ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಆನಂದ್‌ ಕಣ್ಗಾವಲಲ್ಲಿ ಸುನಿ; ಜೈದೇವ್‌ ಕಥೆ ಏನು?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಸುನಿ ಕಥೆ ಮುಗಿಸಲು ಜೈದೇವ್‌ ಹರಸಾಹಸ ಪಡುತ್ತಿದ್ದಾನೆ. ಇನ್ನೊಂದು ಕಡೆ ಆನಂದ್‌ ಮಾಡಿದ ಎಡವಟ್ಟಿನಿಂದಾಗಿ ಭೂಮಿಕಾ ಕೂಡ ಗೌತಮ್‌ ಮುಂದೆ ಪ್ರೇಮ ನಿವೇದನೆ ಮಾಡಿದ್ದಾಳೆ. ಈ ಕ್ಯೂಟ್‌ ಜೋಡಿಯ ಅವತಾರ ಕಂಡು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

Amruthadhaare Serial: ಆನಂದ್‌ ಕಣ್ಗಾವಲಲ್ಲಿ ಸುನಿ; ಜೈದೇವ್‌ ಕಥೆ ಏನು?

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Apr 8, 2026 6:34 PM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare Serial) ಸುನಿ ಕಥೆ ಮುಗಿಸಲು ಜೈದೇವ್‌ ಹರಸಾಹಸ ಪಡುತ್ತಿದ್ದಾನೆ. ಇನ್ನೊಂದು ಕಡೆ ಆನಂದ್‌ ಮಾಡಿದ ಎಡವಟ್ಟಿನಿಂದಾಗಿ ಭೂಮಿಕಾ ಕೂಡ ಗೌತಮ್‌ (Bhoomika Gowtham) ಮುಂದೆ ಪ್ರೇಮ ನಿವೇದನೆ ಮಾಡಿದ್ದಾಳೆ. ಈ ಕ್ಯೂಟ್‌ ಜೋಡಿಯ ಅವತಾರ ಕಂಡು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ದಿಯಾ ಮಾಸ್ಟರ್‌ ಪ್ಲಾನ್‌

ಕೆಡಿ ಮಾವನಿಂದಾಗಿ ಆನಂದ್‌ಗೆ ಸುನಿಯನ್ನು ಕೊಲೆ ಮಾಡುತ್ತಿರುವ ಜೈದೇವ್‌ ಪ್ಲ್ಯಾನ್‌ ಬಗ್ಗೆ ಗೊತ್ತಾಗತ್ತೆ. ದಿಯಾ ಕೂಡ ತನ್ನ ಮಾಸ್ಟರ್‌ ಪ್ಲ್ಯಾನ್‌ನಿಂದ ಮಾವನನ್ನು ರೌಡಿಗಳಿಂದ ಬಿಡಿಸುತ್ತಾಳೆ. ಆದರೆ ಲೊಕೇಶನ್‌ ಆಕ್ಸೆಸ್‌ ಮೊಬೈಲ್‌ಗೆ ಹಾಕಿರುತ್ತಾಳೆ, ಹೀಗಾಗಿ ಆನಂದ್‌ ಮನೆಯವರೆಲ್ಲರನ್ನೂ ಅಜ್ಜಿ ಮನೆಗೆ ಸೀಕ್ರೆಟ್‌ ಆಗಿ ಕರೆದುಕೊಂಡು ಹೋಗಿರುವ ವಿಚಾರ ದಿಯಾಗೆ ಗೊತ್ತಾಗುತ್ತೆ. ಜೈದೇವ್‌ ಕೂಡ ಈ ಬಗ್ಗೆ ತಿಳಿದ ಕೂಡಲೇ ರೌಡಿಗಳನ್ನು ಸುನಿ ಕಥೆ ಮುಗಿಸಲು ಛೂ ಬಿಟ್ಟಿರುತ್ತಾನೆ.

ಇದನ್ನೂ ಓದಿ: Bhagyalakshmi Serial: ಶ್ರೇಷ್ಠಾ ಕಿಡ್ನಾಪ್‌; ತಾಂಡವ್ ಅಸಲಿ ಬಣ್ಣ ಬಯಲಾಗೋ ಹೊತ್ತಲ್ಲೇ ಭಾಗ್ಯಗೆ ಶಾಕ್‌!

