ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಮಲ್ಲಮ್ಮ ಬಗ್ಗೆ ಧ್ರುವಂತ್‌ ಅಸಮಾಧಾನ! ನನಗೆ ನೀವು, ನಿಮಗೆ ನಾನು ಎಂದ ಅಶ್ವಿನಿ

ashwini Dhruvanth: ಬಿಗ್‌ ಬಾಸ್‌ ಸೀಸನ್‌ 12ರ ಫಿನಾಲೆ ಸನೀಹದಲ್ಲಿದೆ. ಈಗಾಗಲೇ ರಾಶಿಕಾ ಅವರು ಔಟ್‌ ಆಗಿದ್ದಾರೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರ ಜೊತೆಗೆ ಸರ್‌ಪ್ರೈಸ್‌ ಬಿಗ್‌ ಬಾಸ್‌ ನೀಡುತ್ತಲೇ ಇದ್ದಾರೆ. ಇದೀಗ ಮಲ್ಲಮ್ಮ ಮತ್ತೆ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ಧ್ರುವಂತ್‌ ಬಿಗ್‌ ಬಾಸ್‌ ಶುರುವಾದಾಗಿನಿಂದ ಮಲ್ಲಮ್ಮ ಜೊತೆ ಸಖತ್‌ ಕ್ಲೋಸ್‌ ಇದ್ದರು. ಆದರೀಗ ಎಲ್ಲವೂ ಬದಲಾದಂತಿದೆ. ಮಲ್ಲಮ್ಮ ಬಗ್ಗೆ ಧ್ರುವಂತ್‌ ಅವರು ಅಶ್ವಿನಿ ಜೊತೆ ಮಾತನಾಡುತ್ತ ಅಸಮಧಾನ ಹೊರ ಹಾಕಿದ್ದಾರೆ.

ಮಲ್ಲಮ್ಮ ಬಗ್ಗೆ ಧ್ರುವಂತ್‌ ಅಸಮಾಧಾನ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 12, 2026 7:40 AM

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ಫಿನಾಲೆ (Finale) ಸನೀಹದಲ್ಲಿದೆ. ಈಗಾಗಲೇ ರಾಶಿಕಾ ಅವರು ಔಟ್‌ ಆಗಿದ್ದಾರೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಅದರ ಜೊತೆಗೆ ಸರ್‌ಪ್ರೈಸ್‌ ಬಿಗ್‌ ಬಾಸ್‌ ನೀಡುತ್ತಲೇ ಇದ್ದಾರೆ. ಇದೀಗ ಮಲ್ಲಮ್ಮ ಮತ್ತೆ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ಧ್ರುವಂತ್‌ ಬಿಗ್‌ ಬಾಸ್‌ ಶುರುವಾದಾಗಿನಿಂದ ಮಲ್ಲಮ್ಮ (Mallamma) ಜೊತೆ ಸಖತ್‌ ಕ್ಲೋಸ್‌ ಇದ್ದರು. ಆದರೀಗ ಎಲ್ಲವೂ ಬದಲಾದಂತಿದೆ. ಮಲ್ಲಮ್ಮ ಬಗ್ಗೆ ಧ್ರುವಂತ್‌ (Dhruvanth) ಅವರು ಅಶ್ವಿನಿ ಜೊತೆ ಮಾತನಾಡುತ್ತ ಅಸಮಧಾನ ಹೊರ ಹಾಕಿದ್ದಾರೆ.

ಮಲ್ಲಮ್ಮ ಮುಂಚೆ ಥರ ಕ್ಲೋಸ್‌ನೆಸ್‌ ಇಲ್ಲ

ಹೊಸ ಪ್ರೋಮೋ ಔಟ್‌ ಆಗಿದೆ. ಮಲ್ಲಮ್ಮ ಸಖತ್‌ ಎಂಟ್ರಿ ಕೊಟ್ಟಿದ್ದಾರೆ. ಬಂದವರೇ ಗಿಲ್ಲಿ ಮಾತನಾಡಿಸಲ್ವ? ಎಂದು ಕೇಳಿದ್ದಾರೆ. ತುಂಬಾ ಬ್ಯೂಟಿಫುಲ್‌ ಆಗಿದಿಯಾ, ಹೊರಗಡೆ ಫ್ಯಾನ್ಸ್‌ ಫಾಲೋವರ್ಸ್‌ ಜಾಸ್ತಿನಾ? ಅಂತ ಕೇಳಿದ್ದಾರೆ ಗಿಲ್ಲಿ. ಅದಕ್ಕೆ ಮಲ್ಲಮ್ಮ ಇದ್ದವರು ನಂದೆ ಹವಾ ಎಂದಿದ್ದಾರೆ. ಅದೇ ಹೊತ್ತಿಗೆ ಧ್ರುವಂತ್‌ ಅವರು ಮುಂದೆ ಬಂದು ಮಲ್ಲಮ್ಮ ಅವರೇ ನಿಮ್ಮನ್ನ ತುಂಬಾ ಮಿಸ್‌ ಮಾಡಿಕೊಂಡೆ.

