ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಕಳೆದು ಹೋದ ಮಗು ಸಿಕ್ಕಾಯ್ತು! ಲಕ್ಷ್ಮೀಕಾಂತ್‌ ಮಾವನ ಮಾಸ್ಟರ್‌ ಪ್ಲ್ಯಾನ್‌ ಏನು?

Amruthadhaare Serial: ಒಂದು ಕಡೆ ಜೈದೇವ್‌, ದಿಯಾ ಕೈ ಆಳು ಆಗಿದ್ದರೆ, ಇನ್ನೊಂದು ಕಡೆ ಗೌತಮ್‌ ಕುಟುಂಬದಲ್ಲಿ ಅನೇಕ ಬದಲಾವಣೆಗಳು ಆಗುತ್ತಿವೆ. ಗೌತಮ್‌ ದಿವಾನ್‌ ಹಾಗೂ ಭೂಮಿಕಾ ಹುಟ್ಟಿದ ಮಗುವನ್ನು ಜಯದೇವ್‌ ಕಿಡ್ನ್ಯಾಪ್‌ ಮಾಡಿ ಕಾಡಿನಲ್ಲಿ ಎಸೆದಿದ್ದನು. ಈಗ ಆ ಮಗು ಸಿಕ್ಕಿದೆ ಎಂದು ಅಖಿಲಾಂಡೇಶ್ವರಿ ಮೂಲಕ ಗೊತ್ತಾಗಿದೆ.

Amruthadhaare Serial: ಕಳೆದು ಹೋದ ಮಗು ಸಿಕ್ಕಾಯ್ತು!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 17, 2026 10:13 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಹೊಸ ಟ್ವಿಸ್ಟ್‌ ಶುರುವಾಗಿದೆ. ಒಂದು ಕಡೆ ಜೈದೇವ್‌, ದಿಯಾ ಕೈ ಆಳು ಆಗಿದ್ದರೆ, ಇನ್ನೊಂದು ಕಡೆ ಗೌತಮ್‌ ಕುಟುಂಬದಲ್ಲಿ ಅನೇಕ ಬದಲಾವಣೆಗಳು ಆಗುತ್ತಿವೆ. ಗೌತಮ್‌ ದಿವಾನ್‌ (Gowtham Bhoomika) ಹಾಗೂ ಭೂಮಿಕಾ ಹುಟ್ಟಿದ ಮಗುವನ್ನು ಜಯದೇವ್‌ (Jayadev) ಕಿಡ್ನ್ಯಾಪ್‌ ಮಾಡಿ ಕಾಡಿನಲ್ಲಿ ಎಸೆದಿದ್ದನು. ಈಗ ಆ ಮಗು ಸಿಕ್ಕಿದೆ ಎಂದು ಅಖಿಲಾಂಡೇಶ್ವರಿ ಮೂಲಕ ಗೊತ್ತಾಗಿದೆ.

ಅಖಿಲಾಂಡೇಶ್ವರಿ ಸಹಾಯ

ಈ ಹಿಂದೆ ಗೌತಮ್‌ ಹಾಗೂ ಭೂಮಿಕಾಗೆ ಹೆಣ್ಣು ಮಗು ಹುಟ್ಟಿತ್ತು. ಆ ಮಗು ಹುಟ್ಟಿದ ತಕ್ಷಣ ಜಯದೇವ್‌ ಆ ಮಗುವನ್ನು ಕಿಡ್ನ್ಯಾಪ್‌ ಮಾಡಿ ಕಾಡಿನಲ್ಲಿ ಎಸೆದಿದ್ದನು. ಈ ಮಗುವಿಗೋಸ್ಕರ ಗೌತಮ್‌ ತುಂಬ ಕಷ್ಟಪಟ್ಟರೂ ಪ್ರಯೋಜನವೇ ಆಗಿಲ್ಲ. ಎಷ್ಟು ಹುಡುಕಿದರೂ ಆ ಮಗು ಸಿಕ್ಕಿಲ್ಲ. ಇತ್ತೀಚೆಗೆ ನಡೆದ ಘಟನೆಯಿಂದ ಅಖಿಲಾಂಡೇಶ್ವರಿ ಸಹಾಯ ಗೌತಮ್‌ ಸಿಕ್ಕಿದೆ.

