ಜೀ ಕನ್ನಡ ವಾಹಿನಿಯಲ್ಲಿ (zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare serial) ರೋಚಕ ತಿರುವುನಲ್ಲಿ ಇದೆ. ಕಳೆದುಹೋದ ಮಗಳು 'ಮಿಂಚು' ಎಂಬುದು ಖಚಿತವಾಗುತ್ತದೆ. ಜೆಡಿ ಸಂಚುಗಳಿಗೆ ಈಗ ಕೊನೆ ಆಗುವ ಸಮಯ ಬಂದಿದೆ. ಲಕ್ಷ್ಮೀಕಾಂತ್ ಮಾವ ಜೈದೇವ್‌ನಿಂದ (Jaidev) ತಪ್ಪಿಸಿಕೊಂಡು ಪಾರ್ಥನಿಗೆ ಕಾಲ್‌ಮಾಡಿ ಈ ವಿಷಯ ತಿಳಿಸಿದ್ದಾನೆ. ಆದರೆ ಅದಕ್ಕೂ ಮುಂಚೆ ಪರಿಸ್ಥಿತಿ ಕೈ ಮೀರಿ ಹೋಗಿದೆ. ಮಿಂಚುಳನ್ನು ನಕಲಿ ತಂದೆ ತಾಯಿ ಜೊತೆ ಕಳಿಸಿಕೊಟ್ಟಿದ್ದಾರೆ ಭೂಮಿ (Bhoomi gowtham) ಹಾಗೂ ಗೌತಮ್.
ಮಹತ್ವದ ಸತ್ಯ ಬಯಲು
ಭೂಮಿಕಾಗೆ ಅವಳಿ ಮಕ್ಕಳು ಜನಿಸಿದ್ದವು. ಜೆಡಿ ಸಂಚು ನಡೆಸಿ ಒಂದು ಮಗುವನ್ನು ಕಿಡ್ನ್ಯಾಪ್ ಮಾಡಿದ್ದ. ಇದಾದ ಹಲವು ಸಮಯದ ಬಳಿಕ ಗೌತಮ್‌ಗೆ ‘ಮಿಂಚು’ ಎಂಬ ಮುದ್ದಾದ ಹುಡುಗಿ ಸಿಕ್ಕಿದ್ದಳು. ಆಕೆ ಅನಾಥೆ ಎಂದು ಭಾವಿಸಿ ಗೌತಮ್ ದತ್ತು ಪಡೆದು ಪ್ರೀತಿಯಿಂದ ಸಾಕಿದ್ದ. ಆದರೆ, ಈಗ ಆ ಮಿಂಚು ಬೇರೆ ಯಾರೂ ಅಲ್ಲ, ಗೌತಮ್ ಮತ್ತು ಭೂಮಿಕಾ ಅವರ ಸ್ವಂತ ಮಗಳು ಎಂಬ ಮಹತ್ವದ ಸತ್ಯ ಬಯಲಾಗಿದೆ.
ಇದನ್ನೂ ಓದಿ: Sanchita Ugale: ಬದುಕು ಮುಗಿಸಿದ ನಟಿ ಸಂಚಿತಾ ಉಗಾಲೆ; ಸುಶಾಂತ್ ಸಿಂಗ್ ನೆನಪು ಈಗ ಏಕೆ?
