ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಸ್ಪರ್ಧಿಗಳಿಗೆ ಅರ್ಹರಲ್ಲದ ಇಬ್ಬರು ವ್ಯಕ್ತಿಗಳಿಗೂ ಮಸಿ ಬಳೆಯುವ ಟಾಸ್ಕ್ ನೀಡಲಾಗಿತ್ತು. ಇನ್ನು ಈ ಟಾಸ್ಕ್‌ನಲ್ಲಿ ಎಲ್ಲ ಸ್ಪರ್ಧಿಗಳು ಖಡಕ್ ಆಗಿಯೇ ಕಾರಣವನ್ನು ನೀಡಿದ್ದರು. ಹೆಚ್ಚಾಗಿ ರಿಷಾ (Risha) ಅವರು ಮಸಿ ಬಳಿಸಿಕೊಂಡವರು. ಅದರಲ್ಲೂ ಅಶ್ವಿನಿ ಅವರು ಸಖತ್ ಖಾರವಾಗಿಯೇ ಉತ್ತರ ನೀಡಿದ್ದಾರೆ. ರಕ್ಷಿತಾ ಅವರನ್ನು ಆಯ್ಕೆ ಮಾಡಿ ಬೇಕಾ ಬಿಟ್ಟಿ ಮಾತನಾಡಿದ್ದಾರೆ ಅಶ್ವಿನಿ (Ashwini).
ರಕ್ಷಿತಾ ಮುಗ್ದೆ ಅಲ್ಲ
ಅಶ್ವಿನಿ ಮಾತನಾಡಿ, `ರಕ್ಷಿತಾ ಮುಗ್ದೆ ಅಲ್ಲ. ಡ್ರಾಮಾ ಕಂಪನಿಗೆ ಅಪ್ಪ ಅಲ್ಲ, ಮುತ್ತಾತ ಇವರು. ಅಷ್ಟು ಡ್ರಾಮಾ ಮಾಡಿಕೊಂಡು ಬಂದಿದ್ದಾರೆ. ಅಲ್ಲಿ ಹೋಗಿ ಅವರ ಕೈ ಹಿಡಿದುಕೊಳ್ಳುವುದು ಮಾಡ್ತಾರೆ. ನಾವು ಯಾರೂ 25ನೇ ವಯಸ್ಸಿಗೆ ಯಾರಿಗೂ ಅಂಟಿಕೊಂಡು ಮಕ್ಕಳ ಥರ ಆಡಲಿಲ್ಲ. ದಯವಿಟ್ಟು ಅದನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮಷ್ಟೇ ವಯಸ್ಸಿನವರು ಹೊರಗಡೆ ನೋಡುತ್ತಾರೆ.’ ಎಂದು ಅಶ್ವಿನಿ ಗೌಡ ಅವರು ಹೇಳಿದರು.
ಇದನ್ನೂ ಓದಿ: BBK 12: ಬಿಗ್‌ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಗೌಡ
ಯುಟ್ಯೂಬ್ ಚಾನೆಲ್ ಮಾಡಿದ ಹಾಗಲ್ಲ
ಹಾಗೇ ಸಿನಿಮಾ ಬಗ್ಗೆಯೂ ಪ್ರಸ್ತಾಪಿಸಿದರು. ನಾವು ಕಷ್ಟಗಳನ್ನು ನೋಡಿ ಬಂದಿದ್ದು. 100ಕ್ಕೂ ಹೆಚ್ಚು ಸಿನಿಮಾ ಮಾಡಿರುವೆ. ನಿಮ್ಮ ಹಾಗೇ ಯುಟ್ಯೂಬ್ ಚಾನೆಲ್ ಮಾಡಿ ಬಂದಿಲ್ಲ. ನಮ್ಮ ವ್ಯಕ್ತಿತ್ವವನ್ನು ಕಸದ ಬುಟ್ಟಿಗೆ ಹಾಕುವ ಯೋಗ್ಯತೆ ನಿನಗೆ ಇಲ್ಲ. ನಿನ್ನಂತಹ ಚಾನೆಲ್ ನಾನು 100 ಮಾಡಬಹುದು. ನನ್ನ ರೀತಿ ಸಿನಿಮಾ ಮಾಡಿಬಿಡು. ಇದು ನಿನಗೆ ಚಾಲೆಂಜ್ ಎಂದು ಅಬ್ಬರಿಸಿದ್ದಾರೆ.
ಜೈಲಿಗೆ ಹೋಗೋಕೆ ರೆಡಿ ಇರುವ ಹೆಣ್ಣು ನಾನು. ನಿನ್ನ ರೀತಿ ರೂಮ್ಗಳಲ್ಲಿ ಹೋಗಿ ಒಬ್ಬೊಬ್ಬರನ್ನೇ ಕೈ ಹಿಡಿದುಕೊಂಡು ಬಕೆಟ್ ಹಿಡಿಯೋ ಕೆಲಸ ನಾನು ಮಾಡ್ತಾ ಇಲ್ಲ ಎಂದು ಆರೋಪಿಸಿದ್ದಾರೆ.
