ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare Serial) ಕೇಡಿ ಅಸಲಿ ಮುಖ ನೋಡಿ ಸುನಿ ಬೆಚ್ಚಿಬಿದ್ದಿದ್ದಾನೆ. ಹಾಗೇ ಮಲ್ಲಿ ಮೇಲೆ ಅಟ್ಯಾಕ್ ಮಾಡಿಸಿರೋ ಬಗ್ಗೆ ಗೌತಮ್ ದಿವಾನ್ (Gowtham Diwan) ಜೈದೇವ್‌ಗೆಎಚ್ಚರಿಕೆಗೆ ಕೂಡ ನೀಡಿದ್ದಾನೆ. ಈ ಎಲ್ಲ ಕುತಂತ್ರಗಳ ಹಿಂದೆ ಜೈದೇವ್ (Jaidev) ಕೈವಾಡ ಇದೆ ಅನ್ನೋದು ಗೌತಮ್‌ಗೆ ಅಂತೂ ಗೊತ್ತಾಗಿದೆ.
ಮಲ್ಲಿ ಕಣ್ಣೀರು
ಮಲ್ಲಿ ಎಕ್ಸಾಮ್ ಬರೆದು ಬಂದು ಗೌತಮ್ ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾಳೆ. ನಾನು ಯಾರಿಗೂ ಕೇಡನ್ನು ಬಯಸಿಲ್ಲ ಆದ್ರೂ ನನಗೆ ಹೀಗೆ ಆಗ್ತಿದೆ ಅಂತ ಬೇಸರ ವ್ಯಕ್ತಪಡಿಸಿದ್ದಾಳೆ. ಗೌತಮ್ ಸಮಾಧಾನ ಮಾಡಿದ್ದಾನೆ. ಈ ವಿಚಾರ ಭೂಮಿಕಾಗೆ ಗೊತ್ತಾಗದಂತೆ ಇರು ಎಂದು ಬುದ್ಧಿವಾದ ಹೇಳಿದ್ದಾಳೆ.
ಇದನ್ನೂ ಓದಿ: Kangana Ranaut: ಪ್ರೇಮ್ ಬರೆದ ‘ಸೆರಗ ಸರ್ಸೆ’ ಹಾಡಿಗೆ ಕಂಗನಾ ರಣಾವತ್ ಕಿಡಿ!
ಕೇಡಿ ಅಸಲಿ ಮುಖ ನೋಡಿ ಬೆಚ್ಚಿಬಿದ್ದ ಸುನಿ
ಮತ್ತೊಂದು ಕಡೆ ರೌಡಿಗಳು ಅಟ್ಯಾಕ್ ಮಾಡಿರುವ ಬಗ್ಗೆ ಸುನಿ ಕೂಡ ಬೆಚ್ಚಿಬಿದ್ದಿದ್ದಾನೆ. ಗೌತಮ್ ಮೊದಲಿಗೆ ಮಲ್ಲಿ ಮದುವೆ ವಿಚಾರವಾಗಿ ಭೂಮಿಕಾ ಬಳಿಯೂ ಮಾತಾಡುತ್ತಾನೆ. ಒಳ್ಳೆಯ ಕೆಲಸವನ್ನು ನಿಧಾನಕ್ಕೆ ಮಾಡಬಾರದು ಎಂದು ಸುನಿಗೂ ಕಾಲ್ ಮಾಡಿ ಮದುವೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದಾನೆ. ಆದರೆ ಸುನಿ ಮಾತ್ರ ಗೌತಮ್ ಮಾತು ಕೇಳಿ ಶಾಕ್ ಆಗಿದ್ದಾನೆ.
