ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಚಪ್ಪಲಿ ಮ್ಯಾಟರ್‌; ರಕ್ಷಿತಾಳ ಮುಂದೆಯೇ ತಲೆ ತಗ್ಗಿಸಿದ ಅಶ್ವಿನಿ ಗೌಡ, ಸುದೀಪ್‌ ಕ್ಲಾಸ್‌ಗೆ ಫುಲ್‌ ಸೈಲೆಂಟ್‌

ಬಿಗ್‌ ಬಾಸ್‌ (BBK 12) ಶುರುವಾದ ದಿನಗಳಿಂದಲೂ ಅಶ್ವಿನಿ (Ashwini Gowda) ಹಾಗೂ ರಕ್ಷಿತಾಗೆ ಅಷ್ಟಕಷ್ಟೆ. ರಕ್ಷಿತಾ ಶೆಟ್ಟಿಯನ್ನ ‘ಕಾರ್ಟೂನ್’ (Cartoon) ಅಂತ ಅಶ್ವಿನಿ ಗೌಡ ಕರೆದರು. ಬಳಿಕ ಬಟ್ಟೆಯನ್ನೆಲ್ಲ ಹರಡಿ ಎಸ್‌ ಎಂಬ ಪದ ಬಳಕೆ ಕೂಡ ಮಾಡಿದ್ದರು. ಇದೀಗ ವೀಕ್ಷಕರು ಬಯಸಿದಂತೆ ಚಪ್ಪಲಿ ಮ್ಯಾಟರ್‌ (Slipper Matter) ಬಗ್ಗೆ ಕಿಚ್ಚ ಗರಂ ಆಗಿಯೇ (Ashwini Gowda) ಕ್ಲಾಸ್‌ ತಗೆದುಕೊಂಡಿದ್ದಾರೆ. ಅಸಲಿ ಸತ್ಯ ಏನು ಎಂಬುದು ರಿವೀಲ್‌ ಆಗಿದೆ. ಕಿಚ್ಚನ ಮಾಸ್‌ ಕ್ಲಾಸ್‌ಗೆ ಅಶ್ವಿನಿ ಗೌಡ ತಲೆ ತಗ್ಗಿಸಿದ್ದಾರೆ.

ಚಪ್ಪಲಿ ಮ್ಯಾಟರ್‌; ರಕ್ಷಿತಾಳ ಮುಂದೆಯೇ ತಲೆ ತಗ್ಗಿಸಿದ ಅಶ್ವಿನಿ ಗೌಡ!

Ashwini Rakshita Bigg Boss Kannada -

Yashaswi Devadiga
Yashaswi Devadiga Nov 8, 2025 4:47 PM

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ವೀಕೆಂಡ್‌ ಪಂಚಾಯ್ತಿಗೆ (Weekend Panchayti) ವೀಕ್ಷಕರು ಕಾದು ಕುಳಿತಿರುತ್ತಾರೆ. ಅಷ್ಟೇ ಅಲ್ಲ ಶುಕ್ರವಾರವೇ, ಸುದೀಪ್‌ (Sudeep) ಅವರು ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಲಿಸ್ಟ್‌ ಕೂಡ ಹಾಕಿಕೊಂಡಿರುತ್ತಾರೆ. ಇದೀಗ ವೀಕ್ಷಕರು ಬಯಸಿದಂತೆ ಚಪ್ಪಲಿ ಮ್ಯಾಟರ್‌ (Slipper Matter) ಬಗ್ಗೆ ಕಿಚ್ಚ ಗರಂ ಆಗಿಯೇ (Ashwini Gowda) ಕ್ಲಾಸ್‌ ತಗೆದುಕೊಂಡಿದ್ದಾರೆ. ಅಸಲಿ ಸತ್ಯ ಏನು ಎಂಬುದು ರಿವೀಲ್‌ ಆಗಿದೆ.

ಅಶ್ವಿನಿಗೆ ರಕ್ಷಿತಾಳೇ ಟಾರ್ಗೆಟ್‌!

ಬಿಗ್‌ ಬಾಸ್‌ ಶುರುವಾದ ದಿನಗಳಿಂದಲೂ ಅಶ್ವಿನಿ ಹಾಗೂ ರಕ್ಷಿತಾಗೆ ಅಷ್ಟಕಷ್ಟೆ. ರಕ್ಷಿತಾ ಶೆಟ್ಟಿಯನ್ನ ‘ಕಾರ್ಟೂನ್’ ಅಂತ ಅಶ್ವಿನಿ ಗೌಡ ಕರೆದರು. ಬಳಿ ಬಟ್ಟೆಯನ್ನೆಲ್ಲ ಹರಡಿ ಎಸ್‌ ಎಂಬ ಪದ ಬಳಕೆ ಕೂಡ ಮಾಡಿದ್ದರು. ಇಷ್ಟು ಸಾಲದೇ ಹೊಸ ಆರೋಪವನ್ನೇ ಮಾಡಿ ಬಿಟ್ಟಿದ್ದರು ಅಶ್ವಿನಿ. ಅದುವೇ ಚಪ್ಪಲಿ ತೋರಿಸಿರುವ ವಿಚಾರ.

