Bhagya Lakshmi Serial: ವೀಕ್ಷಕರು ಊಹಿಸಿರದ ಟ್ವಿಸ್ಟ್; ಕಂಗಾಲಾದ ತಾಂಡವ್!
Bhagya Lakshmi Serial: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಸೀರಿಯಲ್‌ನಲ್ಲಿ ಈಗ ಹೈ-ವೋಲ್ಟೇಜ್ ಡ್ರಾಮಾ ಶುರುವಾಗಿದೆ. ಭಾಗ್ಯಾ ಏನೋ ಮಾಸ್ಟರ್ ಪ್ಲ್ಯಾನ್ ಅಂತೂ ಮಾಡಿದ್ಲು ಆದ್ರೆ ತಾಂಡವ್ ಅವಳಿಕ್ಕಿಂತ ಮುಂದೆ ಹೋಗಿ ಯೋಚಿಸಿ ಶ್ರೇಷ್ಠಾಳನ್ನ ಕಿಡ್ನಾಪ್ ಮಾಡಿದ್ದಾನೆ. ಇದೀಗ ಮಾಂಗಲ್ಯ ಇನ್ನೇನು ತಾಂಡವ್ ಕಟ್ಟಬೇಕು ಅಷ್ಟರಲ್ಲಿ ಶ್ರೇಷ್ಠಾ ಮಾಸ್ ಎಂಟ್ರಿ ಕೊಟ್ಟಿದ್ದಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿ -
ಕಲರ್ಸ್ ಕನ್ನಡ ವಾಹಿನಿಯ (Colors Kannada) ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' (Bhagyalakshmi Serial) ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಸೀರಿಯಲ್‌ನಲ್ಲಿ ಈಗ ಹೈ-ವೋಲ್ಟೇಜ್ ಡ್ರಾಮಾ ಶುರುವಾಗಿದೆ. ಭಾಗ್ಯಾ ಏನೋ ಮಾಸ್ಟರ್ ಪ್ಲ್ಯಾನ್ ಅಂತೂ ಮಾಡಿದ್ಲು ಆದ್ರೆ ತಾಂಡವ್ ಅವಳಿಕ್ಕಿಂತ ಮುಂದೆ ಹೋಗಿ ಯೋಚಿಸಿ ಶ್ರೇಷ್ಠಾಳನ್ನ ಕಿಡ್ನಾಪ್ (Kidnap) ಮಾಡಿದ್ದಾನೆ. ಇದೀಗ ಮಾಂಗಲ್ಯ ಇನ್ನೇನು ತಾಂಡವ್ ಕಟ್ಟಬೇಕು ಅಷ್ಟರಲ್ಲಿ ಶ್ರೇಷ್ಠಾ ಮಾಸ್ ಎಂಟ್ರಿ ಕೊಟ್ಟಿದ್ದಾಳೆ.
ಇದನ್ನೂ ಓದಿ: Sanya Malhotra: ಸಿತಾರ್ ವಾದಕ ರಿಷಬ್- ನಟಿ ಸಾನ್ಯಾ ಒಂದು ವರ್ಷದ ಸಂಬಂಧ ಅಂತ್ಯ? ದಂಗಲ್ ಚೆಲುವೆಗೆ ಇದೇನಾಯ್ತು?
ತಾಂಡವ್ ಡ್ರಾಮ
ತಾಂಡವ್ ಮತ್ತು ಶ್ರೇಷ್ಠಾ ಒಟ್ಟಾಗಿ ಸೇರಿ ಆಡುತ್ತಿದ್ದ ನಾಟಕವನ್ನು ಭಾಗ್ಯ ಕದ್ದು ಕೇಳಿಸಿಕೊಂಡಿದ್ದಳು. ತಾನು ಕೇವಲ ಒಳ್ಳೆಯವನಂತೆ ನಟಿಸುತ್ತಿದ್ದೇನೆ ಎಂದು ತಾಂಡವ್ ತನ್ನ ಪ್ರೇಯಸಿ ಶ್ರೇಷ್ಠಾ ಮುಂದೆ ಹೇಳಿಕೊಂಡಿದ್ದನ್ನು ಕೇಳಿಸಿಕೊಂಡ ಭಾಗ್ಯ ರೊಚ್ಚಿಗೆದ್ದಿದ್ದಳು.
ತಾಂಡವ್‌ನ ಬೇಡ ಎನ್ನುತ್ತಿದ್ದ ಭಾಗ್ಯ ಹೇಗೆ ಈ ಮದುವೆಗೆ ಒಪ್ಪಿಕೊಂಡಳು ಎಂದು ಪ್ರಶ್ನೆ ಮಾಡಿದ್ದರು. ಭಾಗ್ಯ ಮೌನ ಮುರಿದಿದ್ದು, ನಾನು ತಾಂಡವ್‌ನ ಮದುವೆ ಆಗ್ತೀನಿ ಎಂದು ಯಾರು ಹೇಳಿದ್ದು ನಿಮಗೆ? ಎಂದು ಮರು ಪ್ರಶ್ನೆ ಮಾಡಿ, ಫ್ಲ್ಯಾಶ್‌ಬ್ಯಾಕ್ ಸ್ಟೋರಿ ಹೇಳಿದ್ದಳು.
