ಬಿಗ್ ಬಾಸ್ ಸೀಸನ್ 12ರ (BBK12) ನಿನ್ನೆಯ ಸಂಚಿಕೆಯಲ್ಲಿ ಅರ್ಹರಲ್ಲದ ಇಬ್ಬರು ವ್ಯಕ್ತಿಗಳಿಗೂ ಮಸಿ ಬಳಿಯುವ ಟಾಸ್ಕ್ ನೀಡಲಾಗಿತ್ತು. ಇನ್ನು ಈ ಟಾಸ್ಕ್‌ನಲ್ಲಿ ಎಲ್ಲ ಸ್ಪರ್ಧಿಗಳು ಖಡಕ್ ಆಗಿಯೇ ಕಾರಣವನ್ನು ನೀಡಿದ್ದರು. ಹೆಚ್ಚಾಗಿ ಮಸಿ ಹಾಕಿಕೊಂಡವರು ರಿಷಾ. ಅದೇ ರೀತಿ ಸಖತ್ ಆಗಿ ಕೌಂಟರ್ ಕೊಟ್ಟು ಮಾತನಾಡಿದ್ದು ಸೂರಜ್ (Sooraj). ಹೌದು ಸೂರಜ್ ಮಾತಿಗೆ ಗಿಲ್ಲಿಯೇ ಶಿಳ್ಳೆ ಹೊಡೆದಿದ್ದಾರೆ.
ನೀನೇ ಡವ್ ಪ್ರೋ ಮ್ಯಾಕ್ಸ್
ಸೂರಜ್ ಹೇಳಿದ್ದು ಹೀಗೆ, ರಿಷಾ ಅವರು ಈಗಲೂ ಅಂದುಕೊಳ್ಳುತ್ತಿರಬಹುದು, ಜಾಸ್ತಿ ಜನ ನಂಗೆ ಕಲರ್ ಹೊಡಿತಾ ಇದ್ದಾರೆ ನಾನು ಕ್ಯಾಮೆರಾ ಮುಂದೆ ಜಾಸ್ತಿ ಬರ್ತಾ ಇದ್ದೀನಿ ಅಂತ. ಎಲ್ಲರಿಗೂ ಡವ್ ಡವ್ ಅಂತಿಯಾ. ಆದರೆ ನೀನೇ ಡವ್ ಪ್ರೋ ಮ್ಯಾಕ್ಸ್.
ಎಲ್ಲೇ ಜಗಳ ಆಗಲಿ ನಾನು ಇಣುಕಿ ನೋಡಿದ್ರೆ ಕ್ಯಾಮೆರಾಗೆ ಬರ್ತೀನಿ ಅಂತ ಅಂದುಕೊಳ್ತೀಯಾ. ಇನ್ನು ಆಗಾಗ ರಿಯಲ್ ರಿಷಾ ಬರ್ತಾರೆ ಅಂತಿಯಾ. ಆದರೆ ನಿಂಗೆ ಈ ಬಗ್ಗೆ ಕ್ಲಾರಿಟಿ ಇಲ್ಲ. ನಾನು ಕಾರ್ಡ್ ಪ್ಲೇ ಮಾಡ್ತೀಯಾ ಅಂತಿಯಾ. ಆದರೆ ಅಲ್ಲೂ ನೀನು ಕ್ಯಾಮೆರಾ ಇದೆ ಅಂತ ಏನೇನೋ ಅಂತಿಯಾ. ಈ ವಿಚಾರಕ್ಕೆ ಕಪ್ಪು ಬಣ್ಣ ಹಾಕ್ತೀನಿ ಎಂದರು.
