ಬಿಗ್ ಬಾಸ್ (Bigg Boss Kannada 12) ಫೀನಾಲೆ ಹತ್ತಿರವಾಗುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಇನ್ನು ಕೊನೆಯ ಕ್ಯಾಪ್ಟನ್ಸಿ (Captaincy Task) ಟಾಸ್ಕ್ ಕೂಡ ಬಹಳ ರೋಚಕತೆ ಇಂದ ಕೂಡಿತ್ತು. ಅದರಲ್ಲೂ ಅಶ್ವಿನಿ ಅವರ ಮಾತುಗಳ ಬಗ್ಗೆ ಟೀಕ್ ವ್ಯಕ್ತವಾಗಿದೆ. ಈ ಸೀಸನ್ನ ಕೊನೇ ಕ್ಯಾಪ್ಟನ್ ಯಾರು ಎಂಬುದನ್ನು ಆಯ್ಕೆ ಮಾಡಲು ಬಿಗ್ ಬಾಸ್ ಮನೆಯಲ್ಲಿ ಕೊನೇ ಟಾಸ್ಕ್ ನೀಡಲಾಯಿತು. ಅದರಲ್ಲಿ ಧನುಷ್ ಮತ್ತು ಅಶ್ವಿನಿ ಗೌಡ ಅವರ ನಡುವೆ ಹಣಾಹಣಿ ನಡೆಯಿತು. ಇಬ್ಬರೂ ಆಟ ಆಡುವಾಗ ಕೆಲವರು ಧನುಷ್ (Dhanush) ಅವರನ್ನು ಹುರಿದುಂಬಿಸುತ್ತಿದ್ದರು. ಇನ್ನು ಕೆಲವರು ಅಶ್ವಿನಿ ಗೌಡ ಅವರನ್ನು ಹುರಿದುಂಬಿಸಿದರು. ಅಂತಿಮವಾಗಿ ಧನುಷ್ ಕ್ಯಾಪ್ಟನ್ ಆದರು. ಆದರೀಗ ಧನುಶ್ ಬಳಿ ಕ್ಯಾಪ್ಟನ್ಸಿಗಾಗಿ ಅಶ್ವಿನಿ ಮನವಿ ಮಾಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಟೀಕೆ ವ್ಯಕ್ತವಾಗಿದೆ.
ಕ್ಯಾಪ್ಟನ್ಸಿ ರೇಸ್ ಆಯ್ಕೆ
ಈ ವಾರ ಕೊನೆಯ ಕ್ಯಾಪ್ಟನ್ಸಿ ಟಾಸ್ಕ್. ಕ್ಯಾಪ್ಟನ್ ಜೊತೆಗೆ ಟಿಕೆಟ್ ಟು ಫಿನಾಲೆ ಕೂಡ ಪಡೆದುಕೊಳ್ಳುತ್ತಾರೆ. ಗಿಲ್ಲಿ ಸಹಾಯದಿಂದ ನೇರವಾಗಿ ಕ್ಯಾಪ್ಟನ್ಸಿ ರೇಸ್ಗೆ ಆಯ್ಕೆ ಆದರು ಅಶ್ವಿನಿ. ಅದು ಕೂಡ ಅಸಮರ್ಥರು ಎನ್ನುವ ಟ್ಯಾಗ್‌ನೊಂದಿಗೆ. ರಾಶಿಕಾ ಹಾಗೂ ಧನುಶ್ ಕ್ಯಾಪ್ಟನ್ಸಿ ರೇಸ್ಗೆ ಅರ್ಹತೆ ಪಡೆದರು. ಹೀಗಾಗಿ ಗಿಲ್ಲಿ-ರಾಶಿಕಾ, ಅಶ್ವಿನಿ-ಧನುಷ್ ತಂಡವಾಗಿ ಆಟ ಆಡಿದರು. ಧನುಷ್-ಅಶ್ವಿನಿ ಅಂತೂ ಕ್ಯಾ ಪ್ಟನ್ಸಿ ರೇಸ್ ಆಯ್ಕೆ ಆದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ರೈತರ ಮಗ, ಅವರಿಗೆ ನಾಟಕ ಮಾಡೋಕೆ ಬರಲ್ಲ; ಕನ್ನಡ ಕಿರುತೆರೆ ನಟಿ ಮೆಚ್ಚುಗೆ
ಪಜಲ್ ಟಾಸ್ಕ್ ನಡೆಯುವಾಗ ಉಸ್ತುವಾರಿ ಮಾಡಿದ ತಪ್ಪಿನಿಂದ ನಿಯಮ ಪಾಲನೆ ಆಗಿಲ್ಲ. ಇದನ್ನು ಗಮನಿಸಿದ ಬಿಗ್ ಬಾಸ್ ಆಟ ರದ್ದು ಮಾಡಿ, ವೋಟಿಂಗ್ಗೆ ಅವಕಾಶ ಕೊಟ್ಟರು. ಧನುಶ್ಗೆ ಬಹುಮತದ ವೋಟ್ ಬಂದು ವಿನ್ ಆದರು. ಆದರೆ ಈ ಬಗ್ಗೆ ಅಶ್ವಿನಿ ಅವರು ಅಸಮಧಾನ ವ್ಯಕ್ತಪಡಿಸಿದರು.
