Bigg Boss Kannada 12: ಆತ್ಮೀಯರಾದ ಅಶ್ವಿನಿ ಅವರೇ ಸೇಫ್ ಆಗಬೇಕು ಎಂದ ಗಿಲ್ಲಿ! ಕಾರಣ ಏನು?
Gilli Nata: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಹಾಗೂ ಗಿಲ್ಲಿ ಗಲಾಟೆ ಎಷ್ಟೋ ಬಾರಿ ಮಿತಿ ಮೀರಿದೆ. ಆದರೂ ಗಿಲ್ಲಿ ಅವರು ಸಾಕಷ್ಟು ಬಾರಿ ಅಶ್ವಿನಿ ಅವರನ್ನು ಬಿಟ್ಟು ಕೊಡಲ್ಲ. ಆಟ ಆಡುವಾಗ, ಅಶ್ವಿನಿ ಅವರನ್ನೇ ಟಾರ್ಗೆಟ್ ಮಾಡುತ್ತ ಆಡ್ತಾರೆ. ಅದು ಅವರಿಗೆ ಸಾಕಷ್ಟು ಬಾರಿ ಪ್ಲಸ್ ಕೂಡ ಆಗಿದೆ. ಆದರೀಗ ನಾಮಿನೇಷನ್ ಸಮಯದಲ್ಲಿ ಗಿಲ್ಲಿ ಅವರು ಅಶ್ವಿನಿ ಅವರು ಸೇಫ್ ಆಗಬೇಕು ಎಂದಿದ್ದಾರೆ. ಗಿಲ್ಲಿ ಹೇಳಿದ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಗಿಲ್ಲಿ (Gilli Nata) ಹಾಗೂ ಅಶ್ವಿನಿ ಗೌಡ (Ashwini Gowda) ಒಬ್ಬರು ಹಾವು ಮುಂಗಿಸಿಯಂತೆ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇಬರಿಬ್ಬರ ಗಲಾಟೆ ಎಷ್ಟೋ ಬಾರಿ ಮಿತಿ ಮೀರಿದೆ. ಆದರೂ ಗಿಲ್ಲಿ ಅವರು ಸಾಕಷ್ಟು ಬಾರಿ ಅಶ್ವಿನಿ ಅವರನ್ನು ಬಿಟ್ಟು ಕೊಡಲ್ಲ. ಆಟ ಆಡುವಾಗ, ಅಶ್ವಿನಿ ಅವರನ್ನೇ ಟಾರ್ಗೆಟ್ ಮಾಡುತ್ತ ಆಡ್ತಾರೆ. ಅದು ಅವರಿಗೆ ಸಾಕಷ್ಟು ಬಾರಿ ಪ್ಲಸ್ ಕೂಡ ಆಗಿದೆ. ಆದರೀಗ ನಾಮಿನೇಷನ್ (Nomination) ಸಮಯದಲ್ಲಿ ಗಿಲ್ಲಿ ಅವರು ಅಶ್ವಿನಿ ಅವರು ಸೇಫ್ ಆಗಬೇಕು ಎಂದಿದ್ದಾರೆ. ಗಿಲ್ಲಿ ಹೇಳಿದ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ನಕ್ಕ ಸುದೀಪ್!
`ಯಾರು ಸೇಫ್ ಆಗಬೇಕು ಗಿಲ್ಲಿ'? ಎಂದು ಕಿಚ್ಚ ಕೇಳಿದ್ದಾರೆ. ಅದಕ್ಕೆ ಗಿಲ್ಲಿ ಪ್ರತಿಕ್ರಿಯಿಸಿ, `ನನ್ನ ತುಂಬಾ ಆತ್ಮೀಯರಾದ ಅಶ್ವಿನಿ ಅವರು ಸೇಫ್ ಆಗಬೇಕು' ಎಂದರು. ಅದಕ್ಕೆ ಕಿಚ್ಚ ಅವರು ತಮಾಷೆ ಮಾಡಿ, `ಇದಕ್ಕೆ ಕಾರಣ ಬೇಕು 'ಎಂದರು. ಅಷ್ಟೇ ಅಲ್ಲ, `ಅಶ್ವಿನಿ ಅವರು ಇಲ್ಲದೇ ಬಿಗ್ ಬಾಸ್ ಬೋರ್ ಹೊಡಿತಾ ಇದೆಯಾ?' ಎಂದು ಕೇಳಿದರು. ಅದಕ್ಕೆ ಗಿಲ್ಲಿ, `ಅಶ್ವಿನಿ ಅವರು ನನಗೆ ಇಷ್ಟ' ಎಂದಿದ್ದಾರೆ. ಅದಕ್ಕೆ ಕಿಚ್ಚ, `ಬಾಗಿಲು ಓಪನ್ ಮಾಡೋದಲ್ವಾ? ಹೋಗ್ತಾ ಇದ್ದರು ಅಂತ ನೀವೇ ಹೇಳ್ತಾ ಇದ್ರಿ' ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಪ್ಲೇ ಮಾಡಿಸಿದ ಕಿಚ್ಚ!
