ಅಂತರಗಂಗೆ ಅತಿಕ್ರಮಣ ತೆರವಿಗೆ ಹಸಿರು ನಿಶಾನೆ
ಶತಶೃಂಗ ಪರ್ವತ ಶ್ರೇಣಿಯ 7 ಹಳ್ಳಿಗಳ ಜಮೀನಿಗೆ ಬೆಲೆ ಕಟ್ಟಲಾಗದ ಮೌಲ್ಯ ಬಂದಿರುವುದರಿಂದಾಗಿ ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುವುದು, ಗೋಮಾಳಕ್ಕೆ ಕಾಂಪೌಂಡ್ ಹಾಕುವುದು, ರಾತ್ರೋರಾತ್ರಿ ಗೂಡು ಅಂಗಡಿಗಳನ್ನು ತಂದಿರಿಸುವುದು, ಬಂಡೆಯನ್ನು ಸಿಡಿಸಿ ಮನೆಗೆ ಪಾಯ ಹಾಕುವುದನ್ನು ಭೂದಂಧೆಕೋರರು ರಾಜಾರೋಷವಾಗಿ ಈ ಹಿಂದೆ ನಡೆಸು ತ್ತಿದ್ದರು
-
ಕೆ.ಎಸ್.ಮಂಜುನಾಥ ರಾವ್
ಜಿಲ್ಲೆಯ ಹಲವೆಡೆ ಕೇಳಿ ಬಂದ ಜೆಸಿಬಿ ಗರ್ಜನೆ
ಈ ಹಿಂದೆ ರಾಜಾರೋಷವಾಗಿದ್ದ ಅನಧಿಕೃತ ಕಟ್ಟಡ ನಿರ್ಮಾಣ
ಕೋಲಾರ: ಜಿಲ್ಲೆಯ ಅಂತರಗಂಗೆ ಬೆಟ್ಟದ ಮೇಲಿನ ಅತಿಕ್ರಮಣ ತೆರವಿಗೆ ಜಿಲ್ಲಾಡಳಿತ ಕೊನೆಗೂ ಮುಂದಾಗಿದ್ದು ಪಾಪರಾಜನ ಹಳ್ಳಿ, ಶಿವಗಂಗೆ ಮತ್ತು ಹೊಸಹಳ್ಳಿಯಲ್ಲಿ ಜೆಸಿಬಿ ಘರ್ಜನೆ ಕೇಳಿ ಬಂದಿದೆ. ಶತಶೃಂಗ ಪರ್ವತ ಶ್ರೇಣಿಯ 7 ಹಳ್ಳಿಗಳ ಜಮೀನಿಗೆ ಬೆಲೆ ಕಟ್ಟಲಾಗದ ಮೌಲ್ಯ ಬಂದಿ ರುವುದರಿಂದಾಗಿ ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುವುದು, ಗೋಮಾಳಕ್ಕೆ ಕಾಂಪೌಂಡ್ ಹಾಕುವುದು, ರಾತ್ರೋರಾತ್ರಿ ಗೂಡು ಅಂಗಡಿಗಳನ್ನು ತಂದಿರಿಸುವುದು, ಬಂಡೆಯನ್ನು ಸಿಡಿಸಿ ಮನೆಗೆ ಪಾಯ ಹಾಕುವುದನ್ನು ಭೂದಂಧೆಕೋರರು ರಾಜಾರೋಷವಾಗಿ ಈ ಹಿಂದೆ ನಡೆಸುತ್ತಿದ್ದರು.
ಕಂದಾಯ ಇಲಾಖೆ ಅಧಿಕಾರಿಗಳು ಬೆಟ್ಟದ ಮೇಲೆ ಹೋಗುವ ಪರಿಪಾಟ ಇಲ್ಲದ ಕಾರಣ ಭೂ ಕಬಳಿಕೆದಾರರಿಗೆ ಅದು ವರದಾನವಾಗಿತ್ತು. ದಂಧೆಗೆ ಕೆಲ ಪಂಚಾಯತಿ ಸದಸ್ಯರೂ ಕುಮ್ಮಕ್ಕು ನೀಡಿದ್ದರಿಂದಾಗಿ ಸರಕಾರಿ ಆಸ್ತಿಗೆ ಬೇಲಿ ಹಾಕುವುದು ಸುಲಭವಾಗಿತ್ತು. ಈ ಸಂಬಂಧ ನಿರಂತರ ವಾಗಿ ತಾಲೂಕು ಕಚೇರಿಗೆ ದೂರುಗಳನ್ನು ಸಾರ್ವಜನಿಕರು ಸಲ್ಲಿಸಿದಾಗ ಕೆಲ ತಿಂಗಳ ಹಿಂದೆ ಸ್ಥಳ ಪರಿಶೀಲನೆ ಮಾಡಿದ ತಹಸೀಲ್ದಾರ್ ನಯನ ಅವರು, ನಂತರದಲ್ಲಿ ಬೆಟ್ಟದ ಒತ್ತುವರಿ ವಿಷಯ ವನ್ನು ಮರೆತು ಹೋಗಿದ್ದರಾದರೂ, ಪುನಃ ದೂರು ಅರ್ಜಿಗಳು ಮುಂದುವರೆದಾಗ ಎಚ್ಚೆತ್ತು ಕೊಂಡು ರೆವಿನ್ಯೂ ಇನ್ಸೆಪೆಕ್ಟರ್ ಮತ್ತು ವಿಲೇಜ್ ಅಕೌಂಟೆಂಟ್‌ಗಳ ಜತೆಗೆ ಜೆಸಿಬಿ ನೆರವಿನಿಂದ ಒತ್ತುವರಿಯನ್ನು ತೆರವು ಮಾಡಿದ್ದಾರೆ.
