ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ (amruthadhare serial ) ವೀಕ್ಷಕರು ಊಹಿಸಿರದ ಟ್ವಿಸ್ಟ್ ಪಡೆದುಕೊಂಡಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಬಳಿ ಅಷ್ಟು ಆಸ್ತಿ ಪಡೆದುಕೊಂಡ ಜಯದೇವ್ (Jaydev), ಈಗ ಮಲ್ಲಿ ಖುಷಿ ಹಾಳು ಮಾಡಲು ರೆಡಿಯಾಗಿದ್ದಾನೆ. ಮಲ್ಲಿ ಸದಾ ನೆಮ್ಮದಿ ಕಳೆದುಕೊಂಡು ಇರಬೇಕು ಅಂತ ಡಿವೋರ್ಸ್ ಕೂಡ ಕೊಡದೆ ಇದ್ದಾನೆ ಜಯದೇವ್. ಇದೀಗ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ. ಮಲ್ಲಿ (Malli) ಇನ್ನೊಬ್ಬ ಹುಡುಗನನ್ನು ಮದುವೆಯಾದರೆ ಆರಾಮಾಗಿ ಇರ್ತಾಳೆ, ಅವಳು ಮದುವೆ (Marriage) ಆಗಬಾರದು ಎಂದು ಅವನು ಲೆಕ್ಕ ಹಾಕಿದ್ದಾನೆ.
ಒಂದು ಹುಡಗನನ್ನು ಛೂ ಬಿಟ್ಟಿದ್ದಾನೆ ಜಯ್‌ದೇವ್. ಮಲ್ಲಿಯನ್ ಲವ್ ಮಾಡುವಂತೆ ಹೇಳಿದ್ದಾನೆ. ಆದರೆ ಆದರೆ ಆ ಹುಡುಗನಿಗೆ ಮೊದಲೇ ಮಲ್ಲಿ ಮೇಲೆ ಲವ್ ಆಗಿದೆ. ಈಗ ಜಯದೇವ್ ಕೂಡ ಫೇಕ್ ಆಗಿ ಲವ್ ಮಾಡೋಕೆ ಹೇಳಿದ್ದಾನೆ. ಮಲ್ಲಿ ಹಾಗೂ ಆ ಪಿಎ ಲವ್‌ನಲ್ಲಿ ಬೀಳುತ್ತಾರಾ? ಆ ಪಿಎಯಿಂದ ಮಲ್ಲಿಗೆ ಸಮಸ್ಯೆ ಆಗಲಿದೆಯಾ? ಎಂಬ ಪ್ರಶ್ನೆ ವೀಕ್ಷಕರಲ್ಲಿದೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮಾಡೋ ಕಿತಾಪತಿ ರಕ್ಷಿತಾಗೆ ಸಿಕ್ಕಾಪಟ್ಟೆ ಇಷ್ಟ ಅಂತೆ! ಕಿಚಾಯಿಸಿದ ಕಿಚ್ಚ
ಶಕುಂತಲಾ ಬೆದರಿಕೆಗೆ ಹೆದರಿದ ಭೂಮಿಕಾ ಅದೆಷ್ಟೋ ವರ್ಷಗಳ ಕಾಲ ಮನೆ ಬಿಟ್ಟು ಗೌತಮ್‌ನಿಂದ ದೂರ ಇದ್ದಳು. ಆ ಬಳಿಕ ಮತ್ತೆ ಹತ್ತಿರವಾಗಿದ್ದಾರೆ. ವಠಾರದಲ್ಲಿ ಬೇರೆ ಬೇರೆ ಮನೆಯಲ್ಲಿ ವಾಸ ವಿದ್ದರೂ ಮಾತು ಕತೆ ಅಷ್ಟಕಷ್ಟೆ ಆಗಿತ್ತು.ಇನ್ನೇನು ಜೋಡಿ ಸರಿ ಹೋಗೋ ಅಷ್ಟರಲ್ಲಿ ಜೈದೇವ್ ಆಸ್ತಿಗಾಗಿ ಆಕಾಶ್‌ನನ್ನು ಕಿಡ್ನಾಪ್ ಮಾಡಿದ್ದ. ಹೀಗಾಗಿ ಭೂಮಿಕಾ ದೇಶವನ್ನು ಬಿಟ್ಟು ಹೋಗಬೇಕು ಎಂದು ನಿರ್ಧಾರ ಮಾಡುತ್ತಾಳೆ. ಆದರೆ ಹೋಗಬೇಕು ಎನ್ನುವಷ್ಟರಲ್ಲಿಯೇ ಆನಂದ್ ಬಂದು ಮಗಳು ಬದುಕಿರುವ ಸುದ್ದಿಯನ್ನು ಹೇಳಿದ್ದಾನೆ. ಹೀಗಾಗಿ ಭೂಮಿಕಾ ಮತ್ತೆ ವಾಪಸ್ ಆಗಿದ್ದಾಳೆ.
