ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ರಿಷಾ ಕೊಟ್ಟ ಕೌಂಟರ್‌ಗೆ ಕಣ್ಣೀರು ಹಾಕಿದ ಸ್ಪಂದನಾ ಹಾಗೂ ಸೂರಜ್; ಮನೆಯ ಪತ್ರ ನುಚ್ಚುನೂರು!

ರಿಷಾ (Risha) ಅವರು ಕೂಗಾಟ, ಕಿರುಚಾಟ ಜಾಸ್ತಿ ಮಾಡಿದ್ದಾರೆ.ಅವಕಾಶ ಸಿಕ್ಕಲ್ಲೆಲ್ಲ ಅವರು ಜಗಳ ಮಾಡಲು ಆರಂಭಿಸಿದ್ದಾರೆ. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದಾರೆ. ‘ಕಳ್ಳನನ್ನು ನಂಬಿದರೂ ಮಳ್ಳನನ್ನು ನಂಬಲ್ಲ’ ಎಂದು ಅವರ ಎದುರಲ್ಲೇ ರಿಷಾ ಕೂಗಾಡಿದ್ದಾರೆ. ಬಿಗ್‌ಬಾಸ್ ಮನೆಗೆ ಬಂದಿದ್ದ ರಿಷಾ ಗೌಡ ಎರಡು ದಿನ ಚೆನ್ನಾಗಿಯೇ ಇದ್ದರು. ಇದಾದ ಬಳಿಕ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ.

bigg boss kannada

ಗಿಲ್ಲಿ ನಟ (Gilli) ಹಾಗೂ ರಿಷಾ ಗೌಡ (Risha Gowda) ಮಧ್ಯೆ ಕಿರಿಕ್ ಆಗಿತ್ತು. ಇದಾದ ಬಳಿಕ ರಿಷಾ ಗೌಡ ಅವರು ಸೂರಜ್ ಜೊತೆ ಫೈಟ್​ಗೆ ಇಳಿದಿದ್ದಾರೆ. ಸೂರಜ್ ಮಸಿ ಬಳಿದ ಎಂಬ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರು ಹಗೆ ತೀರಿಸಿಕೊಳ್ಳಲು ರೆಡಿ ಆಗಿದ್ದಾರೆ. ಬಿಗ್‌ಬಾಸ್ (Bigg boss Kannada) ಮನೆಗೆ ಬಂದಿದ್ದ ರಿಷಾ ಗೌಡ ಎರಡು ದಿನ ಚೆನ್ನಾಗಿಯೇ ಇದ್ದರು. ಇದಾದ ಬಳಿಕ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ.

ಅವಕಾಶ ಸಿಕ್ಕಲ್ಲೆಲ್ಲ ಅವರು ಜಗಳ ಮಾಡಲು ಆರಂಭಿಸಿದ್ದಾರೆ. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದಾರೆ. ‘ಕಳ್ಳನನ್ನು ನಂಬಿದರೂ ಮಳ್ಳನನ್ನು ನಂಬಲ್ಲ’ ಎಂದು ಅವರ ಎದುರಲ್ಲೇ ರಿಷಾ ಕೂಗಾಡಿದ್ದಾರೆ. ಅಷ್ಟೇ ಅಲ್ಲ ಬಿಗ್‌ ಬಾಸ್‌ ಟಾಸ್ಕ್‌ ಒಂದನ್ನ ನೀಡಿದ್ದರು. ಏಳು ಸದಸ್ಯರ ಪತ್ರದ ಪೈಕಿ ಇಬ್ಬರ ಪತ್ರವನ್ನ ಹರಿದು ಹಾಕಬೇಕಿತ್ತು. ಅದರಲ್ಲಿ ಸೂರಜ್‌ ಮತ್ತು ಸ್ಪಂದನಾ ಅವರ ಮನೆಯ ಪತ್ರವನ್ನ ಹರಿದು ಹಾಕಿದ್ದಾರೆ ರಿಷಾ. ಇನ್ನು ಸ್ಪಂದನಾ ಕೂಡ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: BBK 12: ‘ಕಳ್ಳನನ್ನು ನಂಬಿದರೂ ಮಳ್ಳನನ್ನು ನಂಬಲ್ಲ’; ಗಿಲ್ಲಿ- ಸೂರಜ್ ಮೇಲೆ ರಿಷಾ ಕೆಂಡ



ರಿಷಾ ಕೊಟ್ಟ ಕೌಂಟರ್‌ಗೆ ಕಣ್ಣೀರು ಹಾಕಿದ ಸ್ಪಂದನಾ ಹಾಗೂ ಸೂರಜ್!