ಕ್ಯಾಪ್ಟನ್ಸಿ ಕಿತ್ತುಕೊಂಡ್ರಿ!
ನೀವು ನನ್ನಿಂದ ಕ್ಯಾಪ್ಟನ್ಸಿ ಕಿತ್ತುಕೊಂಡ್ರಿ, ನಂಗೆ ಅನ್ಯಾಯ ಆಗಿದೆ, ನೀವು ನನಗೆ ಕ್ಯಾಪ್ಟನ್ಸಿ ಕೊಡ್ತೀನಿ ಎಂದು ಹೇಳಬಹುದಿತ್ತು. ನಿಮ್ಮ ಮನಸಾಕ್ಷಿ ಕೇಳಿಕೊಳ್ಳಿ ಅಂತ ಅಶ್ವಿನಿ ಕಣ್ಣೀರು ಸುರಿಸುತ್ತಾ ಧನುಷ್ ಬಳಿ ಮನವಿ ಮಾಡಿಕೊಂಡರು. ಧನುಷ್ ಕೂಡ ಎಷ್ಟೇ ಕನ್ವಿನ್ಸ್ ಮಾಡಿದ್ದರೂ ಅಶ್ವಿನಿ ಮಾತ್ರ ಪದೇ ಪದೇ ಈ ರೀತಿಯ ಮಾತುಗಳನ್ನು ಆಡಿದರು.
ಅಶ್ವಿನಿ ಬಗ್ಗೆ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಶ್ವಿನಿ ಗೌಡ ಅವರಿಗೆ ಮನಸಾಕ್ಷಿ ಇದ್ದಿದ್ದರೆ, ಅದ್ಭುತವಾಗಿ ಆಡಿ, ಕ್ಯಾಪ್ಟನ್ ಆಗಿರೋ ಧನುಷ್‌ಗೆ ಮುಕ್ತವಾಗಿ ಅಭಿನಂದಿಸುತ್ತಿದ್ದರು. ಧನು ಕೂಡ ಅಶ್ವಿನಿ ಅವರಿಗೆ ಸ್ಪಷ್ಟನೆ ನೀಡುವ ಅಗತ್ಯ ಇರಲಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada 12: ಇಂದು ವಾರದ ಕತೆ ಕಿಚ್ಚನ ಜೊತೆ: ಈ ಸ್ಪರ್ಧಿಗಳಿಗೆ ಕ್ಲಾಸ್ ಫಿಕ್ಸ್?
ರಕ್ಷಿತಾ ಶೆಟ್ಟಿ, ರಘು ಮತ್ತು ಧ್ರುವಂತ್ ಅವರು ಅಶ್ವಿನಿ ಗೌಡಗೆ ಸಪೋರ್ಟ್ ಮಾಡಿದರು. ಕಾವ್ಯಾ, ಸ್ಪಂದನಾ, ರಾಶಿಕಾ ಶೆಟ್ಟಿ ಮತ್ತು ಗಿಲ್ಲಿ ನಟ ಅವರು ಧನುಷ್ ಪರವಾಗಿ ವೋಟ್ ಮಾಡಿದರು.ಹೆಚ್ಚಿನ ಸ್ಪರ್ಧಿಗಳು ಧನುಷ್ ಪರವಾಗಿ ವೋಟ್ ಮಾಡಿದ್ದರಿಂದ ಅಂತಿಮವಾಗಿ ಧನುಷ್ ಅವರೇ ಕ್ಯಾಪ್ಟನ್ ಆದರು.