ನಿನಗೆ ಎಲ್ಲರೂ ಕೈ ಅಂದ್ರು
ಇನ್ನು ರಿಷಾ ಕೂಡ ಈ ಮಾತಿಗೆ, ಗುಡ್ ಬುಕ್ಸ್‌ನಲ್ಲಿ ಇರೋದಿಕ್ಕೆ ನೋಡ್ತೀಯಾ. ಇಲ್ಲಿ ಒಳ್ಳೆಯವರಾಗಿದ್ರೂ ಕೊಡ್ತಾರೆ, ಕೆಟ್ಟವರಾಗಿದ್ರೂ ಕೊಡ್ತಾರೆ. ಮಾತಾಡಿದ್ರೂ ಕೊಡ್ತಾರೆ, ಮಾತಾಡದಿದ್ರೂ ಕೊಡ್ತಾರೆ. ನೀನು ಊಸರವಳ್ಳಿ ಎಂದು ಹೇಳಿದ್ದಾರೆ. “ನನಗೆ ಎಲ್ಲರೂ ಸೇರಿ ಜೈ ಅಂದ್ರು, ನಿನಗೆ ಎಲ್ಲರೂ ಕೈ ಅಂದ್ರು” ಎಂದು ಸೂರಜ್ ಹೇಳಿದ್ದಾರೆ. ಆಗ ರಿಷಾ ಗೌಡ ಅವರು, “ಕೈ ಅಂತಾರಲ್ಲ ಅವರು ಯಾವಾಗ ಕೈ ಕೊಡ್ತಾರೆ ನೋಡಿಕೋ” ಎಂದು ಹೇಳಿದ್ದಾರೆ.
ರಕ್ಷಿತಾಗೆ ಅಶ್ವಿನಿ ಗೌಡ ಓಪನ್ ಚಾಲೆಂಜ್
ಇನ್ನು ಈ ಟಾಸ್ಕ್‌ನಲ್ಲಿ ಎಲ್ಲ ಸ್ಪರ್ಧಿಗಳು ಖಡಕ್ ಆಗಿಯೇ ಕಾರಣವನ್ನು ನೀಡಿದ್ದರು. ಹೆಚ್ಚಾಗಿ ರಿಷಾ (Risha) ಅವರು ಮಸಿ ಬಳಿಸಿಕೊಂಡವರು. ಅದರಲ್ಲೂ ಅಶ್ವಿನಿ ಅವರು ಸಖತ್ ಖಾರವಾಗಿಯೇ ಉತ್ತರ ನೀಡಿದ್ದಾರೆ. ರಕ್ಷಿತಾ ಅವರನ್ನು ಆಯ್ಕೆ ಮಾಡಿ ಬೇಕಾ ಬಿಟ್ಟಿ ಮಾತನಾಡಿದ್ದಾರೆ ಅಶ್ವಿನಿ (Ashwini).
ಅಶ್ವಿನಿ ಮಾತನಾಡಿ, `ರಕ್ಷಿತಾ ಮುಗ್ದೆ ಅಲ್ಲ. ಡ್ರಾಮಾ ಕಂಪನಿಗೆ ಅಪ್ಪ ಅಲ್ಲ, ಮುತ್ತಾತ ಇವರು. ಅಷ್ಟು ಡ್ರಾಮಾ ಮಾಡಿಕೊಂಡು ಬಂದಿದ್ದಾರೆ. ಅಲ್ಲಿ ಹೋಗಿ ಅವರ ಕೈ ಹಿಡಿದುಕೊಳ್ಳುವುದು ಮಾಡ್ತಾರೆ. ನಾವು ಯಾರೂ 25ನೇ ವಯಸ್ಸಿಗೆ ಯಾರಿಗೂ ಅಂಟಿಕೊಂಡು ಮಕ್ಕಳ ಥರ ಆಡಲಿಲ್ಲ. ದಯವಿಟ್ಟು ಅದನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮಷ್ಟೇ ವಯಸ್ಸಿನವರು ಹೊರಗಡೆ ನೋಡುತ್ತಾರೆ.’ ಎಂದು ಅಶ್ವಿನಿ ಗೌಡ ಅವರು ಹೇಳಿದರು.