ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕೊಟ್ಟ ಮಾತಿಗೆ ತಪ್ಪದ ಭಾಗ್ಯಾ: ತಾಂಡವ್ ಬಡಾಯಿ ಬಂದ್!

ಭಾಗ್ಯ ಮತ್ತೊಮ್ಮೆ ಗೆಲುವಿನ ನಗೆ ಬೀರುತ್ತಾಳೆ. ಮನೆ ಸೀಝ್ ಆಗುತ್ತೆ, ನೀವೆಲ್ಲ ಬೀದಿಗೆ ಬರುತ್ತೀರಿ ಎಂದು ಅರಚುತ್ತಿದ್ದ ತಾಂಡವ್ ಮತ್ತೊಮ್ಮೆ ಎಲ್ಲರೆದುರು ಮುಖಭಂಗ ಅನುಭವಿಸುತ್ತಾನೆ. ಸದ್ಯ ಭಾಗ್ಯಾ ಮನೆಯ ಲೋನ್ ಕಟ್ಟಲು ಕಡಿಮೆ ಇದ್ದ ಎಂಟು ಸಾವಿರನ್ನು ಹೇಗೆ ಅಡ್ಜಸ್ಟ್ ಮಾಡಿದಳು?, ಭಾಗ್ಯಾಳ ಮುಂದಿನ ನಡೆ ಏನು? ಎಂಬುದು ನೋಡಬೇಕಿದೆ.

ಕೊಟ್ಟ ಮಾತಿಗೆ ತಪ್ಪದ ಭಾಗ್ಯಾ: ತಾಂಡವ್ ಬಡಾಯಿ ಬಂದ್!

Bhagya Lakshmi Serial

Profile Vinay Bhat Mar 7, 2025 12:54 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾಗೆ ಸಿಕ್ಕ ಒಂದು ದಿನದ ಕೆಲಸ ದೊಡ್ಡ ಸಹಾಯ ಮಾಡಿದೆ. ದೇವಸ್ಥಾನದಲ್ಲಿ 250 ಮಂದಿಗೆ ಅಡುಗೆ ಮಾಡುವ ಜವಾಬ್ದಾರಿ ಭಾಗ್ಯಾಗೆ ಸಿಕ್ಕಿತ್ತು. ಇದರಿಂದ ಹಣ ಪಡೆದು ಮನೆಯ ಲೋನ್ ಕಟ್ಟಲು ಭಾಗ್ಯಾ ಎಲ್ಲಿಲ್ಲದ ಕಷ್ಟ ಪಡುತ್ತಿದ್ದಳು. ಇದಕ್ಕೆ ಕೆಲ ಅಡ್ಡಿ ಬಂದರೂ ಅದನ್ನು ದಾಟಿ ಕೊನೆಗೂ ಸರಿಯಾದ ಸಮಯಕ್ಕೆ ಕೊಟ್ಟ ಮಾತಿನಂತೆ ಭಾಗ್ಯಾ ಲೋನ್ ತಟ್ಟಿ ತೀರಿಸಿದ್ದಾಳೆ. ಅತ್ತ ತಾಂಡವ್​ಗೆ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದೆ. ಭಾಗ್ಯಾಳನ್ನು ಸೋಲಿಸಬೇಕು ಎಂದು ಮಾಡಿದ್ದ ತಾಂಡವ್-ಶ್ರೇಷ್ಠಾ ಪ್ಲ್ಯಾನ್ ಮತ್ತೊಮ್ಮೆ ನೆಲಕಚ್ಚಿದೆ.

