ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಧನುಷ್‌ ಗೌಡ ಪ್ರಕಾರ ಇವರು ಮಿಡ್‌ ವೀಕ್‌ ಎಲಿಮಿನೇಟ್‌ ಆಗ್ತಾರಂತೆ! ಯಾರದು?

Dhanush: ಈಗಾಗಲೇ ಬಿಗ್‌ ಬಾಸ್‌ ಮನೆಯಿಂದ ರಾಶಿಕಾ ಔಟ್‌ ಆಗಿದ್ದಾರೆ. ಮಿಡ್‌ ವೀಕ್‌ ಎಲಿಮಿನೇಶನ್‌ ಇದೆ ಎಂದು ಕಿಚ್ಚ ಸುದೀಪ್‌ ಅವರು ಅನೌನ್ಸ್‌ ಮಾಡಿದ್ದಾರೆ. ಟಾಪ್‌ 5ರಲ್ಲಿ ಒಬ್ಬರು ಮಿಡ್‌ ವೀಕ್‌ ಎಲಿಮಿನೇಟ್‌ ಆಗ್ತಾರೆ, ಮಧ್ಯರಾತ್ರಿ ಎಲಿಮಿನೇಶನ್‌ ಆಗುವುದು. ಈಗಾಗಲೇ ವೋಟಿಂಗ್‌ ಲೈನ್ಸ್‌ ಓಪನ್‌ ಇದೆ. ಅದಕ್ಕೂ ಮುಂಚೆ ಧನುಷ್‌ ಈಗ ಯಾರು ಹೋಗ್ತಾರೆ ಅಂತ ಮಾತನಾಡಿದ್ದಾರೆ. ಪಂಚಾಯ್ತಿ ಮುಗಿದ ಬಳಿಕ ಕಾವ್ಯ ಅವರು ಸಖತ್‌ ಅಪ್‌ಸೆಟ್‌ ಆಗಿದ್ದರು. ಆಗ ಧನುಷ್‌ ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಈಗಾಗಲೇ ಬಿಗ್‌ ಬಾಸ್‌ (Bigg Boss Kannada 12) ಮನೆಯಿಂದ ರಾಶಿಕಾ ಔಟ್‌ (Rashika Shetty) ಆಗಿದ್ದಾರೆ. ಮಿಡ್‌ ವೀಕ್‌ ಎಲಿಮಿನೇಶನ್‌ ಇದೆ ಎಂದು ಕಿಚ್ಚ ಸುದೀಪ್‌ ಅವರು ಅನೌನ್ಸ್‌ ಮಾಡಿದ್ದಾರೆ. ಟಾಪ್‌ 5ರಲ್ಲಿ ಒಬ್ಬರು ಮಿಡ್‌ ವೀಕ್‌ ಎಲಿಮಿನೇಟ್‌ (Mid Week Elimination) ಆಗ್ತಾರೆ, ಮಧ್ಯರಾತ್ರಿ ಎಲಿಮಿನೇಶನ್‌ ಆಗುವುದು. ಈಗಾಗಲೇ ವೋಟಿಂಗ್‌ ಲೈನ್ಸ್‌ ಓಪನ್‌ ಇದೆ. ಅದಕ್ಕೂ ಮುಂಚೆ ಧನುಷ್‌ ಈಗ ಯಾರು ಹೋಗ್ತಾರೆ ಅಂತ ಮಾತನಾಡಿದ್ದಾರೆ. ಪಂಚಾಯ್ತಿ ಮುಗಿದ ಬಳಿಕ ಕಾವ್ಯ (Kavya Shaiva) ಅವರು ಸಖತ್‌ ಅಪ್‌ಸೆಟ್‌ ಆಗಿದ್ದರು. ಆಗ ಧನುಷ್‌ (Dhanush) ಮಾತನಾಡಿದ್ದಾರೆ.

ಖುಷಿಯಿಂದ ಕಳುಹಿಸಿ ಕೊಡ್ತೀನಿ

ಕಿಚ್ಚ ಸುದೀಪ್‌ ಅವರ ಕೊನೆಯ ಕಿಚ್ಚನ ಪಂಚಾಯಿತಿ, ಸಂಡೇ ವಿಥ್‌ ಸುದೀಪ ಎಪಿಸೋಡ್‌ಗಳು ಮುಗಿದ ಬಳಿಕ, ರಾಶಿಕಾ ಶೆಟ್ಟಿ ಎಲಿಮಿನೇಶನ್‌ ಬಳಿಕ ಧನುಷ್‌ ಗೌಡ, ಕಾವ್ಯ ಶೈವ ಅವರು ದೊಡ್ಮನೆಯಲ್ಲಿ ಬೆಡ್‌ ರೂಮ್‌ ಏರಿಯಾದಲ್ಲಿ ಮಾತನಾಡಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಮಲ್ಲಮ್ಮ ಬಗ್ಗೆ ಧ್ರುವಂತ್‌ ಅಸಮಾಧಾನ! ನನಗೆ ನೀವು, ನಿಮಗೆ ನಾನು ಎಂದ ಅಶ್ವಿನಿ

