ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Annayya Serial: ಶಾರದಾಳೇ ಶಿವು ತಾಯಿ ಎನ್ನೋ ಸತ್ಯ ಪಾರುಗೆ ಗೊತ್ತಾಗೇ ಹೋಯ್ತು! ಅಂತೂ ಸತ್ಯ ದರ್ಶನ

Annayya serial: ಇಷ್ಟೂ ದಿನ ಪಾರು, ಅತ್ತೆಯನ್ನ ಹುಡುಕುವ ಪ್ರಯತ್ನದಲ್ಲಿ ಇದ್ದಳು. ಅಂತೂ ಕಾದಿದ್ದಕ್ಕೂ ಫಲ ಸಿಕ್ಕಿದೆ. ಶಿವು ಮೈಮೇಲೆ ದೇವರು ಬಂದಿದೆ. ದೇವಿ ಸೀದಾ ಶಿವು ಅಮ್ಮ ಇರೋ ಕಡೆ ಬಂದಿದೆ. ಶಾರದಾಳೇ ಶಿವು ತಾಯಿ ಎನ್ನೋ ಸತ್ಯ ಪಾರುಗೆ ಗೊತ್ತಾಗಿದೆ. ಈ ಧಾರಾವಾಹಿಯಲ್ಲಿ ಸದ್ಯ ಗುಂಡಮ್ಮ ಪಾತ್ರದ ಮೇಲೆ ಕಥೆ ಸಾಗುತ್ತಿದೆ. ಕ್ಯೂಟ್‌ ಆಗಿ ಚಟಪಟ ಅಂತ ಮಾತಾಡೋ ಈ ಪಾತ್ರದ ಬಗ್ಗೆ ಪ್ರೇಕ್ಷಕರಿಗೆ ತುಂಬ ಕುತೂಹಲ. ಶಿವಣ್ಣನ ಮೂರನೇ ತಂಗಿಯಾಗಿ ಗುಂಡಮ್ಮ ರಶ್ಮಿ ಪಾತ್ರವನ್ನು ಅಪೇಕ್ಷಾ ಶ್ರೀನಾಥ್‌ ನಿರ್ವಹಸಿದ್ದಾರೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಣ್ಣಯ್ಯ (Annayya Serial) ಧಾರಾವಾಹಿ (Annayya Serial) ಇತ್ತೀಚೆಗೆ ಶುರುವಾಗಿದ್ದರೂ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಇದೀಗ ಟಿಆರ್‌ಪಿಯಲ್ಲಿಯೂ (TRP) ಮೊದಲನೇ ಸ್ಥಾನದಲ್ಲಿದೆ, ಸೀರಿಯಲ್‌ನಲ್ಲಿ (Serial) ಬರಬರುತ್ತಾ ಕುತೂಹಲ ಘಟ್ಟ ತಲುಪಿದೆ. ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು (Shivu) ಮೈಮೇಲೆ ದೇವಿ ಬಂದಾಗಿದೆ. ಅವನ ಮೈಮೇಲೆ ದೇವಿ ಬರಬಾರದು, ಸತ್ಯ ಹೊರಗಡೆ ಬರಬಾರದು ಎಂದು ಕಿಡಿಗೇಡಿಗಳು ಪ್ರಯತ್ನಪಟ್ಟರು. ಆದರೆ ಅದು ಆಗಿ ಬಿಟ್ಟಿದೆ.

ಸತ್ಯ ದರ್ಶನ

ಇಷ್ಟೂ ದಿನ ಪಾರು, ಅತ್ತೆಯನ್ನ ಹುಡುಕುವ ಪ್ರಯತ್ನದಲ್ಲಿ ಇದ್ದಳು. ಅಂತೂ ಕಾದಿದ್ದಕ್ಕೂ ಫಲ ಸಿಕ್ಕಿದೆ. ಶಿವು ಮೈಮೇಲೆ ದೇವರು ಬಂದಿದೆ. ದೇವಿ ಸೀದಾ ಶಿವು ಅಮ್ಮ ಇರೋ ಕಡೆ ಬಂದಿದೆ. ಶಾರದಾಳೇ ಶಿವು ತಾಯಿ ಎನ್ನೋ ಸತ್ಯ ಪಾರುಗೆ ಗೊತ್ತಾಗಿದೆ.

ಇದನ್ನೂ ಓದಿ: Bigg Boss Kannada 12: ಆತ್ಮೀಯರಾದ ಅಶ್ವಿನಿ ಅವರೇ ಸೇಫ್‌ ಆಗಬೇಕು ಎಂದ ಗಿಲ್ಲಿ! ಕಾರಣ ಏನು?

ಮಕ್ಕಳಿಗಾಗಿ ಮಿಡಿತಿರೋ ಹೃದಯ, ಮಕ್ಕಳ ತಾಯಿ ಇವಳೇ ಎಂದಿದೆ ದೇವಿ. ಸತ್ಯ ಅಂತೂ ದರ್ಶನವಾಗಿದೆ. ಮುಂದೆ ಪಾರು ಏನು ಮಾಡ್ತಾಳೆ ಎನ್ನೋದೇ ವೀಕ್ಷರಲ್ಲಿ ಇರೋ ಕುತೂಹಲ.

