Bigg Boss Kannada 12: ಕಿಚ್ಚನ ಮುಂದೆ ಮೌನವಾಗಿ ಇದ್ದಿದ್ದು ಗಿಲ್ಲಿಯ ತಂತ್ರಗಾರಿಕೆಯೇ? ಕಾವು ಬಿಟ್ಟುಕೊಡಲಿಲ್ಲ ಏಕೆ?
Sudeep: ಬಿಗ್ ಬಾಸ್ ವೀಕೆಂಡ್ ಪಂಚಾಯ್ತಿಯಲ್ಲಿ ಈ ವಾರ ಪ್ರಮುಖ ಹೈಲೈಟ್ ಗಿಲ್ಲಿ ನಟ ಆಗಿದ್ದರು. ಕಿಚ್ಚ ಸುದೀಪ್ ಅವರೇ ಗಿಲ್ಲಿ ಕ್ಯಾಪ್ಟನ್ಸಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿ ಉಳಿದವರಿಗೆ ಆಟ ಇನ್ನೂ ಅರ್ಥ ಆಗಿಲ್ಲ ಅಂತ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಇದರ ಜೊತೆಗೆ ನಾಮಿನೇಶನ್ ವಿಚಾರಕ್ಕೂ ಗಿಲ್ಲಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಕಿಚ್ಚ. ಕಾವ್ಯ ನಾಮಿನೇಟ್ ಮಾಡಲು ನೀವೇ 5 ಕಾರಣವನ್ನು ಕೊಡಿ ಎಂದಾಗ ಗಿಲ್ಲಿ ಮೌನವಾಗೇ ಇದ್ದರು. ಈ ಬಾರಿ ಸುದೀಪ್ ಎದುರು ಗಿಲ್ಲಿ ಮೌನವಾಗಿ ಇದ್ದಿದ್ದು ಕೂಡ ಒಂದು ಬಗೆಯ ತಂತ್ರಗಾರಿಕೆ ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯ. ಈ ಬಗ್ಗೆ ಪೋಸ್ಟ್ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ವೀಕೆಂಡ್ ಪಂಚಾಯ್ತಿಯಲ್ಲಿ ಈ ವಾರ ಪ್ರಮುಖ ಹೈಲೈಟ್ ಗಿಲ್ಲಿ ನಟ ಆಗಿದ್ದರು. ಕಿಚ್ಚ ಸುದೀಪ್ (Sudeep) ಅವರೇ ಗಿಲ್ಲಿ ಕ್ಯಾಪ್ಟನ್ಸಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿ ಉಳಿದವರಿಗೆ ಆಟ ಇನ್ನೂ ಅರ್ಥ ಆಗಿಲ್ಲ ಅಂತ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಇದರ ಜೊತೆಗೆ ನಾಮಿನೇಶನ್ ವಿಚಾರಕ್ಕೂ ಗಿಲ್ಲಿಗೆ (Gilli Nata) ಕ್ಲಾಸ್ ತೆಗೆದುಕೊಂಡಿದ್ದಾರೆ ಕಿಚ್ಚ. ಕಾವ್ಯ ನಾಮಿನೇಟ್ ಮಾಡಲು ನೀವೇ 5 ಕಾರಣವನ್ನು ಕೊಡಿ ಎಂದಾಗ ಗಿಲ್ಲಿ ಮೌನವಾಗೇ ಇದ್ದರು. ಈ ಬಾರಿ ಸುದೀಪ್ ಎದುರು ಗಿಲ್ಲಿ ಮೌನವಾಗಿ ಇದ್ದಿದ್ದು ಕೂಡ ಒಂದು ಬಗೆಯ ತಂತ್ರಗಾರಿಕೆ (strategy) ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯ. ಈ ಬಗ್ಗೆ ಪೋಸ್ಟ್ ವೈರಲ್ ಆಗುತ್ತಿದೆ.