ಇದನ್ನೂ ಓದಿ: Kolar News: ಹಾಸ್ಟೆಲ್‌ನಲ್ಲಿ ದೆವ್ವ ಇದೆ ಎಂದಿದ್ದಕ್ಕೆ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ವಾರ್ಡನ್!
ಹೀಗಾಗಿ ಪಾಪರಾಜನಹಳ್ಳಿ, ಶಿವಗಂಗೆ ಮತ್ತು ಹೊಸಹಳ್ಳಿಯಲ್ಲಿ ಜೆಸಿಬಿ ಸದ್ದು ಮಾಡಿದ್ದು ಭೂ ಗಳ್ಳರ ನಿದ್ದೆಕೆಡಿಸಿದೆ. ತೆರವಿನ ನಂತರ ಮುಂದೆ ಅನಧಿಕೃತ ಕಟ್ಟಡ ನಿರ್ಮಾಣ ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.
ಅಕ್ರಮ ಬಡಾವಣೆ: ಬೆಟ್ಟದ ಮೇಲಿನ ವಸತಿಗೆ ಹೆಚ್ಚಿನ ಬೇಡಿಕೆ ಇರುವುದರಿಂದಾಗಿ ಜಮೀನನ್ನು ಕವ್ವರ್ಷನ್ ಮಾಡಿ ಲೇಔಟ್ʼಗಳನ್ನು ನಿರ್ಮಾಣ ಮಾಡುವ ಉತ್ಸಾಹಿಗಳು ಹೆಚ್ಚಾಗಿದ್ದರು. ತಾಲೂ ಕು ಆಫೀಸ್ ಮತ್ತು ಡಿಸಿ ಕಚೇರಿಗೆ ಓಡಾಡಿ ಕೆಲಸ ಮಾಡಿಸಿಕೊಡುವ ಏಜೆಂಟರೂ ಹುಟ್ಟಿಕೊಂಡಿ ದ್ದರು. ಆದರೆ ಭೂ ಪರಿವರ್ತನೆ ಆದ ನಂತರ ಯೋಜನಾ ಪ್ರಾಧಿಕಾರದಿಂದ ಬಡಾವಣೆ ನಕ್ಷೆ ಅನುಮೋದನೆ ಪಡೆಯದೆ ಏಕಾಏಕಿ ಕಚ್ಛಾ ಸೈಟ್‌ಗಳನ್ನು ಮಾರಾಟ ಮಾಡುತ್ತಿರುವುದರಿಂದಾಗಿ ಮನೆ ನಿರ್ಮಾಣಕ್ಕೆ ವಿದ್ಯುತ್, ಚರಂಡಿ, ರಸ್ತೆ ಸೌಲಭ್ಯವಿಲ್ಲದೆ ತೊಂದರೆ ಪಡುವಂತಾಗಿತ್ತು.
ನಗರ ಯೋಜನಾ ಪ್ರಾಧಿಕಾರದ ಅನುಮತಿ ಇಲ್ಲದ ಕಾರಣ 30 ಅಡಿ ರಸ್ತೆಯು 20 ಅಡಿಗೆ ಇಳಿದಿರುವ ಘಟನೆಯೂ ನಡೆದಿತ್ತು. 2013ರಲ್ಲಿ ಭೂ ಪರಿವರ್ತನೆ ಆದ ಜಮೀನಿಗೆ ಇದುವರೆಗೂ ಲೇಔಟ್ ಭಾಗ್ಯ ಕಾಣದೆ ಸರಕಾರಕ್ಕೆ ತೆರಿಗೆ ಸೋರಿಕೆ ಆಗುತ್ತಿತ್ತು. ಆದರೆ ಇನ್ನಾದರೂ ಯಾವುದೇ ಅತಿಕ್ರಮಣ ನಡೆಯದಿರಲಿ ಎಂಬುದೇ ಸಾರ್ವತ್ರಿಕ ಅಭಿಪ್ರಾಯವಾಗಿದೆ.
*
ಶತಶೃಂಗ ಪರ್ವತ ಶ್ರೇಣಿಯ ಪಾವಿತ್ರತೆ ಮತ್ತು ಪ್ರಾಕೃತಿಕ ಸೌಂದರ್ಯವನ್ನು ಉಳಿಸುವ ನಿಟ್ಟಿನಲ್ಲಿ ಕೊಂಡರಾಜನಹಳ್ಳಿ ಪಂಚಾಯ್ತಿ, ಕಂದಾಯ ಇಲಾಖೆ, ಪೊಲೀಸರು ಮತ್ತು ಅರಣ್ಯಾಧಿಕಾರಿಗಳ ಜಂಟಿ ಕಾರ್ಯಾಚರಣೆ ಪಡೆ ರಚಿಸುವ ಮೂಲಕ ಅಂತರಗಂಗೆ ಬೆಟ್ಟವನ್ನು ಉಳಿಸಬೇಕು, ಹಾಗಾಗಿ ತೇರಹಳ್ಳಿಯಲ್ಲಿ ಪೊಲೀಸ್ ಚೌಕಿಯನ್ನು ತೆರೆದು ಅಕ್ರಮಗಳಿಗೆ ಕಡಿವಾಣ ಹಾಕಬೇಕು.
- ಕೆ.ನಾರಾಯಣಗೌಡ ರಾಜ್ಯ ಉಪಾಧ್ಯಕ್ಷರು, ರೈತ ಸಂ