ಆರ್ಯವರ್ಧನ್ ಗುರೂಜಿ (aryavardhan guruji) ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ಆಗಾಗ ವಿವಾದಾತ್ಮಕ ಹೇಳಿಕೆ ನೀಡಿ, ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇದೀಗ ಮತ್ತೆ ಅದೇ ಆಗಿದೆ. ಸುದೀಪ್ (Sudeep) ಮತ್ತು ಬಿಗ್ ಬಾಸ್ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆ ಕೇಳಿದ್ದಾರೆ. ಸುದೀಪ್ ಮತ್ತು ಅವರ ಅಭಿಮಾನಿಗಳಿಗೆ (Fans) ಆರ್ಯವರ್ಧನ್ ಗುರೂಜಿ ಒಂದು ಮನವಿ ಮಾಡಿದ್ದಾರೆ.
ಸುದೀಪ್ ಎಗರಾಡುತ್ತಿದ್ದಾರೆ
ಬಿಗ್‌ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿ ಕೂಡ ಆಗಿದ್ದ ಆರ್ಯವರ್ಧನ್ ಈ ಹಿಂದೆ ಕೂಡ ಇದೇ ರೀತಿ ಮಾತನಾಡಿದ್ದರು. ಬಿಗ್‌ಬಾಸ್ ಮನೆಯಲ್ಲಿ ಸುದೀಪ್ ಚಪ್ಪಾಳೆ ಬಗ್ಗೆ ಕಮೆಂಟ್ ಮಾಡಿದ್ದರು. ಬಳಿಕ ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ್ದರು. ಇದೀಗ ಮತ್ತೆ ಸುದೀಪ್ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಬೇಕಾಬಿಟ್ಟಿ ಮಾತನಾಡಿದ್ದಾರೆ. ʻʻದರ್ಶನ್ ಹೋದ್ಮೇಲೆ ಸುದೀಪ್ ಎಗರಾಡುತ್ತಿದ್ದಾರೆ. "ಪ್ಯಾಂಟ್ ಬಿಚ್ಚಿ ತೋರಿಸ್ಲಾ ಅಂತಾರೆ, ಮಾಧ್ಯಮಗಳಲ್ಲಿ ನಾನೇ ನೋಡಿದ್ದೀನಿ ಅಂತ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸುದೀಪ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಥರ ನೂರು ಶತ್ರು ಇದ್ದರೂ ಓಕೆ, ರಘು ಥರ ಒಬ್ಬ ಸ್ನೇಹಿತನೂ ಬೇಡ; ಗಿಲ್ಲಿ ಫ್ಯಾನ್ಸ್ ಬೇಸರ
ಹೃದಯಪೂರ್ವಕವಾಗಿ ಕ್ಷಮೆ
ಈಗ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ. "ಸುದೀಪ್ ಸರ್‌ಗೆ ಹೃದಯಪೂರ್ವಕ ನಮಸ್ಕಾರ. ನಾನು ಅವರೊಟ್ಟಿಗೆ ಕೆಲಸ ಮಾಡಿದ್ದೀನಿ. ಒಳ್ಳೆದಾಗಲಿ, ಹೊಸ ವರ್ಷ ಅವರಿಗೆ, ಅವ್ರ ಅಭಿಮಾನಿಗಳಿಗೆ ಚೆನ್ನಾಗಿರಲಿ. ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಭರದಲ್ಲಿ ಏನೋ ಮಾತನಾಡಿಬಿಟ್ಟೆ. ಅದರಿಂದ ಸುದೀಪ್ ಸರ್‌ಗೆ ಹಾಗೂ ಅವ್ರ ಅಭಿಮಾನಿಗಳ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳ್ತೀನಿ. ಹೃದಯಪೂರ್ವಕವಾಗಿ ಕ್ಷಮೆ ಕೇಳಿದ್ದೀನಿ. ನನಗೂ ಅವ್ರ ಮೇಲೆ ಬಹಳ ಗೌರವ ಇದೆ.. ಸಾರಿ ಸಾರಿ ಸಾರಿ ಎಂದಿದ್ದಾರೆ.
ಬಿಗ್ ಬಾಸ್ನಿಂದ ಹೊರ ಬಂದ ಅವರು ಅನೇಕ ಬಾರಿ ಶೋ ವಿರುದ್ಧ ಹಾಗು ಸುದೀಪ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ಇದೆ. ಸ್ಪರ್ಧಿ ಆಗಿದ್ದಾಗ ಆ ಶೋ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು. ‘ಅನುಪಮಾ ಗೌಡ ಅವರನ್ನು ಉಳಿಸಲು ನೀವು ಪ್ರಯತ್ನಿಸುತ್ತಿದ್ದೀರಿ’ ಎಂದು ಸುದೀಪ್ ಎದುರೇ ಹೇಳಿದ್ದರು.