ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಜೋಕರ್‌ಗಳಂತೆ ಕಾಣಿಸುತ್ತಿದ್ದೀರ ಎಂದು ಇಡೀ ಮನೆ ನಾಮಿನೇಟ್‌ ಮಾಡಿ ಬಿಗ್‌ ಟ್ವಿಸ್ಟ್‌ ಕೊಟ್ಟ ಕಿಚ್ಚ ಸುದೀಪ್‌!

ಇದಾದ ಬಳಿಕವೇ ರಘು ಅವರಿಗೆ ಕಿಚ್ಚ ಚಪ್ಪಾಳೆ ನೀಡಿದರು. ಅವಮಾನಗಳನ್ನು ಸಹಿಸಿಕೊಂಡ ರಘು ಅವರಿಗೆ ಕಿಚ್ಚ ಚಪ್ಪಾಳೆ ಕೊಟ್ಟರು. ಈ ಬಾರಿ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಬೇಕೆಂಬ ಬಗ್ಗೆಯೂ ಸಾಕಷ್ಟು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿತ್ತು. ಅದರಲ್ಲೂ ಕೆಲವು ಸ್ಪರ್ಧಿಗಳು ತಾವೇ ಸುಪ್ರೀಂ ಎಂಬ ಭ್ರಮಾಲೋಕದಲ್ಲಿಯೂ ಇದ್ದಾರೆ. ಅಂತವರಿಗೆ ವಾಸ್ತವ ಏನು ಇದೆ ಎಂಬುದರ ಬಗ್ಗೆ ಅರಿವು ಮೂಡಿಸಿದ್ದಾರೆ ಕಿಚ್ಚ . ಹಾಗಾದ್ರೆ ಕಿಚ್ಚ ನಿನ್ನೆಯ ಪಂಚಾಯ್ತಿಯಲ್ಲಿ ನೀವು ಜೋಕರ್ಸ್ ರೀತಿ ಕಾಣಿಸ್ತಾ ಇದೀರಾ, ನಿಮ್ಮಷ್ಟು ಮುಟ್ಠಾಳರು ಯಾರೂ ಇಲ್ಲ ಅಂತ ಹೇಳಿದ್ದೇಕೆ? ಅದು ಯಾರಿಗೆ?

bigg boss kannada

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಕೆಲವರಿಗೆ ಸುದೀಪ್‌ ಅವರು ಸಖತ್‌ ಆಗಿಯೇ ಬೆಂಡೆತ್ತಿದ್ದಾರೆ. ಅದರಲ್ಲೂ ಕೆಲವು ಸ್ಪರ್ಧಿಗಳು ತಾವೇ ಸುಪ್ರೀಂ ಎಂಬ ಭ್ರಮಾಲೋಕದಲ್ಲಿಯೂ ಇದ್ದಾರೆ. ಅಂತವರಿಗೆ ವಾಸ್ತವ ಏನು ಇದೆ ಎಂಬುದರ ಬಗ್ಗೆ ಅರಿವು ಮೂಡಿಸಿದ್ದಾರೆ ಕಿಚ್ಚ (Sudeep) . ಹಾಗಾದ್ರೆ ಕಿಚ್ಚ ನಿನ್ನೆಯ ಪಂಚಾಯ್ತಿಯಲ್ಲಿ ನೀವು ಜೋಕರ್ಸ್ ರೀತಿ ಕಾಣಿಸ್ತಾ ಇದೀರಾ, ನಿಮ್ಮಷ್ಟು ಮುಟ್ಠಾಳರು ಯಾರೂ ಇಲ್ಲ ಅಂತ ಹೇಳಿದ್ದೇಕೆ? ಅದು ಯಾರಿಗೆ?
ಒಂದು ಅಪಸ್ವರ

ಬಿಗ್‌ ಬಾಸ್‌ ಶುರುವಾಗಿನಿಂದ ಸೋಷಿಯಲ್‌ ಮೀಡಿಯಾಗಳಲ್ಲಿ ಒಂದು ಅಪಸ್ವರ ಕೇಳಿ ಬರುತ್ತಲೇ ಇತ್ತು. ಅದುವೇ ಸ್ಪರ್ಧಿಗಳ ಅತಿರೇಕದ ವರ್ತನೆ, ಕಿರುಚಾಟ, ಕೂಗಾಟ. ಈ ಬಗ್ಗೆ ಸುದೀಪ್‌ ಅವರು ಖಡಕ್‌ ಆಗಿಯೇ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: BBK 12: ಫ್ಯಾನ್ಸ್‌ ಊಹಿಸಿದ್ದು ನಿಜವಾಗೋಯ್ತು! ಕಿಚ್ಚನ ಚಪ್ಪಾಳೆ ಇವರಿಗೇ ನೋಡಿ

ನೀವು ಮಾಡ್ತಿರೋದು ಸರಿ ಅಲ್ಲ ಎಂದು ಹೇಳಿದ್ದಾರೆ. ನೀವು ಹೊರಗೆ ಜೋಕರ್ಸ್ ರೀತಿ ಕಾಣಿಸುತ್ತಿದ್ದೀರಿ . ಹೊರಗೆ ಸಾಕಷ್ಟು ದೃಷ್ಟಿ ಕೋನ ಇದೆ. ಗುಂಪು ಮಾಡಿದ್ದರೂ, ಟೀಂ ಆಗಿ ಯಾರೂ ಆಡಿಲ್ಲ ಎಂದರು. ಈ ಹಿಂದೆ ಕುಟುಂಬದವರು ಕಾಲ್ ಮಾಡಿ ಮಾತನಾಡಿದ್ದರು. ಆದರೆ ಸ್ಪರ್ಧಿಗಳು ಆ ಮಾತನ್ನೇ ನಂಬಿಕೊಂಡು ಇದ್ದರು. ಈ ಬಗ್ಗೆ ಸುದೀಪ್‌ ಅವರು ಪ್ರಸ್ತಾಪಿಸಿ, ಮನೆಯವರ ಮಾತನ್ನು ನೀವು ನಂಬಿದರೆ ನಿಮ್ಮಷ್ಟು ದೊಡ್ಡ ಮುಟ್ಠಾಳರು ಮತ್ತೊಬ್ಬರು ಇಲ್ಲ ಎಂದು ನೇರವಾಗಿಯೇ ಹೇಳಿದರು.

ಇದನ್ನೂ ಓದಿ: BBK 12: ರಕ್ಷಿತಾ ಜಗಳ ಮಾಡ್ತಾರೆ ಅನ್ಸಲ್ಲ, ಡ್ಯಾನ್ಸ್‌ ಮಾಡಿಕೊಂಡೇ ಮಾತಾಡ್ತಾರೆ! ಕಿಚ್ಚನ ಮುಂದೆ ಅಶ್ವಿನಿ ಗೌಡ ನೇರ ಮಾತು



ಕಿಚ್ಚನ ಚಪ್ಪಾಳೆ ರಘು ಅವರಿಗೆ ಸಿಗಬೇಕು ಅಂತ ಕಮೆಂಟ್‌ ಮಾಡಿದ್ದರು ವೀಕ್ಷಕರು. . ಅದರಂತೆ ಚಪ್ಪಾಳೆ ಸಿಕ್ಕಿತ್ತು ಕೂಡ. ಅಷ್ಟೇ ಅಲ್ಲ ರಘು ಅವರ ಆಡಿದ ರೀತಿಗೆ ಕಿಚ್ಚ ಹಾಡಿ ಹೊಗಳಿದ್ದಾರೆ. ಕೆಲವು ಸ್ಪರ್ಧಿಗಳಿಂದ ಅವಮಾನ ಎದುರಿಸಿದ್ದರೂ ಅದ್ಯಾವದನ್ನೂ ತಲೆಗೆ ಹಾಕಿಕೊಳ್ಳದೇ, ಸಹಿಸಿಕೊಂಡು ಆಡಿದ ರೀತಿಗೆ ಸುದೀಪ್‌ ಬಹುಪರಾಕ್‌ ಎಂದಿದ್ದಾರೆ. ರಘು ಜಾಗದಲ್ಲಿ ಬೇರೆಯವರು ಇದ್ದಿದ್ರೆ ಏನೇನು ಮಾತಾಡುತ್ತಿದ್ರೋ ಎಂದು ಕಿಚ್ಚ ನೇರವಾಗಿಯೇ ಹೇಳಿದ್ದಾರೆ.

ಸುದೀಪ್‌ ಕೊಟ್ಟೇ ಬಿಟ್ರು ಬಿಗ್‌ ಟ್ವಿಸ್ಟ್‌

ಇನ್ನು ಈ ವಾರ ಸುದೀಪ್‌ ಅವರು ಮನೆಯ ಸದಸ್ಯರಿಗೆ ದೊಡ್ಡ ಟಾಸ್ಕ್‌ ಕೊಟ್ಟು ಇಡೀ ಮನೆಯನ್ನೇ ನಾಮಿನೇಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ ಈ ವಾರ ಟಾಸ್ಕ್‌ ಇಲ್ಲದೇ ನಿಮ್ಮನ್ನ ನೀವು ಪ್ರೂವ್‌ ಮಾಡಿಕೊಳ್ಳಬೇಕು ಅಂತ ನೇರಾ ಚಾಲೆಂಜ್‌ ಹಾಕಿದ್ದಾರೆ ಕಿಚ್ಚ ಸುದೀಪ್‌. ಒಂದು ಕ್ಷಣ ಸ್ಪರ್ಧಿಗಳು ಕೂಡ ಥಂಡಾ ಹೊಡೆದಿದ್ದಾರೆ. ಅದು ಅಲ್ಲದೇ ಒಬ್ಬರನ್ನೂ ಬಿಡದೇ ನಾಮಿನೇಟ್‌ ಮಾಡಿರೋದು ಸ್ಪರ್ಧಿಗಳಿಗೆ ಇದು ದೊಡ್ಡ ಟಾಸ್ಕ್‌ ಆಗಿಬಿಟ್ಟಿದೆ.

ಜಾಹ್ನವಿ ಉತ್ತಮ

ಈ ವಾರ ಜಾಹ್ನವಿ ಉತ್ತಮ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಮನೆಮಂದಿ ಜಾಹ್ನವಿ ಅವರ ಆಟದ ಬಗ್ಗೆ ಪಾಸಿಟಿವ್‌ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಅಡುಗೆ ವಿಚಾರಕ್ಕೂ ಸೈ ಎನಿಸಿಕೊಂಡರು. ಆದರೆ ಧ್ರುವ ಮಾತ್ರ ಜಾಹ್ನವಿ ಅವರು ಚೆನ್ನಾಗಿ ರೆಡಿ ಆಗ್ತಾರೆ ಎನ್ನುವ ಮಾತನ್ನು ಹೇಳಿದರು.

ಇನ್ನು ಮನೆಮಂದಿ ರೂಲ್ಸ್‌ ಬ್ರೇಕ್‌ ಮಾಡಿದ್ದಕ್ಕಾಗಿ ಲಕ್ಷುರಿ ಬಜೆಟ್‌ವನ್ನು ಮಿಸ್‌ ಮಾಡಿಕೊಂಡಿದೆ. ಈ ಬಾರಿ ಕಾಫಿ ಪೌಡರ್‌ ಹಾಗೂ ಚಿಕನ್‌ವನ್ನು ಕಳೆದುಕೊಂಡಿದೆ. ಇನ್ನು ಅನೇಕರು ರಕ್ಷಿತಾ ಅವರು ಉತ್ತಮ ಎಂದೂ ವೋಟ್‌ ಮಾಡಿದರು. ರಕ್ಷಿತಾ ತೆಗೆದುಕೊಳ್ಳುವ ನಿರ್ಧಾರಕ್ಕೆ ಮತ್ತು ಆಟದ ಕುರಿತು ಪಾಸಿಟಿವ್‌ ಪ್ರತಿಕ್ರಿಯೆ ನೀಡಿದರು .

Yashaswi Devadiga

View all posts by this author