ಕಲಾವಿದರಿಗೆ ರಕ್ಷಿತಾ ಶೆಟ್ಟಿ ಅವಮಾನ ಮಾಡಿದ್ದಾರೆ, ಚಪ್ಪಲಿ ತೋರಿಸಿದ್ದಾರೆ ಎಂಬ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಕಳೆದ ವಾರ ಕಿಚ್ಚ ಸುದೀಪ್‌ ಮಾತನಾಡಿರಲಿಲ್ಲ. ಆದರೀಗ ಕಿಚ್ಚನೇ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಈ ವಾರ ಔಟ್‌ ಆಗೋದು ಯಾರು? ಬಿಗ್‌ ಬಾಸ್‌ ಕೊಟ್ಟ ಹಿಂಟ್‌ ಏನು?

ಕಲಾವಿದರಿಗೆ ನಾನು ಉತ್ತರ ಕೊಡಬೇಕಿತ್ತು!

ʻರಕ್ಷಿತಾ ಅವರು ನಾಟಕ ಅಂತ ಹೇಳಿಕೊಂಡು ಚಪ್ಪಲಿ ತೋರಿಸ್ತಾರೆ. ನೀನು ಯಾರಿಗೆ ಅವಮಾನ ಮಾಡ್ತಾ ಇದ್ದೀಯಾ? ಅಂತ ನಾನು ಕೇಳಿದೆʼ ಎಂದು ಅಶ್ವಿನಿ ಗೌಡ ಕಿಚ್ಚನ ಮುಂದೆ ಹೇಳಿದರು.

ಅದಕ್ಕೆ ಕಿಚ್ಚ, ʻಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ? ಅಂತ ಕೇಳಿ, ಇಲ್ಲ ಎಂದು ಹೇಳಿದ್ದಾರೆ . ʻನಾವು ಗ್ರಹಿಕೆಯನ್ನ ತಪ್ಪಾಗಿ ಕೊಟ್ಟಾಗ ಏನಾಗತ್ತೆ, ಕಲಾವಿದರಿಗೆ ಹೇಳಿದ್ರಂತೆ ಅಂತೆಲ್ಲ ಆಗತ್ತೆ.

ಯಾಕೆ ಮೇಡಮ್‌? ಈ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿಕೊಡ್ತಾ ಇರೋದು ನಾನು ಕೂಡ ಕಲಾವಿದನೇ ಅಲ್ವಾ? ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಕಲಾವಿದರಿಗೆ ನಾನು ಉತ್ತರ ಕೊಡಬೇಕಿತ್ತು. ಇದು ತಪ್ಪಾದ perception; ಅಂತ ಎಂದು ಕಿಚ್ಚ ನೇರವಾಗಿಯೇ ಹೇಳಿದ್ದಾರೆ. ಕಿಚ್ಚನ ಮಾಸ್‌ ಕ್ಲಾಸ್‌ಗೆ ಅಶ್ವಿನಿ ಗೌಡ ತಲೆ ತಗ್ಗಿಸಿದ್ದಾರೆ.

ಅಸಲಿಗೆ ಆಗಿದ್ದೇನು?

ಕಳೆದ ವಾರ ಕಾವ್ಯ ಶೈವ ಹಾಗೂ ಅಶ್ವಿನಿ ಗೌಡ ಮಧ್ಯೆ ಏಕವಚನದಲ್ಲಿ ಜಗಳ ನಡೆಯಿತು. ಆ ವೇಳೆ ರಕ್ಷಿತಾ ಶೆಟ್ಟಿ ನಿಮ್ಮ ಧಾರಾವಾಹಿ ಹೊರಗೆ ಮಾಡಿ. ಇದು ಧಾರಾವಾಹಿ ಅಲ್ಲ ಎಂದರು. ‘’ಕಲಾವಿದರಿಗೆ ಅವಮಾನ ಮಾಡಬೇಡʼ ಎಂದು ಅಶ್ವಿನಿ ಆಗ ಅಬ್ಬರಿಸುತ್ತಾರೆ.ಈ ವೇಳೆ ರಕ್ಷಿತಾ ಶೆಟ್ಟಿ ಚಪ್ಪಲಿ ತೋರಿಸಿದ ದೃಶ್ಯ ಸಂಚಿಕೆಯಲ್ಲಿ ಇಲ್ಲ. ಆದರೆ ಈ ಬಗ್ಗೆ ಧನುಷ್‌ ಹಾಗೂ ಗಿಲ್ಲಿ ಅವರೇ ಟಾಪಿಕ್‌ ರೈಸ್‌ ಮಾಡಿ ಅಶ್ವಿನಿ ಅವರ ಮುಖಕ್ಕೆ ಮಸಿ ಕೂಡ ಬಳಿದಿದ್ದರು.

