ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith Bigg Boss: ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ರಂಜಿತ್: ಹುಡುಗಿ ಯಾರು ನೋಡಿ

ನಟ ರಂಜಿತ್ ಹಾಗೂ ಮಾನಸಾ ಗೌಡ ಅವರ ನಿಶ್ಚಿತಾರ್ಥಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಆಗಮಿಸಿದ್ದರು. ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ, ಅನುಷಾ ರೈ ಹಾಗೂ ಭವ್ಯಾ ಗೌಡ ಬಂದಿದ್ದರು. ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಇವರು ಶುಭಹಾರೈಸಿದ್ದಾರೆ.

ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ರಂಜಿತ್

Ranjith Engagment

Profile Vinay Bhat Mar 7, 2025 4:03 PM

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಬಿಗ್ ​ಬಾಸ್ ಕನ್ನಡ​ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್​ ಕುಮಾರ್​ ಅವರು ಇದೀಗ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾರ್ಚ್ 06 ಗುರುವಾದಂದು ತಾನು ಪ್ರೀತಿಸಿದ ಹುಡುಗಿಯ ಜೊತೆ ಎಂಗೇಜ್ ಆಗಿದ್ದಾರೆ. ರಂಜಿತ್ ಅವರು ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯ ಹೆಸರು ಮಾನಸ ಗೌಡ ಆಗಿದ್ದು, ಇವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಬಂಗಾರದ ಬಣ್ಣದ ಉಡುಗೆಯಲ್ಲಿ ಇವರಿಬ್ಬರು ಮಿಂಚಿದ್ದು, ಎಂಗೇಜ್ಮೆಂಟ್ ಫೋಟೋ ಭರ್ಜರಿ ವೈರಲ್ ಆಗುತ್ತಿದೆ.

ರಂಜಿತ್​ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋಗಳನ್ನು ತಮ್ಮ ಸಾಮಾಜಿಕ​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟ ರಂಜಿತ್​ ಹಾಗೂ ಮಾನಸಾ ಗೌಡ ಅವರ ನಿಶ್ಚಿತಾರ್ಥಕ್ಕೆ ಬಿಗ್ ​ಬಾಸ್​ ಸ್ಪರ್ಧಿಗಳು ಕೂಡ ಆಗಮಿಸಿದ್ದರು. ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ, ಶಿಶಿರ್ ಶಾಸ್ತ್ರಿ, ಅನುಷಾ ರೈ ಹಾಗೂ ಭವ್ಯಾ ಗೌಡ ಬಂದಿದ್ದರು. ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಇವರು ಶುಭಹಾರೈಸಿದ್ದಾರೆ.

ಮಾನಸಾ ಗೌಡ ಅವರು ಫ್ಯಾಷನ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಾಡೆಲ್‌ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇವರದ್ದೇ ಆದ ಬ್ಯೂಟಿಕ್‌ ಕೂಡ ಇದೆ. ಒಟ್ಟಿನಲ್ಲಿ ಇವರು ಉದ್ಯಮಿ ಕೂಡ ಹೌದು. ಮಾನಸ ಗೌಡ, ದಿ ಫ್ಯಾಷನ್‌ ಸ್ಟೇಟ್‌ಮೆಂಟ್‌ ಎಂಬ ಹೆಸರಿನ ಫ್ಯಾಷನ್‌ ಸ್ಟುಡಿಯೋ ನಡೆಸುತ್ತಿದ್ದಾರೆ. ಫಾರೆವರ್‌ ಮಿಸ್ಟರ್‌ & ಮಿಸಸ್ ಎಂದು ಬರೆದು ಇವರಿಬ್ಬರು ತಮ್ಮ ನಿಶ್ಚಿತಾರ್ಥದ ಫೋಟೋಸ್ ಅಪ್ಲೋಡ್ ಮಾಡಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ 11ರ ಕಂಟೆಸ್ಟೆಂಟ್‌ ಮತ್ತು ನಟ ರಂಜಿತ್‌ ದೊಡ್ಮನೆಯಲ್ಲಿ ನಡೆದ ಜಗಳದಿಂದಾಗಿ 3ನೇ ವಾರಕ್ಕೆ ಮನೆಯಿಂದ ಹೊರ ಬಂದಿದ್ದರು. ಟಫ್‌ ಕಂಟೆಸ್ಟೆಂಟ್‌ಗಳ ಲಿಸ್ಟ್‌ನಲ್ಲಿ ರಂಜಿತ್‌ ಕೂಡ ಒಬ್ಬರಾಗಿ ಚೆನ್ನಾಗಿ ಆಟ ಆಡುತ್ತಿದ್ದರು. ಆದರೆ ಅವರು ಮನೆಯಿಂದ ಹೊರಗೆ ಬರಲೇ ಬೇಕಾದ ಸಂದರ್ಭ ಸೃಷ್ಟಿಯಾಗಿತ್ತು. ಕಿರುತೆರೆಯಲ್ಲಿ ಶನಿ ಧಾರಾವಾಹಿಯಲ್ಲಿ ಸೂರ್ಯ ದೇವನ ಪಾತ್ರದಲ್ಲಿ ನಟಿಸಿ ರಂಜಿತ್‌ ಕನ್ನಡ ಸೀರಿಯಲ್ ಪ್ರೇಮಿಗಳ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದರು. ಆ ಬಳಿಕ ಸೀತಾ ರಾಮ ಕಲ್ಯಾಣ, ಭರಾಟೆ, ಶಿವಾರ್ಜುನ, ಜೇಮ್ಸ್‌ ಮುಂತಾದ ಸಿನಿಮಾಗಳಲ್ಲಿಯೂ ರಂಜಿತ್‌ ನಟಿಸಿದ್ದಾರೆ.

Bhagya Lakshmi Serial: ಕೊಟ್ಟ ಮಾತಿಗೆ ತಪ್ಪದ ಭಾಗ್ಯಾ: ತಾಂಡವ್ ಬಡಾಯಿ ಬಂದ್!