Vishwavani Impact: ‘ವಿಶ್ವವಾಣಿ’ ವರದಿಗೆ ಎಚ್ಚೆತ್ತುಕೊಂಡ ಜೆಸ್ಕಾಂ: ಮಾಗಣಗೇರಿ ಗ್ರಾಮದ ಟ್ರಾನ್ಸ್ ಫಾರ್ಮರ್ ದುರಸ್ತಿ
ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೀವ್ರ ಪರದಾಟ ಸೃಷ್ಟಿಯಾಗಿತ್ತು. ಅಲ್ಲದೆ ಕೃಷಿ ಪಂಪ್‌ಸೆಟ್‌ಗಳು ಸ್ಥಗಿತ ಗೊಂಡಿದ್ದರಿಂದ ಕೈಗೆ ಬಂದ ಬೆಳೆಗಳು ಒಣಗುವ ಸ್ಥಿತಿ ತಲುಪಿದ್ದವು. ರೈತರು ಮತ್ತು ಗ್ರಾಮಸ್ಥರ ಈ ದಾರುಣ ಸ್ಥಿತಿಯ ಕುರಿತು ‘ವಿಶ್ವವಾಣಿ’ ಪತ್ರಿಕೆಯಲ್ಲಿ ಶನಿವಾರ ‘ಮಾಗಣಗೇರಿ ಯಲ್ಲಿ ವಿದ್ಯುತ್ ವ್ಯತ್ಯಯ, ಕ್ರಮಕ್ಕೆ ಒತ್ತಾಯ’ ಎಂದು ಸವಿಸ್ತಾರವಾದ ವಿಶೇಷ ವರದಿ ಪ್ರಕಟ ವಾಗಿತ್ತು.
-
ಯಡ್ರಾಮಿ: ತಾಲೂಕಿನ ಮಾಗಣಗೇರಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕೆಟ್ಟುಹೋಗಿದ್ದ ಮುಖ್ಯ ಟ್ರಾನ್ಸ್ ಫಾರ್ಮರ್(ಟಿಸಿ) ಅನ್ನು ಜೆಸ್ಕಾಂ ಅಧಿಕಾರಿಗಳು ಸೋಮವಾರ ಯಶಸ್ವಿಯಾಗಿ ದುರಸ್ತಿಗೊಳಿಸಿ, ವಿದ್ಯುತ್ ಸಂಪರ್ಕ ಪುನಸ್ಥಾಪಿಸಿದ್ದಾರೆ. ಈ ಮೂಲಕ ‘ವಿಶ್ವವಾಣಿ’ ಪತ್ರಿಕೆಯ ವರದಿ ಭಾರಿ ಇಂಪ್ಯಾಕ್ಟ್ ಸೃಷ್ಟಿಸಿದೆ.
ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೀವ್ರ ಪರದಾಟ ಸೃಷ್ಟಿಯಾಗಿತ್ತು. ಅಲ್ಲದೆ ಕೃಷಿ ಪಂಪ್‌ಸೆಟ್‌ಗಳು ಸ್ಥಗಿತ ಗೊಂಡಿದ್ದರಿಂದ ಕೈಗೆ ಬಂದ ಬೆಳೆಗಳು ಒಣಗುವ ಸ್ಥಿತಿ ತಲುಪಿದ್ದವು. ರೈತರು ಮತ್ತು ಗ್ರಾಮಸ್ಥರ ಈ ದಾರುಣ ಸ್ಥಿತಿಯ ಕುರಿತು ‘ವಿಶ್ವವಾಣಿ’ ಪತ್ರಿಕೆಯಲ್ಲಿ ಶನಿವಾರ ‘ಮಾಗಣಗೇರಿ ಯಲ್ಲಿ ವಿದ್ಯುತ್ ವ್ಯತ್ಯಯ, ಕ್ರಮಕ್ಕೆ ಒತ್ತಾಯ’ ಎಂದು ಸವಿಸ್ತಾರವಾದ ವಿಶೇಷ ವರದಿ ಪ್ರಕಟ ವಾಗಿತ್ತು.
ಇದನ್ನೂ ಓದಿ: Vishwavani Impact: ಪಿಡಿಒ ಅಮಾನತು: ನೀರು ಪೂರೈಕೆಗೆ ಕ್ರಮ
ಕ್ಷಣಮಾತ್ರದಲ್ಲಿ ಎಚ್ಚೆತ್ತ ಅಧಿಕಾರಿಗಳು: ‘ವಿಶ್ವವಾಣಿ’ ವರದಿಯ ಗಂಭೀರತೆಯನ್ನು ಅರಿತ ಜೆಸ್ಕಾಂ ಹಿರಿಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾದರು.
ಮಂಗಳವಾರ ಬೆಳಗ್ಗೆಯೇ ಸ್ಥಳಕ್ಕೆ ತಾಂತ್ರಿಕ ಸಿಬ್ಬಂದಿ ಹಾಗೂ ಅಗತ್ಯ ಉಪಕರಣಗಳನ್ನು ರವಾನಿಸಿ, ಕೆಟ್ಟು ನಿಂತಿದ್ದ ಟ್ರಾನ್ಸ್ ಫಾರ್ಮರ್ ಅನ್ನು ಸಮರೋಪಾದಿಯಲ್ಲಿ ರಿಪೇರಿ ಮಾಡಿಸಿದರು. ಜೆಸ್ಕಾಂ ಅಧಿಕಾರಿಗಳ ಈ ಕ್ಷಿಪ್ರ ಕ್ರಮದಿಂದಾಗಿ ಹಲವು ದಿನಗಳಿಂದ ಕತ್ತಲಲ್ಲಿದ್ದ ಮಾಗಣಗೇರಿ ಗ್ರಾಮಕ್ಕೆ ಕೊನೆಗೂ ಬೆಳಕು ಬಂದಂತಾಗಿದ್ದು, ಕುಡಿಯುವ ನೀರು ಹಾಗೂ ಬೆಳೆಗಳಿಗೆ ಜೀವದಾನ ಸಿಕ್ಕಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನು ಎತ್ತಿ ಹಿಡಿದು ತಮಗೆ ನ್ಯಾಯ ಕೊಡಿಸಿದ ‘ವಿಶ್ವವಾಣಿ’ ಪತ್ರಿಕೆಗೆ ಮಾಗಣಗೇರಿ ಗ್ರಾಮಸ್ಥರು ಹಾಗೂ ರೈತರು ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.