ಮಾಧ್ಯಮಗಳ ಮುಂದೆ ಅಭಿಮಾನಿಯನ್ನು ಅವಮಾನಿಸಿದ ಇಳಯರಾಜ ಸಹೋದರ; ನೆಟ್ಟಿಗರಿಂದ ತೀವ್ರ ಆಕ್ರೋಶ!
ಚಲನಚಿತ್ರ ನಿರ್ಮಾಪಕ ಗಂಗೈ ಅಮರನ್ (Gangai Amaran) ಅಭಿಮಾನಿಯೊಬ್ಬರನ್ನು ಮಾತಿನ ಮೂಲಕ ಖಂಡಿಸುತ್ತಿರುವ ವೀಡಿಯೊ ವೈರಲ್ (video) ಆಗಿದೆ. ವಿಡಿಯೊ ವೈರಲ್ ಆದ ಬೆನ್ನಲ್ಲೇ ಕೆಲವು ವಿವಾದಗಳು ಸೃಷ್ಟಿಯಾಗಿದೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಹಲವರು ಗಂಗೈ ಅಮರನ್ ಅವರನ್ನು ತೀವ್ರವಾಗಿ ಟೀಕಿಸಿದರು.
-
Yashaswi Devadiga
Nov 3, 2025 9:00 PM
ಚಲನಚಿತ್ರ ನಿರ್ಮಾಪಕ ಗಂಗೈ ಅಮರನ್ (Gangai Amaran) ಅಭಿಮಾನಿಯೊಬ್ಬರನ್ನು ಮಾತಿನ ಮೂಲಕ ಖಂಡಿಸುತ್ತಿರುವ ವೀಡಿಯೊ ವೈರಲ್ (video) ಆಗಿದೆ. ವಿಡಿಯೊ ವೈರಲ್ ಆದ ಬೆನ್ನಲ್ಲೇ ಕೆಲವು ವಿವಾದಗಳು ಸೃಷ್ಟಿಯಾಗಿದೆ.ವೈರಲ್ ಆಗಿರುವ ಈ ವೀಡಿಯೊ ಗೀತರಚನೆಕಾರ ವಾಲಿ ಅವರ ಪುಣ್ಯತಿಥಿಯಂದು ನಡೆದ ಕಾರ್ಯಕ್ರಮದ್ದಾಗಿದೆ.
ಅಭಿಮಾನಿಯ ಮೇಲೆ ಅಮರನ್ ಕಿಡಿ!
ವೀಡಿಯೊದಲ್ಲಿ ಹಿರಿಯ ಸಂಗೀತ ಸಂಯೋಜಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ, ಅವರ ಹಿಂದೆ ಒಬ್ಬ ಅಭಿಮಾನಿ ನಿಂತಿದ್ದರು. ನಂತರ ಅಮರನ್ ಅಭಿಮಾನಿಯ ಕಡೆಗೆ ತಿರುಗಿ, "ಬನ್ನಿ, ನೀವು ಮಾತನಾಡಿ" ಎಂದು ಹೇಳುತ್ತಾರೆ. ಸಂಗೀತ ನಿರ್ದೇಶಕರು ಮಾತನಾಡುತ್ತಿದ್ದಾರೆಂದು ಅರಿಯದ ಅಭಿಮಾನಿ ಮಾಧ್ಯಮಗಳೊಂದಿಗೆ ಮಾತನಾಡಲು ಮುಂದೆ ಬಂದರು. ಆದರೆ ಅಮರನ್ ಪಕ್ಕಕ್ಕೆ ಸರಿದು ಅಲ್ಲಿಂದ ಹೊರಟು ಹೋಗಲು ನೋಡುತ್ತಾರೆ. ನಂತರ ಅವರು ಅಭಿಮಾನಿಯ ಮೇಲೆ ಗುಡುಗಿದ್ದಾರೆ. "ಯಾರಾದರೂ ಮಾತನಾಡುತ್ತಿರುವಾಗ ನೀವು ಹಿಂದೆ ನಿಲ್ಲುವ ರೀತಿ ಇದೇನಾ?" ಎಂದು ಅವರು ಗರಂ ಆಗಿಯೇ ಪ್ರಶ್ನಿಸಿದ್ದಾರೆ. ಬಳಿಕ ಅಭಿಮಾನಿ ಅಲ್ಲಿಂದ ದೂರ ಸರಿದಿದ್ದಾರೆ.
