Bhagya Lakshmi Serial: ಹೊಸ ತಿರುವಿನ ಅಂಚಲ್ಲಿ ಭಾಗ್ಯಾಲಕ್ಷ್ಮೀ ಧಾರಾವಾಹಿ: ಕಾದಿದೆ ಬಹುದೊಡ್ಡ ಸರ್ಪ್ರೈಸ್
ಭಾಗ್ಯ, ದೇವಸ್ಥಾನಕ್ಕೆ ಹೋಗಿ, ದೇವರಲ್ಲಿ ಪ್ರಾರ್ಥಿಸಿಕೊಂಡು, ತನ್ನ ಮನದ ಅಳಲನ್ನು ತೋಡಿಕೊಂಡಿದ್ದಾಳೆ. ನನಗೆ ಒಂದೇ ಒಂದು ದಾರಿ ತೋರಿಸು ಕೊಡು ದೇವ್ರೆ.. ನನ್ಗೆ ಏನು ಮಾಡಬೇಕು ಅಂತಾನೆ ಗೊತ್ತಾಗ್ತಾ ಇಲ್ಲ. ನನಗೀಗ ಬೇರೆ ಯಾರೂ ಇಲ್ಲ.. ನಿನ್ನನ್ನೇ ನಂಬಿದ್ದೀನಿ.. ನೀನೇ ದಾರಿ ತೋರಿಸಬೇಕು ಎಂದು ದೇವರ ಬಳಿ ಅಂಗಲಾಚಿದ್ದಾಳೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ( Bhagya Lakshmi Serial ) ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಧಾರಾವಾಹಿ ಯಶಸ್ವಿಯಾಗುತ್ತಿದೆ. ಇದೀಗ ಕೆಲವೇ ದಿನಗಳಲ್ಲಿ ಭಾಗ್ಯಾಳ ಹೊಸ ಪಯಣ ಶುರುವಾಗಿದೆ. ಇಷ್ಟು ದಿನ ನೋವೆನ್ನು ನುಂಗಿ ಬದುಕುತ್ತಿದ್ದ ಭಾಗ್ಯಾಗೆ ಇದೀಗ ಮತ್ತಷ್ಟು ಕಷ್ಟಗಳು ಬಂದೊದಗಿದೆ. ಇದನ್ನೆಲ್ಲ ಮೆಟ್ಟಿನಿಂತು ನಾನು ಮುಖವಾಡ ಹಾಕಿಕೊಂಡು ನಗುನಗುತ್ತಾ ಬದುಕುತ್ತೇನೆ ಎಂದು ಭಾಗ್ಯಾ ಹೇಳಿದ್ದಾಳೆ.
ಕನ್ನಿಕಾ ಜೊತೆ ಸೇರಿಕೊಂಡು, ಭಾಗ್ಯಾಳನ್ನು ಕೆಲಸದಿಂದ ತೆಗೆಸುವ ಪ್ಲ್ಯಾನ್ ಶ್ರೇಷ್ಠಾ ಮಾಡಿದ್ದಳು. ಅದರಂತೆ ಹೋಟೆಲ್ ಮ್ಯಾನೇಜರ್ ಜೊತೆ ಪ್ಲ್ಯಾನ್ ಮಾಡಿದ ಕನ್ನಿಕಾ ಭಾಗ್ಯಾಳನ್ನು ಕೆಲಸದಿಂದ ತೆಗೆಯುವಲ್ಲಿ ಯಶಸ್ವಿಯಾಗಿದ್ದಾಳೆ. ತಪ್ಪು ಮಾಡಿಲ್ಲದಿದ್ದರೂ ಮಾಧ್ಯಮದವರಲ್ಲಿ, ಇದು ನನ್ನದೇ ತಪ್ಪು, ಆಗಿರುವ ತಪ್ಪಿಗೆ ಕ್ಷಮೆ ಕೋರಿ, ಕೆಲಸಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳುತ್ತಾಳೆ. ಭಾಗ್ಯಾ ಕೆಲಸ ಕಳೆದುಕೊಂಡ ವಿಚಾರ ಮೀಡಿಯಾದಲ್ಲಿ ಬಂದ ಕಾರಣ ಎಲ್ಲರಿಗೂ ಗೊತ್ತಾಗಿದೆ. ಶ್ರೇಷ್ಠಾ-ತಾಂಡವ್ ಇದನ್ನು ಕಂಡು ಖುಷಿಯಲ್ಲಿ ತೇಲಾಡುತ್ತಾರೆ.
