ಜೀ ಕನ್ನಡ ವಾಹಿನಿಯಲ್ಲಿ(Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare Serial) ಭೂಮಿಕಾ ಮೇಲೆ ಮಲ್ಲಿ ಅತ್ಯಂತ ಬೇರ ಹೊರಹಾಕಿದ್ದಾಳೆ. ಮಲ್ಲಿ ವರ್ತನೆ ಕಂಡು ಭೂಮಿಕಾಗೆ (Bhoomika) ಡೌಟ್ ಶುರು ಆಗಿದೆ. ಮಲ್ಲಿಗೆ ಇದಾಗಲೇ ಮದುವೆಯಾಗಿರುವುದು ಸುನಿಲ್ಗೆ ಗೊತ್ತಿದೆ. ಆಕೆ ತನಗಿಂತ ದೊಡ್ಡವಳು ಎನ್ನುವುದೂ ಗೊತ್ತು. ಫೋನ್ ಬಂದಾಗ ಮಲ್ಲಿ ಕೊಡುವ ರಿಯಾಕ್ಷನ್ ನೋಡಿ ಅವಳಿಗೆ ಡೌಟ್ ಬಂದಿತ್ತು. ಮಲ್ಲಿ ಊಟದ ಬ್ಯಾಗ್ ಬಿಟ್ಟು ಹೋದಳು ಎನ್ನುವ ಕಾರಣಕ್ಕೆ ಕಾಲೇಜ್‌ಗೆ ಕೊಡಲು ಬಂದಾಗ, ಆಕೆ ತುಂಬಾ ಕ್ಲಾಸ್ ಬಂಕ್ ಮಾಡ್ತಿರೋದು ತಿಳಿದಿದೆ. ಭೂಮಿಕಾ ಕಾಲೇಜಿಗೆ ಬಂದು ವಿಚಾರಿಸಿರುವ ಬಗ್ಗೆ ಮಲ್ಲಿಗೆ (Malli) ಗೊತ್ತಾಗಿದೆ. ಭೂಮಿ ಕಾಳಜಿ ಹಾಗೂ ಅವಳ ಪ್ರೀತಿಯನ್ನು ಅಪಾರ್ಥ ಮಾಡಿಕೊಂಡಿದ್ದಾಳೆ ಮಲ್ಲಿ.
ಇದನ್ನೂ ಓದಿ: Bhagyalakshmi Serial Kannada: ಆತ್ಮ*ಹತ್ಯೆ ಮಾಡ್ಕೊಂಡ ಶ್ರೇಷ್ಠ; ಪಾತ್ರವೇ ಅಂತ್ಯ ಆಯ್ತಾ?
ನಿಮ್ಮಿಂದ ನಿರೀಕ್ಷೆ ಮಾಡಿಲ್ಲ!
ಮಲ್ಲಿ ಏಕಾಏಕಿ ಬಂದು ಭೂಮಿ ಬಳಿ, `ನಿಮ್ಮಿಂದ ನಿರೀಕ್ಷೆ ಮಾಡಿಲ್ಲ ಅನ್ನುತ್ತಾಳೆ. ನೀವು ಎಲ್ಲರ ಥರ ಅಲ್ಲ ಅಂತ ಅಂದುಕೊಂಡಿದ್ದೆ. ಆದರೆ ನೀವೆ ನನ್ನ ನಂಬಿಕೆಯನ್ನ ಸುಳ್ಳು ಮಾಡಿಬಿಟ್ರಿ. ನಿಮಗೆ ಏನಾದರೂ ಕೇಳೋದಿದ್ದರೆ ನನ್ನ ಹತ್ತಿರ ಡೈರೆಕ್ಟ್ ಆಗಿಯೇ ಕೇಳಬಹುದಿತ್ತು, ಯಾಕೆ ಇಷ್ಟೆಲ್ಲ ಸುತ್ತಿಬಳಸಿ ಹೋದ್ರಿ. ನಿಮ್ಮ ಮನಸಲ್ಲಿ ಇಂತಹ ಭಾವನೆ ಇದೆ ಅಂತ ನಿಜವಾಗಲೂ ಗೊತ್ತಿರಲಿಲ್ಲ. ನನ್ನನ್ನು ಅರ್ಥ ಮಾಡಿಕೊಂಡಿದ್ರಿ ಅಂತ ಅಂದುಕೊಂಡಿದ್ದೆ. ಆದರೆ ಆ ನಂಬಿಕೆನೇ ಸುಳ್ಳು ಆಯ್ತು.ನಾನು ಯಾವುದೇ ವಿಷಯವನ್ನ ನಿಮ್ಮಿಂದ ಮುಚ್ಚಿಟ್ಟಿಲ್ಲ. ಮುಚ್ಚಿ ಇಡೋದು ಇಲ್ಲ. ಯಾಕೆ ಅಂದರೆ ನಿಮ್ಮನ್ನು ನಾನು ಗೌರವಿಸುತ್ತೀನಿ. ನಿಮ್ಮನ್ನು ಎತ್ತರದಲ್ಲಿ ಇಟ್ಟಿದ್ದೀನಿ. ನನ್ನ ಫ್ರೆಂಡ್ ಹತ್ತಿರ ನೀವು ವಿಚಾರಿಸಿದ್ದೀರಿ ಅಂದಾಗ ತುಂಬಾ ಸಂಕಟ ಆಯ್ತುʼ ಅಂತ ಮಲ್ಲಿ ಕಣ್ಣೀರು ಹಾಕಿದ್ದಾಳೆ.