ತಾಂಡವ್ ಮತ್ತು ಶ್ರೇಷ್ಠಾ ಮಾತುಕತೆಯನ್ನ ಕೇಳಿಸಿಕೊಂಡಿದ್ದಳು ಭಾಗ್ಯ. ತಾನು ಒಳ್ಳೆಯವನಂತೆ ನಟಿಸುತ್ತಿದ್ದೇನೆ ಎಂದು ತಾಂಡವ್ ಸತ್ಯ ಬಾಯ್ಬಿಟ್ಟಿದ್ದ. ತಾಂಡವ್ ಪ್ಲ್ಯಾನ್ ಗೊತ್ತಾದ ಬಳಿಕ ಭಾಗ್ಯ ತಾಳಿಯನ್ನ ಬದಲಾಯಿಸಿದ್ದಾಳೆ. ಅಷ್ಟೇ ಅಲ್ಲ ತಾಂಡವ್ ಕೊಟ್ಟ ಬಳಯನ್ನು ಹಾಕದೇ ಆದಿ ಕೊಟ್ಟ ಬಳೆಗಳನ್ನೇ ಹಾಕಿದ್ದಳು.
ಅಹಂಕಾರದಿಂದ ಸವಾಲು
ಆ ಬಳಿಕ ಶ್ರೇಷ್ಠಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಮನೆಯಲ್ಲಿ ಮದುವೆ ಸಂಭ್ರಮ ನಡೆಯುತ್ತಿದ್ದರೆ, ಅತ್ತ ಶ್ರೇಷ್ಠಾ ಕಿಡ್ನ್ಯಾಪ್ ಆಗಿರುವುದು ಈಗ ದೊಡ್ಡ ತಲೆನೋವಾಗಿತ್ತು. ಆದಿ ರೂಮ್‌ಗೆ ಹೋಗಿ ನೋಡಿದಾಗ ಅಲ್ಲಿ ಶ್ರೇಷ್ಠಾ ಇರಲಿಲ್ಲ. ಇದನ್ನೇ ಬಳಸಿಕೊಂಡ ತಾಂಡವ್, ಶ್ರೇಷ್ಠಾ ಈ ಮದುವೆಗೆ ಬರೋದೇ ಇಲ್ಲ ಎಂದು ಭಾಗ್ಯ ಮುಂದೆ ಅಹಂಕಾರದಿಂದ ಸವಾಲು ಹಾಕಿದ್ದ.
ಇನ್ನೇನು ತಾಂಡವ್, ಭಾಗ್ಯಳಿಗೆ ಮಾಂಗಲ್ಯ ಕಟ್ಟಬೇಕು ಅನ್ನೋ ಅಷ್ಟರಲ್ಲಿ ಆದಿ ಶ್ರೇಷ್ಠಾಳನ್ನ ಕರೆ ತಂದಿದ್ದಾನೆ. ಶ್ರೇಷ್ಠಾ ಮದುವೆ ನಿಲ್ಲಿಸೋದು ಗ್ಯಾರಂಟಿ ಆಗಿದೆ. ಆದಿನೇ ಭಾಗ್ಯಳ ಕುತ್ತಿಗೆಗೆ ತಾಳಿ ಕಟ್ಟೋದು ಕನ್‌ಫರ್ಮ್ ಆದಂತಿದೆ.
ಇದನ್ನೂ ಓದಿ: Bhagyalakshmi Serial: ಶ್ರೇಷ್ಠಾ ಕಿಡ್ನಾಪ್; ತಾಂಡವ್ ಅಸಲಿ ಬಣ್ಣ ಬಯಲಾಗೋ ಹೊತ್ತಲ್ಲೇ ಭಾಗ್ಯಗೆ ಶಾಕ್!
ಮುಂದೆ ಆದಿ ಭಾಗ್ಯಳನ್ನ ಮದುವೆ ಆಗ್ತಾನಾ? ಶ್ರೇಷ್ಠಾ ಯಾವ ರೀತಿ ತಾಂಡವ್ ಮೇಲೆ ಆಕ್ಷನ್ ತೆಗೆದುಕೊಳ್ತಾಳೆ? ಕುಸುಮ ಮುಂದಿನ ನಡೆಯೇನು ಎನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಈ ಧಾರಾವಾಹಿಯು ಪ್ರತಿ ದಿನ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುತ್ತದೆ.