ಅದಕ್ಕೂ ಮುಂಚೆ DNA ಟೆಸ್ಟ್ ಮಾಡಿಸಿದ್ದ ಗೌತಮ್. ಆದರೆ ಜೈದೇವ್ ಕಿತಾಪತಿ ಇಂದ ಮತ್ತೆ ಅದು ನಕಲಿ ದಂಪತಿ ಪರವೇ ಬಂದಿದೆ. ಹೀಗಾಗಿ ಇದನ್ನು ನಂಬಿದ ಗೌತಮ್, ಮಗಳನ್ನು ಅವರ ಬಳಿ ಕಳಿಸಿಕೊಟ್ಟಿದ್ದಾನೆ, ಆದರೆ ಕಳಿಸಿ ಕೊಟ್ಟ ಬಳಿಕ , ಲಕ್ಷ್ಮೀಕಾಂತ್ ಜೈದೇವ್‌ನಿಂದ ತಪ್ಪಿಸಿಕೊಂಡು ಪಾರ್ಥಗೆ ಕರೆ ಮಾಡಿ ಮಿಂಚುನೇ ಗೌತಮ್ ಮಗಳು ಅನ್ನೋ ಸತ್ಯವನ್ನು ಹೇಳಿದ್ದಾನೆ.
ಪಾರ್ಥ ಶಾಕ್ ಆಗಿದ್ದಾನೆ. ನಿನ್ನೆಯಷ್ಟೇ ಪ್ರೋಮೋ ಔಟ್ ಆಗಿತ್ತು. ಕರ್ಣ ಮೆಡಿಕಲ್ ರಿಪೋರ್ಟ್‌ಗಳನ್ನು ಹಿಡಿದು ಗೌತಮ್ ಮನೆಗೆ ಎಂಟ್ರಿ ಕೊಡುತ್ತಾನೆ. ರಿಪೋರ್ಟ್ ಅದಲು ಬದಲು ಮಾಡಿದ್ದಾರೆ ಎಂದು ಹೇಳಿದ್ದಾನೆ. ನನಗೆ ಮೊದಲೇ ಆ ಮಗು ನಿಮ್ಮ ಮಗುವೇ ಆಗಿರಬಹುದು ಅನ್ನೋ ಡೌಟ್ ಇತ್ತು ಆ ಮಿಂಚು ಬೇರೆ ಯಾರೂ ಅಲ್ಲ, ನಿಮ್ಮದೇ ಮಗಳು ಎಂದಿದ್ದಾನೆ ಕರ್ಣ.
ಗೌತಮ್‌ಗೆ ತಮ್ಮ ಮಗುವಿನ ಕೈ ಮೇಲಿದ್ದ ತ್ರಿಶೂಲದ ಆಕಾರದ ಮಚ್ಚೆ ನೆನಪಿಗೆ ಬರುತ್ತದೆ. ಇದರಿಂದಾಗಿ ಮಿಂಚು ತಾವೇ ಕಳೆದುಕೊಂಡ ಮಗಳು ಎಂಬುದು ಖಚಿತವಾಗುತ್ತದೆ. ಒಟ್ಟಾರೆಯಾಗಿ ಗೌತಮ್ ಹಾಗೂ ಭೂಮಿ ಈಗ ಗೊಂದಲದಲ್ಲಿದ್ದಾರೆ. ಜೈದೇವ್ ಮುಂದೆ ಏನು ಪ್ಲ್ಯಾನ್ ಮಾಡ್ತಾನೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಜೈದೇವ್ ಎಚ್ಚರ ಆಗೋ ಮುಂಚೆನೇ ಮಿಂಚನ ಕಾಪಾಡಿಕೊಳ್ತಾನಾ ಗೌತಮ್? ಅಥವಾ ಮಿಂಚು ಇಂದ ಗೌತಮ್ ಜೀವಕ್ಕೆ ಕಂಟಕ ಇದೆಯಾ? ಮಿಂಚು ಭೂಮಿ ಮಡಿಲಿಗೆ ಸೇರ್ತಾಳಾ? ಅನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ.
ಇದನ್ನೂ ಓದಿ: Amruthadhaare Serial: ಮಿಂಚುನೇ ತಮ್ಮ ಮಗಳು ಅನ್ನೋ ಸತ್ಯ ಗೊತ್ತಾಗೇ ಹೋಯ್ತು! ಜೈದೇವ್ ಮುಂದಿನ ಪ್ಲ್ಯಾನ್ ಏನು?
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