ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Radhika Pandit: ಬರ್ತ್‌ಡೇ ದಿನ ಫ್ಯಾನ್ಸ್‌ ಭೇಟಿ ಮಾಡಿದ ರಾಧಿಕಾ ಪಂಡಿತ್

Radhika Pandit: ಮಾರ್ಚ್ 07 ರಾಧಿಕಾ ಪಂಡಿತ್ ಹುಟ್ಟುಹಬ್ಬ . ಇಂದು ನಟಿ ರಾಧಿಕಾ ಪಂಡಿತ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ದಿನವನ್ನು ಅಭಿಮಾನಿಗಳ ಜೊತೆ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ ನಟಿ. ಇಂದು ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ರಾಜ್ಯದ ಹಲವು ಮೂಲೆಗಳಿಂದ ಅಭಿಮಾನಿಗಳು ಬಂದು ತಮ್ಮ ಮೆಚ್ಚಿನ ನಟಿಗೆ ಶುಭಾಶಯಗಳನ್ನು ಕೋರಿದರು.

ಬರ್ತ್‌ಡೇ ದಿನ ಫ್ಯಾನ್ಸ್‌ ಭೇಟಿ ಮಾಡಿದ ರಾಧಿಕಾ ಪಂಡಿತ್

ರಾಧಿಕಾ ಪಂಡಿತ್‌ -

Yashaswi Devadiga
Yashaswi Devadiga Mar 7, 2026 6:26 PM

ಮಾರ್ಚ್ 07 ರಾಧಿಕಾ ಪಂಡಿತ್ ಹುಟ್ಟುಹಬ್ಬ (Radhika Pandit Birthday). ಇಂದು ನಟಿ ರಾಧಿಕಾ ಪಂಡಿತ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ದಿನವನ್ನು ಅಭಿಮಾನಿಗಳ (Fans) ಜೊತೆ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ ನಟಿ. ಇಂದು ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ರಾಜ್ಯದ (State) ಹಲವು ಮೂಲೆಗಳಿಂದ ಅಭಿಮಾನಿಗಳು ಬಂದು ತಮ್ಮ ಮೆಚ್ಚಿನ ನಟಿಗೆ ಶುಭಾಶಯಗಳನ್ನು ಕೋರಿದರು.

ಅಭಿಮಾನಿಗಳಿಗೆ ಆಟೊಗ್ರಾಫ್ ಕೊಟ್ಟ ರಾಧಿಕಾ

ರಾಧಿಕಾ ಪಂಡಿತ್ ಸಹ ತಮಗಾಗಿ ಬಂದ ಅಭಿಮಾನಿಗಳನ್ನು ಭೇಟಿ ಆದರು. ಅವರೊಟ್ಟಿಗೆ ಸೆಲ್ಫಿ ತೆಗೆಸಿಕೊಂಡರು. ಅವರು ಪ್ರೀತಿಯಿಂದ ತಂದಿದ್ದ ಕೇಕ್ ಕತ್ತರಿಸಿ ಖುಷಿ ಪಟ್ಟರು. ಅಭಿಮಾನಿಗಳೊಟ್ಟಿಗೆ ನಗು ಮುಖದೊಂದಿಗೆ ಸೆಲ್ಫಿ ಸಹ ತೆಗೆಸಿಕೊಂಡರು. ಅಭಿಮಾನಿಗಳಿಗೆ ಆಟೊಗ್ರಾಫ್ ಸಹ ಹಾಕಿದರು.

