Bigg Boss Kannada 12: ಇಂದು ವಾರದ ಕತೆ ಕಿಚ್ಚನ ಜೊತೆ: ಈ ಸ್ಪರ್ಧಿಗಳಿಗೆ ಕ್ಲಾಸ್ ಫಿಕ್ಸ್?
Gilli Nata: ವೀಕೆಂಡ್ ಬಂತು ಅಂದರೆ ಸಾಕು ಕಿಚ್ಚ ಸುದೀಪ್ ಅವರ ಪಂಚಾಯ್ತಿಗೆ ಕಾಯ್ತಿರ್ತಾರೆ ವೀಕ್ಷಕರು. ಕಳೆದ ವಾರ ಕೂಡ ಮಾರ್ಕ್ ಸಿನಿಮಾ ರಿಲೀಸ್ ಇದ್ದ ಕಾರಣ ಸುದೀಪ್ ಅವರು ಪಂಚಾಯ್ತಿ ನಡೆಸಿರಲಿಲ್ಲ. ಹೀಗಾಗಿ ಈ ವಾರ ಕಿಚ್ಚ ಬರೋದು ಫಿಕ್ಸ್ ಆಗಿದೆ. ಈ ವಾರ ಪ್ರೋಮೋ ನೋಡಿದರೆ, ವಾರದ ಕಥೆ ಅಶ್ವಿನಿ ಗಿಲ್ಲಿ ಜೊತೆ ಎನ್ನೋದು ಬಹುತೇಕ ಫಿಕ್ಸ್ ಆದಂತಿದೆ.
ಬಿಗ್ ಬಾಸ್ ಕನ್ನಡ -
ವೀಕೆಂಡ್ (Bigg Boss Kannada 12) ಬಂತು ಅಂದರೆ ಸಾಕು ಕಿಚ್ಚ ಸುದೀಪ್ (Kichcha Sudeep) ಅವರ ಪಂಚಾಯ್ತಿಗೆ ಕಾಯ್ತಿರ್ತಾರೆ ವೀಕ್ಷಕರು. ಕಳೆದ ವಾರ ಕೂಡ ಮಾರ್ಕ್ ಸಿನಿಮಾ ರಿಲೀಸ್ ಇದ್ದ ಕಾರಣ ಸುದೀಪ್ ಅವರು ಪಂಚಾಯ್ತಿ ನಡೆಸಿರಲಿಲ್ಲ. ಹೀಗಾಗಿ ಈ ವಾರ ಕಿಚ್ಚ ಬರೋದು ಫಿಕ್ಸ್ ಆಗಿದೆ. ಈ ವಾರ ಪ್ರೋಮೋ (Promo) ನೋಡಿದರೆ, ವಾರದ ಕಥೆ ಅಶ್ವಿನಿ ಗಿಲ್ಲಿ (Gilli Ashwini Gowda) ಜೊತೆ ಎನ್ನೋದು ಬಹುತೇಕ ಫಿಕ್ಸ್ ಆದಂತಿದೆ.
ಗಿಲ್ಲಿ ಕ್ಯಾಪ್ಟನ್ಸಿ ವರೆಗೆ ಸುದೀಪ್ ಚರ್ಚೆ
ಹೌದು ಪ್ರೋಮೋದಲ್ಲಿ ಅಶ್ವಿನಿ ಅವರು ಗಿಲ್ಲಿಗೆ ಬಳಸಿದ ಪದಗಳು ಇವೆ. ಸುದೀಪ್ ಅವರು ಯಾವಾಗಲೂ ಯಾವುದೇ ಜಗಳಕ್ಕೂ ಮುನ್ನ ಆರಂಭ ಎಲ್ಲಿಂದ ಆಯ್ತು ಅದು ಮುಖ್ಯ ಅನ್ನೋದು ಸಾಕಷ್ಟು ಬಾರಿ ಹೇಳಿದ್ದಾರೆ. ಅದರಂತೆ ಗಿಲ್ಲಿ ಅಶ್ವಿನಿ ಅವರ ಬಾತ್‌ರೂಮ್ ಜಗಳದಿಂದ ಹಿಡಿದು, ಗಿಲ್ಲಿ ಕ್ಯಾಪ್ಟನ್ಸಿ ವರೆಗೆ ಸುದೀಪ್ ಚರ್ಚೆ ಮಾಡಲಿದ್ದಾರೆ.
ಈ ವಾರ ಅಶ್ವಿನಿ ಮತ್ತು ಗಿಲ್ಲಿ ಇಬ್ಬರೂ ಟಾಸ್ಕ್ಗಳ ಉಸ್ತುವಾರಿ ವಹಿಸಿದ್ದರು. ಸಾಕಷ್ಟು ಸಮಯದಲ್ಲಿ ಈ ಇಬ್ಬರ ನಡುವೆ ಜಗಳಗಳು ನಡೆಯಿತು. ವಾರಾಂತ್ಯದಲ್ಲೂ ಈ ಜಗಳ ಮುಂದುವರೆದಿದೆ. ಗಿಲ್ಲಿ, ಅಶ್ವಿನಿಯ ಯೋಗ್ಯತೆಯ ಕುರಿತಾಗಿ ಮಾತನಾಡಿದ್ದಾರೆ. ಇದು ಅಶ್ವಿನಿ ಅವರನ್ನು ಕೆರಳಿಸಿದೆ. ಇಬ್ಬರ ನಡುವೆ ಭರ್ಜರಿ ವಾಗ್ಯುದ್ಧವೇ ನಡೆದಿದೆ. ಈ ಬಗ್ಗೆಯೂ ಕಿಚ್ಚ ಚರ್ಚಿಸಲಿದ್ದಾರೆ.
