ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಅಂತೂ ಒಂದು ಘಟ್ಟ ತಲುಪಿದೆ. ಬಹು ದಿನಗಳ ಬಳಿಕ ಗೌತಮ್ ಕುಟುಂಬ ಸಂತೋಷದಲ್ಲಿ ಕಾಲ ಕಳೆದಿದೆ. ಅಜ್ಜಿ ಮನೆಯಲ್ಲಿ ಗೌತಮ್ ದಿವಾನ್ (Gowtham Diwan) ಕುಟುಂಬ ಸಂಭ್ರಮದಿಂದ ಒಟ್ಟಾಗಿ ಸೇರಿಕೊಂಡಿದೆ. ಆದರೆ ಜೈದೇವ್ (Jaidev) ಕುಟುಂಬದಲ್ಲಿ ಮಾತ್ರ ಬಿರುಕು ಮೂಡುತ್ತಿದೆ. ಅಮ್ಮನಿಂದಲೇ ಕೇಡಿ ಮಗನಿಗೆ ಮಾತಿನ ಬರೆ ಎಳೆಯುವಂತಾಗಿದೆ.
ಸುನಿ ಕಥೆ ಮುಗಿಸಲು ಜೈದೇವ್ ಪ್ಲ್ಯಾನ್!
ಕೆಡಿ ಮಾವನಿಂದಾಗಿ ಆನಂದ್‌ಗೆ ಸುನಿಯನ್ನು ಕೊಲೆ ಮಾಡುತ್ತಿರುವ ಜೈದೇವ್ ಪ್ಲ್ಯಾನ್ ಬಗ್ಗೆ ಗೊತ್ತಾಗತ್ತೆ. ದಿಯಾ ಕೂಡ ತನ್ನ ಮಾಸ್ಟರ್ ಪ್ಲ್ಯಾನ್‌ನಿಂದ ಮಾವನನ್ನು ರೌಡಿಗಳಿಂದ ಬಿಡಿಸುತ್ತಾಳೆ. ಆದರೆ ಲೊಕೇಶನ್ ಆಕ್ಸೆಸ್ ಮೊಬೈಲ್‌ಗೆ ಹಾಕಿರುತ್ತಾಳೆ, ಹೀಗಾಗಿ ಆನಂದ್ ಮನೆಯವರೆಲ್ಲರನ್ನೂ ಅಜ್ಜಿ ಮನೆಗೆ ಸೀಕ್ರೆಟ್ ಆಗಿ ಕರೆದುಕೊಂಡು ಹೋಗಿರುವ ವಿಚಾರ ದಿಯಾಗೆ ಗೊತ್ತಾಗುತ್ತೆ.
ಇದನ್ನೂ ಓದಿ: Bhagya Lakshmi Serial: ವೀಕ್ಷಕರು ಊಹಿಸಿರದ ಟ್ವಿಸ್ಟ್; ಕಂಗಾಲಾದ ತಾಂಡವ್!
ಜೈದೇವ್ ಕೂಡ ಈ ಬಗ್ಗೆ ತಿಳಿದ ಕೂಡಲೇ ರೌಡಿಗಳನ್ನು ಸುನಿ ಕಥೆ ಮುಗಿಸಲು ಛೂ ಬಿಟ್ಟಿದ್ದ. ಎಲ್ಲ ರಾತ್ರಿ ಮಲಗಿರುವಾಗ ಆನಂದ್ ಮಾತ್ರ ತುಂಬಾ ಎಚ್ಚರದಿಂದ ಇರುತ್ತಾನೆ. ಸುನಿ ಮಲಗಿರುವಾಗು ರೌಡಿ ಇನ್ನೇನು ಸಾಯಿಸಬೇಕು ಅನ್ನೋ ಅಷ್ಟರಲ್ಲಿ ಆನಂದ್ ಬಂದೂಕು ಹಿಡಿದು ರೌಡಿ ಮುಂದೆ ನಿಂತು ಅಂತೂ ಸುನಿಯನ್ನು ಬಚಾವ್ ಮಾಡಿದ್ದಾನೆ. ಆನಂದ್‌ಗೆ ಸುಧಾ ಗಂಡ ಕೂಡ ಸಾಥ್ ಕೊಟ್ಟಿದ್ದ.