ಹೋಗು ಡ್ರೆಸ್‌ ಚೇಂಜ್‌ ಮಾಡು, ಮಿಡ್‌ ವೀಕ್‌ ಕಳಿಸ್ತಾರೆ, ಹೋಗೆ, ರೆಡಿ ಆಗು ಎಂದಿದ್ದಾರೆ ಧನುಷ್‌. ಅದಕ್ಕೆ ಕಾವ್ಯ ದ್ದವರು ನಾನು ಯಾವಾಗಲೂ ರೆಡಿ ಆಗೇ ಇರ್ತೀನಿ. ನಾನು ಇಲ್ಲಿ ಕೂತರೆ ನಿನಗೇನು ಸಮಸ್ಯೆ ಅಂತ ಹೇಳಿದ್ದಾರೆ. ನೀನು ಹೋದರೆ ಖುಷಿಯಿಂದ ಕಳುಹಿಸಿ ಕೊಡ್ತೀನಿ ಅಂತ ಧನುಷ್‌ ಹೇಳಿದರು.



ಗಿಲ್ಲಿ ನಟ ಹಾಗೂ ರಕ್ಷಿತಾ ಬಿಟ್ಟು ಕಾವ್ಯ ಶೈವ ಎಲ್ಲಿಯೂ ಕಾಣಿಸಿಲ್ಲ ಎನ್ನೋ ರೀತಿಯಲ್ಲಿ ಕಿಚ್ಚ ಸುದೀಪ್‌ ಮಾತನಾಡುತ್ತಾರೆ.

ಬಿಗ್ ಬಾಸ್ ಫಿನಾಲೆ ಯಾವಾಗ?

ಇನ್ನು ಗಿಲ್ಲಿ ನಟ ಕೂಡ ಕಾವ್ಯ ಶೈವ ಅವರು ಔಟ್‌ ಆಗ್ತಾರೆ, ಮಿಡ್‌ ವೀಕ್‌ ಎಲಿಮಿನೇಶನ್‌ ಆಗುವುದು ಎಂಬರ್ಥದಲ್ಲಿ ಮಾತನಾಡಿದ್ದರು. ಕಾವ್ಯ ಜೊತೆಗೆ ಗಿಲ್ಲಿ ಮಾತನಾಡುತ್ತಿರಲಿಲ್ಲ, ಸಣ್ಣ ಮನಸ್ತಾಪ ಆಗಿತ್ತು. ಆ ವೇಳೆ ಗಿಲ್ಲಿ ನಟ ಅವರು ಟಾಂಟ್‌ ಮಾಡಿದ್ದರು.

ಇದನ್ನೂ ಓದಿ: Bigg Boss Kannada 12: ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟ ಕಾವ್ಯ! ಗಿಲ್ಲಿ ನಟ ಕೊಟ್ಟ ಗಿಫ್ಟ್‌ ಏನು?

ಜನವರಿ 17 ಹಾಗೂ 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಫಿನಾಲೆ ಸಂಜೆ 6 ಗಂಟೆಗೆ ಆರಂಭ ಆಗುವ ಸಾಧ್ಯತೆ ಇದೆ. ಎಲಿಮಿನೇಟ್‌ ಆಗಿರುವ ಸ್ಪರ್ಧಿಗಳು ಡ್ಯಾನ್ಸ್ ಕೂಡ ಮಾಡುತ್ತಾರೆ. ಈ ಬಾರಿ ಎಲಿಮಿನೇಟ್ ಆದ ಸ್ಪರ್ಧಿಗಳು ಫಿನಾಲೆಯಲ್ಲಿ ಇರಲಿದ್ದಾರೆ. ಗೆದ್ದ ಸ್ಪರ್ಧಿಗೆ 50 ಲಕ್ಷ ಕ್ಯಾಶ್ ಹಾಗೂ ಟ್ರೋಫಿ ಸಿಗಲಿದೆ.

Yashaswi Devadiga

View all posts by this author