ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಈ ಸ್ಪರ್ಧಿಗೆ ಹನುಮಂತ ಲಮಾಣಿ ಫುಲ್‌ ಸಪೋರ್ಟ್‌! ಮತ ಹಾಕುವಂತೆ ಮನವಿ ಮಾಡಿದ ಜವಾರಿ ಹುಡುಗ

Hanumanth Lamani : ಕಳೆದ ಸೀಸನ್‌ನಲ್ಲಿ ಹನುಮಂತ ಲಮಾಣಿ ಅವರು ವಿನ್ನರ್‌ ಆಗಿದ್ದರು. ಅವರು ದಾಖಲೆಯ 5.23 ಕೋಟಿ ಮತಗಳನ್ನು ಪಡೆದುಕೊಂಡಿದ್ದರು. ಇದು ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಸ್ಪರ್ಧಿಯೊಬ್ಬರು ಪಡೆದ ಅತಿ ಹೆಚ್ಚು ಮತಗಳ ದಾಖಲೆಯಾಗಿದೆ. ಕನ್ನಡ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದ್ದು, ಜನವರಿ 18 ರಂದು ಅದ್ಧೂರಿ ಸಮಾರಂಭ ನಡೆಯಲಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಟಾಪ್ 6 ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ.

ಈ ಸ್ಪರ್ಧಿಗೆ  ಹನುಮಂತ ಲಮಾಣಿ ಫುಲ್‌ ಸಪೋರ್ಟ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 17, 2026 8:08 AM

ಕಳೆದ ಸೀಸನ್‌ನಲ್ಲಿ ಹನುಮಂತ ಲಮಾಣಿ (hanumanth lamani) ಅವರು ವಿನ್ನರ್‌ (Winner) ಆಗಿದ್ದರು. ಅವರು ದಾಖಲೆಯ 5.23 ಕೋಟಿ ಮತಗಳನ್ನು ಪಡೆದುಕೊಂಡಿದ್ದರು. ಇದು ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಸ್ಪರ್ಧಿಯೊಬ್ಬರು ಪಡೆದ ಅತಿ ಹೆಚ್ಚು ಮತಗಳ ದಾಖಲೆಯಾಗಿದೆ. ಕನ್ನಡ 12ರ ಫಿನಾಲೆಗೆ (Kannada Bigg Boss Finale) ದಿನಗಣನೆ ಆರಂಭವಾಗಿದ್ದು, ಜನವರಿ 18 ರಂದು ಅದ್ಧೂರಿ ಸಮಾರಂಭ ನಡೆಯಲಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಟಾಪ್ 6 ಫೈನಲಿಸ್ಟ್‌ಗಳಾಗಿ (Finalist) ಹೊರಹೊಮ್ಮಿದ್ದಾರೆ. ಇದೀಗ ಹನುಮಂತ ಯಾವ ಸ್ಪರ್ಧಿಗೆ ಸಪೋರ್ಟ್ ಮಾಡುತ್ತಿದ್ದಾರೆ ಗೊತ್ತಾ?

ವೈಲ್ಡ್‌ ಕಾರ್ಡ್‌ ಸ್ಪರ್ಧಿಯೂ ಸಹ ಗೆಲ್ಲಬಹುದು ಎಂದು ಸಾಭೀತು ಪಡಿಸುವ ಮೂಲಕ ಬಿಗ್‌ ಬಾಸ್‌ ಇತಿಹಾಸದಲ್ಲಿ ಹೊಸ ದಾಖಲೆ ಕ್ರಿಯೇಟ್‌ ಮಾಡಿದ್ದರು.

ಇದನ್ನೂ ಓದಿ: Bigg Boss Kannada 12: ಫಿನಾಲೆ ದಿನ ಬನಿಯನ್ ಧರಿಸಿ ಬರ್ತಾರಾ ಗಿಲ್ಲಿ ನಟ? ಕಾವ್ಯಾ, ರಕ್ಷಿತಾ ಕಾಸ್ಟ್ಯೂಮ್ಸ್ ಹೇಗಿವೆ?

ವಿಡಿಯೋ ವೈರಲ್‌

ಕಾರ್ಯಕ್ರಮಕ್ಕೆ ಬಂದಿದ್ದ ಹನುಮಂತ ಲಮಾಣಿ ಎಲ್ಲರೂ ಬಿಗ್ ಬಾಸ್ ನೋಡ್ತಿದ್ದೀರೋ, ಇಲ್ವೋ? ನಿಮ್ಮ ವೋಟು ಯಾರಿಗೆ?’’ ಎಂದು ವೇದಿಕೆ ಮೇಲೆಯೇ ಕೇಳಿದ್ದಾರೆ. ಆಗ ಆಡಿಯೆನ್ಸ್ ಕಡೆಯಿಂದ ಗಿಲ್ಲಿ ಎಂದು ಜೋರಾಗಿ ಕೂಗಿದ್ದಾರೆ. ಹನುಮಂತ ಲಮಾಣಿ ಥಂಬ್ಸ್ ಅಪ್‌ ಮಾಡಿದ್ದಾರೆ. ಇದರಿಂದ ಗಿಲ್ಲಿ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ.



