Bigg Boss Kannada 12: ಗಿಲ್ಲಿ ಮಾಡೋ ಕಿತಾಪತಿ ರಕ್ಷಿತಾಗೆ ಸಿಕ್ಕಾಪಟ್ಟೆ ಇಷ್ಟ ಅಂತೆ! ಕಿಚಾಯಿಸಿದ ಕಿಚ್ಚ
Gilli Nata: ಬಿಗ್ ಬಾಸ್ ಆಟದಲ್ಲಿ ಗಿಲ್ಲಿ ನಟ ಅವರು ವೀಕ್ಷಕರ ಫೇವರಿಟ್ ಆಗಿದ್ದಾರೆ. ಗಿಲ್ಲಿ ಬಗ್ಗೆ ರಕ್ಷಿತಾ ಶೆಟ್ಟಿ ಅವರು ಮೊದಲಿನಿಂದಲೂ ಆಸಕ್ತಿ ಹೊಂದಿದ್ದಾರೆ. ಕಿಚ್ಚ ಸುದೀಪ್ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ‘ಕಾವ್ಯಾ ಯಾವಾಗಲೂ ಗಿಲ್ಲಿ ಪಕ್ಕನೇ ಕುಳಿತುಕೊಳ್ಳುತ್ತಾರೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ‘ಇದನ್ನೆಲ್ಲ ನೋಡಿ ಕಾವ್ಯಾ ಎಂಜಾಯ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ರಕ್ಷಿತಾಗಂತೂ ಸ್ವಲ್ಪ ಉರಿಯುತ್ತೆ ಎಂದಿದ್ದರು. ಇದೀಗ ಮತ್ತೊಂದು ಪ್ರೋಮೋ ಔಟ್ ಆಗಿದೆ. ಗಿಲ್ಲಿ ಮಾಡೋ ಕೀತಾಪತಿ ರಕ್ಷಿತಾಗೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಆಟದಲ್ಲಿ ಗಿಲ್ಲಿ ನಟ (Gilli Nata) ಅವರು ವೀಕ್ಷಕರ ಫೇವರಿಟ್ ಆಗಿದ್ದಾರೆ. ಗಿಲ್ಲಿ ಬಗ್ಗೆ ರಕ್ಷಿತಾ ಶೆಟ್ಟಿ ಅವರು ಮೊದಲಿನಿಂದಲೂ ಆಸಕ್ತಿ ಹೊಂದಿದ್ದಾರೆ. ಕಿಚ್ಚ ಸುದೀಪ್ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ‘ಕಾವ್ಯಾ ಯಾವಾಗಲೂ ಗಿಲ್ಲಿ ಪಕ್ಕನೇ ಕುಳಿತುಕೊಳ್ಳುತ್ತಾರೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ‘ಇದನ್ನೆಲ್ಲ ನೋಡಿ ಕಾವ್ಯಾ (Kavya Shaiva) ಎಂಜಾಯ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ರಕ್ಷಿತಾಗಂತೂ ಸ್ವಲ್ಪ ಉರಿಯುತ್ತೆ ಎಂದಿದ್ದರು. ಇದೀಗ ಮತ್ತೊಂದು ಪ್ರೋಮೋ ಔಟ್ ಆಗಿದೆ. ಗಿಲ್ಲಿ ಮಾಡೋ ಕೀತಾಪತಿ ರಕ್ಷಿತಾಗೆ (Rakshitha Shetty) ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ.
ಗಿಲ್ಲಿ ಮಾಡೋ ಕೀತಾಪತಿ ರಕ್ಷಿತಾಗೆ ತುಂಬಾ ಇಷ್ಟ
ಪ್ರತಿ ವೀಕೆಂಡ್‌ನಲ್ಲಿ YES/NO ರೌಂಡ್ ಇದ್ದೇ ಇರುತ್ತದೆ. ಈ ವಾರ ಕಿಚ್ಚ ಅವರು ಮನೆಮಂದಿಗೆ ಪ್ರಶ್ನೆ ಒಂದನ್ನ ಕೇಳಿದರು. ಗಿಲ್ಲಿ ಮಾಡೋ ಕೀತಾಪತಿ ರಕ್ಷಿತಾಗೆ ತುಂಬಾ ಇಷ್ಟನಾ ಅಂತ, ಅದಕ್ಕೆ ಎಲ್ಲಾರೂ ಉತ್ತರ ನೀಡಿದ್ದಾರೆ. ರಕ್ಷಿತಾ ಅವರಿಗೆ ಕಿತಾಪತಿ ಮಾಡೋ ಹುಡುಗರು ಇಷ್ಟ ಅಂದಾಗ, ಹೌದು ಅಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಮತ್ತೆ ʻಬಿಗ್ ಬಾಸ್ʼ ವೇದಿಕೆಗೆ ಬಂದ ಮಾಳು ನಿಪನಾಳ್‌ಗೆ ಖಡಕ್ ಪ್ರಶ್ನೆ ಕೇಳಿದ ʻಕಿಚ್ಚʼ ಸುದೀಪ್!
