BBK 12: ‘ಕಳ್ಳನನ್ನು ನಂಬಿದರೂ ಮಳ್ಳನನ್ನು ನಂಬಲ್ಲ’; ಗಿಲ್ಲಿ- ಸೂರಜ್ ಮೇಲೆ ರಿಷಾ ಕೆಂಡ
ರಿಷಾ (Risha) ಅವರು ಕೂಗಾಟ, ಕಿರುಚಾಟ ಜಾಸ್ತಿ ಮಾಡಿದ್ದಾರೆ. ಅವಕಾಶ ಸಿಕ್ಕಲ್ಲೆಲ್ಲ ಅವರು ಜಗಳ ಮಾಡಲು ಆರಂಭಿಸಿದ್ದಾರೆ. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದಾರೆ. ‘ಕಳ್ಳನನ್ನು ನಂಬಿದರೂ ಮಳ್ಳನನ್ನು ನಂಬಲ್ಲ’ ಎಂದು ಅವರ ಎದುರಲ್ಲೇ ರಿಷಾ ಕೂಗಾಡಿದ್ದಾರೆ. ಅದರಲ್ಲೂ ಸೂರಜ್ ಕೊಟ್ಟಿರುವ ಕೌಂಟರ್‌ಗೆ ಸೈಲೆಂಟ್ ಆಗಿದ್ದರು ರಿಷಾ. ಸ್ಪಂದನಾ ಅವರ ಮನೆಯ ಪತ್ರವನ್ನ ಹರಿದು ಹಾಕಿದ್ದಾರೆ ರಿಷಾ. ಇನ್ನು ಸ್ಪಂದನಾ ಕೂಡ ಕಣ್ಣೀರಿಟ್ಟಿದ್ದಾರೆ.
bigg boss kannada -
Yashaswi Devadiga
Nov 4, 2025 6:10 PM
ಬಿಗ್ ಬಾಸ್ (Bigg Boss Kannada 12) ಮನೆಯ ನಿನ್ನೆಯ ಎಪಿಸೋಡ್‌ನಲ್ಲಿ ಮಸಿ ಬಳಿಯುವ ಟಾಸ್ಕ್‌ನಲ್ಲಿ ರಿಷಾ (Risha) ಅವರಿಗೆ ಹೆಚ್ಚಾಗಿ ಸ್ಪರ್ಧಿಗಳು ಟಾರ್ಗೆಟ್ ಮಾಡಿದ್ದರು. ಅದರಲ್ಲೂ ಸೂರಜ್ ಕೊಟ್ಟಿರುವ ಕೌಂಟರ್‌ಗೆ ಸೈಲೆಂಟ್ ಆಗಿದ್ದರು ರಿಷಾ. ಆದರೀಗ ರಿಷಾ (Risha) ಅವರು ಕೂಗಾಟ, ಕಿರುಚಾಟ ಜಾಸ್ತಿ ಮಾಡಿದ್ದಾರೆ.
ಅವಕಾಶ ಸಿಕ್ಕಲ್ಲೆಲ್ಲ ಅವರು ಜಗಳ ಮಾಡಲು ಆರಂಭಿಸಿದ್ದಾರೆ. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದಾರೆ. ‘ಕಳ್ಳನನ್ನು ನಂಬಿದರೂ ಮಳ್ಳನನ್ನು ನಂಬಲ್ಲ’ ಎಂದು ಅವರ ಎದುರಲ್ಲೇ ರಿಷಾ ಕೂಗಾಡಿದ್ದಾರೆ. ಅಷ್ಟೇ ಅಲ್ಲ ಬಿಗ್ ಬಾಸ್ ಟಾಸ್ಕ್ ಒಂದನ್ನ ನೀಡಿದ್ದರು. ಏಳು ಸದಸ್ಯರ ಪತ್ರದ ಪೈಕಿ ಇಬ್ಬರ ಪತ್ರವನ್ನ ಹರಿದು ಹಾಕಬೇಕಿತ್ತು. ಅದರಲ್ಲಿ ಸೂರಜ್ ಮತ್ತು ಸ್ಪಂದನಾ ಅವರ ಮನೆಯ ಪತ್ರವನ್ನ ಹರಿದು ಹಾಕಿದ್ದಾರೆ ರಿಷಾ. ಇನ್ನು ಸ್ಪಂದನಾ ಕೂಡ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: BBK 12: ತಂಗಿ ಅಂಥ ಕರೆದು ಹೀಗಾ ಹೇಳೋದು? ಕಾವ್ಯ ಸ್ನೇಹವನ್ನೇ ಟಾರ್ಗೆಟ್ ಮಾಡಿದ ಚಂದ್ರಪ್ರಭ
ಸೂರಜ್ ಅವರು ರಿಷಾ ಅವರ ಬಳಿ ನಾನೇನು ಅಂತ ತಪ್ಪು ಮಾಡಿದ್ದೇನೆ ಎಂದು ಕೇಳಿದ್ದಾರೆ. ಇದೀಗ ರಿಷಾ, ಗಿಲ್ಲಿ ಸೂರಜ್ ನಡುವಿನ ಮನಸ್ತಾಪ ತಾರಕಕ್ಕೇರಿದೆ. ಇಂದು ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಸೂರಜ್ ಕೌಂಟರ್‌ಗೆ ಸೈಲೆಂಟ್ ಆದ ರಿಷಾ!
