ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯಾರಿಗೆ ಬೇಕು ಈ ಲೋಕ ಎನ್ನುತ್ತಿದ್ದಾರೆ ಆರ್ಯವರ್ಧನ್

ಯಾರಿಗೆ ಬೇಕು ಈ ಲೋಕ ಎನ್ನುತ್ತಿದ್ದಾರೆ ಆರ್ಯವರ್ಧನ್

ಯಾರಿಗೆ ಬೇಕು ಈ ಲೋಕ ಎನ್ನುತ್ತಿದ್ದಾರೆ ಆರ್ಯವರ್ಧನ್

-

Profile
Vishwavani News Nov 19, 2021 12:56 PM
image-f336bbe9-1f1e-4a84-8fb9-c3445c09f4e5.jpg
ಆರ್ಯವರ್ಧನ್ ನಾಯಕರಾಗಿ ಅಭಿನಯಿಸುತ್ತಿರುವ ಯಾರಿಗೆ ಬೇಕು ಈ ಲೋಕ ಚಿತ್ರದ - ಲುಕ್ ಪೋಸ್ಟರನ್ನು ನಟ ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿ ಶುಭ ಕೋರಿದರು. ಚಿತ್ರದ - ಲುಕ್ ಅನ್ನು ಚಿತ್ರತಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಸಮರ್ಪಿಸಿದೆ. ಆರ್ಯವರ್ಧನ್ ಅವರಿಗೆ ನಾಯಕಿಯರಾಗಿ ಪ್ರಿಯಾಂಕಾ ರಿವಾರಿ, ಪಾವನಿ ಹಾಗೂ ವರ್ಷಾ ನಟಿಸುತ್ತಿದ್ದಾರೆ. ರವಿ, ರಾಮು, ಶೋಭನ್ ಅಕ್ಷರ್ ಮುಂತಾದವರು ಈ ಚಿತ್ರದ ತಾರಾಬಳಗದ ಲ್ಲಿzರೆ. ತ್ರಿಕೋನಾ ಪ್ರೇಮಕಥೆಯ ಸುತ್ತ ಚಿತ್ರ ಸಾಗುತ್ತದೆ. ಪ್ರೀತಿಸಿದ ಯುವತಿ ಕೈಕೊಟ್ಟಾಗ ಪ್ರಿಯತಮ ಪಡುವ ಪಾಡು ಏನು ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಹಾಗಾಗಿಯೇ ಚಿತ್ರಕ್ಕೆ ಇದೇ ಶೀರ್ಷಿಕೆ ಇಡಲಾಗಿದೆ. ಎಂ.ರಮೇಶ್ ಹಾಗೂ ಗೋಪಿ ಜಂಟಿಯಾಗಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಬಿ.ಶ್ರೀನಿವಾಸ ರಾವ್ ಹಾಗೂ ರೋಶಿನಿ ನೌಡಿಯಲ್ ನಿರ್ಮಿಸುತ್ತಿದ್ದಾರೆ. ಮಹಿತ್ ನಾರಾಯಣ್ ಸಂಗೀತ ನೀಡಿರುವ ಈ ಚಿತ್ರಕ್ಕೆ ವಸಂತ್ ಹಿನ್ನೆಲೆ ಸಂಗೀತ ನೀಡು ತ್ತಿದ್ದಾರೆ. ಎ.ಕೆ.ಆನಂದ್ ಛಾಯಾಗ್ರಹಣ, ಶ್ರೀನಿವಾಸ್.ಪಿ.ಬಾಬು ಸಂಕಲನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಯಾರಿಗೆ ಬೇಕು ಈ ಲೋಕ ಚಿತ್ರಕ್ಕಿದೆ. ನಟನೆಗೆ ಮರಳಿದ ವಿನೋದ್ ರಾಜ್: ಹಿರಿಯ ನಟ ವಿನೋದ್ ರಾಜ್ ಈ ಚಿತ್ರದ ಮೂಲಕ ಮತ್ತೆ ನಟನೆಗೆ ಮರಳಿದ್ದಾರೆ. ಕಾರಣಾಂತರಗಳಿಂದ ಹಲವು ದಿನಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ವಿನೋದ್ ರಾಜ್, ಯಾರಿಗೆ ಬೇಕು ಈ ಲೋಕ ಚಿತ್ರದ ಮೂಲಕ ಮತ್ತೆ ಬಣ್ಣಹಚ್ಚುತ್ತಿದ್ದಾರೆ. ವಿನೋದ್ ರಾಜ್ ಮತ್ತೆ ಚಿತ್ರರಂಗಕ್ಕೆ ಮರಳಿರುವುದು ಸಂತಸತಂದಿದೆ. ಈ ಚಿತ್ರ ದಲ್ಲಿ ವಿಶೇಷ ಪಾತ್ರವೊಂದರಲ್ಲಿ ವಿನೋದ್ ರಾಜ್ ಕಾಣಿಸಿಕೊಳ್ಳುತ್ತಿದ್ದು ಅವರ ಪಾತ್ರ ಏನು ಎಂಬುದನ್ನು ಚಿತ್ರತಂಡ ಬಹಿರಂಗ ಪಡಿಸಿಲ್ಲ.