ಇನ್ನೊಂದೆಡೆ ಮಲ್ಲಿ ಭೂಮಿಕಾಗೆ ಬುದ್ಧಿಮಾತು ಹೇಳಿ, ಗೌತಮ್ ಮಗುವನ್ನು ಹುಡುಕುತ್ತಿರುವ ದಾಖಲೆ ಕೊಟ್ಟಿದ್ದಾಳೆ. ಇದನ್ನೆಲ್ಲಾ ನೋಡಿದ ಮೇಲೆ ಭೂಮಿಕಾಗೆ ತಾನು ಮಾಡ್ತಿರೋದು ತಪ್ಪು ಎನ್ನಿಸಿದೆ. ಗೌತಮ್ ಬಳಿ ಎಲ್ಲಾ ವಿಷಯ ಹೇಳುವ ನಿರ್ಧಾರ ಮಾಡಿದ್ದಾಳೆ.
ಶಕುಂತಲಾ ಶಾಕ್
ಮತ್ತೊಂದು ಕಡೆ ಶಕುಂತಲಾ ಆಭರ್ಟ ಹೆಚ್ಚಾಗಿದೆ. ಭಾಗ್ಯಳನ್ನ ನೋಡಿ, ನಿನಗೆ ಮಾತೇ ಬರಲ್ಲ ಅಂತ ಶಕುಂತಲಾ ಆಡಿಕೊಂಡಿದ್ದಾಳೆ. ಆದರೆ ಭಾಗ್ಯ, ಶಕುಂತಲಾ ಕೈ ಗಟ್ಟಿಯಾಗಿ ಹಿಡಿದು ಅವಾಜ್ ಹಾಕಿದ್ದಾರೆ. ಇನ್ನು ಮೇಲೆ ನಿನ್ನ ಕೇಡುಗಾಲ ಶುರುವಾಯ್ತು ಅಂತ ಹೇಳಿದ್ದಾರೆ. ಭಾಗ್ಯಮ್ಮ ಮಾತಾಡೋದು ನೋಡಿ ಶಕುಂತಲಾ ಶಾಕ್ ಆಗಿದ್ದಾಳೆ.
ಇದನ್ನೂ ಓದಿ: Bigg Boss Kannada 12: ಕಿಚ್ಚನ ಮುಂದೆ ಮೌನವಾಗಿ ಇದ್ದಿದ್ದು ಗಿಲ್ಲಿಯ ತಂತ್ರಗಾರಿಕೆಯೇ? ಕಾವು ಬಿಟ್ಟುಕೊಡಲಿಲ್ಲ ಏಕೆ?
ಹಾಗಿದ್ದರೆ ಭೂಮಿಕಾ- ಗೌತಮ್ ಒಂದಾಗಿ ಮತ್ತೆ ಜೈದೇವ್‌ಗೆ ಬುದ್ಧಿ ಕಲಿಸ್ತಾರಾ? ಜೈದೇವ ಹತ್ರ ಆಸ್ತಿ ಬರೆಸಿಕೊಂಡು ಎರಡನೇ ಪತ್ನಿ ಮತ್ತೆ ಕುತಂತ್ರ ಮಾಡ್ತಾಳಾ? ಎನ್ನುವುದನ್ನು ಕಾದು ನೋಡಬೇಕಿದೆ.