ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಅಶ್ವಿನಿ ಥರ ನೂರು ಶತ್ರು ಇದ್ದರೂ ಓಕೆ, ರಘು ಥರ ಒಬ್ಬ ಸ್ನೇಹಿತನೂ ಬೇಡ; ಗಿಲ್ಲಿ ಫ್ಯಾನ್ಸ್‌ ಬೇಸರ

Gilli Nata Raghu: ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಧ್ರುವಂತ್‌ ಕಳಪೆ ಪಟ್ಟ ಪಡೆದುಕೊಂಡರೆ, ರಕ್ಷಿತಾ ಹಾಗೂ ಧನುಷ್‌ ಉತ್ತಮ ಪಡೆದುಕೊಂಡರು. ಬಿಗ್‌ ಬಾಸ್‌ ಮನೆಯ ಈ ಸಲದ ಕೊನೆಯ ಕ್ಯಾಪ್ಟನ್‌ ಆಗಿ ಧನುಷ್‌ ಅವರು ಆಯ್ಕೆ ಆಗಿದ್ದಾರೆ.ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ರೂಲ್ಸ್‌ ಬ್ರೇಕ್‌ ಆಗಿದ್ದರೂ, ಸ್ಪರ್ಧಿಗಳ ನಿರ್ಧಾರ ಮತ್ತು ಬೆಂಬಲದಿಂದಾಗಿ ಧನುಷ್‌ ಗೆಲ್ಲುವಂತೆ ಆಯಿತು. ಇದರಿಂದಾಗಿ ಅಶ್ವಿನಿಗೆ ತೀವ್ರ ಬೇಸರ ಉಂಟಾಯಿತು. ಇದೆಲ್ಲ ಒಂದು ಕಡೆ ಆದ್ರೆ, ಕಳಪೆ ವಿಚಾರದಲ್ಲಿ ರಘು ಕೊಟ್ಟ ಕಾರಣ ಗಿಲ್ಲಿ ಫ್ಯಾನ್ಸ್‌ಗೆ ಬೇಸರ ಉಂಟು ಮಾಡಿದೆ.

Bigg Boss Kannada: ರಘು ಬಗ್ಗೆ ಗಿಲ್ಲಿ ಫ್ಯಾನ್ಸ್‌ ಬೇಸರ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 3, 2026 10:09 AM

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಈ ವಾರ ಧ್ರುವಂತ್‌ (Dhruvanth) ಕಳಪೆ ಪಟ್ಟ ಪಡೆದುಕೊಂಡರೆ, ರಕ್ಷಿತಾ ಹಾಗೂ ಧನುಷ್‌ ಉತ್ತಮ ಪಡೆದುಕೊಂಡರು. ಬಿಗ್‌ ಬಾಸ್‌ ಮನೆಯ ಈ ಸಲದ ಕೊನೆಯ ಕ್ಯಾಪ್ಟನ್‌ ಆಗಿ ಧನುಷ್‌ ಅವರು ಆಯ್ಕೆ ಆಗಿದ್ದಾರೆ.ಕ್ಯಾಪ್ಟನ್ಸಿ (Captaincy) ಟಾಸ್ಕ್‌ನಲ್ಲಿ ರೂಲ್ಸ್‌ ಬ್ರೇಕ್‌ ಆಗಿದ್ದರೂ, ಸ್ಪರ್ಧಿಗಳ ನಿರ್ಧಾರ ಮತ್ತು ಬೆಂಬಲದಿಂದಾಗಿ ಧನುಷ್‌ ಗೆಲ್ಲುವಂತೆ ಆಯಿತು. ಇದರಿಂದಾಗಿ ಅಶ್ವಿನಿಗೆ (Ashwini Gowda) ತೀವ್ರ ಬೇಸರ ಉಂಟಾಯಿತು. ಇದೆಲ್ಲ ಒಂದು ಕಡೆ ಆದ್ರೆ, ಕಳಪೆ ವಿಚಾರದಲ್ಲಿ ರಘು (Raghu) ಕೊಟ್ಟ ಕಾರಣ ಗಿಲ್ಲಿ (Gilli Fans) ಫ್ಯಾನ್ಸ್‌ಗೆ ಬೇಸರ ಉಂಟು ಮಾಡಿದೆ.