ಅತ್ತ ಭಾಗ್ಯಾ ಕೆಲಸ ಕಳೆದುಕೊಂಡಿರುವುದು ಸೂರ್ಯವಂಶಿ ಕುಟುಂಬದಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿದೆ. ಮನೆಯವರು ಭಾಗ್ಯಾಗೆ ಫೋನ್ ಕಾಲ್ ಮಾಡಲು ಯತ್ನಿಸಿದರೂ, ಆಕೆ ಕರೆ ಸ್ವೀಕರಿಸಲಿಲ್ಲ. ಎಲ್ಲರೂ ಆತಂಕದಲ್ಲಿ ಇರುವಾಗಲೇ, ತನ್ವಿ ಕಾಲೇಜಿನಿಂದ ಬಂದು, ಕೋರ್ಸ್‌ಗೆ ಸೇರಲು 80,000 ರೂಪಾಯಿ ಬೇಕಾಗಿದೆ, ನಾಳೆಯೇ ಕೊನೆಯ ದಿನ ಎಂದು ಹೇಳುತ್ತಾಳೆ. ಆದರೆ ಆಕೆಗೆ ಭಾಗ್ಯಾ ಕೆಲಸ ಕಳೆದುಕೊಂಡ ಬಗ್ಗೆ ಅರಿವಿರುವುದಿಲ್ಲ. ಕುಸುಮಾ ಕೋಪಗೊಂಡು ತನ್ವಿಗೆ ಹೊಡೆಯಲು ಹೋಗುತ್ತಾರೆ.
ಇತ್ತ ಭಾಗ್ಯ, ದೇವಸ್ಥಾನಕ್ಕೆ ಹೋಗಿ, ದೇವರಲ್ಲಿ ಪ್ರಾರ್ಥಿಸಿಕೊಂಡು, ತನ್ನ ಮನದ ಅಳಲನ್ನು ತೋಡಿಕೊಂಡಿದ್ದಾಳೆ. ನನಗೆ ಒಂದೇ ಒಂದು ದಾರಿ ತೋರಿಸು ಕೊಡು ದೇವ್ರೆ.. ನನ್ಗೆ ಏನು ಮಾಡಬೇಕು ಅಂತಾನೆ ಗೊತ್ತಾಗ್ತಾ ಇಲ್ಲ. ನನಗೀಗ ಬೇರೆ ಯಾರೂ ಇಲ್ಲ.. ನಿನ್ನನ್ನೇ ನಂಬಿದ್ದೀನಿ.. ನೀನೇ ದಾರಿ ತೋರಿಸಬೇಕು ಎಂದು ದೇವರ ಬಳಿ ಅಂಗಲಾಚಿದ್ದಾಳೆ. ಮತ್ತೊಂದೆಡೆ ಭಾಗ್ಯಾ ಮನೆಗೆ ತೆರಳುತ್ತಿರುವಾಗ ಅಡ್ಡ ಬಂದ ತಾಂಡವ್, ಓಪನ್ ಚಾಲೆಂಜ್ ಮಾಡ್ತಾ ಇದ್ದೀನಿ ಕೇಳಿಸ್ಕೊ.. ಎಲ್ರೂ ನಿನ್ ಜೊತೆ ಇದ್ದಾರೆ ಅಂತ ಮೆರಿತಿದ್ದೆ ಅಲ್ವಾ.. ಇಷ್ಟರಲ್ಲೇ ಎಲ್ಲರೂ ನನ್ ಸೈಡ್ ಬರ್ತಾರೆ ನೋಡ್ತಾ ಇರು. ನೀನು ಇದೇ ರೀತಿ ಒಬ್ಬಳೇ ನಿಂತಿರ್ತೀಯ ಎಂದು ಹೇಳಿದ್ದಾನೆ.
ಈ ಎಲ್ಲ ಘಟನೆಯ ಬಳಿಕ ಇದೀಗ ಭಾಗ್ಯಾಲಕ್ಷ್ಮೀ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಈ ಕುರಿತು ಕಲರ್ಸ್ ಕನ್ನಡ ಪ್ರೊಮೊ ಒಂದನ್ನು ಬಿಡುಗಡೆ ಮಾಡಿದೆ. ಇದಕ್ಕೆ ಹೊಸ ತಿರುವಿನ ಅಂಚಲ್ಲಿ ಭಾಗ್ಯಾಲಕ್ಷ್ಮೀ, ನೀವೆಷ್ಟು ಎಗ್ಸೈಟ್ ಆಗಿದ್ದೀರಾ ಎಂದು ಬರೆಯಲಾಗಿದೆ. ಜೊತೆಗೆ ಭಾಗ್ಯಾ ಜೋಕರ್ ವೇಷ ತೊಡಲು ತಯಾರಾಗಿರುವ ಶೂಟಿಂಗ್ ನಡೆಯುತ್ತಿದೆ. ನಾನಿನ್ನು ದುಃಖನ ಮುಚ್ಚಿಟ್ಟುಕೊಂಡು ಮುಖವಾಡ ತೊಡುತ್ತೇನೆ. ಸಾಯೋವಷ್ಟು ಗಾಸಿಯಾಗಿದ್ರೂ.. ಇನ್ನು ಸಾಯೋವರೆಗು ನಗ್ತೀನಿ ಎಂದು ಜೋಕರ್ ಮುಖವಾಡ ತೊಟ್ಟಿದ್ದಾಳೆ ಭಾಗ್ಯಾ.
Trivikram BBK 11: ಎಲ್ಲಾ ಗೊತ್ತಿದ್ರೂ ಬಿಗ್ ಬಾಸ್ ಮನೆಯಲ್ಲಿ ಏನೂ ಗೊತ್ತಿಲ್ಲದಂತಿದ್ದ ತ್ರಿವಿಕ್ರಮ್-ಅನುಷಾ ರೈ