ಕಾವ್ಯಗೆ ಫೇವರಿಸಮ್
ಮುಂಚಿನಿಂದಲೂ ಕಾವ್ಯ ಹಾಗೂ ಗಿಲ್ಲಿ ಒಬ್ಬರಿಗೊಬ್ಬರು ಬಿಟ್ಟುಕೊಡುತ್ತಿರಲಿಲ್ಲ. ಈ ವಾರ ನಾಮಿನೇಶನ್ ಪ್ರಕ್ರಿಯೆ ವೇಳೆಯೂ ಕಾವ್ಯಗೆ ಫೇವರಿಸಮ್ ಮಾಡಿದ್ದರು ಗಿಲ್ಲಿ. ಬಿಹಿರಂಗವಾಗಿ ಪಕ್ಷಪಾತ ಮಾಡಿದ್ರು ಮನೆಯವರೆಲ್ಲರೂ ಸುಮ್ಮನೆ ಇದ್ದಿದ್ದರು. ಈ ಬಗ್ಗೆ ಕಿಚ್ಚ ಪ್ರಸ್ತಾಪಿಸಿದ್ದಾರೆ. ಕಾವ್ಯಾ ವಿರುದ್ಧ ಇನ್ನುಳಿದವರು ನೀಡಿದ ಕಾರಣವನ್ನು ಗಿಲ್ಲಿ ನಟ ಒಪ್ಪಿಕೊಳ್ಳಲೇ ಇಲ್ಲ. ಆ ಮೂಲಕ ಕ್ಯಾವಾನ ಅವರು ನಾಮಿನೇಷನ್ನಿಂದ ಹೊರಗೆ ಇಟ್ಟಿದ್ದರು.. ಕಾವ್ಯಾನ ನಾಮಿನೇಟ್ ಮಾಡಲು ಕೆಲವು ಸೂಕ್ತ ಕಾರಣ ನೀಡುವಂತೆ ಗಿಲ್ಲಿಗೆ ಕಿಚ್ಚ ಸುದೀಪ್ ಅವರು ಹೇಳಿದರು. ಆಗ ಗಿಲ್ಲಿ ನಟ ಅವರು ಯಾವುದೇ ಕಾರಣಗಳನ್ನು ನೀಡದೇ ಸೈಲೆಂಟ್ ಆಗಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಈಗ ಚರ್ಚೆ
ಈ ಬಗ್ಗೆ ಕಿಚ್ಚ ಈಗ 3 ಕಾರಣ ನೀವು ಕೊಟ್ಟಿದ್ದರೆ ನೀವು ಸರಿ, ಉಳಿದರೆಲ್ಲಾ ತಪ್ಪು ಎನ್ನುವುದು ಸಾಬೀತಾಗುತ್ತಿತ್ತು" ಎಂದು ಸುದೀಪ್ ಹೇಳಿದ್ದಾರೆ. ಅದಕ್ಕೂ ಗಿಲ್ಲಿ ಪ್ರತಿಕ್ರಿಯಿಸಲಿಲ್ಲ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗ ಚರ್ಚೆ ಆಗುತ್ತಿದೆ.
ಕಾವ್ಯಾನ ನಾಮಿನೇಟ್ ಮಾಡೋಕೆ ಕಾರಣಗಳನ್ನು ಕೇಳಿದಾಗ, ಗಿಲ್ಲಿ ಕೊಡಲಿಲ್ಲಾ ಅಂದ್ರೆ ಅವನ ಹತ್ರ ಕಾರಣ ಇಲ್ಲಾ ಅಂತಲ್ಲಾ, ಅವನು ಕಾರಣ ಹೇಳಿದರೆ ಮುಂದೆ ಅದೇ ಕಾರಣವನ್ನ ಬೇರೆಯವರು ಕಾವ್ಯಾ ಮೇಲೆ ಪ್ರಯೋಗ ಮಾಡುತ್ತಾರೆ ಅಂತಾ. ಅದು ಆತ ಗೆಳೆತನಕ್ಕೆ, ಪ್ರೀತಿ ವಿಶ್ವಾಸದ ಜೊತೆಗೆ ಬೆಳೆಸಿಕೊಂಡಿರುವ ಜವಾಬ್ದಾರಿ, ಎಂತಾ ಸಮಯದಲ್ಲೂ ಬಿಟ್ಟು ಕೊಡದ ಕಮಿಂಟ್. ಬೇರೆಯವರಂತೆ ಉಪಯೋಗಿಸಿ ಬಿಟ್ಟು ಹಾಕುವ ಸ್ವಾರ್ಥ ಮೆಂಟಾಲಿಟಿ ಅವನದಲ್ಲಾ.ಗಿಲ್ಲಿ You are Great ಎಂದು ಒಬ್ಬರು ಬರೆದುಕೊಂಡಿದ್ದಾರೆ.