ಮನೆಯ ಲೋನ್ ತೀರಿಸಲು ಇಂದು ಕೊನೆಯ ದಿನವಾಗಿತ್ತು. ಭಾಗ್ಯಾ ಹೇಗಾದರು ಮಾಡಿ 40,000 ರೂಪಾಯಿ ಅರೆಂಜ್ ಮಾಡಬೇಕಿತ್ತು. ದೇವಸ್ಥಾನಕ್ಕೆ ತೆರಳಿದಾಗ ಅಲ್ಲಿಯ ಪುರೋಹಿತರ ಸಹಾಯದಿಂದ 250 ಜನರಿಗೆ ಅಡುಗೆ ಮಾಡುವ ಕೆಲಸ ಸಿಗುತ್ತದೆ. ಇದಕ್ಕಾಗಿ ಭಾಗ್ಯಾ ಅತ್ತೆ ಕುಸುಮಾ ಹಾಗೂ ತಂಗಿಯನ್ನು ಕರೆಸಿಕೊಳ್ಳುತ್ತಾಳೆ. ಆದರೆ, ಅಡುಗೆ ಮಾಡುವಾಗ ಕುಸುಮಾ ಕೈಯಿಂದ ಪಾತ್ರೆ ಜಾರಿ ಬಿಸಿ ನೀರು ಎಲ್ಲ ಕಾಲಿಗೆ ಚೆಲ್ಲುತ್ತದೆ. ಭಾಗ್ಯ ಕೂಡಲೇ, ಪೂಜಾ ಜೊತೆ ಕುಸುಮಾಳನ್ನು ಆಸ್ಪತ್ರೆಗೆ ಕಳುಹಿಸಿದ್ದಾಳೆ. ಅತ್ತ ಭಾಗ್ಯ ಒಬ್ಬಳೇ ಅಡುಗೆ ಮಾಡಲು ಕಷ್ಟ ಪಡುತ್ತಿರುತ್ತಾಳೆ. ಆಗ ಕಲರ್ಸ್ ಕನ್ನಡದ ಇತರೆ ಧಾರಾವಾಹಿಯ ನಾಯಕಿಯರೆಲ್ಲ ಇಲ್ಲಿ ಭಾಗ್ಯಾಗೆ ಸಹಾಯ ಮಾಡಲು ಬಂದು ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಕೊಡುತ್ತಾರೆ. ಅತಿಥಿಗಳಿಗೆ ತಾವೇ ಮುಂದೆ ನಿಂತು ರುಚಿಯಾದ ಊಟ ಬಡಿಸುತ್ತಾರೆ. ಎಲ್ಲರೂ ಭಾಗ್ಯ ಅಡುಗೆಯನ್ನು ಹೊಗಳಿ, ಭರ್ಜರಿಯಾಗಿ ಊಟ ಮಾಡುತ್ತಾರೆ.

ಅತ್ತ ಭಾಗ್ಯ ಸೋಲುವುದನ್ನು ನೋಡಬೇಕು ಎಂದು ಮನೆಗೆ ಬಂದಿದ್ದ ತಾಂಡವ್ ಮತ್ತು ಶ್ರೇಷ್ಠಾ, ಭಾಗ್ಯ ನಿಮಗೆ ಹಣ ತಂದು ಕೊಡುವುದಿಲ್ಲ, ಮನೆಯನ್ನು ಜಪ್ತಿ ಮಾಡಿ, ನಿಮ್ಮ ಕೆಲಸ ಶುರು ಮಾಡಿ, ಅವಳಿಂದ ಈ ಮನೆ ಉಳಿಸಿಕೊಳ್ಳಲು ಸಾಧ್ಯವಿಲ್ಲ, ನಾನಂತೂ ಯಾವುದೇ ಸಹಾಯ ಮಾಡುವುದಿಲ್ಲ ಎಂದು ಹೇಳುತ್ತಾನೆ. ಅಷ್ಟರಲ್ಲಿ ಭಾಗ್ಯಗೆ ಬ್ಯಾಂಕ್ ಅಧಿಕಾರಿಗಳು ಫೋನ್ ಮಾಡುತ್ತಾರೆ, ಇನ್ನೇನು ಅರ್ಧ ಗಂಟೆಯಲ್ಲೇ ಅಲ್ಲಿಗೆ ಬರುತ್ತೇನೆ, ದಯವಿಟ್ಟು ಕಾಯಿರಿ ಎಂದು ಭಾಗ್ಯ ಹೇಳುತ್ತಾಳೆ. ಅದರಂತೆ ಬ್ಯಾಂಕ್ ಅಧಿಕಾರಿಗಳು ಕಾಯುತ್ತಿರುತ್ತಾರೆ.

