Bigg Boss Kannada 12: ಅತ್ಯಂತ ಕಠಿಣ ಶಿಕ್ಷೆ ಕೊಡಿಸಿದ ಗಿಲ್ಲಿ; ಬಸ್ಕಿ ಹೊಡೆದ ಅಶ್ವಿನಿ ಗೌಡ
BBK 12: ಬಿಗ್ ಬಾಸ್ ಸ್ಪರ್ಧಿಗಳಿಗೆ ಪದೇ ಪದೇ ಮನೆಯ ಮೂಲ ನಿಯಮವನ್ನು ಮುರಿಯುವ ಸ್ಪರ್ಧಿಯನ್ನು ಸೂಚಿಸಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಬಹುತೇಕ ಸ್ಪರ್ಧಿಗಳು ಅಶ್ವಿನಿ ಅವರ ಹೆಸರನ್ನು ಹೇಳಿದ್ದಾರೆ. ಆದರೆ ಗಿಲ್ಲಿ ಕೊಟ್ಟ ಕಾರಣ ಮಾತ್ರ ಖಡಕ್ ಆಗಿತ್ತು. ಗಿಲ್ಲಿ ಅವರ ವರ್ತನೆ ಕಂಡು ಅಶ್ವಿನಿ ಅವರಿಗೆ ಕೋಪ ಬರುವಂತೆ ಮಾಡಿದೆ. ಗಿಲ್ಲಿ ಬಳಿ ಬಂದಾಗ ಅವರು ಕಾಲ ಮೇಲೆ ಕಾಲು ಹಾಕಿ ಕೂತಿದ್ದರು. ಇದು ಅಶ್ವಿನಿ ಗೌಡ ಕೋಪಕ್ಕೆ ಕಾರಣ ಆಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಗಿಲ್ಲಿ (Gilli) ಹಾಗೂ ಅಶ್ವಿನಿ (Ashwini) ಜಗಳ ಹೊಸತೇನಲ್ಲ.ಮೊದಲಿಂದಲೂ ಅಶ್ವಿನಿ ಗೌಡ ಅವರು ಹೇಳೋದು ಒಂದೇ ಮಾತು, ಏನಂದರೆ `ಗಿಲ್ಲಿ ನನ್ನನ್ನು ಟಾರ್ಗೆಟ್ ಮಾಡುತ್ತಾರೆ' ಎಂದು. ಇದೀಗ ವಾಹಿನಿ ಪ್ರೋಮೋ ಬಿಟ್ಟಿದೆ. ಗಿಲ್ಲಿ ಅವರು ಅಶ್ವಿನಿ ವಿರುದ್ಧವಾಗಿ ಹೇಳಿಕೆ ಕೊಟ್ಟಿದ್ದಾರೆ. ಪದೇ ಪದೇ ಮನೆಯ ಮೂಲ ನಿಯಮವನ್ನು (Bigg Boss Rules) ಮುರಿಯುವುದೇ ಅಶ್ವಿನಿ ಗೌಡ ಎಂದು ಹೇಳಿದ್ದಾರೆ.
ಗಿಲ್ಲಿ ಕೊಟ್ಟ ಕಾರಣ ಮಾತ್ರ ಖಡಕ್
ಬಿಗ್ ಬಾಸ್ ಸ್ಪರ್ಧಿಗಳಿಗೆ ಪದೇ ಪದೇ ಮನೆಯ ಮೂಲ ನಿಯಮವನ್ನು ಮುರಿಯುವ ಸ್ಪರ್ಧಿಯನ್ನು ಸೂಚಿಸಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಬಹುತೇಕ ಸ್ಪರ್ಧಿಗಳು ಅಶ್ವಿನಿ ಅವರ ಹೆಸರನ್ನು ಹೇಳಿದ್ದಾರೆ. ಆದರೆ ಗಿಲ್ಲಿ ಕೊಟ್ಟ ಕಾರಣ ಮಾತ್ರ ಖಡಕ್ ಆಗಿತ್ತು.