ಅದಕ್ಕೆ ಗಿಲ್ಲಿ ಮಾತನಾಡಿ, ʻಬಾಗಿಲು ಓಪನ್ ಮಾಡಲ್ಲ ಅನ್ನೋ ಧೈರ್ಯಕ್ಕೆ ಹೇಳಿದ್ದು. ರೂಲ್ ಬುಕ್ ಅಲ್ಲಿ ಇದೆ ಸುಮ್ಮ ಸುಮ್ಮನೆ ಹೋಗೋಕೆ ಆಗಲ್ಲʻʼ ಎಂದಿದ್ದಾರೆ. ಅದಕ್ಕೆ ಕಿಚ್ಚ ಮಾತನಾಡಿ, ʻಅವರ ಹೆಸರು ತೆಗೆದುಕೊಂಡು ಗೆಲ್ಲಬೇಕೋ ಅಂತ ಇರೋದು ಸ್ಟ್ರಾಟಜಿನೋ ಏನೋ ಗೊತ್ತಿಲ್ಲ. ಆದರೆ ಕೇಳಿಸಿಕೊಳ್ಳಲು ತುಂಬಾ ಅಂದವಾಗಿತ್ತುʻʼ ಎಂದಿದ್ದಾರೆ. ಇನ್ನು ಗಿಲ್ಲಿ ಅವರ ಈ ಮಾತನಾಡಿದ ಕ್ಲಿಪ್ ವೈರಲ್ ಆಗ್ತಿದೆ.
ವೈರಲ್ ವಿಡಿಯೋ
Gilli still wants Ashwini in the house so he can roast her every single day.
— Manu (@yoitzmanu) November 22, 2025
He just didn’t get enough man😂#Gilli #BBK12 pic.twitter.com/yr3fbhLuYX
ಇನ್ನು ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಅವರು ಅಶ್ವಿನಿ ಅವರನ್ನ ಭಾರಿ ಟೀಕೆ ಮಾಡಿದ್ದರು. ಕ್ಯಾಪ್ಟನ್ಸಿ ರೇಸ್ನಲ್ಲಿ ಅಭಿಷೇಕ್ ಹಾಗೂ ಅಶ್ವಿನಿ ಗೌಡ ಇದ್ದರು. ಇಬ್ಬರೂ ಸರದಿಯಲ್ಲಿ ಬಂದು ಕೂರಬೇಕು. ಹೀಗೆ ಕೂತಾಗ ಮನಸ್ಸಿನಲ್ಲೇ ಲೆಕ್ಕ ಹಾಕಿ 12 ನಿಮಿಷ ಆದ ಬಳಿಕ ಗಂಟೆ ಬಾರಿಸಬೇಕು. 12 ನಿಮಿಷಕ್ಕೆ ಯಾರು ಹತ್ತಿರವಿದ್ದಾರೋ ಅವರು ವಿನ್ ಆದಂತೆ. ಈ ಸಂದರ್ಭದಲ್ಲಿ ಅಶ್ವಿನಿ ಅವರ ಲೆಕ್ಕಾಚಾರ ತಪ್ಪಿಸಲು ಅವಕಾಶ ಇತ್ತು.
ಇದನ್ನೂ ಓದಿ: Bigg Boss Kannada 12: ರಕ್ಷಿತಾ ಶೆಟ್ಟಿಗೆ ಈ ವಾರದ ಕಿಚ್ಚನ ಚಪ್ಪಾಳೆ!
ಗಿಲ್ಲಿ ಅವರು ಹೋಗಿ ಅಶ್ವಿನಿ ಅವರನ್ನು ಟೀಕೆ ಮಾಡಲು ಆರಂಭಿಸಿದರು. ಅಲ್ಲಿ ಆಡಿದ ಮಾತುಗಳಲ್ಲಿ ಕೆಲವು ಮಿತಿಮೀರಿತ್ತು. ‘ಆಟವನ್ನು ಆಟವಾಗಿ ತೆಗೆದುಕೊಳ್ಳಬೇಕು. ಅದಕ್ಕೆ ಈ ರೀತಿ ಮಾಡೋದು ಸರಿಯಲ್ಲ, ಛೇ’ ಎಂದರು ಗಿಲ್ಲಿ. ಅವರಿಗೆ ತಪ್ಪಿತಸ್ಥ ಭಾವನೆ ಕಾಡಿದೆ. ಆ ಬಳಿಕ ಅಶ್ವಿನಿ ಅವರು ಇದ್ದಲ್ಲೇ ತೆರಳಿ ಕ್ಷಮೆ ಕೇಳಿದ್ದರು.