ಬಿಗ್ ಬಾಸ್ ಸೀಸನ್ 12ರ ನಿನ್ನೆಯ ಸಂಚಿಕೆಯಲ್ಲಿ ಅರ್ಹರಲ್ಲದ ಇಬ್ಬರು ವ್ಯಕ್ತಿಗಳಿಗೂ ಮಸಿ ಬಳಿಯುವ ಟಾಸ್ಕ್ ನೀಡಲಾಗಿತ್ತು. ಇನ್ನು ಈ ಟಾಸ್ಕ್‌ನಲ್ಲಿ ಎಲ್ಲ ಸ್ಪರ್ಧಿಗಳು ಖಡಕ್ ಆಗಿಯೇ ಕಾರಣವನ್ನು ನೀಡಿದ್ದರು. ಹೆಚ್ಚಾಗಿ ಮಸಿ ಹಾಕಿಕೊಂಡವರು ರಿಷಾ. ಅದೇ ರೀತಿ ಸಖತ್ ಆಗಿ ಕೌಂಟರ್ ಕೊಟ್ಟು ಮಾತನಾಡಿದ್ದು ಸೂರಜ್ (Sooraj). ಹೌದು ಸೂರಜ್ ಮಾತಿಗೆ ಗಿಲ್ಲಿಯೇ ಶಿಳ್ಳೆ ಹೊಡೆದಿದ್ದಾರೆ.
ಸೂರಜ್ ಹೇಳಿದ್ದು ಹೀಗೆ, ರಿಷಾ ಅವರು ಈಗಲೂ ಅಂದುಕೊಳ್ಳುತ್ತಿರಬಹುದು, ಜಾಸ್ತಿ ಜನ ನಂಗೆ ಕಲರ್ ಹೊಡಿತಾ ಇದ್ದಾರೆ ನಾನು ಕ್ಯಾಮೆರಾ ಮುಂದೆ ಜಾಸ್ತಿ ಬರ್ತಾ ಇದ್ದೀನಿ ಅಂತ. ಎಲ್ಲರಿಗೂ ಡವ್ ಡವ್ ಅಂತಿಯಾ. ಆದರೆ ನೀನೇ ಡವ್ ಪ್ರೋ ಮ್ಯಾಕ್ಸ್.
ಎಲ್ಲೇ ಜಗಳ ಆಗಲಿ ನಾನು ಇಣುಕಿ ನೋಡಿದ್ರೆ ಕ್ಯಾಮೆರಾಗೆ ಬರ್ತೀನಿ ಅಂತ ಅಂದುಕೊಳ್ತೀಯಾ. ಇನ್ನು ಆಗಾಗ ರಿಯಲ್ ರಿಷಾ ಬರ್ತಾರೆ ಅಂತಿಯಾ. ಆದರೆ ನಿಂಗೆ ಈ ಬಗ್ಗೆ ಕ್ಲಾರಿಟಿ ಇಲ್ಲ. ನಾನು ಕಾರ್ಡ್ ಪ್ಲೇ ಮಾಡ್ತೀಯಾ ಅಂತಿಯಾ. ಆದರೆ ಅಲ್ಲೂ ನೀನು ಕ್ಯಾಮೆರಾ ಇದೆ ಅಂತ ಏನೇನೋ ಅಂತಿಯಾ. ಈ ವಿಚಾರಕ್ಕೆ ಕಪ್ಪು ಬಣ್ಣ ಹಾಕ್ತೀನಿ ಎಂದರು.
ಇದನ್ನೂ ಓದಿ: BBK 12: ಸೂರಜ್ ಕೌಂಟರ್‌ಗೆ ಸೈಲೆಂಟ್ ಆದ ರಿಷಾ! ಒಂದೊಂದು ಡೈಲಾಗ್‌ಗೂ ಕುಣಿದು ಕುಪ್ಪಳಿಸಿದ ಗಿಲ್ಲಿ
ಇನ್ನು ರಿಷಾ ಕೂಡ ಈ ಮಾತಿಗೆ, ಗುಡ್ ಬುಕ್ಸ್‌ನಲ್ಲಿ ಇರೋದಿಕ್ಕೆ ನೋಡ್ತೀಯಾ. ಇಲ್ಲಿ ಒಳ್ಳೆಯವರಾಗಿದ್ರೂ ಕೊಡ್ತಾರೆ, ಕೆಟ್ಟವರಾಗಿದ್ರೂ ಕೊಡ್ತಾರೆ. ಮಾತಾಡಿದ್ರೂ ಕೊಡ್ತಾರೆ, ಮಾತಾಡದಿದ್ರೂ ಕೊಡ್ತಾರೆ. ನೀನು ಊಸರವಳ್ಳಿ ಎಂದು ಹೇಳಿದ್ದಾರೆ. “ನನಗೆ ಎಲ್ಲರೂ ಸೇರಿ ಜೈ ಅಂದ್ರು, ನಿನಗೆ ಎಲ್ಲರೂ ಕೈ ಅಂದ್ರು” ಎಂದು ಸೂರಜ್ ಹೇಳಿದ್ದಾರೆ. ಆಗ ರಿಷಾ ಗೌಡ ಅವರು, “ಕೈ ಅಂತಾರಲ್ಲ ಅವರು ಯಾವಾಗ ಕೈ ಕೊಡ್ತಾರೆ ನೋಡಿಕೋ” ಎಂದು ಹೇಳಿದ್ದಾರೆ.