ರಘು ಹೇಳಿದ್ದೇನು?

ಗಿಲ್ಲಿ ಅವರು ಯಾವುದೇ ಸಂದರ್ಭದಲ್ಲಿಯೂ ರಘು ಅವರನ್ನ ಮಾತ್ರ ಬಿಟ್ಟು ಕೊಡಲ್ಲ. ಈ ಹಿಂದೆ ಸುದೀಪ್‌ ಅವರ ಮುಂದೆಯೂ ರಘು ಅವರು ನನ್ನ ಬಿಟ್ಟರು ನಾನು ಅವರನ್ನ ಬಿಡಲ್ಲ. ಅವರು ನನ್ನ ಬೆಸ್ಟ್‌ ಫ್ರೆಂಡ್‌ ಅಂದಿದ್ದರು. ಆದರೀಗ ರಘು ಮತ್ತೆ ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ.

ಇದನ್ನೂ ಓದಿ: Bigg Boss Kannada 12: ನನಗೆ ಕ್ಯಾಪ್ಟನ್ಸಿ ಕೊಡ್ತೀನಿ ಎಂದು ಹೇಳಬಹುದಿತ್ತು! ಮನಸಾಕ್ಷಿ ಬಗ್ಗೆ ಅಶ್ವಿನಿ ಮಾತು; ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ

ರಘು ಕಾರಣ ಕೊಟ್ಟಿದ್ದು ಹೀಗೆ, ಮೊದಲು ಧನುಷ್‌ ಅವರಿಗೆ ಉತ್ತಮ ಕೊಟ್ಟರು. ಗಿಲ್ಲಿ ಬಗ್ಗೆ ಮಾತನಾಡಿ, ʻಗಿಲ್ಲಿ ಅವರು ಧ್ರುವಂತ್‌, ಅಶ್ವಿನಿ ಜಗಳ ನಾರ್ಮಲ್‌ ಆಗಿರಲ್ಲ. ಇರಿಟೇಶನ್‌ ಆಗುತ್ತೆ. ತುಂಬಾ ಪರ್ಸನಲ್‌ ಆಗತ್ತೆ. ಕ್ಯಾಪ್ಟನ್‌ ಆದವರು ಅದನ್ನ ನಿಲ್ಲಿಸಬೇಕಿತ್ತು.ಆದರೆ ಅವನು ಹಾಗೆ ಮಾಡಿಲ್ಲ. ಕ್ಯಾಪ್ಟನ್‌ ಕೂಡ ಅದೇ ಥರ ಬಿಹೇವ್‌ ಮಾಡಬಾರದು. ಸಮಾಧಾನ ಆಗೇ ಹೇಳಬೇಕಿತ್ತುʼ ಎಂದರು.



