ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಮಿಂಚುನೇ ತಮ್ಮ ಮಗಳು ಅನ್ನೋ ಸತ್ಯ ಗೊತ್ತಾಗೇ ಹೋಯ್ತು! ಜೈದೇವ್‌ ಮುಂದಿನ ಪ್ಲ್ಯಾನ್‌ ಏನು?

Amruthadhaare Serial: ಒಂದು ಕಡೆ DNA ಟೆಸ್ಟ್‌ ನಕಲಿ ದಂಪತಿ ಪರ ಬಂದಿದೆ. ಈ ಬಗ್ಗೆ ಪಾರ್ಥ ಹೇಳಿದ್ದಾನೆ. ಇನ್ನೊಂದು ಕಡೆ ಲಕ್ಷ್ಮೀಕಾಂತ್ ಜೈದೇವ್‌ನಿಂದ ತಪ್ಪಿಸಿಕೊಂಡಿದ್ದಾನೆ. ಸೀದಾ ಗೌತಮ್‌ ಮನೆಗೆ ನಂದು ಮಿಂಚು ಬಗ್ಗೆ ರಿವೀಲ್‌ ಮಾಡಿದ್ದಾನೆ, ಮತ್ತೊಂದು ಕಡೆ ಕರ್ಣ ರಿಪೋರ್ಟ್‌ ನೋಡಿ , ಮಿಂಚು ಕೈಯಲ್ಲಿ ಇರೋ ಮಚ್ಚೆ ಬಗ್ಗೆ ರಿವೀಲ್‌ ಮಾಡಿದ್ದಾನೆ. ಅಷ್ಟೇ ಅಲ್ಲ ಅವಳೇ ಗೌತಮ್‌ ಮಗಳು ಅನ್ನೋ ಸತ್ಯ ರಿವೀಲ್‌ ಮಾಡಿದ್ದಾನೆ.

ಮಿಂಚುನೇ ತಮ್ಮ ಮಗಳು ಅನ್ನೋ ಸತ್ಯ ಗೊತ್ತಾಗೇ ಹೋಯ್ತು!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Jun 15, 2026 10:04 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhaare serial) ಕೊನೆಯ ಘಟ್ಟ ತಲುಪುತ್ತಿದೆ ಎನ್ನಲಾಗುತ್ತಿದೆ. ಮಿಂಚು (Minchu) ಜನ್ಮ ರಹಸ್ಯ ಸ್ಫೋಟವಾಗಿದೆ. ಈ ಸತ್ಯ ಕೇಳಿ ಭೂಮಿ ಹಾಗೂ ಗೌತಮ್‌ ಶಾಕ್‌ ಆಗಿದ್ದಾರೆ. ಮಾವ ಲಕ್ಷ್ಮೀಕಾಂತ್‌ ಕೂಡ ಈಗ ಜೈದೇವ್‌ನಿಂದ (Jaidev) ತಪ್ಪಿಸಿಕೊಂಡು ಬಂದಿದ್ದಾನೆ.

ಜೈದೇವ್‌ ಮುಂದಿನ ಪ್ಲ್ಯಾನ್‌ ಏನು?

ಒಂದು ಕಡೆ DNA ಟೆಸ್ಟ್‌ ನಕಲಿ ದಂಪತಿ ಪರ ಬಂದಿದೆ. ಈ ಬಗ್ಗೆ ಪಾರ್ಥ ಹೇಳಿದ್ದಾನೆ. ಇನ್ನೊಂದು ಕಡೆ ಲಕ್ಷ್ಮೀಕಾಂತ್ ಜೈದೇವ್‌ನಿಂದ ತಪ್ಪಿಸಿಕೊಂಡಿದ್ದಾನೆ. ಸೀದಾ ಗೌತಮ್‌ ಮನೆಗೆ ನಂದು ಮಿಂಚು ಬಗ್ಗೆ ರಿವೀಲ್‌ ಮಾಡಿದ್ದಾನೆ, ಮತ್ತೊಂದು ಕಡೆ ಕರ್ಣ ರಿಪೋರ್ಟ್‌ ನೋಡಿ , ಮಿಂಚು ಕೈಯಲ್ಲಿ ಇರೋ ಮಚ್ಚೆ ಬಗ್ಗೆ ರಿವೀಲ್‌ ಮಾಡಿದ್ದಾನೆ. ಅಷ್ಟೇ ಅಲ್ಲ ಅವಳೇ ಗೌತಮ್‌ ಮಗಳು ಅನ್ನೋ ಸತ್ಯ ರಿವೀಲ್‌ ಮಾಡಿದ್ದಾನೆ.

