ಬಿಗ್ ಬಾಸ್ ಸೀಸನ್ 12 ರಲ್ಲಿ (Bigg Boss Kannada 12) ಅಭಿಷೇಕ್ (Abhishek And Dhruvanth) ಹಾಗೂ ಧನುಷ್ (Dhanush) ಅವರು ಅಶ್ವಿನಿ ಅವರ ಕಡೆ ವಾಲುತ್ತಿದ್ದಾರೆ. ಅಶ್ವಿನಿ ಗೌಡಗೆ ಅಭಿಷೇಕ್ ತಾಯಿ (Mother) ಸ್ಥಾನ ಕೊಟ್ಟಿದ್ದಾರೆ. ನೀವು ನನ್ನ ತಾಯಿಯಂತೆ ಎಂದು ಹೇಳಿದ್ದಾರೆ. ಮೊದ ಮೊದಲು ಗಿಲ್ಲಿ ಜೊತೆ ಕ್ಲೋಸ್ ಇದ್ದರು ಅಭಿಷೇಕ್. ಆದರೀಗ ಅಶ್ವಿನಿ ಟೀಂ ಸೇರಿದಂತಿದೆ. ನಿನ್ನೆಯ ಎಪಿಸೋಡ್‌ನಲ್ಲಿ ಸ್ಪಂದನಾ ಜೊತೆ ಮಾತನಾಡುವಾಗ, ಅಭಿಷೇಕ್ ಅವರು ಸುಳ್ಳನ್ನು ಹೇಳಿದ್ದಾರೆ. ಗಿಲ್ಲಿ ಅವರು ನನ್ನ ಬಳಿ ಕ್ಷಮೇ ಕೇಳಿಲ್ಲ ಎಂದಿದ್ದಾರೆ.
ಕ್ಷಮೆ ಕೇಳಿಲ್ಲ ಎಂದ ಅಭಿಷೇಕ್!
ಡ್ರಮ್ ಟಾಸ್ಕ್ ನಡೆದಿತ್ತು. ಇದರಲ್ಲಿ ಧನುಷ್, ಅಭಿಷೇಕ್ ಮತ್ತು ಗಿಲ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಟಾಸ್ಕ್ ಭರದಲ್ಲಿ ಏಕವಚನದಲ್ಲಿ ಬೈದಾಡಿಕೊಂಡಿದ್ದರು. ಈ ಬಗ್ಗೆ ಗಿಲ್ಲಿ ಅವರ ಬಳಿಯೂ ಧನುಷ್ ಹಾಗೂ ಅಭಿಷೇಕ್ ಚರ್ಚಿಸಿದರು.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಬಗ್ಗೆಯೇ ನೆಗೆಟಿವ್ ಕಮೆಂಟ್; ಧ್ರುವಂತ್ ಡಬಲ್ ಗೇಮ್!
ಈ ಟಾಸ್ಕ್ ಮುಗಿದ ಬಳಿಕ ಗಾರ್ಡನ್ ಏರಿಯಾದಲ್ಲಿ ಸ್ಪಂದನಾ ಮತ್ತು ಅಭಿಷೇಕ್ ಮಾತನಾಡುತ್ತಿರುತ್ತಾರೆ. ಗಿಲ್ಲಿಗೆ ತನ್ನ ತಂಡದಲ್ಲಿ ರಕ್ಷಿತಾ ಆಟವಾಡೋದು ಬೇಕಿರಲಿಲ್ಲ. ವಂಶದ ಕುಡಿ ಅಂತ ಕರೀತಾನೆ, ಆದ್ರೆ ಆಟಕ್ಕೆ ರಕ್ಷಿತಾ ಬೇಡ. ಎಲ್ಲವೂ ಇಲ್ಲಿ ಬದಲಾಗುತ್ತಿರುತ್ತದೆ. ರಕ್ಷಿತಾ ಅವರನ್ನು ಆಟಕ್ಕೆ ಗಿಲ್ಲಿ ಕರದೇ ಇರಲಿಲ್ಲ. ಅಂತಿಮವಾಗಿ ಅಶ್ವಿನಿ ಅವರೇ ಕರೆದರು ಎಂದು ಅಭಿಷೇಕ್ ಹೇಳಿದ್ದಾರೆ.
ಟಾಸ್ಕ್ ಮುಗಿದ್ಮೇಲೆ ಧನುಷ್ ಹಾಗೂ ಅಭಿಷೇಕ್‌ಗೆ ಗಿಲ್ಲಿ ನಟ ಕ್ಷಮೆ ಕೇಳಿದ್ದರು. ಆದರೆ, ಸ್ಪಂದನಾ ಬಳಿ ಗಿಲ್ಲಿ ಕ್ಷಮೆ ಕೇಳಿಲ್ಲ ಎಂದು ಅಭಿಷೇಕ್ ಸುಳ್ಳು ಹೇಳಿದ್ದಾರೆ. ವೈರಲ್ ವಿಡಿಯೋದಲ್ಲಿ ಟಾಸ್ಕ್ ನಂತರ ಧನುಷ್ ಹಾಗೂ ಅಭಿಷೇಕ್ ಬಳಿ ಗಿಲ್ಲಿ ನಟ ಕ್ಷಮೆ ಕೇಳಿರುವುದು ಇದೆ. ‘ಬೇಜಾರಾಗಬೇಡ ಕಣಣ್ಣ ಅಂತ ಧನುಷ್ ಹಾಗೂ ಅಭಿಷೇಕ್‌ಗೆ ಗಿಲ್ಲಿ ನಟ ಹೇಳಿದ್ದಾರೆ.