ಇದನ್ನೂ ಓದಿ: Ravi Mohan: ನನ್ನ ಸಂಸಾರ ಹಾಳು ಮಾಡಿದ್ದು ಆ ಮೂರು ಅಕ್ಷರದ ನಟಿ; ನಟ ರವಿ ಸ್ಫೋಟಕ ಹೇಳಿಕೆ

ಈಗ ಅಖಿಲಾಂಡೇಶ್ವರಿಗೆ ಕಳೆದು ಹೋದ ಮಗುವಿನ ಬಗ್ಗೆ ಸುಳಿವೂ ಸಿಕ್ಕಿದೆ. ಹೀಗಾಗಿ ಗೌತಮ್‌ಗೆ ಕಾಲ್‌ ಮಾಡಿದ್ದಾರೆ. ಗೌತಮ್‌ ಮೀಟಿಂಗ್‌ ಅಲ್ಲಿ ಇದ್ದ ಕಾರಣ ಕಾಲ್‌ ರಿಸೀವ್‌ ಮಾಡಿಲ್ಲ, ಹೀಗಾಗಿ ಶಕುನಿ ಮಾಮ ಕಾಲ್‌ ಸ್ವೀಕರಿಸಿ, ಅಖಿಲಾಂಡೇಶ್ವರಿ ಕೊಟ್ಟ ಅಡ್ರೆಸ್‌ ಅನ್ನು ಬರೆದುಕೊಂಡಿದ್ದಾನೆ.



ಗೌತಮ್‌ ವರೆಗೆ ತಲುಪುತ್ತಾ?

ಈಗ ಈ ವಿಷಯ ಗೌತಮ್‌ ವರೆಗೆ ತಲುಪುತ್ತಾ ಎಂಬ ಪ್ರಶ್ನೆ ವೀಕ್ಷಕರದ್ದು. ಲಕ್ಷ್ಮೀಕಾಂತ್‌ಈಗ ಮಗುವಿನ ವಿಷಯ ಗೊತ್ತಾಗಿದೆ. ಈಗ ಮಗುವಿನ ಹುಡುಕಾಟದ ವಿಷಯ ಜಯದೇವ್‌ಗೆ ಗೊತ್ತಾಗಿ, ಅವನು ಏನಾದರೂ ತೊಂದರೆ ಕೊಟ್ಟರೂ ಕೊಡಬಹುದು. ಆ ಮಗುವನ್ನು ಕಾಪಾಡಲು ಹೋಗಿ ಗೌತಮ್‌ಗೆ ಏನಾದರೂ ಆದರೂ ಆಗಬಹುದು. ಈಗಾಗಲೇ ಪುರೋಹಿತರು ನಿಮ್ಮ ಮಗಳಿಂದಲೇ ನಿಮಗೆ ಕಂಟಕ ಎಂದು ಈ ಹಿಂದೆ ಹೇಳಿದ್ದರು.

ಹೀಗಾಗಿ ಲಕ್ಷ್ಮೀಕಾಂತ್‌ ಮತ್ತೆ ತನ್ನ ಚಾಳಿ ಮುಂದುವರಿಸಿತ್ತಾನಾ? ಜೈದೇವ್‌ ಕಷ್ಟ ಪಡುತ್ತಿರೋದನ್ನು ನೋಡಿ ಅವನಿಗೆ ಸಹಾಯ ಮಾಡ್ತಾನಾ? ಅನ್ನೋದು ಕುತೂಹಲ. ಗೌತಮ್‌ ಡ್ರೈವರ್‌ ಆಗಿದ್ದಾಗಲೇ ಮಗು ಸಿಕ್ಕಿತ್ತು. ಅವಳೇ ಮಿಂಚು ಆಗಿರಬಹುದು ಅನ್ನೋದು ವೀಕ್ಷಕರಲ್ಲಿ ಇರುವ ಕುತೂಹಲ.

ಇನ್ನು ಮಹಿಮಾ ಗರ್ಭಿಣಿಯಾಗಿದ್ದಾರೆ. ಗೌತಮ್ ಮನೆಗೆ ಭೇಟಿ ನೀಡಿರುವ ಮಹಿಮಾ ಎಲ್ಲರೊಂದಿಗೆ ಮಾತನಾಡಿರುವುದು ಹೊಸ ಎಪಿಸೋಡ್‌ನಲ್ಲಿ ಇದೆ. ನೀನು ಹೆಚ್ಚು ಪ್ರವಾಸ ಮಾಡಬಾರದು ಎಲ್ಲಿಯೂ ಓಡಾಡಬಾರದು ಅಂತ ಹೇಳಿದ್ದಾರೆ. ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿ ಮಿಂಚು ಹಾಗೂ ಅಪ್ಪು ನಡುವಿನ ಮುದ್ದಿನ ಕಿತ್ತಾಟವು ಹೈಲೈಟ್‌ ಆಗಿದೆ.

ಇದನ್ನೂ ಓದಿ: Amruthadhaare Serial: ಬೇಬಿ ಮನೆಯಲ್ಲಿ ಜೈದೇವ್‌ ಕೆಲಸದಾಳು; ಮಕ್ಕಳನ್ನು ಸಂಭಾಳಿಸಲು ಗೌತಮ್‌-ಭೂಮಿ ಪರದಾಟ

ʻಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