ಆನಂದ್‌ ಕಣ್ಗಾವಲು

ಎಲ್ಲ ರಾತ್ರಿ ಮಲಗಿರುವಾಗ ಆನಂದ್‌ ಮಾತ್ರ ತುಂಬಾ ಎಚ್ಚರದಿಂದ ಇರುತ್ತಾನೆ. ಸುನಿ ಮಲಗಿರುವಾಗು ರೌಡಿ ಇನ್ನೇನು ಸಾಯಿಸಬೇಕು ಅನ್ನೋ ಅಷ್ಟರಲ್ಲಿ ಆನಂದ್‌ ಬಂದೂಕು ಹಿಡಿದು ರೌಡಿ ಮುಂದೆ ನಿಂತಿದ್ದಾನೆ. ಆನಂದ್‌ ರೌಡಿಗಳನ್ನು ಸೆದೆ ಬಡಿಯುತ್ತಾನಾ? ಸುನಿ ಇದರಿಂದ ಬಚಾವ್‌ ಆಗ್ತಾನಾ? ಆನಂದ್‌ ಮುಂದಿನ ನಡೆಯೇನು? ಗೌತಮ್‌ ಇಷ್ಟೂ ಗೊತ್ತಾದಮೇಲೂ ಜೈದೇವ್‌ ಸುಮ್ಮನೆ ಬಿಡ್ತಾನಾ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ರಾತ್ರಿಯ ಮುದ್ದು ಮಾತು ಭೂಮಿಕಾಗೆ ನಾಚಿಕೆ ಹೊತ್ತು ತಂತು!

ಮತ್ತೊಂದು ಕಡೆ ಆನಂದ್‌ ಮಾಡಿದ ಎಡವಟ್ಟಿನಿಂದಾಗಿ ಭೂಮಿಕಾ ನಶೆಯಲ್ಲಿ ತೇಲಿದ್ದಾಳೆ. ಮಾರ್ನಿಂಗ್‌ ಎದ್ದ ಕೂಡಲೇ ತಲೆ ನೋವು ಅಂತ ಗೌತಮ್‌ ಮುಂದೆ ಹೇಳಿದ್ದಾಳೆ. ಆ ಬಳಿಕ ಭೂಮಿಕಾ, ಗೌತಮ್‌ ಮುಂದೆ ಮಾತಾಡಿರುವ ಬಗ್ಗೆ ಎಲ್ಲವನ್ನೂ ಗೌತಮ್‌ ವಿವರಿಸುತ್ತಾನೆ. ಈ ಇಬ್ಬರ ಜೋಡಿಯ ಕ್ಯೂಟ್‌ ಮಾತುಕತೆ ನೋಡಿ ಪ್ರೇಕ್ಷಕರು ಸಖತ್‌ ಖುಷ್‌ ಆಗಿದ್ದಾರೆ.



ಮಲ್ಲಿ ಮದುವೆ ಸಂಚಿಕೆಗಳು ಅಮೃತಧಾರೆ ಸೀರಿಯಲ್‌ನಲ್ಲಿ ಮತ್ತೊಂದು ರೋಚಕ ತಿರುವನ್ನು ಪಡೆದುಕೊಂಡಿತ್ತು. ಜೈದೇವ್‌ ಮಾಡುತ್ತಿರುವ ಪ್ಲ್ಯಾನ್‌ಗಳಿಗೆ ಇದೇ ಮೊದಲ ಬಾರಿ ಗೌತಮ್ ಅವರು ಸರಿಯಾದ ಟಕ್ಕರ್ ಕೊಟ್ಟಿದ್ದಾರೆ ಎಂದು ಪ್ರೇಕ್ಷಕರು ಹೇಳಿದ್ದರು. ಮಲ್ಲಿ ಮದುವೆ ವಿಚಾರದಲ್ಲಿ ಗೌತಮ್ ಹಾಗೂ ಭೂಮಿಕಾ ಅವರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿದ್ದವು. ಆದರೆ ಅಂತಿಮವಾಗಿ ಮಲ್ಲಿ ಮದುವೆ ಆಗಿದೆ. ಜೆಡಿ ಕೆಡಿತನಕ್ಕೆ ಮಲ್ಲಿ ಮತ್ತೊಮ್ಮೆ ಬಲಿಯಾಗಲಿದ್ದಾಳೆ ಇದು ಬೇಡವಾಗಿತ್ತು ಎಂದು ಪ್ರೇಕ್ಷಕರು ಅಂದುಕೊಳ್ಳುತ್ತಿದ್ದಾಗಲೇ ಮಲ್ಲಿ ತಿರುಗಿ ಬಿದ್ದಿರುವುದು ಪ್ರೇಕ್ಷಕರಿಗೆ ಖುಷಿ ನೀಡಿದೆ.

ಇದನ್ನೂ ಓದಿ: Daali Dhananjaya: ಡಾಲಿ ಧನಂಜಯ ನಿರ್ಮಾಣದ ಹೊಸ ಹಾಸ್ಯ ವೆಬ್ ಸರಣಿ ಘೋಷಣೆ; ಸ್ಟ್ರೀಮಿಂಗ್‌ ಯಾವಾಗ?

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.