ತಂಗಿಗಾಗಿ ಅಣ್ಣನ ಉಡುಗೊರೆ
ಆನಂದ್‌ನಿಂದಾಗಿ ಜೈದೇವ್ ಪ್ಲ್ಯಾನ್ ಅಂತೂ ಪ್ಲಾಪ್ ಆಗಿದೆ. ರೌಡಿಗಳಿಂದ ಸುನಿ ಕಥೆ ಮುಗಿಸಲು ಆಗಿಲ್ಲ. ಮಾರನೇ ದಿನ ಗೌತಮ್ ಮನೆಯವರೆಲ್ಲರ ಮುಂದೆ ಇದ್ದ ಆ ಅಜ್ಜಿ ಮನೆ ಆಸ್ತಿಯನ್ನು ಸುಧಾ ಹೆಸರಿಗೆ ಕೊಟ್ಟಿದ್ದಾನೆ. ಅಣ್ಣನ ಉಡುಗೊರೆಗೆ ತಂಗಿ ಭಾವುಕಳಾಗಿದ್ದಾಳೆ. ತನ್ನ ಬಳಿ ಇದ್ದ ಎಲ್ಲವನ್ನೂ ದಾನ ಮಾಡಿದ್ದಾನೆ ಗೌತಮ್.
ಅಮ್ಮನಿಂದಲೇ ಕೇಡಿ ಮಗನಿಗೆ ಮಾತಿನ ಬರೆ!
ಒಂದು ಕಡೆ ಗೌತಮ್ ತಂಗಿಗೆ ಉಡುಗೊರೆಯನ್ನು ನೀಡಿದ್ರೆ. ಅತ್ತ ಜೈದೇವ್ illegal ಬ್ಯುಸಿನೆಸ್ ಶುರು ಮಾಡಿದ್ದಾನೆ. ಈ ಬಗ್ಗೆ ಶಕುಂತಲಾ ಕೂಡ ಕೋಪ ವ್ಯಕ್ತಪಡಿಸಿದ್ದಾಳೆ, ಮಾಡೋದೇ illegal ಬ್ಯುಸಿನೆಸ್ , ಅದರಲ್ಲೂ ಸ್ವಂತ ತಮ್ಮ ಹಾಗೂ ತಂಗಿಗೆ ಮೋಸ ಮಾಡ್ತೀಯಾ ಅಂತ ಅಬ್ಬರಿಸಿದ್ದಾಳೆ. ಅಷ್ಟೇ ಅಲ್ಲ ಜೈದೇವ್ ಕೂಡ ಅತ್ಯಂತ ಅಹಂಕಾರದಿಂದ ಇದು ಆಸ್ತಿ ನನ್ನ ಹೆಸರಲ್ಲಿದೆ. ನಾನು ಏನೂ ಬೇಕಾದರೂ ಮಾಡುವೆ ಅಂತ ಕೂಗಾಡಿದ್ದಾನೆ. ತನ್ನ ಕಷ್ಟದ ದಿನಗಳಲ್ಲೂ ಗೌತಮ್ ತನ್ನ ತಂಗಿಗೆ ಆಸ್ತಿಯನ್ನು ಕೊಟ್ಟರೆ, ಇತ್ತ ಜೈದೇವ್ ಪಾರ್ಥ ಹಾಗೂ ತಂಗಿಗೆ ಮೋಸ ಮಾಡಿ ಅಹಂಕಾರದ ಮಾತುಗಳನ್ನು ಆಡಿದ್ದಾನೆ.
ಮುಂದೆ ಜೈದೇವ್‌ಗೆ ಇರೋ ಅಹಂಕಾರವೇ ಶಕುಂತಲಾಗೆ ಮುಳುವಾಗುತ್ತಾ? ಪಾರ್ಥ ಹಾಗೂ ತಂಗಿ ಗೌತಮ್ ಕಡೆ ಸೇರುತ್ತಾರಾ? ಶಕುಂತಲಾಗೂ ಜೈದೇವ್ ಕೆಟ್ಟ ದಿನಗಳನ್ನು ತರ್ತಾನಾ? ದಿಯಾ ಇಂದಿಗಾಗಿ ಜೈದೇವ್ ಆಸ್ತಿ ಕಳೆದುಕೊಳ್ತಾನಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Amruthadhaare Serial: ಆನಂದ್ ಕಣ್ಗಾವಲಲ್ಲಿ ಸುನಿ; ಜೈದೇವ್ ಕಥೆ ಏನು?
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.