ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aishwarya Rai: ಮತ್ತೆ ತಾಯಿಯಾಗ್ತಿದ್ದಾರಾ ಐಶ್ವರ್ಯ ರೈ? ಎರಡನೇ ಮಗುವಿನ ಬಗ್ಗೆ ಕೇಳಿದಾಗ ಅಭಿಷೇಕ್‌ ಹೇಳಿದ್ದೇನು?

ಕೆಲವು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ (Bollywood actress) ಐಶ್ವರ್ಯಾ ರೈ ( Aishwarya Rai) ಎರಡನೇ ಬಾರಿಗೆ ತಾಯಿಯಾಗುತ್ತಿದ್ದಾರೆ ಎನ್ನುವ ಊಹಾಪೋಹಗಳು ಹಬ್ಬಿತ್ತು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಆಕೆಯ ವಯಸ್ಸಿನ ಬಗ್ಗೆಯೂ ತೀವ್ರ ಚರ್ಚೆಗಳಾಗಿದ್ದವು. ಇದೀಗ ಈ ವಿಷಯದಲ್ಲಿ ನಟ ಅಭಿಷೇಕ್ ಬಚ್ಚನ್ (Abhishek Bachchan ) ಕೂಡ ನಮ್ಮ ವಯಸ್ಸಿಗಾದರೂ ಗೌರವ ಕೊಡಿ ಎಂದಿದ್ದಾರೆ

ಐಶ್ವರ್ಯ ಮತ್ತೆ ತಾಯಿಯಾಗುತ್ತಿದ್ದಾರೆಯೇ ? ಅಭಿಷೇಕ್ ನಾಚಿದ್ದೇಕೆ?

ಕೆಲವು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ (Bollywood actress) ಐಶ್ವರ್ಯಾ ರೈ (Aishwarya Rai) ಎರಡನೇ ಬಾರಿಗೆ ತಾಯಿಯಾಗುತ್ತಿದ್ದಾರೆ ಎನ್ನುವ ಊಹಾಪೋಹಗಳು ಹಬ್ಬಿತ್ತು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಆಕೆಯ ವಯಸ್ಸಿನ ಬಗ್ಗೆಯೂ ತೀವ್ರ ಚರ್ಚೆಗಳಾಗಿದ್ದವು. ಇದೀಗ ಈ ವಿಷಯದಲ್ಲಿ ನಟ ಅಭಿಷೇಕ್ ಬಚ್ಚನ್ (Abhishek Bachchan) ಕೂಡ ನಮ್ಮ ವಯಸ್ಸಿಗಾದರೂ ಗೌರವ ಕೊಡಿ ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪತ್ನಿ ಐಶ್ವರ್ಯಾ ರೈ ಎರಡನೇ ಬಾರಿಗೆ ತಾಯಿಯಾಗುತ್ತಿರುವ ಬಗ್ಗೆ ನಟ ಅಭಿಷೇಕ್ ಬಚ್ಚನ್ ಅವರನ್ನು ಪ್ರಶ್ನಿಸಿದಾಗ ಅವರು ನಾಚುತ್ತಾ ನಮ್ಮ ವಯಸ್ಸಿಗೆ ಗೌರವ ಕೊಡಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ (Viral Video) ಆಗಿದೆ.

ಅಭಿಷೇಕ್ ಮತ್ತು ಐಶ್ವರ್ಯ ವಿಚ್ಛೇದನ ವದಂತಿಯ ನಡುವೆ ಇದೀಗ ಕೇಸ್ ತೋ ಬಂತಾ ಹೈ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್ ಅವರ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ನಟ ರಿತೇಶ್ ದೇಶ್‌ಮುಖ್ ಅವರು ಐಶ್ವರ್ಯಾ ರೈ ಎರಡನೇ ಬಾರಿ ತಾಯಿಯಾಗುತ್ತಿರುವ ಬಗ್ಗೆ ನಟ ಅಭಿಷೇಕ್ ಅವರನ್ನು ತಮಾಶೆ ಮಾಡಿದ್ದಾರೆ. ಇದಕ್ಕೆ ನಾಚಿದ ಅಭಿಷೇಕ್, ನಮ್ಮ ವಯಸ್ಸಿಗೆ ಗೌರವ ಕೊಡಿ ಎಂದಿದ್ದಾರೆ.