ಕಾಲಲ್ಲಿ ಹಾಕಿ ಅದನ್ನ ತುಳಿಯುತ್ತೀನಿ

ಧನುಷ್‌ ಹೇಳಿದ್ದು ಹೀಗೆ , ʻಅಶ್ವಿನಿ ಅವರು ಯಾರೋ ಇಬ್ಬರು ಜಗಳ ಮಾಡುತ್ತಿದ್ದರೆ, ಇವರು ಸುಮ್ಮನೆ ಅಲ್ಲಿ ಹೋಗ್ತಾರೆ ಅಂತ ನನಗೆ ಅನ್ನಿಸುತ್ತದೆ. ಯಾರಾದರೂ ಏನಾದರೂ ಹೇಳುವಾಗ, ಮಾತನಾಡುವಾಗ, ನೀವು ಹೇಳುವ ರೀತಿ ನನಗೆ ಅನ್ನಿಸಿರಲ್ಲ. ಹಾಗೇ ರಕ್ಷಿತಾ ವಿಚಾರಕ್ಕೆ ಬರೋದಾದರೆ, ನಿಮ್ಮ ವೋಟ್‌ ನನಗೆ ಕೊಟ್ಟರೆ ಕಾಲಲ್ಲಿ ಹಾಕಿ ಅದನ್ನ ತುಳಿಯುತ್ತೀನಿ ಅಂತ ರಕ್ಷಿತಾ ಹೇಳಿದ್ದು. ಇನ್ನು ರಕ್ಷಿತಾ ಹೇಳಿದ್ದು, ನೀವು ಸೀರಿಯಲ್‌ನಲ್ಲಿ ನಟನೆ ಮಾಡ್ತೀರಿ ಅಂತ ಗೊತ್ತು. ಇಲ್ಲಿ ಮಾಡಬೇಡಿ ಅಂತ ಅವಳು ಹೇಳಿದ್ದುʼ ಎಂದು ರಕ್ಷಿತಾ ಪರವಾಗಿ ಧನುಷ್‌ ಹೇಳಿದ್ದರು.

ಇದನ್ನೂ ಓದಿ: Bigg Boss: ಬಿಗ್‌ ಬಾಸ್‌ಗೆ ಹೋಗಿ ತಪ್ಪು ಮಾಡಿದೆ, ಬಹಳ ಹಿಂಸೆ ಅನುಭವಿಸಿದೆ! ಹೀಗ್ಯಾಕೆ ಅಂದ್ರು ಖ್ಯಾತ ನಿರೂಪಕಿ?

ಗಿಲ್ಲಿ ಸಮರ್ಥನೆ

ಇನ್ನು ಗಿಲ್ಲಿ ಅವರು ಮಾತನಾಡಿ,ʻ ಅಶ್ವಿನಿ, ರಕ್ಷಿತಾ ಹಾಗೂ ಕಾವ್ಯ ಜಗಳ ಮಾಡುವಾಗ, ಜಗಳ ಆಗಿರೋ ವಿಚಾರ ಗೊತ್ತು. ಅವಳು ಯಾವ ಪರ್‌ಸ್ಪೆಕ್ಟಿವ್‌ ಅಲ್ಲಿ ಹೇಳಿದ್ದಳು ಅನ್ನೋದು ಗೊತ್ತು. ಆದರೆ ವೀಕೆಂಡ್‌ನಲ್ಲಿ ನೀವು ಅದನ್ನ ಯಾವ ರೀತಿ ಮ್ಯಾನುಪಲೇಟ್‌ ಮಾಡಿ ಹೇಳಿದ್ರಿ ಅನ್ನೋದು ಗೊತ್ತು. ಇನ್ನು ರಕ್ಷಿತಾ ಅವರು ಕಾಲು ತೋರಿಸಿದ್ದು, ವೋಟ್‌ ನನಗೆ ಕೊಟ್ಟರೆ ಕಾಲಲ್ಲಿ ಹಾಕಿ ಅದನ್ನ ತುಳಿಯುತ್ತೀನಿ ಅಂತ. ಆದರೆ ನೀವು ಅಂದಿದ್ದು ಕಲಾವಿದರಿಗೆ ಕಾಲು ತೋರಿಸಿದ್ರು ಅನ್ನೋ ಥರ ಹೇಳಿದ್ರಿʼ ಎಂದು ಮಸಿ ಬಳಿದು ಕಾರಣ ಕೊಟ್ಟಿದ್ದರು.