ಎಲ್ಲೆಲ್ಲೂ ಗಿಲ್ಲಿ ಹವಾ

ರನ್ನರ್ ಅಪ್ ಆಗಿದ್ದ ತ್ರಿವಿಕ್ರಮ್ ಅವರು ಸುಮಾರು 2.53 ಕೋಟಿ ಮತಗಳನ್ನು ಪಡೆದಿದ್ದರು. ಸದ್ಯದ ಕ್ರೇಜ್‌ ನೋಡಿದರೆ, ಹನುಮಂತು ದಾಖಲೆಯನ್ನು ಗಿಲ್ಲಿ ನಟ ಬ್ರೇಕ್‌ ಮಾಡುವ ಸಾಧ್ಯತೆಗಳಿವೆ.

ಕೊನೇ ಕ್ಷಣದಲ್ಲಿ ಗೆಲುವು ಯಾರಿಗೆ ಸಿಗಬಹುದು ಎಂಬ ಕುತೂಹಲವಂತೂ ಇದೆ. ಗಿಲ್ಲಿ ಅವರ ಭಾವಚಿತ್ರವನ್ನು ಅನೇಕರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಗಿಲ್ಲಿ ಅವರೇ ಈ ಬಾರಿ ಟ್ರೋಫಿ ಗೆಲ್ಲುತ್ತಾರೆ ಎಂಬುದು ಅಭಿಮಾನಿಗಳ ನಂಬಿಕೆ.

ಪ್ರೆಸ್‌ಮೀಟ್‌ವೊಂದರಲ್ಲಿ ಮಾತನಾಡುತ್ತಾ ಶಿವಣ್ಣ, ಗಿಲ್ಲಿಗೆ ವಿಶ್ ಮಾಡಿದ್ದಾರೆ. 100% ಗಿಲ್ಲಿನೇ ಗೆಲ್ಲೋದು ಅಂತ ಅಂದಿದ್ದಾರೆ. ತುಂಬಾ ಓಪನ್‌ ಆಗಿ ಮಾತಾಡ್ತಾನೆ, ಎಲ್ಲೂ ಫೇಕ್‌ ಇಲ್ಲ, ಗುಡ್‌ ಹಾರ್ಟ್‌ ಇದೆ ಅಂತ ಶಿವಣ್ಣ ಕೂಡ ಹೇಳಿದ್ದಾರೆ. ಗಿಲ್ಲಿ ನಟ ಅವರು `ಬಿಗ್ ಬಾಸ್ ಕನ್ನಡ ಸೀಸನ್ 12′ ಫಿನಾಲೆ ತಲುಪಿದ್ದಾರೆ. ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ದೊಡ್ಡದು. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ಕೂಡ ಗಿಲ್ಲಿ ನಟ ಎಂದರೆ ಇಷ್ಟ. ಈಗ ಶಿವರಾಜ್‌ಕುಮಾರ್ ಕೂಡಾ ಗಿಲ್ಲಿಯ ಆಟಕ್ಕೆ ಮನಸೋತಿದ್ದಾರೆ.

ಗ್ರ್ಯಾಂಡ್‌ ಫಿನಾಲೆ ನಾಳೆ ಸಂಜೆ 6 ಗಂಟೆಗೆ

ಬಿಗ್‌ ಬಾಸ್‌ ಪ್ರಿ ಫಿನಾಲೆ ಇಂದು 9ಗಂಟೆಗೆ, ಗ್ರ್ಯಾಂಡ್‌ ಫಿನಾಲೆ ನಾಳೆ ಸಂಜೆ 6 ಗಂಟೆಗೆ ಎಂದಿದೆ ವಾಹಿನಿ.ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಟಾಪ್ 6 ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: Bigg Boss Kannada 12: ಇಂದು 'Pre Finaleʼ, ನಾಳೆ ಗ್ರ್ಯಾಂಡ್‌ ಫಿನಾಲೆ; ಸುದೀಪ್‌ ಅಭಿಮಾನಿಗಳ ಬೇಸರಕ್ಕೆ ಕಾರಣ ಏನು?

ಇವರೆಲ್ಲರೂ ಫೈನಲಿಸ್ಟ್ ಆಗಿದ್ದು, ಇವರಲ್ಲಿ ಯಾರಿಗೆ ಜಾಸ್ತಿ ವೋಟ್‌ ಬರಲಿದೆಯೋ, ಅವರೇ ಈ ಸೀಸನ್‌ನ ವಿನ್ನರ್. ಈಗಾಗಲೇ ವೋಟಿಂಗ್‌ ಲೈನ್ಸ್‌ ಓಪನ್‌ ಆಗಿದ್ದು, ಬಿಗ್‌ ಬಾಸ್‌ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್‌ ಮಾಡುತ್ತಿದ್ದಾರೆ.