ನೀವು ಹೋದ ಮೇಲೆ ನನಗೆ ಯಾರು ಜೋಡಿನೇ ಇರಲಿಲ್ಲ ಎಂದಿದ್ದಾರೆ. ಆದರೆ ಮಲ್ಲಮ್ಮ ಯಾವುದಕ್ಕೂ ಅಷ್ಟಾಗಿ ಪ್ರತಿಕ್ರಿಯೆ ನೀಡಿಲ್ಲ. ಇದಾದ ಬಳಿಕ ಧ್ರುವಂತ್‌ ಅಶ್ವಿನಿ ಅವರ ಬಳಿ ಮಾತನಾಡಿ, ಮಲ್ಲಮ್ಮ ಮುಂಚೆ ಥರ ಕ್ಲೋಸ್‌ನೆಸ್‌ ಇಲ್ಲ ಎಂದಿದ್ದಾರೆ. ಅದಕ್ಕೆ ಅಶ್ವಿನಿ ಇದ್ದವರು ಇರಲಿ ನನಗೆ ನೀವು, ನಿಮಗೆ ನಾನು ಎಂದಿದ್ದಾರೆ.

ವೈರಲ್‌ ಪ್ರೋಮೋ



ನಾಮಿನೇಟ್ ಆಗಿದ್ದ ಗಿಲ್ಲಿ, ಕಾವ್ಯಾ, ರಾಶಿಕಾ, ಧ್ರುವಂತ್, ರಘು, ರಕ್ಷಿತಾ, ಅವರುಗಳಲ್ಲಿ ಕೊನೆಯಲ್ಲಿ ಉಳಿದುಕೊಂಡಿದ್ದರು ರಘು ಮತ್ತು ರಾಶಿಕಾ.ಈ ಇಬ್ಬರಲ್ಲಿ ರಾಶಿಕಾ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ. ಆ ಮೂಲಕ ಫಿನಾಲೆ ಎಂಟ್ರಿಯ ಹೊಸ್ತಿಲಲ್ಲಿ ಮನೆಯಿಂದ ಹೊರಗೆ ಹೋದಂತಾಗಿದೆ.

ಪ್ರಸ್ತುತ ಮನೆಯಲ್ಲಿ ಅಶ್ವಿನಿ, ಧನುಶ್, ಗಿಲ್ಲಿ, ಕಾವ್ಯಾ, ಧ್ರುವಂತ್, ರಕ್ಷಿತಾ, ರಘು ಅವರುಗಳು ಮಾತ್ರವೇ ಉಳಿದಿದ್ದು, ಈ ಎಲ್ಲರೂ ಫಿನಾಲೆ ಸ್ಪರ್ಧಿಗಳಾಗಿದ್ದಾರೆ. ರಾಶಿಕಾ ಕೊನೆಯ ಹಂತದಲ್ಲಿ ಮನೆಯಿಂದ ಹೊರಗೆ ಬಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಮತ್ತೊಬ್ಬರಿಗೆ ಛತ್ರಿ ಆಗುವುದು ಬೇಡ! ಅಶ್ವಿನಿಗೆ ಥ್ಯಾಂಕ್ಸ್‌ ಹೇಳಿ ಎಂದಿದ್ದೇಕೆ ಕಿಚ್ಚ?

ರಾಶಿಕಾ ಚೆನ್ನಾಗಿಯೇ ಆಡಿದ್ದರು. ರಾಶಿಕಾ ಬಂದಾಗ ಇವರು ಆಟದಿಂದಲ್ಲ ಬದಲಿಗೆ ಅಂದದಿಂದ ಶೋನಲ್ಲಿ ಉಳಿದುಕೊಳ್ಳುವ ಸ್ಪರ್ಧಿ ಎಂದುಕೊಳ್ಳಲಾಗಿತ್ತು. ಆದರೆ ರಾಶಿಕಾ ಅಂದದಿಂದ ಮಾತ್ರವಲ್ಲ ಆಟದಿಂದಲೂ ಗಮನ ಸೆಳೆದರು.