ಗಿಲ್ಲಿ ಮಾತನಾಡಿ, ʻಅಶ್ವಿನಿ ಅವರಿಗೆ ನಾಮಿನೇಶನ್ ಮೇಲೆಯೂ ಸೀರಿಯೆಸ್‌ನೆಸ್ ಇಲ್ಲ. ರೂಲ್ಸ್ ಮೇಲೂ ಸೀರಿಯೆಸ್‌ನೆಸ್ ಇಲ್ಲ. ಕಠಿಣವಾದ ಶಿಕ್ಷೆ ಬಿಗ್ ಬಾಸ್ ಕೊಡಬೇಕು' ಎಂದಿದ್ದಾರೆ. ಬಿಗ್ ಬಾಸ್ ಕೂಡ ಅದರಂತೆ, `ಮನೆಯ ಸದಸ್ಯರ ಬಳಿ ಬಸ್ಕಿ ಹೊಡೆದು ನಿಯಮಗಳನ್ನು ಮುರಿಯುವುದಿಲ್ಲ ಎಂದು ಹೇಳಬೇಕು' ಎಂದು ಶಿಕ್ಷೆ ಕೊಟ್ಟಿದ್ದಾರೆ.
ಇದನ್ನೂ ಓದಿ: Bigg Boss Kannada 12: ಕಾವ್ಯ ಆದ ಗಿಲ್ಲಿ, ಗಿಲ್ಲಿ ಆದ ಕಾವ್ಯ ! ಬಿಗ್ಬಾಸ್ ಮನೆಯಲ್ಲಿ ನಗುವಿನ ಹಬ್ಬ
ಅಶ್ವಿನಿ ಅವರೂ ಅದರಂತೆ ಮಾಡಿದ್ದಾರೆ. ಆದರೆ ಗಿಲ್ಲಿ ಅವರ ವರ್ತನೆ ಕಂಡು ಅಶ್ವಿನಿ ಅವರಿಗೆ ಕೋಪ ಬರುವಂತೆ ಮಾಡಿದೆ. ಗಿಲ್ಲಿ ಬಳಿ ಬಂದಾಗ ಅವರು ಕಾಲ ಮೇಲೆ ಕಾಲು ಹಾಕಿ ಕೂತಿದ್ದರು. ಇದು ಅಶ್ವಿನಿ ಗೌಡ ಕೋಪಕ್ಕೆ ಕಾರಣ ಆಗಿದೆ.
`ತೀರಾ ಓವರ್ ಆಗಿ ಆಡಬೇಡ. ನಿನ್ನ ಧಿಮಾಕು ನಿನ್ನ ಹತ್ತಿರ ಇಟ್ಕೋ. ನಿನ್ನ ವ್ಯಕ್ತಿತ್ವ ಗೊತ್ತಾಗತ್ತೆ, ನನ್ನದಲ್ಲ' ಎಂದು ಗಿಲ್ಲಿಗೆ ಆವಾಜ್ ಹಾಕಿದ್ದಾರೆ. ಪ್ರೋಮೊ ನೋಡಿದರೆ ಈ ವಾರ ಅಶ್ವಿನಿ ಗೌಡ ಅವರು ನಾಮಿನೇಟ್ ಕೂಡ ಆಗಿದ್ದಾರೆ.