ಇದನ್ನೂ ಓದಿ: Rashmika Mandanna: ವೇದಿಕೆಯಲ್ಲೇ ಪತಿಯ ಬೆವರು ಒರೆಸಿದ ರಶ್ಮಿಕಾ; ವಿಡಿಯೊ ವೈರಲ್‌

ಒಟ್ಟಾರೆಯಾಗಿ ಗೌತಮ್‌ ಹಾಗೂ ಭೂಮಿ ಈಗ ಗೊಂದಲದಲ್ಲಿದ್ದಾರೆ. ಜೈದೇವ್‌ ಮುಂದೆ ಏನು ಪ್ಲ್ಯಾನ್‌ ಮಾಡ್ತಾನೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಶಕುಂತಲಾ ಹಾಗೂ ಮನೆಯವರೆಲ್ಲರೂ ಮಿಂಚು ಸತ್ಯ ಕೇಳಿ ಶಾಕ್‌ ಆಗಿದ್ದಾರೆ. ಮಿಂಚು ಜನ್ಮ ರಹಸ್ಯ ಬಗೆಹರಿಸೋಕೆ ದಿವಾನ್ ಮನೆಯಲ್ಲಿ ಮಹಾರಥಿಗಳ ಸಂಗಮ ಆಗಿದೆ. ಕರ್ಣ, ಪಾರು, ಶಿವು, ಭೂಮಿ, ಗೌತಮ್‌ ಈಗ ಒಂದಾಗಿದ್ದಾರೆ.



ಬೇಸರ ಹೊರ ಹಾಕಿದ್ದ ಗೌತಮ್‌!

ನಕಲಿ ದಂಪತಿ ಬಳಿ ದುಡ್ಡು ಬೇಕಾ? ಮನೆ ಬೇಕಾ? ಕಾರು ಬೇಕಾ? ಅಂತ ಕೇಳಿದ್ದೆ. ಮಿಂಚುನಾ ಮಾತ್ರ ದೂರ ಮಾಡಬೇಡಿ ಎಂದು ಗೌತಮ್‌, ನಕಲಿ ತಂದೆ ಬಳಿ ಮನವಿ ಮಾಡಿರೋದಾಗಿ ಭೂಮಿ ಬಳಿ ಹೇಳಿದ್ದಾನೆ. ಮಿಂಚು ವಿಷಯದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಭಯವಾಗುತ್ತಿದೆ ಎಂದಿದ್ದಾನೆ ಗೌತಮ್‌. ಮಿಂಚು ನೋಡ್ತಾ ನೋಡ್ತಾ ನಮ್ಮ ಜೀವನದ ಭಾಗ ಆಗಿ ಹೋದಳು. ಅವಳು ಇಲ್ಲದೇ ಇರೋ ಮನೆಯನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬೇಸರ ಹೊರ ಹಾಕಿದ್ದ ಗೌತಮ್‌.

ಕಾಡಿನಲ್ಲಿ ಕಳೆದು ಹೋಗಿದ್ದ ಭೂಮಿಕಾಗೆ ಡೆಲಿವರಿ ಮಾಡಿಸಿದ್ದು ಡಾಕ್ಟರ್ ಕರ್ಣ ಮತ್ತು ಪಾರು. ಹಾಗಾಗಿ ಅವರಿಂದಲೇ ಭೂಮಿಕಾ-ಗೌತಮ್ ಮಗು ಮಿಂಚು ಎನ್ನುವ ವಿಷಯ ರಿವೀಲ್ ಆದಂತಾಗಿದೆ.

ಇದನ್ನೂ ಓದಿ: Amruthadhaare Serial: ಮಿಂಚು ಜನ್ಮ ರಹಸ್ಯ ಬಗೆಹರಿಸೋಕೆ ದಿವಾನ್ ಮನೆಯಲ್ಲಿ ಮಹಾರಥಿಗಳ ಸಂಗಮ!

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