ದೀಪಿಕಾ ಎಂಟ್ರಿಕೊಟ್ಟಿದ್ದಾಳೆ. ಆದರೆ ಮನೆಯಲ್ಲಿ ಯಾರಿಗೂ ಇದರ ಬಗ್ಗೆ ಡೌಟ್ ಬಂದಿಲ್ಲ. ಏಕೆಂದರೆ ಶಕುಂತಲಾ ಎಲ್ಲಾ ಪ್ಲ್ಯಾನ್ ಮಾಡುತ್ತಿದ್ದಾಳೆ ಗೌತಮ್ಗೆ ಏನೋ ಡೌಟ್ ಶುರುವಾಗಿದೆ. ಆದರೆ ಆಕೆ ಭೂಮಿಕಾ ಅಲ್ಲ ಅನ್ನುವ ಸತ್ಯ ಮಾತ್ರ ಗೊತ್ತಾಗ್ತಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಈ ಭೂಮಿಕಾಗೆ ಹಿಂದಿನದ್ದನ್ನೆಲ್ಲಾ ನೆನಪು ಮಾಡಿಸಬೇಕು ಎಂದುಕೊಂಡಿದ್ದಾನೆ.
ಸನ್ನಿವೇಶಗಳು, ಗೌತಮ್ ನಡವಳಿಕೆ ಕಂಡು ಸತ್ಯ ಗೊತ್ತಿದ್ದೆ ಗೌತಮ್ ಎಲ್ಲ ಮಾಡಿಸುವಂತಿದೆ. ಜೈದೇವ್ ಹಾಗೂ ಶಕುಂತಲಾ ಪ್ಲ್ಯಾನ್ ಈಗಾಗಲೇ ಗೌತಮ್ಗೆ ಗೊತ್ತಾಗಿರುವಂತಿದೆ ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಒಂದು ವೇಳೆ ಎಲ್ಲ ಸತ್ಯ ದೀಪಿಕಾ ಬಾಯಿ ಬಿಟ್ಟರೆ ಸೀರಿಯಲ್ ಅಂತ್ಯವಾದಂತೆ.
ಇದನ್ನೂ ಓದಿ: Bigg Boss Kannada 13: ಶೆಟ್ಟಿ ಡಾನ್ ಕಲ್ಯಾಣವಂತೆ! ವರನ್ಯಾರು ಗೊತ್ತೇನು?
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.