ಅಶ್ವಿನಿ ಕೆಟ್ಟ ಪದ ಬಳಕೆ
ಗಿಲ್ಲಿ ಟಾಸ್ಕ್ ವಿಚಾರವಾಗಿ ಮಾತನಾಡುತ್ತ ಅಶ್ವಿನಿ ಅವರನ್ನು ಮೂದಲಿಸಿದ್ದರು. ಅದು ಅಶ್ವಿನಿ ಹಾಗೂ ಧ್ರುವಂತ್ ಪಿತ್ತ ನೆತ್ತಿಗೇರಿತ್ತು. ಈ ವೇಳೆ ಅಶ್ವಿನಿ ಅವರು ಕಟ್ಟ ಪದ ಬಳಕೆ ಮಾಡಿದ್ದರು. ಇಬ್ಬರ ಮಧ್ಯೆ ಮಾತಿನ ಚಕಮಕಿ ಶುರುವಾಗಿಗಿಲ್ಲಿಗೆ ಜೋಕರ್, ಥರ್ಡ್ ಕ್ಲಾಸ್ ಎಂದೆಲ್ಲ ಬೈದಿದ್ದರು.ಅಶ್ವಿನಿ ವಿರುದ್ಧ ಏಕವಚನ ಪದ ಬಳಕೆ ಮಾಡಿದರು ಗಿಲ್ಲಿ.
ಗಿಲ್ಲಿ ನಿಂಗೆ ಬೆನ್ನುಮೂಳೆ ಇಲ್ಲ. ನೀನೊಬ್ಬ ಜೋಕರ್, ಜೋಕರ್ ಕ್ಯಾಪ್ಟನ್, ಥರ್ಡ್ ಕ್ಲಾಸ್ ನೀನು ಎಂದಿದ್ದಾರೆ. ನನ್ನಷ್ಟು ಪ್ರಾಜೆಕ್ಟ್ ಮಾಡೋ ಯೋಗ್ಯತೆ ಇಲ್ಲ ಅಂದಿದ್ದರು. ಅದಕ್ಕೆ ಗಿಲ್ಲಿ ಕೂಡ, ನಿಮಗೆ ವಯಸ್ಸಾಗಿದೆ ಅಷ್ಟೆ ತಲೇಲಿ ಬುದ್ದಿ ಇಲ್ಲ ಎಂದು ಕೂಗಾಡಿದ್ದರು. ಈ ಬಗ್ಗೆಯೂ ಕಿಚ್ಚ ಕ್ಲಾಸ್ ತೆಗೆದುಕೊಳ್ಳುವಂತಿದೆ.
So, Gilli's captaincy will b questioned. Nominations, bathroom issue, ustuvaari vl b hot topics.
— D P Brdr (@deepabb1104) January 3, 2026
I think Dhanush takes exit. #BBK12 https://t.co/i6Rwxq0mV8
ಗಿಲ್ಲಿ ಫೇವರಿಸಮ್
ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಸೇರಿಕೊಂಡು ಕಾವ್ಯಾಳನನ್ನು ನಾಮಿನೇಟ್ ಮಾಡಿ ಮನೆಯಿಂದ ಹೊರಗೆ ಹಾಕಬೇಕು ಎಂದು ಶತ ಪ್ರಯತ್ನ ಮಾಡುತ್ತಿದ್ದರೂ ಗಿಲ್ಲಿ ಮಾತ್ರ ಕಾವ್ಯಾಳನ್ನು ಸೇವ್ ಮಾಡುತ್ತಲೇ ಫಿನಾಲೆಗೆ ಕರೆದುಕೊಂಡು ಹೋಗುವ ಭಾರೀ ಪ್ರಯತ್ನವನ್ನು ಮುಂದುವರಿಸಿದ್ದರು. ಈ ಬಗ್ಗೆಯೂ ವೀಕೆಂಡ್‌ನಲ್ಲಿ ಚರ್ಚೆ ಆಗಲಿದೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆ ಸ್ಪಂದನಾದೇ ಅಂತೆ? ಕೊನೆಗೂ ಸತ್ಯ ಒಪ್ಪಿಕೊಂಡ್ರಲ್ಲ ಅಂತಿದ್ದಾರೆ ಪ್ರೇಕ್ಷಕರು
ಈ ಬಾರಿ ಬಿಗ್ ಬಾಸ್ ಕನ್ನಡ 12ರ ಕೊನೆಯ ಕ್ಯಾಪ್ಟನ್ ಆಗಿ ಧನುಷ್ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಿಯಮ ಉಲ್ಲಂಘನೆಯಾಗಿದ್ದರಿಂದ, ಅಂತಿಮ ತೀರ್ಪನ್ನು ಬಿಗ್ ಬಾಸ್ ಸ್ಪರ್ಧಿಗಳ ವಿವೇಚನೆಗೆ ಬಿಟ್ಟಿದ್ದರು. ವೋಟಿಂಗ್ ಪ್ರಕ್ರಿಯೆಯಲ್ಲಿ ಧನುಷ್ ಅವರಿಗೆ ಹೆಚ್ಚಿನ ಬೆಂಬಲ ಸಿಕ್ಕಿದ್ದರಿಂದ ಅವರು ಈ ಸೀಸನ್‌ನ ಕೊನೆಯ ಕ್ಯಾಪ್ಟನ್ ಎನಿಸಿಕೊಂಡರು.