ಉತ್ತಮ ಪಡೆದುಕೊಂಡಿದ್ದ ಅಶ್ವಿನಿ
ಕಳೆದ ವಾರ ಅಶ್ವಿನಿ ಅವರು ಉತ್ತಮ ಪಡೆದುಕೊಂಡಿದ್ದರು. ಇದೇ ಸ್ಪರ್ಧಿಗಳು, ಅಶ್ವಿನಿ ಅವರನ್ನ ಹೊಗಳಿ ಉತ್ತಮ ಪಟ್ಟ ನೀಡಿದ್ದರು. ಆದರೀಗ ಮೂಲ ನಿಯಮವನ್ನೇ ಉಲ್ಲಂಘಿಸುವುದು ಅಶ್ವಿನಿ ಗೌಡ ಎಂದಿದ್ದಾರೆ. ಅಶ್ವಿನಿ ಅವರು ಮನೆಯಲ್ಲಿ ಅನೇಕ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಎಲ್ಲರೊಂದಿಗೆ ಚರ್ಚಿಸಿ ಕಳಪೆ ನೀಡುವುದರಲ್ಲಿ ಅಶ್ವಿನಿ ಎತ್ತಿದ ಕೈ. ಈ ಬಗ್ಗೆಯೂ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು.
ಈ ಹಿಂದೆ ಅಶ್ವಿನಿ ಅವರಿಗೆ ಕಳಪೆ ಕೊಟ್ಟಾಗಲೂ, ತರಕಾರಿ ಸಹಿತ ಕಟ್ ಮಾಡಿರಲಿಲ್ಲ. ಬೇಕು ಎಂದೇ ಬಾತ್‌ರೂಮ್‌ಗೆ ಪದೇ ಪದೇ ಹೋಗೋದು, ಜೈಲಿನಿಂದ ಆಚೆ ಬರೋದು ಈ ರೀತಿ ನಿಯಮಗಳನ್ನ ಬ್ರೇಕ್ ಮಾಡಿದ್ದರು. ಉಸ್ತುವಾರಿ ಸಮಯದಲ್ಲೂ ತಮ್ಮದೇ ರೂಲ್ಸ್ ಹಾಕಿಕೊಂಡು ಎಷ್ಟೋ ಬಾರಿ ಆಟ ಆಡಿದ್ದೂ ಇದೆ.
ಮನೆಯಲ್ಲಿ ದಾಂಧಲೆ
ಈ ಮುಂಚೆಯೇ ಅಶ್ವಿನಿ ಅವರು ರೂಲ್ಸ್ ಬ್ರೇಕ್ ಮಾಡಿದ್ದಕ್ಕಾಗಿ ಸುದೀಪ್ ಅವರಿಂದ ಶಿಕ್ಷೆ ಪಡೆದುಕೊಂಡಿದ್ದರು. ಅಶ್ವಿನಿ ಗೌಡ ಅವರು ಕಳಪೆ ಆದ ಸಮಯದಲ್ಲಿ ಹಲವು ರೂಲ್ಸ್ ಬ್ರೇಕ್ ಮಾಡಿದ್ದರು. ಈ ಒಂದು ಉಲ್ಲಂಘನೆಗೆ ಸುದೀಪ್ ಒಂದು ಶಿಕ್ಷೆ ಕೊಟ್ಟಿದ್ದರು.
ಇದನ್ನೂ ಓದಿ: Bigg Boss Kannada 12: ಕಾವ್ಯ ಆದ ಗಿಲ್ಲಿ, ಗಿಲ್ಲಿ ಆದ ಕಾವ್ಯ ! ಬಿಗ್ಬಾಸ್ ಮನೆಯಲ್ಲಿ ನಗುವಿನ ಹಬ್ಬ
ಮನೆಯ ಅಷ್ಟೂ ಕ್ಯಾಮರಾ ಎದುರು ಕ್ಷಮೆ ಕೇಳಬೇಕು ಎಂದಿದ್ದರು. ಅಶ್ವಿನಿ ಗೌಡ ಬಳಿಕ ಕ್ಯಾಮೆರಾ ಮುಂದೆ ಕ್ಷಮೆ ಕೇಳಿದ್ದರು. ಈ ಜವಾಬ್ದಾರಿಯನ್ನ ಕ್ಯಾಪ್ಟನ್ ರಘುಗೆ ಸುದೀಪ್ ವಹಿಸಿದ್ದರು.