ಗಿಲ್ಲಿ ಕೂಡ ಈ ಬಗ್ಗೆ ಕೌಂಟರ್‌ ಕೊಟ್ಟರು. ಎಲ್ಲವನ್ನೂ ಅನ್ನಿಸಿಕೋಬೇಕಾ? ಅವರಿಗೆ ಕೂಡ ಕ್ಯಾಪ್ಟನ್‌ ಅನ್ನೋ ಗೌರವ ಬೇಕು. ನನ್ನನ್ನ ಪ್ರವೋಕ್‌ ಮಾಡ್ತಾ ಇದ್ದರೆ, ಕೇಳಿಸಿಕೊಂಡು ಸುಮ್ಮನೆ ಆಗಬೇಕಾ? ಅಥವಾ ಅನ್ನಿಸಿಕೊಂಡು ಸುಮ್ಮನೆ ಅಲ್ಲಿಂದ ಎದ್ದು ಹೋಗಬೇಕಾ? ಅಂತ ಕೇಳಿದ್ರು. ಅದಕ್ಕೆ ರಘು ಕೂಡ ಅವರು ಮಾಡಿದ್ದು ಸರಿ ಇಲ್ಲ ಎಂದಿದ್ದಾರೆ. ಗಿಲ್ಲಿ ಸ್ಟಾಪ್‌ ಮಾಡು ಅಂದಾಗ, ನೀನು ಮುಗಿಸಿಲ್ಲ ಎಂದಿದ್ದಾರೆ ರಘು. ಅಷ್ಟೇ ಅಲ್ಲ ಗಿಲ್ಲಿ ಕೂಡ, ಇದೇ ಮಾತನ್ನು ಆ ಸಂದರ್ಭದಲ್ಲಿಯೇ ಹೇಳಿದ್ದರೆ ಖುಷಿ ಪಡುತ್ತಿದ್ದೆ ಎಂದಿದ್ದಾರೆ.

ಗಿಲ್ಲಿ ಫ್ಯಾನ್ಸ್‌ ಬೇಸರ

ಇದೀಗ ರಘು ಅವರು ಕೊಟ್ಟ ಕಾರಣಕ್ಕೆ ಬೇಸರ ಹೊರ ಹಾಕಿದ್ದಾರೆ ಗಿಲ್ಲಿ ಫ್ಯಾನ್ಸ್‌, ಈ ಹಿಂದೆಯೂ ಸಾಕಷ್ಟು ಬಾರಿ ರಘು ಅವರು ಗಿಲ್ಲಿಗೆ ಕಳಪೆ ಕೊಡ್ತಾ ಇದ್ದರು. ಇನ್ನು ಕಿಚನ್‌ ಹಾಲ್‌ನಲ್ಲಿ ರಘುಗೆ ಕಾವ್ಯ ಕೂಡ ಬುದ್ಧಿ ಮಾತು ಹೇಳಿದ್ದಾರೆ. ಮೂರು ಜನ ಜಗಳ ಮಾಡಿರುವಾಗ ಒಬ್ಬರ ಬಗ್ಗೆಯೇ ಹೇಳೋದು ತಪ್ಪು ಅಂತ ಗಿಲ್ಲಿಗೆ ಸಪೋರ್ಟ್‌ ಮಾಡಿದ್ದಾರೆ. ಆದರೂ ರಘು ಅವರು ಗಿಲ್ಲಿಯದ್ದೇ ತಪ್ಪು ಎಂದು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ತಾಕತ್ ಇದ್ದಿದ್ದಕ್ಕೆ ಕ್ಯಾಪ್ಟನ್‌ ಆದೆ, ನಿಮಗೆ ಯೋಗ್ಯತೆ ಇಲ್ಲ! ಅಶ್ವಿನಿ ಗೌಡ ವಿರುದ್ಧ ಗಿಲ್ಲಿ ಉಗ್ರಾವತಾರ

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದವರು ರಘು. ರಘು ಸಿಟ್ಟಲ್ಲಿದ್ದಾಗ ಸಮಾಧಾನ ಮಾಡಿದ್ದು ಗಿಲ್ಲಿ. ರಘು ಹಾಗೂ ಗಿಲ್ಲಿ ನಡುವಿನ ಸ್ನೇಹ, ಒಡನಾಟ ವೀಕ್ಷಕರಿಗೂ ಇಷ್ಟವಾಗಿತ್ತು. ‘ರಘು ಲವ್ಸ್ ಗಿಲ್ಲಿ’ ಕ್ಯಾರಿಕೇಚರ್‌ ಸಹ ವೈರಲ್ ಆಗಿತ್ತು. ಆದ್ರೀಗ ಗಿಲ್ಲಿ ವಿರುದ್ಧ ರಘು ಜಿದ್ದು ಸಾಧಿಸುತ್ತಲೇ ಇದ್ದಾರೆ.