ಇದನ್ನೂ ಓದಿ: BBK 12: ಅಶ್ವಿನಿ ಗೌಡ ಮುಖಕ್ಕೆ ಮಸಿ ಬಳಿದು ರಕ್ಷಿತಾ ಪರ ಮಾತನಾಡಿದ ಗಿಲ್ಲಿ- ಧನುಷ್!
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಹಲವರು ಗಂಗೈ ಅಮರನ್ ಅವರನ್ನು ತೀವ್ರವಾಗಿ ಟೀಕಿಸಿದರು. "ಆ ವ್ಯಕ್ತಿ ಪರಿಸ್ಥಿತಿಯನ್ನು ಬಹಳ ವಿನಮ್ರವಾಗಿ ನಿಭಾಯಿಸಬೇಕಿತ್ತು. ಆ ವ್ಯಕ್ತಿ ಎಷ್ಟು ಪ್ರಬುದ್ಧನೆಂದು ಈ ಮೂಲಕ ಗೊತ್ತಾಗುತ್ತೆ " ಎಂದು ಒಬ್ಬರು ಎಕ್ಸ್ ನಲ್ಲಿ ಬರೆದಿದ್ದಾರೆ.
Gangai Amaran must apologise to that person in front of the media for this shameful act🤬 https://t.co/iTwUzTR7Aa
— Bigilu 🇪🇸TVK 🇪🇸 (@MichaelRay1304) November 2, 2025
ಮತ್ತೊಬ್ಬರಿಗೆ ಆ ಅಭಿಮಾನಿ ಸಂಗೀತ ಸಂಯೋಜಕನಿಗೆ ಹೇಗೆ ತೊಂದರೆ ಕೊಟ್ಟರೆಂದು ಅರ್ಥವಾಗಲಿಲ್ಲ.
ಮತ್ತೊಬ್ಬರು ಹಿರಿಯ ಸಂಗೀತಗಾರನನ್ನು ಟೀಕಿಸುತ್ತಾ. "ಆ ವ್ಯಕ್ತಿಗೆ ಅದು ಎಷ್ಟು ಮುಜುಗರವನ್ನುಂಟು ಮಾಡುತ್ತದೆ ಎಂದು ನಾನು ಊಹಿಸಲು ಸಾಧ್ಯವಿಲ್ಲ. ಗಂಗೈ ಅಮರನ್ ಅವರು ಈ ಬಗ್ಗೆ ಮಾಧ್ಯಮಗಳ ಮುಂದೆ ಕ್ಷಮೆಯಾಚಿಸಬೇಕು."ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: BBK 12: ಮನೆ ನೆಮ್ಮದಿಯನ್ನ ಹಾಳು ಮಾಡಿದ್ರಾ ರಿಷಾ? ಮುಖಕ್ಕೆ ಮಸಿ ಬಳಿದು ಗಿಲ್ಲಿ ಹೇಳಿದ್ದೇನು?
ಒಬ್ಬ ಬಳಕೆದಾರರು ಅವರನ್ನು ಸ್ವಲ್ಪ ವಿವಾದಾತ್ಮಕವಾಗಿರುವ ಮತ್ತೊಬ್ಬ ಸೆಲೆಬ್ರಿಟಿಗೆ ಹೋಲಿಸಿದ್ದಾರೆ. "ಇನ್ನೊಬ್ಬ ಅಜಿತ್ ಕುಮಾರ್!!ಸಾಮಾನ್ಯ ಜನರ ಬಗ್ಗೆ ಅದೇ ದುರಹಂಕಾರ... ಅಭಿಮಾನಿಗಳ ಮೇಲೆ ಯಾವುದೇ ಗೌರವವಿಲ್ಲ."ಎಂದು ಕಮೆಂಟ್ ಮಾಡಿದ್ದಾರೆ.
ಗಂಗೈ ಅಮರನ್ ಯಾರು?
ಪ್ರಸಿದ್ಧ ಸಂಗೀತ ಸಂಯೋಜಕ ಇಳಯರಾಜ ಅವರ ಕಿರಿಯ ಸಹೋದರ ಗಂಗೈ ಅಮರನ್, ಉದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಪ್ರತಿಭೆ ಕೇವಲ ಸಂಗೀತ ನಿರ್ದೇಶನಕ್ಕೆ ಸೀಮಿತವಾಗಿಲ್ಲ, ಏಕೆಂದರೆ ಅವರು ಗೀತರಚನೆಕಾರ ಮತ್ತು ನಿರ್ದೇಶಕರೂ ಆಗಿದ್ದಾರೆ. ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಕರಕಟಕ್ಕರನ್, ಕೋಳಿ ಕೂವುತ್ತು ಮತ್ತು ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸೇರಿವೆ.