BBK 12: ಫ್ಯಾನ್ಸ್ ಊಹಿಸಿದ್ದು ನಿಜವಾಗೋಯ್ತು! ಕಿಚ್ಚನ ಚಪ್ಪಾಳೆ ಇವರಿಗೇ ನೋಡಿ
ಕ್ಯಾಪ್ಟನ್ಸಿ ಓಟಕ್ಕೆ ಬರಲು ಟಾಸ್ಕ್‌ವೊಂದನ್ನ ನೀಡಿದ್ದರು ಬಿಗ್ ಬಾಸ್. ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂರನೇ ಕಳಪೆ ಆಗಿ ಧ್ರುವಂತ್ ಜೈಲಿಗೆ ತೆರಳಿದ್ದಾರೆ. ನಿಷ್ಠಾವಂತಹ ಸ್ಟೂಡೆಂಟ್ (Student) ಆಗಿ ಇದ್ದರಷ್ಟೆ ಬಿಟ್ಟರೆ ಆ್ಯಕ್ಟಿವ್ ಆಗಿ ಎಲ್ಲೂ ಇರಲಿಲ್ಲ. ಇನ್ನು ಉತ್ತಮ ಸ್ಪರ್ಧಿ ಕೂಡ ರಿವೀಲ್ ಆಗಿದೆ.ಹಾಗೇ ಕಿಚ್ಚನ ಚಪ್ಪಾಳೆ ಕೂಡ ಸುದೀಪ್ ಅವರು ಅನೌನ್ಸ್ ಮಾಡಿದ್ದಾರೆ.
-
Yashaswi Devadiga
Nov 1, 2025 9:58 PM
ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಈ ವಾರ ಅಂತೂ ಉತ್ತಮ ಹಾಗೂ ಕಳಪೆ ಸ್ಪರ್ಧಿಯ ಹೆಸರು ಅನೌನ್ಸ್ (Announce) ಆಗಿದೆ. ಈ ವಾರ ಬಿಗ್ ಬಾಸ್ ಮಜವಾದ ಟಾಸ್ಕ್‌ವನ್ನ ನೀಡಿದ್ದರು. ಇಡೀ ಬಿಗ್ ಬಾಸ್ ಮನೆ ಬಿಬಿ ಕಾಲೇಜು ಆಗಿತ್ತು. ಕ್ಯಾಪ್ಟನ್ಸಿ ಓಟಕ್ಕೆ (Captaincy) ಬರಲು ಟಾಸ್ಕ್‌ವೊಂದನ್ನ ನೀಡಿದ್ದರು ಬಿಗ್ ಬಾಸ್. ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂರನೇ ಕಳಪೆ ಆಗಿ ಧ್ರುವಂತ್ ಜೈಲಿಗೆ ತೆರಳಿದ್ದಾರೆ. ನಿಷ್ಠಾವಂತಹ ಸ್ಟೂಡೆಂಟ್ (Student) ಆಗಿ ಇದ್ದರಷ್ಟೆ ಬಿಟ್ಟರೆ ಆ್ಯಕ್ಟಿವ್ ಆಗಿ ಎಲ್ಲೂ ಇರಲಿಲ್ಲ. ಇನ್ನು ಉತ್ತಮ ಸ್ಪರ್ಧಿ ಕೂಡ ರಿವೀಲ್ ಆಗಿದೆ. ಹಾಗೇ ಕಿಚ್ಚನ ಚಪ್ಪಾಳೆ ಕೂಡ ಸುದೀಪ್ ಅವರು ಅನೌನ್ಸ್ ಮಾಡಿದ್ದಾರೆ.
ಹೌದು ಇನ್ನು ಈ ಬಾರಿ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಬೇಕೆಂಬ ಬಗ್ಗೆಯೂ ಸಾಕಷ್ಟು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿತ್ತು. ಕಿಚ್ಚನ ಚಪ್ಪಾಳೆ ರಘು ಅವರಿಗೆ ಸಿಗಬೇಕು ಅಂತ ಕಮೆಂಟ್ ಮಾಡಿದ್ದರು ವೀಕ್ಷಕರು. ಅದರಂತೆ ಈಗ ಅನೌನ್ಸ್ ಆಗಿದೆ. ಅಷ್ಟೇ ಅಲ್ಲ ರಘು ಅವರ ಆಡಿದ ರೀತಿಗೆ ಕಿಚ್ಚ ಹಾಡಿ ಹೊಗಳಿದ್ದಾರೆ. ಕೆಲವು ಸ್ಪರ್ಧಿಗಳಿಂದ ಅವಮಾನ ಎದುರಿಸಿದ್ದರೂ ಅದ್ಯಾವದನ್ನೂ ತಲೆಗೆ ಹಾಕಿಕೊಳ್ಳದೇ, ಸಹಿಸಿಕೊಂಡು ಆಡಿದ ರೀತಿಗೆ ಸುದೀಪ್ ಬಹುಪರಾಕ್ ಎಂದಿದ್ದಾರೆ.
ಈ ವಾರ ಜಾಹ್ನವಿ ಉತ್ತಮ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಮನೆಮಂದಿ ಜಾಹ್ನವಿ ಅವರ ಆಟದ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಅಡುಗೆ ವಿಚಾರಕ್ಕೂ ಸೈ ಎನಿಸಿಕೊಂಡರು. ಆದರೆ ಧ್ರುವ ಮಾತ್ರ ಜಾಹ್ನವಿ ಅವರು ಚೆನ್ನಾಗಿ ರೆಡಿ ಆಗ್ತಾರೆ ಎನ್ನುವ ಮಾತನ್ನು ಹೇಳಿದರು.
ಇನ್ನು ಮನೆಮಂದಿ ರೂಲ್ಸ್ ಬ್ರೇಕ್ ಮಾಡಿದ್ದಕ್ಕಾಗಿ ಲಕ್ಷುರಿ ಬಜೆಟ್‌ವನ್ನು ಮಿಸ್ ಮಾಡಿಕೊಂಡಿದೆ. ಈ ಬಾರಿ ಕಾಫಿ ಪೌಡರ್ ಹಾಗೂ ಚಿಕನ್‌ವನ್ನು ಕಳೆದುಕೊಂಡಿದೆ. ಇನ್ನು ಅನೇಕರು ರಕ್ಷಿತಾ ಅವರು ಉತ್ತಮ ಎಂದೂ ವೋಟ್ ಮಾಡಿದರು. ರಕ್ಷಿತಾ ತೆಗೆದುಕೊಳ್ಳುವ ನಿರ್ಧಾರಕ್ಕೆ ಮತ್ತು ಆಟದ ಕುರಿತು ಪಾಸಿಟಿವ್ ಪ್ರತಿಕ್ರಿಯೆ ನೀಡಿದರು .
ಇದನ್ನೂ ಓದಿ: Allu Sirish: ಎಂಗೇಜ್ ಆದ ಅಲ್ಲು ಅರ್ಜುನ್ ಸಹೋದರ; ಸಮಾರಂಭದ ಕ್ಯೂಟ್ ಫೋಟೋಸ್ ವೈರಲ್
View this post on Instagram A post shared by JioHotstar Kannada (@jio_hotstarkannada)
ಕಿಚ್ಚನ ಮುಂದೆ ಅಶ್ವಿನಿ ಗೌಡ ನೇರ ಮಾತು
ಎಲ್ಲ ಕಡೆ ಮೂಗು ತೂರಿಸುತ್ತಾರಾ ರಕ್ಷಿತಾ?
ರಕ್ಷಿತಾ ಅವರ ಎಲ್ಲ ಕಡೆ ಮೂಗು ತೂರಿಸುತ್ತಾರೆ ಅನ್ನೋ ಸ್ಟೇಟ್‌ಮೆಂಟ್‌ಗೆ ಅನೇಕ ಸ್ಪರ್ಧಿಗಳು ಒಪ್ಪಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ. ರಕ್ಷಿತಾ ಅವರು ಫೇಕ್ ಅಂತ ಕೂಡ ಹೇಳಿದ್ದಾರೆ. ಅದರಲ್ಲೂ ಅಶ್ವಿನಿ ಗೌಡ ಅವರು ಸುದೀಪ್ ಅವರ ಪ್ರಶ್ನೆಗೆ ಉತ್ತರ ನೀಡಿದ್ದು ಹೀಗೆ.
ʻರಕ್ಷಿತಾ ಅವರು ಜಗಳ ಮಾಡ್ತಾರೆ ಅನ್ಸಲ್ಲ. ಅವರು ಡ್ಯಾನ್ಸ್ ಮಾಡಿಕೊಂಡೇ ಆಟ ಆಡ್ತಾರೆʼ ಎಂದು ಕಿಚ್ಚ ಸುದೀಪ್ ಮುಂದೆ ಹೇಳಿದರು ಅಶ್ವಿನಿ. ಅದರಲ್ಲೂ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಿಷಾ ಕೂಡ, ʻ15 ನಿಮಿಷ ತುಂಬಾ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಆದರೆ ಶನಿವಾರ ಭಾನುವಾರ ಬಂತು ಅಂದರೆ ಅದು ಇದು ಅಂತ ಶುರುವಾಗತ್ತೆ. ನನ್ನ ಪ್ರಕಾರ ಅವರ ಸ್ಟ್ರಾಟಜಿ ಬಳಕೆ ಮಾಡ್ತಿದ್ದಾರೆʼ ಎಂದಿದ್ದಾರೆ. ಕಾಕ್ರೋಚ್ ಸುಧಿ ಕೂಡ ʻರಕ್ಷಿತಾ ತುಂಬಾ ಫೇಕ್ʼ ಎಂದಿದ್ದಾರೆ.
ಇದನ್ನೂ ಓದಿ: BBK 12: ರಕ್ಷಿತಾ ಜಗಳ ಮಾಡ್ತಾರೆ ಅನ್ಸಲ್ಲ, ಡ್ಯಾನ್ಸ್ ಮಾಡಿಕೊಂಡೇ ಮಾತಾಡ್ತಾರೆ! ಕಿಚ್ಚನ ಮುಂದೆ ಅಶ್ವಿನಿ ಗೌಡ ನೇರ ಮಾತು
ಇದಕ್ಕೆ ಸುದೀಪ್ ಅವರು ಕೊನೆಯಲ್ಲಿ ಕೆಲವು ವ್ಯಕ್ತಿಗಳು ಇರ್ತಾರೆ. ಕೆಲವರು ನಮಗೆ ಸೂಟ್ ಆದರೆ ಇನ್ನೂ ಕೆಲವರು ಸೂಟ್ ಆಗಲ್ಲ ಅಷ್ಟೇ ಸತ್ಯ ಎಂದಿದ್ದಾರೆ. ರಕ್ಷಿತಾ ಶೆಟ್ಟಿ ಪರ ವಹಿಸಿಕೊಂಡು ಅವರು ಮಾತನಾಡಿದ್ದಾರೆ.