ರಿತೇಶ್ ದೇಶ್‌ಮುಖ್ ಅವರ ಕಾರ್ಯಕ್ರಮ ಕೇಸ್ ತೋ ಬಂತಾ ಹೈನಲ್ಲಿ ಕಾಣಿಸಿಕೊಂಡ ಅಭಿಷೇಕ್ ಬಚ್ಚನ್ ಅವರನ್ನು ಎರಡನೇ ಬಾರಿ ತಂದೆಯಾಗುವ ಬಗ್ಗೆ ಕೇಳಲಾಯಿತು. ಇದು ಕಳೆದ ವರ್ಷದ ವಿಡಿಯೋ ಆದರೂ ಇದೀಗ ಅಭಿಷೇಕ್ ಮತ್ತು ಐಶ್ವರ್ಯ ವಿಚ್ಛೇದನ ವದಂತಿಯ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲಾಗುತ್ತಿರುವ ವಿಡಿಯೊ ಇಲ್ಲಿದೆ



ಅಲ್ಲದೇ ರಿತೇಶ್ ಅವರು ಅಭಿಷೇಕ್‌ಗೆ ಅಮಿತಾಬ್, ಅಭಿಷೇಕ್, ಐಶ್ವರ್ಯಾ, ಆರಾಧ್ಯ ನಿಮ್ಮೆಲ್ಲರ ಹೆಸರು ಎ ಅಕ್ಷರದಿಂದ ಪ್ರಾರಂಭವಾಗುತ್ತದೆ. ಆದರೆ ಜಯಾ ಮತ್ತು ಶ್ವೇತಾ ಏನು ಮಾಡಿದ್ದಾರೆ, ಅವರ ಹೆಸರು ಏಕೆ ಎ ಅಕ್ಷರದಿಂದ ಇಲ್ಲ ಎಂದು ಕೇಳಿದ್ದಕ್ಕೆ ನಟ ಅಭಿಷೇಕ್, ಇದೊಂದು ಸಂಪ್ರದಾಯದಂತಾಗಿದೆ. ಅವರಿಗೂ ಸಂತೋಷ ಎಂದಷ್ಟೇ ಹೇಳಿದರು.

ಇದನ್ನೂ ಓದಿ: Di Di Dikki Movie: ರಂಜನಿ ರಾಘವನ್ ನಿರ್ದೇಶನದ ‘ಡಿ ಡಿ ಢಿಕ್ಕಿ’ ಚಿತ್ರಕ್ಕೆ ʼನೆನಪಿರಲಿʼ ಪ್ರೇಮ್ ನಾಯಕ: ಪ್ರಮುಖ ಪಾತ್ರದಲ್ಲಿ ಗಣೇಶ್ ಪುತ್ರ ವಿಹಾನ್

ಈ ವೇಳೆ ರಿತೇಶ್ ಮಧ್ಯಪ್ರವೇಶಿಸಿ, ಆರಾಧ್ಯ ಆದಮೇಲೆ ಮುಂದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಭಿಷೇಕ್ ಮುಗ್ಧ ನಗು ಚೆಲ್ಲಿ ಮುಂದಿನ ಪೀಳಿಗೆ ಬಂದ ಮೇಲೆ ನೋಡೋಣ ಎಂದಾಗ ರಿತೇಶ್ ಅಷ್ಟು ಸಮಯ ಯಾರು ಕಾಯುತ್ತಾರೆ ಅಭಿಷೇಕ್, ಆರಾಧ್ಯ.... ಆಮೇಲೆ ಎಂದು ವ್ಯಂಗ್ಯವಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್, ನನ್ನ ವಯಸ್ಸಿಗಾದರೂ ಗೌರವ ಕೊಡು. ನಾನು ನಿನಗಿಂತ ದೊಡ್ಡವನು ಎಂದು ಅಭಿಷೇಕ್ ನಾಚಿಕೊಂಡು ಹೇಳಿದ್ದಾರೆ.

ab (1)

2007ರಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹವಾಗಿದ್ದು, ಕಳೆದ ವರ್ಷ ಇವರ ವಿಚ್ಛೇದನದ ವದಂತಿ ಹಬ್ಬಿತ್ತು. ಈ ಬಗ್ಗೆ ಅಭಿಷೇಕ್ ಮತ್ತು ಐಶ್ವರ್ಯಾ ಮೌನವಾಗಿದ್ದರೂ ಅಮಿತಾಬ್ ತಮ್ಮ ಕುಟುಂಬದ ಗೌರವ ಕಾಪಾಡುವ ಸಲುವಾಗಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪ್ರತಿಯೊಬ್ಬರೂ ತಮ್ಮ ಗೌಪ್ಯತೆಯನ್ನು ಗೌರವಿಸಬೇಕು ಮತ್ತು ಸುಳ್ಳು ವರದಿಗಳನ್ನು ನಂಬಬಾರದು ಎಂದು ಹೇಳಿದ್ದರು.