ರಿಷಾಗೆ ಕಪ್ಪು ಬಣ್ಣ ಹಚ್ಚಿದ 7 ಜನರ ಪೈಕಿ 2 ಜನರನ್ನು ಆಯ್ಕೆ ಮಾಡಿ ಅವರ ಮನೆಯಿಂದ ಬಂದಿದ್ದ ಪತ್ರವನ್ನು ಹರಿಯಬೇಕು ಇಲ್ಲವೇ ತನ್ನ ಮನೆಯ ಪತ್ರವನ್ನು ತ್ಯಾಗ ಮಾಡಬೇಕು ಎಂದು ಬಿಗ್ ಬಾಸ್ ರಿಷಾಳಿಗೆ ಹೇಳಿದರು. ರಿಷಾ ಅವರು ಸೂರಜ್ ಹಾಗೂ ಸ್ಪಂದನಳಾ ಮನೆಯ ಪತ್ರವನ್ನು ಹರಿದು ಹಾಕಿದರು.

ನಂತರ ಕಾವ್ಯರಲ್ಲಿ ತಾನು ಕ್ಷಮೆ ಕೇಳುವುದಿಲ್ಲ ನನಗೆ ಮನಸ್ಸಿಗೆ ಹಾಗೆ ಕೇಳಬೇಕು ಅನ್ನಿಸುವುದಿಲ್ಲ ಅಂದಿದ್ದಾರೆ. ಕೊನೆಗೆ ಅಶ್ವಿನಿ ಮತ್ತು ರಾಶಿಕ ಜೊತೆಗೆ ಮಾತಾಡುತ್ತಾ ಕರ್ಮ ಹಿಟ್ ಬ್ಯಾಕ್ ಎಂದು ಸೂರಜ್ ಮತ್ತು ಸ್ಪಂದನಾಳಿಗೆ ವ್ಯಂಗ ಮಾಡಿದ್ದಾರೆ.

ರಿಷಾ ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬಿಗ್ ಬಾಸ್ ಗೆ ಗೊತ್ತಿದ್ದು ಅವರನ್ನು ಉಳಿಸಿಕೊಳ್ಳಲು ಬಿಗ್ ಬಾಸ್ ಮಾಡಿದ ಮಾಸ್ಟರ್ ಪ್ಲಾನ್ ಅನ್ನುತ್ತಿದ್ದಾರೆ ನೆಟ್ಟಿಗರು. ಯಾಕೆಂದರೆ ರಿಷಾ ಮನೆಯಲ್ಲಿ ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ದರು.

ಇದನ್ನೂ ಓದಿ: BBK 12: ಕಣಿ ಹೇಳುವ ಮೂಲಕ ಮನದ ನೋವು ಹಂಚಿಕೊಂಡ್ರಾ ಜಾಹ್ನವಿ? ಅಶ್ವಿನಿ ಗೌಡ ರಿಯಾಕ್ಷನ್‌ ಹೀಗಿತ್ತು!

ಸೂರಜ್ ಕೌಂಟರ್‌ಗೆ ಸೈಲೆಂಟ್‌ ಆಗಿದ್ದ ರಿಷಾ!

ಬಿಗ್‌ ಬಾಸ್‌ ಸೀಸನ್‌ 12ರ ಸಂಚಿಕೆಯಲ್ಲಿ ಅರ್ಹರಲ್ಲದ ಇಬ್ಬರು ವ್ಯಕ್ತಿಗಳಿಗೂ ಮಸಿ ಬಳಿಯುವ ಟಾಸ್ಕ್ ನೀಡಲಾಗಿತ್ತು. ಇನ್ನು ಈ ಟಾಸ್ಕ್‌ನಲ್ಲಿ ಎಲ್ಲ ಸ್ಪರ್ಧಿಗಳು ಖಡಕ್‌ ಆಗಿಯೇ ಕಾರಣವನ್ನು ನೀಡಿದ್ದರು. ಹೆಚ್ಚಾಗಿ ಮಸಿ ಹಾಕಿಕೊಂಡವರು ರಿಷಾ. ಅದೇ ರೀತಿ ಸಖತ್‌ ಆಗಿ ಕೌಂಟರ್‌ ಕೊಟ್ಟು ಮಾತನಾಡಿದ್ದು ಸೂರಜ್‌ (Sooraj). ಹೌದು ಸೂರಜ್‌ ಮಾತಿಗೆ ಗಿಲ್ಲಿಯೇ ಶಿಳ್ಳೆ ಹೊಡೆದಿದ್ದರು.

Yashaswi Devadiga

View all posts by this author