ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Annayya serial: ಒಲಿದು ಬಂತು ಕಂಕಣ ಭಾಗ್ಯ; ತವರು ತೊರೆದ ತಂಗೀರ ಅಳಲು

Annayya serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಅಂತೂ ರತ್ನ ಮದುವೆ ಅದ್ಧೂರಿಯಾಗಿ ನೆರವೇರಿದೆ. ಅಣ್ಣಯ್ಯ ಮದುವೆ ಮಾಡಿರುವ ಯಾವ ತಂಗಿಯರೂ ಸಂತೋಷ ಕಾಣುತ್ತಿಲ್ಲ. ಎಲ್ಲರೂ ಮೋಸ ಹೋಗಿರುವವರೇ. ಮತ್ತೊಬ್ಬಳನ್ನು ಪ್ರೀತಿಸುವ ಗಂಡ ಗುಂಡಮ್ಮನ ಪತಿ, ರಾಣಿಗೆ ಪೆದ್ದು ಗಂಡ ಆದರೆ ಇದೀಗ ರತ್ನಾಳಿಗೂ ಸರಿಯಾದ ಗಂಡ ಕೊನೆಗೂ ಸಿಕ್ಕಿಲ್ಲ. ಅಂತೂ ವೀರಭದ್ರ ಮನೆಗೆ ಸೊಸೆಯಾಗಿ ಹೋಗಿದ್ದಾಳೆ ರತ್ನಾ.

ಒಲಿದು ಬಂತು ಕಂಕಣ ಭಾಗ್ಯ; ತವರು ತೊರೆದ ತಂಗೀರ ಅಳಲು

ಅಣ್ಣಯ್ಯ ಧಾರಾವಾಹಿ -

Yashaswi Devadiga
Yashaswi Devadiga Mar 9, 2026 11:02 AM

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ (Annayya Serial Kannada) ಧಾರಾವಾಹಿಯಲ್ಲಿ ಅಂತೂ ರತ್ನ ಮದುವೆ ಅದ್ಧೂರಿಯಾಗಿ ನೆರವೇರಿದೆ. ಅಣ್ಣಯ್ಯ ಮದುವೆ ಮಾಡಿರುವ ಯಾವ ತಂಗಿಯರೂ ಸಂತೋಷ ಕಾಣುತ್ತಿಲ್ಲ. ಎಲ್ಲರೂ ಮೋಸ ಹೋಗಿರುವವರೇ. ಮತ್ತೊಬ್ಬಳನ್ನು ಪ್ರೀತಿಸುವ ಗಂಡ ಗುಂಡಮ್ಮನ ಪತಿ, ರಾಣಿಗೆ ಪೆದ್ದು ಗಂಡ ಆದರೆ ಇದೀಗ ರತ್ನಾಳಿಗೂ (Ratna) ಸರಿಯಾದ ಗಂಡ ಕೊನೆಗೂ ಸಿಕ್ಕಿಲ್ಲ. ಅಂತೂ ವೀರಭದ್ರ (Veerabhadra) ಮನೆಗೆ ಸೊಸೆಯಾಗಿ ಹೋಗಿದ್ದಾಳೆ ರತ್ನಾ.

ಶಾರದಾ ಪ್ರಯತ್ನಪಟ್ಟಿದ್ದೂ ವ್ಯರ್ಥ

ಪರಶು ಜೊತೆ ರತ್ನಾ ಮದುವೆ ನಡೆಯುತ್ತಿರುವಾಗಲೇ, ವಿಲನ್​ ಪರಶುವಿನ ಜೊತೆ ಇವಳ ಮದುವೆಯನ್ನು ನಿಲ್ಲಿಸಪ್ಪಾ, ಅವನ ಸತ್ಯ ಗೊತ್ತಾಗಲಿ ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೆ ಅದು ಕೂನೆಗೂ ಆಗಿಲ್ಲ.

ಇದನ್ನೂ ಓದಿ: Landlord movie OTT: 'ಲ್ಯಾಂಡ್‌ಲಾರ್ಡ್' ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

ಪರಶು ಸರಿ ಇಲ್ಲ, ಈಗಾಗಲೇ ಒಂದು ಹುಡುಗಿಯನ್ನು ಗರ್ಭಿಣಿ ಮಾಡಿ ಮೋಸ ಮಾಡಿದ್ದನು, ಕೊಲೆಯನ್ನು ಕೂಡ ಮಾಡಿದ್ದನು ಎಂಬ ಅಪವಾದವೂ ಬಂದಿತ್ತು. ಈ ಮದುವೆಯನ್ನು ತಡೆಯಬೇಕು ಎಂದು ಶಾರದಾ ಪ್ರಯತ್ನಪಟ್ಟಿದ್ದೂ ವ್ಯರ್ಥವಾಗಿದೆ.

ಪರಶುನನ್ನು ಅಪ್ಪ ಎಂದು ಕರೆದು ಓಡಿ ಬಂದು ತಬ್ಬಿದ ಮಗು, ತಮಾಷೆಗಾಗಿ ಮಾಡಿದ್ದು ಎಂದು ಕೂಡ ತಿಳಿದಿತ್ತು. ಟಿವಿಯಲ್ಲಿ ಮದುವೆಯ ಅರಶಿನ ಶಾಸ್ತ್ರ ಸೇರಿ ಒಂದೊಂದು ಫೋಟೊ ವಿಡಿಯೋಗಳು ಪ್ರಸಾರವಾಗುತ್ತವೆ. ಅದರ ಜೊತೆಗೆ ಪರಶು ಫೋನಲ್ಲಿ, ಅವಳನ್ನು ಬಿಡ್ಬೇಡಿ, ಎಲ್ಲಿದ್ರೂ ಕರ್ಕೊಂಡು ಬಾರ್ಲ ಎಂದು ಅವಾಜ್ ಹಾಕುತ್ತಿರುವ ವಿಡಿಯೋ ಪ್ರಸಾರ ಆಗುತ್ತೆ. ಅಷ್ಟರಲ್ಲೇ ಪೊಲೀಸ್ ಮತ್ತು ಹುಡುಗಿಯ ಆಗಮನ ಆಗುತ್ತದೆ. ಇದೆಲ್ಲ ನಾಟಕ ಅನ್ನೋದು ಕೊನೆಗೆ ರಿವೀಲ್‌ ಆಯ್ತು.

ಇದನ್ನೂ ಓದಿ: Amruthadhaare Serial: ಮಲ್ಲಿಗಾಗಿ ಮಹತ್ವದ ತ್ಯಾಗ ಮಾಡಿದ್ದಾರೆ ಗೌತಮ್-ಭೂಮಿಕಾ!

ಇನ್ನು ಈಗ ರತ್ನಾ ಮದುವೆಯೂ ಆಗಿದೆ. ಸೀರಿಯಲ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಾಕೆ ಈ ಸೀರಿಯಲ್​ನಲ್ಲಿ ಎಲ್ಲಾ ಹೆಣ್ಣಿಗೂ ಅನ್ಯಾಯ ಆಗಿರುವ ಹಾಗೆ ತೋರಿಸುತ್ತಿದ್ದೀರಿ, ನಿಮಗೆ ಹೆಣ್ಣಿನ ಮೇಲೆ ಯಾಕಿಷ್ಟು ಕೋಪ ಎಂದು ಪ್ರಶ್ನಿಸುತ್ತಿದ್ದಾರೆ.