ಇದನ್ನೂ ಓದಿ: Allu Sirish Nayanika Reddy: ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಲ್ಲು ಸಿರಿಶ್; ಫೋಟೋ ಹಂಚಿಕೊಂಡ ರಾಮ್‌ ಚರಣ್‌

ಮಾಧ್ಯಮದೊಂದಿಗೆ ಮಾತನಾಡಿದ ರಾಧಿಕಾ ‘ನಿಮ್ಮ ನಟನೆ ಇಷ್ಟವಾಗುತ್ತೆ, ನಿಮ್ಮ ಸಿನಿಮಾ ಇಷ್ಟವಾಗುತ್ತೆ ಎಂದು ಅಭಿಮಾನಿಗಳು ಹೇಳಿದಾಗ ಸಹಜವಾಗಿಯೇ ಖುಷಿ ಆಗುತ್ತದೆ. ಆದರೆ ನಿಮ್ಮ ವ್ಯಕ್ತಿತ್ವ ಇಷ್ಟ, ನೀವು ನನಗೆ ಸ್ಪೂರ್ತಿ, ನೀವು ನನಗೆ ಆದರ್ಶ ಎಂದು ಜನರು ಹೇಳಿದಾಗ ನಿಜಕ್ಕೂ ಹೆಮ್ಮೆ ಆಗುತ್ತದೆ. ಪ್ರತಿ ವರ್ಷವೂ ನಾನು ತಪ್ಪದೇ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ. ಆ ಒಂದು ದಿನ ಅವರೊಟ್ಟಿಗೆ ಕಳೆಯುವುದು ನನಗೆ ಇಷ್ಟ. ಇದು ನನಗೆ ಕಷ್ಟ, ಮುಜುಗರ ಎಂದೆಲ್ಲ ಎನಿಸುವುದಿಲ್ಲ, ಅಭಿಮಾನಿಗಳನ್ನು ಭೇಟಿ ಮಾಡುವುದನ್ನು ನಾನು ಎಂಜಾಯ್ ಮಾಡುತ್ತೇನೆ’ ಎಂದಿದ್ದಾರೆ ರಾಧಿಕಾ.

ಮೊಗ್ಗಿನ ಮನಸು ಚಿತ್ರದಲ್ಲಿ ಯಶ್​ ಜೊತೆ ರಾಧಿಕಾ ನಟಿಸಿದ್ದರು. ಇದಾದ ಬಳಿಕ ಹಲವಾರು ಹಿಟ್​ ಸಿನಿಮಾಗಳನ್ನು ನಟಿ ನೀಡಿದ್ದಾರೆ. ಅದ್ಧೂರಿ, ಅಲೆಮಾರಿ, ಹುಡುಗರು, ಕೃಷ್ಣನ್ ಲವ್ ಸ್ಟೋರಿ, ಡ್ರಾಮಾ, ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪೀಕ್​ನಲ್ಲಿ ಇರುವಾಗಲೇ ಯಶ್​ ಜೊತೆ ಮದುವೆಯಾಯಿತು.

ಇದನ್ನೂ ಓದಿ: Dhurandhar 2 Trailer OUT: 'ಧುರಂಧರ್ 2' ಟ್ರೇಲರ್ ಔಟ್‌; ನಿರೀಕ್ಷೆ ಹೆಚ್ಚಿಸುವಂತೆ ಮಾಡಿದ ಆಕ್ಷನ್-ಪ್ಯಾಕ್ಡ್ ರಣವೀರ್‌ ಮೂವಿ!

ಇದೇ ವೇಳೆ ಯಶ್​ ಕೊಟ್ಟ ಉಡುಗೊರೆ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ, ‘ನಮ್ಮ ಪಾಲಿಗೆ ಪರಸ್ಪರ ಸಮಯ ಕೊಟ್ಟುಕೊಳ್ಳುವುದು ದೊಡ್ಡ ಉಡುಗೊರೆ. ವಸ್ತುಗಳ ಉಡುಗೊರೆ ಯಾವತ್ತೂ ಮಾಡಲ್ಲ. ಇಬ್ಬರೂ ಜೊತೆಯಾಗಿದ್ದರೆ ಅದಕ್ಕಿಂತ ದೊಡ್ಡ ಉಡುಗೊರೆ ಮತ್ತೊಂದಿಲ್ಲ ಎಂದಿದ್ದಾರೆ.