Amruthadhaare Serial: ಮಿಂಚು ಮೇಲೆ ಬಿದ್ದೇ ಬಿಡ್ತು ಜೈದೇವ್ ವಕ್ರದೃಷ್ಟಿ; ಗೌತಮ್ ಕಥೆ ಏನು?
Amruthadhaare Serial: ಅತ್ತ ಶಕುನಿ ಮಾಮ , ಮಿಂಚು ಕೈಯಲ್ಲಿ ಇರುವ ಮಚ್ಚೆ ತ್ರಿಶೂಲ್ ನೋಡಿ, ಮಿಂಚುನೇ ಗೌತಮ್ ಮಗಳು ಅನ್ನೋ ಸತ್ಯ ಗೊತ್ತಾಗಿದೆ. ಇದು ಕೆಡಿ ಜೈದೇವ್‌ಗೆ ಗೊತ್ತಾಗಿದೆ. ಇದೀಗ ಮಿಂಚು ಪ್ರಾಣಕ್ಕೆ ಜೈದೇವ್ ಕಂಟಕ ತರ್ತಾನಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಜೈದೇವ್ ಮತ್ತೆ ಗೌತಮ್ ಕುಟುಂಬಕ್ಕೆ ಕೇಡು ಬಯಸಲು ಸಜ್ಜಾಗಿದ್ದಾನೆ. ಈ ಹಿಂದೆ ಗೌತಮ್ ಹಾಗೂ ಭೂಮಿಕಾಗೆ ಹೆಣ್ಣು ಮಗು ಹುಟ್ಟಿತ್ತು. ಆ ಮಗು ಹುಟ್ಟಿದ ತಕ್ಷಣ ಜಯದೇವ್ (Jaidev) ಆ ಮಗುವನ್ನು ಕಿಡ್ನ್ಯಾಪ್ (Kidnap) ಮಾಡಿ ಕಾಡಿನಲ್ಲಿ ಎಸೆದಿದ್ದನು. ಅದರ ಸುಳಿವು ಈಗ ಜೈದೇವ್‌ಗೆ ಸಿಕ್ಕಿದೆ. ಮತ್ತೆ ಕಿತಾಪತಿ ಮಾಡಲು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾನೆ.
ಮಗುವಿನ ಬಗ್ಗೆ ಸುಳಿವು
ಇತ್ತೀಚೆಗೆ ನಡೆದ ಘಟನೆಯಿಂದ ಅಖಿಲಾಂಡೇಶ್ವರಿ ಸಹಾಯ ಗೌತಮ್ ಸಿಕ್ಕಿದೆ. ಈಗ ಅಖಿಲಾಂಡೇಶ್ವರಿಗೆ ಕಳೆದು ಹೋದ ಮಗುವಿನ ಬಗ್ಗೆ ಸುಳಿವೂ ಸಿಕ್ಕಿದೆ. ಹೀಗಾಗಿ ಗೌತಮ್‌ಗೆ ಕಾಲ್ ಮಾಡಿದ್ದಾರೆ.
ಇದನ್ನೂ ಓದಿ: Amitabh Bachchan : ಆಸ್ಪತ್ರೆಗೆ ದಾಖಲಾದ್ರಾ ಅಮಿತಾಭ್ ಬಚ್ಚನ್? ಏನಿದು ಸುದ್ದಿ?
