Bigg Boss Kannada 12: ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟ ಕಾವ್ಯ! ಗಿಲ್ಲಿ ನಟ ಕೊಟ್ಟ ಗಿಫ್ಟ್ ಏನು?
Gilli Nata: ನಿನ್ನೆ ಕಿಚ್ಚನ ಕೊನೇಯ ಪಂಚಾಯ್ತಿ ನಡೆದಿದೆ. ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಕೆಲವು ಟಿಪ್ಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಕೊನೆಯದಾಗಿ ಯಾರಿಗಾದರೂ ಸಾರಿ ಕೇಳೋದಾದರೆ ಕೇಳಬಹುದು, ಮೆಚ್ಚಿನ ಉಡುಗೊರೆ ನೀಡಬಹುದು ಎಂದರು. ಅದರಂತೆ ಸ್ಪರ್ಧಿಗಳು ತಮ್ಮಿಷ್ಟದವರಿಗೆ ಉಡುಗೊರೆಯನ್ನು ನೀಡಿದ್ದಾರೆ. ಗಿಲ್ಲಿ ಒಳ್ಳೆಯ ಗಿಫ್ಟ್ ಕೊಟ್ಟರೆ, ಆದರೆ ಕಾವ್ಯಾ ಮಾತ್ರ, ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ -
ನಿನ್ನೆ ಕಿಚ್ಚನ ಕೊನೇಯ ಪಂಚಾಯ್ತಿ (Bigg Boss Kannada 12 Panchayti) ನಡೆದಿದೆ. ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಕೆಲವು ಟಿಪ್ಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಕೊನೆಯದಾಗಿ ಯಾರಿಗಾದರೂ ಸಾರಿ ಕೇಳೋದಾದರೆ ಕೇಳಬಹುದು, ಮೆಚ್ಚಿನ ಉಡುಗೊರೆ ನೀಡಬಹುದು ಎಂದರು. ಅದರಂತೆ ಸ್ಪರ್ಧಿಗಳು ತಮ್ಮಿಷ್ಟದವರಿಗೆ ಉಡುಗೊರೆಯನ್ನು (Gift) ನೀಡಿದ್ದಾರೆ. ಗಿಲ್ಲಿ ಒಳ್ಳೆಯ ಗಿಫ್ಟ್ ಕೊಟ್ಟರೆ, ಆದರೆ ಕಾವ್ಯಾ (Kavya Shaiva) ಮಾತ್ರ, ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟಿದ್ದಾರೆ.
ಕಾವ್ಯಾಗೆ ಕ್ಷಮೆ ಕೇಳಿದ ಗಿಲ್ಲಿ
ನಿಮ್ಮ ಜೊತೆಗೆ ನಿಂತ ವ್ಯಕ್ತಿಗೆ ನಿಮ್ಮ ವಸ್ತುವೊಂದನ್ನು ಉಡುಗೊರೆಯಾಗಿ ಕೊಟ್ಟು ಧನ್ಯವಾದ ಹೇಳಿ ಎಂದು ಸುದೀಪ್ ಹೇಳಿದರು. ಕೂಡಲೇ ಗಿಲ್ಲಿ, ಕಾವ್ಯಾಗೆ ಕೈಗೆ ಬೆಳ್ಳಿಯ ಬ್ರೇಸ್ಲೆಟ್ ಒಂದನ್ನು ನೀಡಿದರು. ಆದರೆ ಕಾವ್ಯ ಅವರು ಅಂದುಕೊಂಡಿದ್ದು, ಮನೆಯವರು ಕೊಟ್ಟ ಬ್ರೇಸ್ಲೆಟ್ ವಾಪಸ್ ಕೊಡ್ತಾ ಇದ್ದಾನೆ ಗಿಲ್ಲಿ ಎಂದು.
ಇದನ್ನೂ ಓದಿ: Bigg Boss Kannada 12: ಟಕರು ಟಕರು ಟಮಟೆ ಏಟು, ಕನ್ನಡ ಜನತೆ ಅಲ್ಟಿಮೇಟು; ಗಿಲ್ಲಿ ಡೈಲಾಗ್‌ಗೆ ಫ್ಯಾನ್ಸ್ ಫಿದಾ
ತಕ್ಷಣವೇ ಗಿಲ್ಲಿ ಈ ಬಗ್ಗೆ ಕ್ಲಾರಿಟಿ ಕೊಟ್ಟು, ಇಲ್ಲ ನೀವು ಕೊಟ್ಟ ಗಿಫ್ಟ್ ನನ್ನ ಬಳಿಯೇ ಇದೆ. ಇದು ನಿನಗೆ ಕೊಡಲೆಂದೇ ಹೊಸದು ತರಿಸಿಕೊಂಡಿದ್ದೆ ಎಂದು ಹೇಳಿ ಉಡುಗೊರೆಯನ್ನು ಕೊಟ್ಟರು. ಅದಕ್ಕೂ ಮುಂಚೆ ಕಾವ್ಯಾ ಬಗ್ಗೆ ತಾವು ಆಡಿದ ಮಾತು ಸರಿ ಇರಲಿಲ್ಲ ಎಂದು ಕ್ಷಮೆ ಕೂಡ ಕೇಳಿದರು.