ಭೂಮಿಕಾ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾಳೆ. ʻನಾನು ಯಾವುದೇ ನಿನ್ನ ಮೇಲಿನ ಡೌಟ್‌ನಲ್ಲಿ ಬಂದಿಲ್ಲ. ಆದರೆ ನೀನು ಅಲ್ಲಿ ಇರಲಿಲ್ಲ. ನೀನು ನಡೆದುಕೊಂಡ ರೀತಿಯೇ ಡೌಟ್ ಬರೋ ಥರ ಇತ್ತು. ಫೋನ್ ಕೂಡ ರಿಸೀವ್ ಮಾಡಲಿಲ್ಲ ನೀನು. ನೀನು ಹೀಗೆ ರಿಯಾಕ್ಟ್ ಮಾಡ್ತೀಯಾ ಅಂತ ಗೊತ್ತಿರಲಿಲ್ಲ, ಅದಕ್ಕೆ ನಾವು ಹುಡುಗ ಬರ್ತಾನೆ ಅಂತ ಡ್ರಾಮಾ ಮಾಡಿದ್ವಿʼ ಅಂತ ಭೂಮಿಕಾ ಹೇಳಿದ್ದಾಳೆ. ಇದೆಲ್ಲ ಮಾತು ಕೇಳಿದ ಮಲ್ಲಿಗೆ ಇನ್ನಷ್ಟು ದುಃಖವಾಗಿದೆ. ನೀವು ಅನುಮಾನ ಪಟ್ಟಿದ್ದು ನಿಜ ಅಂತ ಕಣ್ಣೀರು ಹಾಕಿದ್ದಾಳೆ ಮಲ್ಲಿ.
ಭೂಮಿಕಾ, ಮಲ್ಲಿಗೆ ನೀನು ಇದಾಗಲೇ ಜೈದೇವನಿಂದ ಮೋಸ ಹೋಗಿರುವೆ. ಮತ್ತೆ ನಿನ್ನ ಜೀವನದಲ್ಲಿ ತಪ್ಪು ಆಗುವುದು ಇಷ್ಟವಲ್ಲ, ಅದಕ್ಕಾಗಿಯೇ ಎಂದಿದ್ದರೂ, ಮಲ್ಲಿಗೆ ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಆಕೆ ರೇಗಿ ಹೋಗಿ ಭೂಮಿಕಾ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ.
ಜೈದೇವ್ ಮಾಸ್ಟರ್ ಪ್ಲ್ಯಾನ್
ಇನ್ನೊಂದು ಕಡೆ ಜೈದೇವ್ ಮಾಸ್ಟರ್ ಪ್ಯಾನ್ ಮಾಡ್ತಿದ್ದಾನೆ, ಮಲ್ಲಿ ಮುಂದೆ ಗೌತಮ್ ಹಾಗೂ ಭೂಮಿಕಾ ಮದುವೆ ಪ್ರಸ್ತಾಪ ಇಟ್ಟಾಗ, ಸುನಿ ಪ್ರಪೋಸ್ ಮಾಡಿರೋ ವಿಚಾರ ಹೇಳಿದ್ದಾಳೆ. ಇದೀಗ ಗೌತಮ್ ಹಾಗೂ ಭೂಮಿಕಾ ಪ್ರಪೋಸ್ ಮಾಡಿದವನ ಜೊತೆಗೆ ಮಾತುಕತೆ ಮಾಡಬೇಕು ಅಂತ ಹೇಳಿದ್ದಾರೆ. ಇದೀಗ ಸುನಿಗೆ ಮಲ್ಲಿ ಮನೆಗೆ ಕರೆದಿದ್ದಾಳೆ. ಇದರಿಂದ ಸುನಿ ಸಖತ್ ಶಾಕ್ ಆಗಿದ್ದಾನೆ. ಇನ್ನು ಜೈದೇವ್ ಯಾವ ರೀತಿ ಪ್ಲ್ಯಾನ್ ಮಾಡ್ತಾನೆ ಅನ್ನೋದೇ ಕುತೂಹಲ.
ಇದನ್ನೂ ಓದಿ: Naa Ninna Bidalaare Serial: ಅಂಬಿಕಾ ಪಾತ್ರಧಾರಿ ನೀತಾ ಅಶೋಕ್ ಈ ಕಾರಣಕ್ಕೆ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