ರಾಕ್ಷಸಿಗೆ ನಾನು ರಾಕ್ಷಸಿ
ಅಶ್ವಿನಿ ಗೌಡ ಅವರ ಮಾತಿಗೆ ರಕ್ಷಿತಾ ಶೆಟ್ಟಿ ಅವರು ಕೂಡ ಗರಂ ಆಗಿಯೇ ತಿರುಗೇಟು ನೀಡಿದರು. ‘ ಇವರ ಮಾತಿಗೆ ಹೆಚ್ಚೇನೂ ನಾನು ಹೇಳೋಲ್ಲ. ಮುಗ್ಧರಿಗೆ ನಾನು ಮುಗ್ಧೆ. ಆದರೆ ರಾಕ್ಷಸಿಗೆ ನಾನು ರಾಕ್ಷಸಿಯೇ ಆಗುತ್ತೇನೆ. ನಿಮ್ಮನ್ನು ಮನೆಗೆ ಕಳಿಸಿಯೇ ನಾನು ಹೋಗುತ್ತೇನೆ. ಇದು ನನ್ನ ಚಾಲೆಂಜ್’ ಎಂದು ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ.
ಇನ್ನು ಅಶ್ವಿನಿ ಅವರ ಈ ನಡವಳಿಕೆ ಬಗ್ಗೆ ನೆಟ್ಟಿಗರು ಕೂಡ ಕಮೆಂಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಕೇವಲ 24 ವರ್ಷಕ್ಕೆ ದೊಡ್ಮನೆ ವೇದಿಕೆ ಸಿಕ್ಕ ರಕ್ಷಿತಾಗೆ ಎಷ್ಟು ಅಹಂಕಾರ ಇರ್ಬೇಡ, ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ದೊಡ್ ವ್ಯಕ್ತಿ ಆಗ್ತಿರೋ ರಕ್ಷಿತಾ ಇನ್ನು ನಿನ್ ವಯಸ್ಸಿಗೆ ಬರುವಾಗ ಯಾವ ಲೆವೆಲ್ ಗೆ ಬೆಳಿಬಹುದು ಅನ್ನೋ ಅಂದಾಜು ಕೂಡ ಅಶ್ವಿನಿಗಿಲ್ಲ ಎಂದು ಕಮೆಂಟ್ ಮಾಡ್ತಿದ್ದಾರೆ.
ಇದನ್ನೂ ಓದಿ: ಮಾಧ್ಯಮಗಳ ಮುಂದೆ ಅಭಿಮಾನಿಯನ್ನು ಅವಮಾನಿಸಿದ ಇಳಯರಾಜ ಸಹೋದರ; ನೆಟ್ಟಿಗರಿಂದ ತೀವ್ರ ಆಕ್ರೋಶ!
ರಕ್ಷಿತಾಗೆ ಗಿಲ್ಲಿ ಸಾಥ್
ಕಳೆದ ವಾರ ಕಾವ್ಯ ಶೈವ ಹಾಗೂ ಅಶ್ವಿನಿ ಗೌಡ ಮಧ್ಯೆ ಏಕವಚನದಲ್ಲಿ ಜಗಳ ನಡೆಯಿತು. ಈ ಮಧ್ಯೆ ಕಾವ್ಯ ಶೈವ ಪರವಾಗಿ ರಕ್ಷಿತಾ ಶೆಟ್ಟಿ ಮಧ್ಯೆ ಬಂದರು. ಆದರೀಗ ಚಪ್ಪಲಿ ವಿಚಾರದ ಬಗ್ಗೆ ರಕ್ಷಿತಾ ಪರ ಬ್ಯಾಟ್ ಬೀಸಿದ್ದಾರೆ ಧನುಷ್ ಹಾಗೂ ಗಿಲ್ಲಿ. ರಕ್ಷಿತಾ ಅವರು ಕಾಲು ತೋರಿಸಿದ್ದು, ವೋಟ್ ನನಗೆ ಕೊಟ್ಟರೆ ಕಾಲಲ್ಲಿ ಹಾಕಿ ಅದನ್ನ ತುಳಿಯುತ್ತೀನಿ ಅಂತ. ಆದರೆ ಅಶ್ವಿನಿ ಅಂದಿದ್ದು ಕಲಾವಿದರಿಗೆ ಕಾಲು ತೋರಿಸಿದ್ರು ಅನ್ನೋ ಥರ ಹೇಳಿದ್ರು ಎಂದು ಗಿಲ್ಲಿ ಹೇಳಿದರು.