ಜೀ ಕನ್ನಡ ಪ್ರೋಮೋ



ಅಷ್ಟೇ ಅಲ್ಲ ಪಾರುಗೆ ಗೊತ್ತಾಗದೇ ಇರೋ ವಿಚಾರ ತುಂಬಾ ಇದೆ. ಶಿವುಗೆ ಈ ಹಿಂದೆ ಬೇರೆಯೇ ಜೀವನ ಇತ್ತು ಎಂದು ಗೊತ್ತಿಲ್ಲ. ಒಂದು ಕಡೆ ರಶ್ಮಿ ಹಾಗೂ ಜಿಮ್‌ ಸೀನ ಜೀವನ ಚೆನ್ನಾಗಿಲ್ಲ. ಜಿಮ್‌ ಸೀನ ಮೊದಲೇ ಪಿಂಕಿಯನ್ನು ಪ್ರೀತಿ ಮಾಡುತ್ತಿದ್ದನು. ಆದರೆ ಒತ್ತಾಯಕ್ಕೆ ಮಣಿದು ರಶ್ಮಿಯನ್ನ ಮದುವೆ ಆಗೋ ಹಾಗಾಯ್ತು.

ನಾಗೇಗೌಡ್ರು ಮನೆಯವರು ರಾಣಿಗೆ ಎಷ್ಟು ಹಿಂಸೆ ಕೊಡ್ತಾರೆ ಎನ್ನೋದು ಕೂಡ ಪಾರುಗೆ ಗೊತ್ತಿದ್ದರೂ ಕೂಡ ಶಿವುಗೆ ಗೊತ್ತೇ ಇಲ್ಲ.ಶಿವು ತಾಯಿ ಶಾರದಾಳ ಹೆಸರಿಗೆ ಕಳಂಕ ಹೊರಿಸಿ, ಇಷ್ಟು ವರ್ಷ ಜೈಲಿನಲ್ಲಿ ಇರುವ ಹಾಗೆ ಮಾಡಿರೋದು ವೀರಭದ್ರ ಎನ್ನೋದು ಯಾರಿಗೂ ಗೊತ್ತಿಲ್ಲ. ತಾಯಿಯನ್ನು ಮಾತ್ರ ದ್ವೇಷಿಸುತ್ತಿದ್ದಾನೆ ಶಿವು.

ಯಾರೆಲ್ಲ ಇದ್ದಾರೆ?

ಈ ಧಾರಾವಾಹಿಯಲ್ಲಿ ಸದ್ಯ ಗುಂಡಮ್ಮ ಪಾತ್ರದ ಮೇಲೆ ಕಥೆ ಸಾಗುತ್ತಿದೆ. ಕ್ಯೂಟ್‌ ಆಗಿ ಚಟಪಟ ಅಂತ ಮಾತಾಡೋ ಈ ಪಾತ್ರದ ಬಗ್ಗೆ ಪ್ರೇಕ್ಷಕರಿಗೆ ತುಂಬ ಕುತೂಹಲ. ಶಿವಣ್ಣನ ಮೂರನೇ ತಂಗಿಯಾಗಿ ಗುಂಡಮ್ಮ ರಶ್ಮಿ ಪಾತ್ರವನ್ನು ಅಪೇಕ್ಷಾ ಶ್ರೀನಾಥ್‌ ನಿರ್ವಹಸಿದ್ದಾರೆ. ಇನ್ನು ಇದರಲ್ಲಿ ವಿಲನ್‌ ರೋಲ್‌ವನ್ನು ಪಾರ್ವತಿ ಪಾತ್ರಧಾರಿಯ ಅಪ್ಪ ನಿಭಾಯಿಸಿದ್ದಾರೆ. ಅವರಿಗೆ ಇಬ್ಬರು ಹೆಂಡತಿಯರು. ಆ ಮೊದಲ ಹೆಂಡತಿಯ ಪಾತ್ರವನ್ನು ನಟಿ ಚಂಪಾ ಶೆಟ್ಟಿ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮಾತುಗಳಿಂದ ಬೇರೆಯವರಿಗೆ ನೋವು ಆಗುತ್ತೆ ಎಂದ ಕಾವ್ಯ; ಬೆಸ್ಟ್‌ ಫ್ರೆಂಡ್‌ ವಿರುದ್ಧ ತಿರುಗಿ ಬಿದ್ದಿದ್ದೇಕೆ ಕಾವು?

ಅಣ್ಣಯ್ಯ' ಧಾರಾವಾಹಿಯಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಗಟ್ಟಿಮೇಳ ಸೀರಿಯಲ್‌ನಲ್ಲಿ ನಿಶಾ ರವಿಕೃಷ್ಣನ್ ಈ ಧಾರಾವಾಹಿ ಹೀರೋಯಿನ್.ಅಂಕಿತಾ ಗೌಡ, ವೈಶಂಪಾಯನ ತೀರ ಮತ್ತು ಜಲಪಾತ ಸಿನಿಮಾಗಳಲ್ಲಿ ಅಭಿನಯಿಸಿರುವ ನಾಗಶ್ರೀ ಬೇಗಾರ್, ಪ್ರತೀಕ್ಷಾ ಶ್ರೀನಾಥ್ ಹಾಗೂ ಪ್ರಾಯಶಃ ಚಿತ್ರದಲ್ಲಿ ಅಭಿನಯಿಸಿರುವ ರಾಘವಿ ನಾಯಕನ ಮುದ್ದಿನ ತಂಗಿಯರ ಪಾತ್ರ.ಅಣ್ಣಯ್ಯ ಧಾರಾವಾಹಿ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

Yashaswi Devadiga

View all posts by this author