ಗೌತಮ್ ಮೀಟಿಂಗ್ ಅಲ್ಲಿ ಇದ್ದ ಕಾರಣ ಕಾಲ್ ರಿಸೀವ್ ಮಾಡಿಲ್ಲ, ಹೀಗಾಗಿ ಶಕುನಿ ಮಾಮ ಕಾಲ್ ಸ್ವೀಕರಿಸಿ, ಅಖಿಲಾಂಡೇಶ್ವರಿ ಕೊಟ್ಟ ಅಡ್ರೆಸ್ ಅನ್ನು ಬರೆದುಕೊಂಡಿದ್ದಾನೆ. ಆದರೆ ಈ ವಿಚಾರ ಜೈದೇವ್‌ಗೆ ಗೊತ್ತಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟೇ ಕೊಡುವೆ ಅಂತ ಜೈದೇವ್ ಈಗ ಅಬ್ಬರಿಸಿದ್ದಾನೆ. ಗೌತಮ್ ತಿಳಿಯೋದಕ್ಕೂ ಮುಂಚೆ ಜೈದೇವ್‌ಗೆ ಗೊತ್ತಾಗಿದೆ.
ಅತ್ತ ಶಕುನಿ ಮಾಮ , ಮಿಂಚು ಕೈಯಲ್ಲಿ ಇರುವ ಮಚ್ಚೆ ತ್ರಿಶೂಲ್ ನೋಡಿ, ಮಿಂಚುನೇ ಗೌತಮ್ ಮಗಳು ಅನ್ನೋ ಸತ್ಯ ಗೊತ್ತಾಗಿದೆ. ಇದು ಕೆಡಿ ಜೈದೇವ್‌ಗೆ ಗೊತ್ತಾಗಿದೆ. ಇದೀಗ ಮಿಂಚು ಪ್ರಾಣಕ್ಕೆ ಜೈದೇವ್ ಕಂಟಕ ತರ್ತಾನಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಆ ಮಗುವನ್ನು ಕಾಪಾಡಲು ಹೋಗಿ ಗೌತಮ್‌ಗೆ ಏನಾದರೂ ಆದರೂ ಆಗಬಹುದು. ಈಗಾಗಲೇ ಪುರೋಹಿತರು ನಿಮ್ಮ ಮಗಳಿಂದಲೇ ನಿಮಗೆ ಕಂಟಕ ಎಂದು ಈ ಹಿಂದೆ ಹೇಳಿದ್ದರು.
ಆದರೆ ಇದೆಲ್ಲ ಕಥೆಯನ್ನು ನೋಡಿದ್ರೆ ಶಕುಂತಲಾ ಕೂಡ ಮಗನಿಗೆ ಸಾಥ್ ಕೊಡ್ತಾಳಾ ಅನ್ನೋದು ಕುತೂಹಲ. ಮತ್ತೊಂದು ಕಡೆ ಜೈದೇವ್ ಈಗ ದಿಯಾ ಮನೆ ಆಳಾಗಿದ್ದಾನೆ. ಇನ್ನು ಮಹಿಮಾ ಗರ್ಭಿಣಿಯಾಗಿದ್ದಾರೆ. ಗೌತಮ್ ಮನೆಗೆ ಭೇಟಿ ನೀಡಿರುವ ಮಹಿಮಾ ಎಲ್ಲರೊಂದಿಗೆ ಮಾತನಾಡಿರುವುದು ಹೊಸ ಎಪಿಸೋಡ್‌ನಲ್ಲಿ ಇದೆ. ನೀನು ಹೆಚ್ಚು ಪ್ರವಾಸ ಮಾಡಬಾರದು ಎಲ್ಲಿಯೂ ಓಡಾಡಬಾರದು ಅಂತ ಹೇಳಿದ್ದಾರೆ.
ಮಕ್ಕಳ ಜೊತೆ ಗೌತಮ್ ಹಾಗೂ ಭೂಮಿ, ಮಕ್ಕಳಾಗಿ ಚೆಂದವಾಗಿ ಬದುಕುತ್ತಿದ್ದಾರೆ. ಮತ್ತೆ ಜೈದೇವ್ ವಕ್ರದೃಷ್ಟಿ ಬಿಳೋದು ಕನ್ಫ್‌ರ್ಮ್ ಆದಂತಿದೆ.
ಇದನ್ನೂ ಓದಿ: Mouni Roy: ‘ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೌನಿ ರಾಯ್ ಮಿಂಚಿಂಗ್
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