ಅಶ್ವಿನಿಗೆ ಖಡಕ್ ಆಗಿ ಅವಾಜ್ ಹಾಕಿದ ಗಿಲ್ಲಿ
ಇವತ್ತಿನ ಎಪಿಸೋಡ್‌ನಲ್ಲಿ ಗಿಲ್ಲಿ ಮತ್ತು ಅಶ್ವಿನಿ ,ಮತ್ತೆ ಮುಖಾಮುಖಿ ಆಗುತ್ತಿದ್ದಾರೆ. ಗಿಲ್ಲಿ ಹಾಗೂ ಅಶ್ವಿನಿಯ ವಾಗ್ವಾದ ತಾರರಕ್ಕೇರಿದೆ. ಪ್ರತಿ ಮಾತು ಮಾತಿಗೂ ಇಬ್ಬರ ಮಧ್ಯೆ ವಾಗ್ವಾದ ಜೋರಾಗುತ್ತದೇ ಇದೆ. ಅದರಲ್ಲೂ ರಘು ಅವರ ಪರ ಗಿಲ್ಲಿ ಧ್ವನಿ ಎತ್ತಿದ್ದಾರೆ. ಹೊಸ ಪ್ರೋಮೋ ಔಟ್ ಆಗಿದೆ. ಮಾತಿನ ಮೂಲಕ ಅಶ್ವಿನಿ ಛಾಟಿ ಏಟು ಕೊಟ್ಟಿದ್ದಾರೆ ಗಿಲ್ಲಿ. `ನೇರವಾಗಿಯೇ ಗೇಟ್ ಹತ್ರ ಬಂದು ಮನೆಗೆ ಹೋಗ್ತೀನಿ ಹೋಗ್ತೀನಿ ಅಂತೀರಲ್ಲ ಹೋಗಿ. ನಾವೇನು ಬೇಡ ಅಂತ ನಿಮ್ಮನ್ನ ಹಿಡಿದುಕೊಂಡು ಕೂತಿದ್ದೀವಾ?' ಎಂದು ಅಶ್ವಿನಿಗೆ ಹೇಳಿದ್ದಾರೆ ಗಿಲ್ಲಿ.
ಗಿಲ್ಲಿ ಮಾತನಾಡಿ, `ರಘು ಅವರು ನಿಮ್ಮನ್ನ ಅಶ್ವಿನಿ ಅಲ್ಲದೇ ಆಶು ಅಂತ ಕರೆಯಬೇಕಿತ್ತಾ? ಅಶ್ವಿನಿ ಮೇಡಮ್, ನಿಮ್ಮ ಹೆಸರಿನ ಮುಂದೆ A ಮುಂಚೆ ಇದ್ದಿದ್ರೆ, A ಅಶ್ವಿನಿ ಅಂತ ಕರೆಯುತ್ತಾ ಇದ್ವಿ. ಗೇಟ್ ಹತ್ರ ಬಂದು ಮನೆಗೆ ಹೋಗ್ತೀನಿ ಹೋಗ್ತೀನಿ ಅಂದ್ರೆ ಹೋಗಿ.
ಇದನ್ನೂ ಓದಿ: Bigg Boss Kannada 12: ರಿಷಾಗೆ ವಾರ್ನಿಂಗ್ ಕೊಟ್ಟ ಮಾಳು; ಇಬ್ಬರ ಕಿರುಚಾಟಕ್ಕೆ ಮನೆಮಂದಿ ಸೈಲೆಂಟ್
ನಾವೇನು ಬೇಡ ಅಂತ ನಿಮ್ಮನ್ನ ಹಿಡಿದುಕೊಂಡು ಕೂತಿದ್ದೀವಾ? ಎಂದು ಗಿಲ್ಲಿ ನೇರವಾಗಿ ಅಶ್ವಿನಿಗೆ ಹೇಳಿದ್ದಾರೆ. ನಿನ್ನ ಅಂಥವರನ್ನ ಎಷ್ಟು ಜನ ನೋಡಿಲ್ಲ ಎಂದು ಅಶ್ವಿನಿ ಎದುರು ವಾದಿಸಿದ್ದಾರೆ. ಅದಕ್ಕೆ ಗಿಲ್ಲಿ ಖಡಕ್ ಆಗಿಯೇ, ಕಾಲು ಮೇಲು ಕಾಲು ಹಾಕಿಕೊಂಡು, ನನ್ನಂಥವರ ನೋಡಿರಬಹುದು, ಆದರೆ ನನ್ನ ನೋಡಿಲ್ಲ' ಎಂದು ಆವಾಜ್ ಹಾಕಿದ್ದಾರೆ.