ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ (Annayya Serial) ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಗುಂಡು ತಂಟೆಗೆ ಬಂದ ಪಿಂಕಿಗೆ ನಾರಿಮಣಿಯರಿಂದ ಸನ್ಮಾನ ಆಗಿದೆ. ಒಂದು ಕಡೆ ಪಿಂಕಿಗೆ (Pinki) ಕ್ಲಾಸ್ ಆಗ್ತಾ ಇದ್ದರೆ ಇನ್ನೊಂದು ಕಡೆ ಶಿವು, ಸೀನನಿಗೂ ಗತಿ ಕಾಣಿಸುತ್ತಿದ್ದಾನೆ.
ಪಾರು ವಾರ್ನ್
ಆಪರೇಶನ್ ಪಿಂಕಿ ಶುರು ಆಗಿದೆ. ಪಾರು ಜೊತೆ ಎಲ್ಲರೂ ಕೈ ಜೋಡಿಸಿದ್ದಾರೆ. ಪಿಂಕಿಗೆ ರಶ್ಮಿ ತಂಟೆಗೆ ಬರದಂತೆ ಪಾರು ವಾರ್ನ್ ಮಾಡಿದ್ದಾಳೆ. ಆದರೆ ಪಿಂಕಿ ಮಾತ್ರ, ಮೂಟೆಯಿಂದ ಏನು ಸುಖ ಸಿಗದೇ ಸೀನ ನನ್ನ ಬಳಿ ಬಂದಿದ್ದಾನೆ ಎಂದಿದ್ದಾಳೆ. ಕೋಪಗೊಂಡ ಪಾರು ಪಿಂಕಿಗೆ ಕೆನ್ನೆಗೆ ಬಾರಿಸಿದ್ದಾಳೆ. ಅತ್ತ ಸೀನ ಶಿವು ಅಂಗಡಿಗೆ ಬಂದು ಧಿಮಾಕಿನಿಂದ ಸಿಗರೇಟ್ ಕೊಡು ಅಂತ ಸೊಕ್ಕು ತೋರಿಸಿದ್ದಾನೆ, ಶಿವು ಕೋಪದಲ್ಲಿ ಸೀನನ ಮುಖಕ್ಕೆ ನೀರು ಎರಚಿದ್ದಾನೆ.
ಇದನ್ನೂ ಓದಿ: Ravi Mohan: ರವಿ ಮೋಹನ್ ವಿವಾದ; ಮಗಳನ್ನು ಸಮರ್ಥಿಸಿಕೊಂಡ ಸುಜಾತಾ ವಿಜಯಕುಮಾರ್
ಇನ್ನೊಂದು ಕಡೆ ರತ್ನನ ಬದುಕು ತುಂಬಾ ಕಷ್ಟಕರದಲ್ಲಿದೆ. ಮಾವ ವೀರಭದ್ರ ನೀಡಿದ ಕಠಿಣ ಸವಾಲನ್ನು ಸೊಸೆ ರತ್ನಾ ತನ್ನ ಜಾಣ್ಮೆಯಿಂದ ಎದುರಿಸಿದ್ದಾಳೆ. ಒಣಮೆಣಸಿನಕಾಯಿ ಮತ್ತು ಕಡಲೆಕಾಳನ್ನು ಬೇರ್ಪಡಿಸಲು, ಅವಳು ಶಾಲೆಯಲ್ಲಿ ಕಲಿತ ಬೇಸಿಕ್ ಸೈನ್ಸ್ ತಂತ್ರವನ್ನು ಬಳಸಿ ಮಾವನಿಗೆ ಚಮಕ್ ನೀಡಿದ್ದಾಳೆ.
ನೀರಿನಲ್ಲಿ ಭಾರವಾದ ವಸ್ತುಗಳು ಮುಳುಗುತ್ತವೆ ಮತ್ತು ಹಗುರುವಾದ ವಸ್ತು ತೇಲಾಡುತ್ತದೆ. ಈ ಬೇಸಿಕ್ ಸೈನ್ಸ್ ಟ್ರಿಕ್‌ನ್ನು ರತ್ನಾ ಕಾರ್ಯರೂಪಕ್ಕೆ ತಂದಿದ್ದಾಳೆ. ದೊಡ್ಡವಾದ ಪಾತ್ರೆಯಲ್ಲಿ ನೀರು ಹಾಕುತ್ತಾಳೆ. ನಂತರ ಇದಕ್ಕೆ ಮೆಣಸಿನಕಾಯಿ ಮತ್ತು ಕಡಲೆಕಾಳು ಹಾಕ್ತಾಳೆ. ತದನಂತರ ಸುಲಭವಾಗಿ ತೇಲುವ ಒಣಮೆಣಸಿನಕಾಯಿ ತೆಗೆಯುತ್ತಾಳೆ. ಈ ಮಧ್ಯೆ ಓದಿನ ವಿಚಾರವಾಗಿಯೂ ವಾದ ವಿವಾದ ಆಗುತ್ತದೆ.
ಶಾರದಮ್ಮ ರಶ್ಮಿಗೆ ಒಂದೊತ್ತು ಊಟವನ್ನೂ ಹಾಕ್ತಾ ಇಲ್ಲ ಅನ್ನೋ ಕಹಿ ಸತ್ಯವನ್ನು ರಿವೀಲ್ ಮಾಡಿದ್ದಾಳೆ. ಇದು ಶಿವು ಕಿವಿಗೆ ಬಿದ್ದಿದೆ. ಈ ಸತ್ಯ ಹೇಳಿ ಶಾಕ್ ಗಿದ್ದಾನೆ ಶಿವು. ಪಿಂಕಿ ಸೀನಾನನ್ನು ಲವ್ ಮಾಡಿದ್ದು ಮತ್ತು ಮದುವೆಯಾಗಲು ತುದಿಕಾಲಲ್ಲಿ ನಿಂತಿರುವುದು ಎಲ್ಲವೂ ಆಸ್ತಿಗೋಸ್ಕರ. ಆದರೆ ಸೀನಾಗೆ ಆಸ್ತಿಯೇ ಇಲ್ಲ ಅಂದರೆ, ನಿಜವಾಗಿಯೂ ಪಿಂಕಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾಳೆಯೇ ಖಂಡಿತಾ ಇಲ್ಲ.
ಇದನ್ನೂ ಓದಿ: Actor Yash: 'ಟಾಕ್ಸಿಕ್' ರಿಲೀಸ್ ತಡವಾಗಲು ಕಾರಣ ಇದು; ಅಸಲಿ ವಿಚಾರ ಬಿಚ್ಚಿಟ್ಟ ಯಶ್
ಈಗ ಮಾದಪ್ಪನ ಮುಂದೆ ಪಿಂಕಿಯ ಅಸಲಿ ಮುಖ ಬಯಲಾಗಿದೆ. ಮಾದಪ್ಪ ಮತ್ತು ಪಾರು ಇಬ್ಬರೂ ಜೊತೆ ಸೇರಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತಾರೆಯೇ ನೋಡಬೇಕು.