ಜೈದೇವ್ ಬಳಿ ಸುನಿ ಓಡಿ ಬಂದು ಮದುವೆ ಬಗ್ಗೆ ಹಾಗೂ ರೌಡಿಗಳು ಅಟ್ಯಾಕ್ ಮಾಡಿರುವ ಬಗ್ಗೆ ವಿವರಿಸುತ್ತಾನೆ. ಜೈದೇವ್ ಮಾತ್ರ ತುಂಬಾ ಆರಾಮದಾಯಕವಾಗಿರೋದನ್ನ ಗಮನಿಸಿದ ಸುನಿ, ಪ್ರಶ್ನೆ ಹಾಕುತ್ತಾನೆ. ಆಗ ಜೈದೇವ್ ಇದ್ದವನು, ಇದಕ್ಕೆಲ್ಲ ಡೈರೆಕ್ಟರ್ ನಾನೆ ಎಂದು ಹೇಳುತ್ತಾನೆ.
ಇದನ್ನೆಲ್ಲ ಕೇಳಿದ ಸುನಿಗೆ ಜೈದೇವ್ ಬಗ್ಗೆ ಶಾಕ್ ಆಗುತ್ತೆ. ಮಲ್ಲಿ ಪಾಡಿಗೆ ಇರಲು ಬಿಟ್ಟುಬಿಡಿ ಎಂದ ಸುನಿ ಮೇಲೆ ಜೈದೇವ್ ಕೂಡ ರೇಗಾಡುತ್ತಾನೆ. ಹೀಗಾಗಿ ಸುನಿ ಕೂಡ ಜೈದೇವ್ ಇಷ್ಟು ಕೆಟ್ಟ ವ್ಯಕ್ತಿನಾ ಅಂತ ಮನಸಲ್ಲೇ ಅಂದುಕೊಳ್ಳುತ್ತಾನೆ.
ಗೌತಮ್ ಎಚ್ಚರಿಕೆಗೆ ಜೇಡಿಗೆ ಇಳಿದಿದೆ ಬೆವರಿನ ಹನಿ!
ಇಷ್ಟೆಲ್ಲ ಆದ ಮೇಲೆ ಜೈದೇವ್‌ಗೆ ಗೌತಮ್ ಏಕಾಏಕಿ ಕಲ್ ಮಾಡಿದ್ದಾನೆ, ಫೋನ್ ರಿಸೀವ್ ಮಾಡುವ ಮೊದಲೇ ಜೈದೇವ್‌ಗೆ ಡೌಟ್ ಬರುತ್ತೆ. ಆದರೂ ಏನು ವಿಚಾರ ಅಂತ ಕೇಳುತ್ತಾನೆ. ಗೌತಮ್ ಅತ್ಯಂತ ಕೋಪದಲ್ಲಿ ನೀನೆ ತಾನೆ ಅಟ್ಯಾಕ್ ಮಾಡಿಸಿದ್ದು? ಅಂತ ಕೆಂಡವಾಗಿ ಕೇಳಿದ್ದಾನೆ.
ಮುಂಬರುವ ದಿನಗಳಲ್ಲಿ ಮಲ್ಲಿ ಪರೀಕ್ಷೆ ಪಾಸಾಗ್ತಾಳಾ? ಜೈದೇವ್‌ಗೆ ಗೌತಮ್ ಬುದ್ದಿ ಕಲಿಸುತ್ತಾನಾ? ಅಥವಾ ಜೈದೇವ್‌ಗೆ ತನ್ನ ತಪ್ಪಿನ ಅರಿವು ಆಗುತ್ತಾ..? ಮಲ್ಲಿ ಮತ್ತು ಸುನಿ ಮದುವೆಯಾಗುತ್ತಾರಾ? ಎನ್ನುವುದು ವೀಕ್ಷರಲ್ಲಿ ಇರುವ ಕುತೂಹಲ.
ಇದನ್ನೂ ಓದಿ: Amruthadhaare Serial: ಜೇಡಿ ವಿರುದ್ಧ ಮೊದಲ ಬಾರಿಗೆ ಧ್ವನಿಗೂಡಿಸಿದ್ದಾಳೆ ಶಕುಂತಲಾ! ಕಿಡಿ ಕಾರಿದ ಪಾರ್ಥ
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.