ನಿಯಮ ಉಲ್ಲಂಘನೆ
ಕಿಚ್ಚ ಸುದೀಪ್ ಅವರು ಯಾವ ಬಲವಾದ ಕಾರಣವನ್ನು ಮನೆಯವರು ನೀಡಬೇಕು ಎಂದಾಗ, ಕಾವ್ಯಾ ಅವರು ಪೋಷಕರ ಜೊತೆ ಸೇರಿ ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘನೆ ಮಾಡಿದ್ದನ್ನೇ ಇತರರು ಕಾರಣವಾಗಿ ನೀಡಬಹುದಿತ್ತು ಎಂದು ಗಿಲ್ಲಿಊಹಿಸಿದ್ದರು, ಅದನ್ನೇ ಹೇಳಿದ್ದಾರೆ. ಅದನ್ನು ಹೊರತು ಪಡಿಸಿ ಬೇರೆ ಕಾರಣ ನೀಡಿ ಎಂದು ಸುದೀಪ್ ಹೇಳಿದಾಗ ಗಿಲ್ಲಿ ಮಾತೇ ಆಡಿಲ್ಲ ಗಿಲ್ಲಿ ಮೌನವಾಗಿ ಇದ್ದಿದ್ದು ಕೂಡ ಒಂದು ಬಗೆಯ ತಂತ್ರಗಾರಿಕೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: Bigg Boss Kannada 12: ನಿಮ್ಮನ್ನು ಬಿಗ್ ಬಾಸ್ ಹೊರಗೆ ಏಕೆ ಕಳುಹಿಸಿಲ್ಲ? ಕಾವ್ಯಾಗೆ ಕಿಚ್ಚನ ಖಡಕ್ ಪ್ರಶ್ನೆ
ಗಿಲ್ಲಿ, ಸ್ವಲ್ಪ ಹನುಮಂತು, ಸ್ವಲ್ಪ ಪ್ರತಾಪ್ ಅವರ ವ್ಯಕ್ತಿತ್ವವನ್ನು, ಆಟದ ರೀತಿಯಲ್ಲಿ ಇಲ್ಲಿ ತೋರಿಸುತ್ತಿದ್ದಾರೆ ಎಂದು ಕಿಚ್ಚ ಹೇಳಿದ್ದಾರೆ. ಅದು ತಪ್ಪು ಅಲ್ಲ ಎಂದಿದ್ದಾರೆ. ಗಿಲ್ಲಿ ಹಾಕುತ್ತಿರುವುದು ಬನಿಯನ್ನೇ ಆಗಿರಬಹುದು ಆದರೆ ಬದುಕುತ್ತಿರುವುದು ರಾಜನ ರೀತಿ ಎಂದಿದ್ದಾರೆ. ಗಿಲ್ಲಿ ಗೇಮ್ ಅರ್ಥ ಮಾಡಿಕೊಂಡಿರುವುದಕ್ಕೂ ನೀವೆಲ್ಲಾ ಗೇಮ್ ಅರ್ಥ ಮಾಡಿಕೊಂಡಿರುವುದಕ್ಕೂ ವ್ಯತ್ಯಾಸ ಇದೆ ಎಂದು ಸುದೀಪ್ ಹೇಳಿದ್ದಾರೆ.