ರಕ್ಷಿತಾ ಅವರೇ ಗಿಲ್ಲಿ ಥರ ಯಾಕೆ ನಾಚಿಕೆ ಮಾಡಿಕೊಂಡಿದ್ದೀರಾ? ಅಂತ ಕೇಳಿದ್ದಾರೆ. ಅದಕ್ಕೆ ಗಿಲ್ಲಿ ಎಂದು ಹೇಳಿದ್ದಾರೆ. ಕಿಚ್ಚ ಕೂಡ ನೀವೊಬ್ಬರೆ ಕಾಂಪಿಟೇಶನ್ ಅಲ್ಲ ಇಲ್ಲಿ ಎಂದಿದ್ದಾರೆ. ರಕ್ಷಿತಾ ಮಾತನಾಡಿ, ಕಿತಾಪತಿ ಹುಡುಗರು ತುಂಬಾ ಸೀರಿಯೆಸ್ ಇರಲ್ಲ. ಬಿಂದಾಸ್ ಇರ್ತಾರೆ. ಮಜದಲ್ಲಿ ಇರ್ತಾರೆ ಎಂದಿದ್ದಾರೆ. ಕಿಚ್ಚ ಕೂಡ ಪರೋಕ್ಷವಾಗಿ ರಕ್ಷಿತಾಗೆ ಕಾಲೆಳೆದಿದ್ದಾರೆ.
ನಿಶ್ಚಿತಾರ್ಥ ಆಗೋಯ್ತು
ಇನ್ನು ಬೆಳಗ್ಗೆ ಪ್ರೋಮೋದಲ್ಲಿ ಫ್ಯಾಮಿಲಿ ವೀಕ್ ಸಂದರ್ಭದಲ್ಲಿ ಕಾವ್ಯ ಅವರ ತಂದೆ ತಾಯಿ ಗಿಲ್ಲಿ ಅವರಿಗೆ ಬೆಳ್ಳಿಯ ಬ್ರಾಸ್‌ಲೈಟ್ ಹಾಕಿದರು. ಯಾವಾಗಲೂ ರಘು ಅವರ ಬ್ರಾಸ್‌ಲೈಟ್‌ನ್ನು ಗಿಲ್ಲಿ ತಗೊಂಡು ಹಾಕುತ್ತಿದ್ದರು. ಅದರಂತೆ ಈಗ ಗಿಲ್ಲಿಗೆ ಬ್ರಾಸ್‌ಲೈಟ್ ಗಿಫ್ಟ್ ಆಗಿ ಸಿಕ್ಕಿತ್ತು. ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಈ ಬಗ್ಗೆ ಚರ್ಚೆ ಆಗಿದೆ.
ಏನು ಅನ್ನಿಸಿತ್ತು ಆ ಸಂದರ್ಭದಲ್ಲಿ ಅಂತ ಕಿಚ್ಚ ಅವರು ಗಿಲ್ಲಿಗೆ ಕೇಳಿದ್ದಾರೆ. ಬ್ರಾಸ್‌ಲೈಟ್ ತಂದುಕೊಡೋದು ನಮ್ಮನೆ ಸಂಪ್ರದಾಯ. ಹಾಗೆ ಮಾಡಿದರೆ ನಿಶ್ಚಿತಾರ್ಥ ಆಗೋಯ್ತು” ಎಂದು ಗಿಲ್ಲಿ ನಟ ಹೇಳಿದ್ದಾರೆ. ಆಗ ಕಾವ್ಯ ಶೈವ ಅವರು, “ನಮ್ಮನೆ ಕಡೆ ರಿಂಗ್ ಕೊಡೋದು ನಿಶ್ಚಿತಾರ್ಥ” ಎಂದಿದ್ದಾರೆ. ರಕ್ಷಿತಾ ಅವರು, “ಅವರು ಗಿಲ್ಲಿ, ಗಿಲ್ಲಿ ಹೇಳ್ತಾರೆ. ಆಮೇಲೆ ಗಿಲ್ಲಿ ಪಕ್ಕ ಹೋಗಿ ಕೂರ್ತಾರೆ” ಎಂದಿದ್ದಾರೆ.
ಆಗ ಸುದೀಪ್ ಅವರು, “ಇದನ್ನೆಲ್ಲ ಕಾವ್ಯ ಎಂಜಾಯ್ ಮಾಡುತ್ತಾರೋ ಇಲ್ಲವೋ ನಿಮಗಂತೂ ಸ್ವಲ್ಪ ಉರಿಯತ್ತೆ. ಕಾವ್ಯ ಅವರನ್ನು ಹೇಗಾದರೂ ಕಳಿಸಿದರೆ, ನೀವು ಅವರ ಪಕ್ಕ ಕೂರಬಹುದು” ಎಂದು ಹೇಳಿದ್ದಾರೆ.