ಗಿಲ್ಲಿಯೇ ಟಾರ್ಗೆಟ್
ಕಾವ್ಯ ಸರದಿ ಬಂದಾಗ, ಮೊದಲು ಧನುಷ್‌ಗೆ ಗಿಫ್ಟ್ ಕೊಟ್ಟರು. ಬಳಿಕ ಗಿಲ್ಲಿಗೆ ಬಾಚಣಿಕೆ ನೀಡಿದರು. ಹಾಗೇ ಶಿಕ್ಷೆ ಕೊಡುವ ಅವಕಾಶವನ್ನು ಸುದೀಪ್ ಅವರು ಸ್ಪರ್ಧಿಗಳಿಗೆ ನೀಡಿದಾಗ, ಕಾವ್ಯ ಅವರು ಗಿಲ್ಲಿ ಕಾಲೊಗೆ ವ್ಯಾಕ್ಸ್ ಮಾಡಿದ್ದಾರೆ. ವ್ಯಾಕ್ಸ್ ಹೇರ್ ರಿಮೂವರ್ ಮಾಡುವುದು, ಲಿಂಬು ಮೆಣಸಿನ ಕಾಯಿ ತಿನ್ನಿಸೋದು, ಕಹಿ ಜ್ಯೂಸ್ ಕುಡಿಸೋದು ಈ ರೀತಿ ಬಹುತೇಕರು ಗಿಲ್ಲಿಯನ್ನೇ ಟಾರ್ಗೆಟ್ ಮಾಡಿದರು.
ಕಾವ್ಯ ಕೂಡ ಗಿಲ್ಲಿಗೆ ವ್ಯಾಕ್ಸ್ ಮಾಡಿ, ಶಿಕ್ಷೆ ನೀಡಿದರು. ಗಿಲ್ಲಿ ಮಾತ್ರ ರಘುಗೆ ಶಿಕ್ಷೆ ನೀಡಿದರು. ರಘುಗೆ ಹೇರ್ ರಿಮೂವರ್ ಹಾಕಿ ತೆಗೆದರು.
ಇದೀಗ ಮಲ್ಲಮ್ಮ ಮತ್ತೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಧ್ರುವಂತ್ ಬಿಗ್ ಬಾಸ್ ಶುರುವಾದಾಗಿನಿಂದ ಮಲ್ಲಮ್ಮ ಜೊತೆ ಸಖತ್ ಕ್ಲೋಸ್ ಇದ್ದರು. ಆದರೀಗ ಎಲ್ಲವೂ ಬದಲಾದಂತಿದೆ. ಮಲ್ಲಮ್ಮ ಬಗ್ಗೆ ಧ್ರುವಂತ್ ಅವರು ಅಶ್ವಿನಿ ಜೊತೆ ಮಾತನಾಡುತ್ತ ಅಸಮಧಾನ ಹೊರ ಹಾಕಿದ್ದಾರೆ.
#BBK12
— Cinema Premi✍🏻 (@karansharmain) January 11, 2026
Plants remain rooted in place. Whereas human actions have always been questionable. Humans have exploited and consumed plants for countless times.
Yet, the plants have never demanded anything in return. Plants posses an abundance of patience. 1/2 #Gilli | #GilliNata pic.twitter.com/uzmPmek39y
ಹೊಸ ಪ್ರೋಮೋ ಔಟ್ ಆಗಿದೆ. ಮಲ್ಲಮ್ಮ ಸಖತ್ ಎಂಟ್ರಿ ಕೊಟ್ಟಿದ್ದಾರೆ. ಬಂದವರೇ ಗಿಲ್ಲಿ ಮಾತನಾಡಿಸಲ್ವ? ಎಂದು ಕೇಳಿದ್ದಾರೆ. ತುಂಬಾ ಬ್ಯೂಟಿಫುಲ್ ಆಗಿದಿಯಾ, ಹೊರಗಡೆ ಫ್ಯಾನ್ಸ್ ಫಾಲೋವರ್ಸ್ ಜಾಸ್ತಿನಾ? ಅಂತ ಕೇಳಿದ್ದಾರೆ ಗಿಲ್ಲಿ. ಅದಕ್ಕೆ ಮಲ್ಲಮ್ಮ ಇದ್ದವರು ನಂದೆ ಹವಾ ಎಂದಿದ್ದಾರೆ. ಅದೇ ಹೊತ್ತಿಗೆ ಧ್ರುವಂತ್ ಅವರು ಮುಂದೆ ಬಂದು ಮಲ್ಲಮ್ಮ ಅವರೇ ನಿಮ್ಮನ್ನ ತುಂಬಾ ಮಿಸ್ ಮಾಡಿಕೊಂಡೆ.
ಇದನ್ನೂ ಓದಿ: Bigg Boss Kannada 12: ಕೊನೇ ಹಂತದಲ್ಲಿ ಕೈ ಕೊಟ್ಟ ಲಕ್! ಬಿಗ್ ಬಾಸ್ನಿಂದ ರಾಶಿಕಾ ಶೆಟ್ಟಿ ಔಟ್
ನೀವು ಹೋದ ಮೇಲೆ ನನಗೆ ಯಾರು ಜೋಡಿನೇ ಇರಲಿಲ್ಲ ಎಂದಿದ್ದಾರೆ. ಆದರೆ ಮಲ್ಲಮ್ಮ ಯಾವುದಕ್ಕೂ ಅಷ್ಟಾಗಿ ಪ್ರತಿಕ್ರಿಯೆ ನೀಡಿಲ್ಲ. ಇದಾದ ಬಳಿಕ ಧ್ರುವಂತ್ ಅಶ್ವಿನಿ ಅವರ ಬಳಿ ಮಾತನಾಡಿ, ಮಲ್ಲಮ್ಮ ಮುಂಚೆ ಥರ ಕ್ಲೋಸ್‌ನೆಸ್ ಇಲ್ಲ ಎಂದಿದ್ದಾರೆ. ಅದಕ್ಕೆ ಅಶ್ವಿನಿ ಇದ್ದವರು ಇರಲಿ ನನಗೆ ನೀವು, ನಿಮಗೆ ನಾನು ಎಂದಿದ್ದಾರೆ.