ಭಾಗ್ಯಾ ತನ್ನ ತಂಗಿಗೆ ಕಾಲ್ ಮಾಡಿ.. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿದೆ.. 50 ಸಾವಿರ ಅಂತ ಹೇಳಿದ್ದರು.. ಆದರೆ ಬರೀ 32 ಸಾವಿರ ಕೊಟ್ಟಿದ್ದಾರೆ ಅಷ್ಟೆ ಎಂದು ಹೇಳುತ್ತಾಳೆ.. ಸರಿಯಾದ ಸಮಯಕ್ಕೆ ದುಡ್ಡುಕೊಟ್ಟಿಲ್ಲ ಅಂದ್ರೆ ಎಲ್ಲರೂ ಬೀದಿಗೆ ಬೀಳುತ್ತಾರೆ ಎಂದು ಭಾಗ್ಯ ಅಂದುಕೊಳ್ಳುತ್ತಾಳೆ. ಅತ್ತ ನಮ್ಮ ಸಮಯ ಮುಗಿಯಿತು ಮನೆಯನ್ನು ಸೀಝ್ ಮಾಡೋಣ ಎಂದು ಅಧಿಕಾರಿಗಳು ಹೇಳುವಾಗ ಅಲ್ಲಿಗೆ ಭಾಗ್ಯಾ ಬರುತ್ತಾಳೆ. ದುಡ್ಡು ಬ್ಯಾಂಕಿನವರಿಗೆ ಕೊಟ್ಟಿದ್ದಾಳೆ. ಅವರು ಎಣಿಸಿ, ಹಣ ಸರಿ ಇದೆ, ಮನೆ ಜಪ್ತಿ ಮಾಡುವುದಿಲ್ಲ ಎನ್ನುತ್ತಾರೆ.



ಇಲ್ಲಿಗೆ ಭಾಗ್ಯ ಮತ್ತೊಮ್ಮೆ ಗೆಲುವಿನ ನಗೆ ಬೀರುತ್ತಾಳೆ. ಮನೆ ಸೀಝ್ ಆಗುತ್ತೆ, ನೀವೆಲ್ಲ ಬೀದಿಗೆ ಬರುತ್ತೀರಿ ಎಂದು ಅರಚುತ್ತಿದ್ದ ತಾಂಡವ್ ಮತ್ತೊಮ್ಮೆ ಎಲ್ಲರೆದುರು ಮುಖಭಂಗ ಅನುಭವಿಸುತ್ತಾನೆ. ಸದ್ಯ ಭಾಗ್ಯಾ ಮನೆಯ ಲೋನ್ ಕಟ್ಟಲು ಕಡಿಮೆ ಇದ್ದ ಎಂಟು ಸಾವಿರನ್ನು ಹೇಗೆ ಅಡ್ಜಸ್ಟ್ ಮಾಡಿದಳು?, ಭಾಗ್ಯಾಳ ಮುಂದಿನ ನಡೆ ಏನು?, ಅತ್ತ ತಾಂಡವ್-ಶ್ರೇಷ್ಠಾ​ ಹೊಸದಾಗಿ ಇನ್ನೇನು ಪ್ಲ್ಯಾನ್ ಮಾಡುತ್ತಾರೆ ಎಂಬುದು ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

Sanvi Sudeep: ಮೊದಲ ಬಾರಿ ತನ್ನ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ ಸಾನ್ವಿ ಸುದೀಪ್