Kattalan Teaser: ಆಂಥೋನಿ ವರ್ಗೀಸ್ ಆಕ್ಷನ್-ಪ್ಯಾಕ್ಡ್ ಮೂವಿ 'ಕಟ್ಟಾಲನ್' ಟೀಸರ್ ಔಟ್; ಅಜನೀಶ್ ಲೋಕನಾಥ್ ಸಂಗೀತ
Ajaneesh Loknath: ಆಂಥೋನಿ ವರ್ಗೀಸ್ ಅವರ 'ಕಟ್ಟಾಲನ್' ಚಿತ್ರದ ಟೀಸರ್ ಔಟ್ ಆಗಿದೆ. ಕೊಚ್ಚಿಯ ವನಿತಾ-ವಿನೀತಾ ಚಿತ್ರಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳು, ಮಾಧ್ಯಮಗಳು ಮತ್ತು ವಿಶೇಷ ಅತಿಥಿಗಳ ಸಮ್ಮುಖದಲ್ಲಿ ಈ ಹೈ-ಆಕ್ಟೇನ್ ಆಕ್ಷನ್ ಚಿತ್ರದ ಪ್ರೋಮೋವನ್ನು ಬಿಡುಗಡೆ ಮಾಡಲಾಯಿತು. ಮೇ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ 'ಕಟ್ಟಾಲನ್' ಮಲಯಾಳಂ ಚಿತ್ರರಂಗದ ಅತಿದೊಡ್ಡ ಬಿಡುಗಡೆಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.
ಕಟ್ಟಾಲನ್ ಸಿನಿಮಾ -
ಆಂಥೋನಿ ವರ್ಗೀಸ್ ಅವರ 'ಕಟ್ಟಾಲನ್' (Kattalan teaser) ಚಿತ್ರದ ಟೀಸರ್ ಔಟ್ ಆಗಿದೆ. ಕೊಚ್ಚಿಯ ವನಿತಾ-ವಿನೀತಾ ಚಿತ್ರಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳು, ಮಾಧ್ಯಮಗಳು ಮತ್ತು ವಿಶೇಷ ಅತಿಥಿಗಳ ಸಮ್ಮುಖದಲ್ಲಿ ಈ ಹೈ-ಆಕ್ಟೇನ್ ಆಕ್ಷನ್ (Action Movie) ಚಿತ್ರದ ಪ್ರೋಮೋವನ್ನು ಬಿಡುಗಡೆ ಮಾಡಲಾಯಿತು. ಮೇ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ 'ಕಟ್ಟಾಲನ್' ಮಲಯಾಳಂ (Malayalam Movie) ಚಿತ್ರರಂಗದ ಅತಿದೊಡ್ಡ ಬಿಡುಗಡೆಗಳಲ್ಲಿ ಒಂದಾಗುವ ನಿರೀಕ್ಷೆಯಿದೆ. ಅಜನೀಶ್ ಲೋಕನಾಥ್ ಅವರ (Ajaneesh Loknath) ಹಿನ್ನೆಲೆ ಸಂಗೀತ ಇರೋದು ವಿಶೇಷ.
ಅತ್ಯಂತ ಶಕ್ತಿಶಾಲಿ 'ಮಾಸ್' ಪಾತ್ರ
ಟೀಸರಲ್ಲಿ ಕಾಡಿನಲ್ಲಿ ಆನೆಯೊಂದಿಗೆ ನಡೆಸುವ ಸಾಹಸ ದೃಶ್ಯಗಳಲ್ಲಿ ಯಾವುದೇ ಗ್ರಾಫಿಕ್ ಬಳಸದೆ, ನೈಜ ಆನೆಯೊಂದಿಗೆ ಚಿತ್ರೀಕರಿಸಲಾಗಿದೆ. 'ಕಟ್ಟಾಲನ್' ಚಿತ್ರ ಅಂಟ್ರಿ ವರ್ಗೀಸ್ ಅವರ ವೃತ್ತಿಜೀವನದ ಅತ್ಯಂತ ಶಕ್ತಿಶಾಲಿ 'ಮಾಸ್' ಪಾತ್ರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕಟ್ಟಾಲನ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತು ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಇದನ್ನೂ ಓದಿ: Bigg Boss Kannada 12: ನಾನು ಶಿವಣ್ಣ ಅವರ ಕಾಲು ಧೂಳಿಗೂ ಸಮ ಇಲ್ಲ ಎಂದ ಗಿಲ್ಲಿ ನಟ!
ಟೀಸರ್ ಬಿಡುಗಡೆ ಬಳಿಕ "ಮಾರ್ಕೊ ನಂತರ ಮತ್ತೊಂದು ಬ್ಲಾಕ್‌ಬಸ್ಟರ್" ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ದುಶಾರ ವಿಜಯನ್, ತೆಲುಗು ನಟ ಸುನಿಲ್, ಕಬೀರ್ ದುಹಾನ್ ಸಿಂಗ್, ರಾಜ್ ತಿರಂದಾಸು, ಬಾಲಿವುಡ್‌ನ ಪಾರ್ಥ್ ತಿವಾರಿ ಮಲಯಾಳಂ ತಾರೆಯರು: ಜಗದೀಶ್, ಸಿದ್ದಿಕ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ.
ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ
ಕ್ಯೂಬ್ ಎಂಟಸ್ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಶರೀಫ್ ಮೊಹಮ್ಮದ್ ನಿರ್ಮಿಸಿರುವ ಈ ಚಿತ್ರ ಶೂಟಿಂಗ್ ಮುಗಿಯುವ ಮುನ್ನವೇ ಡಿಜಿಟಲ್ ಹಕ್ಕುಗಳಲ್ಲಿ ದಾಖಲೆ ಮೊತ್ತದ ವ್ಯವಹಾರ ಮಾಡಿದೆ.
ಖ್ಯಾತಿಯ ಅಂತರಾಷ್ಟ್ರೀಯ ಸ್ಟಂಟ್ ಕೋ-ಆರ್ಡಿನೇಟರ್ ಕೆಚಾ ಖಂಫಕ್ತಿ ನೇತೃತ್ವದಲ್ಲಿ ಥೈಲ್ಯಾಂಡ್‌ನಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.'ಕಾಂತಾರ' ಮತ್ತು 'ಮಹಾರಾಜ' ಖ್ಯಾತಿಯ ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್.
ಇದನ್ನೂ ಓದಿ: Bigg Boss Kannada 12: ಈ ಸ್ಪರ್ಧಿಗೆ ಹನುಮಂತ ಲಮಾಣಿ ಫುಲ್ ಸಪೋರ್ಟ್! ಮತ ಹಾಕುವಂತೆ ಮನವಿ ಮಾಡಿದ ಜವಾರಿ ಹುಡುಗ
ಪ್ಯಾನ್-ಇಂಡಿಯನ್ ಪ್ರಾಜೆಕ್ಟ್ ಆಗಿ ಪ್ರಸ್ತುತಪಡಿಸಲಾದ ಈ ಚಿತ್ರವು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಥಿಯೇಟರ್‌ಗಳಲ್ಲಿ ಬರಲಿದೆ.