ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannnada 12: ಏಕವಚನ ಬಳಕೆ ಮಾಡಿ, ಅಶ್ವಿನಿ ಗೌಡ ಪಿತ್ತ ನೆತ್ತಿಗೇರಿಸಿದ ಗಿಲ್ಲಿ; ಇಲ್ಲಿ ಉಸ್ತುವಾರಿಗಳದ್ದೇ ಕದನ!

BBK 12: ಇದೀಗ ಹೊಸ ಪ್ರೋಮೊ ಔಟ್‌ ಆಗಿದ್ದು, ಗಿಲ್ಲಿ ಹಾಗೂ ಅಶ್ವಿನಿ ಗೌಡ ಉಸ್ತುವಾರಿ ವಹಿಸಿಕೊಂಡಿದ್ದರು. ಆದರೆ ಆಟ ಆಡೋ ಸದಸ್ಯರಿಗಿಂತ ಉಸ್ತುವಾರಿಗಳ ಕದನ ಬಲು ಜೋರಾಗಿದೆ. ಈ ವೇಳೆ ಗಿಲ್ಲಿ ಅವರು ಏಕವಚನ ಬಳಕೆ ಮಾಡಿದ್ದಾರೆ. ಅಶ್ವಿನಿ ಗೌಡ ಅವರ ಪಿತ್ತ ನೆತ್ತಿಗೇರಿದೆ. ಅಶ್ವಿನಿ ಅವರು, ʻಸರಿಯಾಗಿ ಉಸ್ತುವಾರಿ ಮಾಡುʼ ಎಂದು ಗಿಲ್ಲಿ ಮೇಲೆ ಮೊದಲಿಗೆ ಕೂಗಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಗಿಲ್ಲಿ ಅವರು, ʻನೀನು ಕರೆಕ್ಟ್‌ ಆಗಿ ಉಸ್ತುವಾರಿ ಮಾಡೊಮ್ಮೋʼ ಅಂತ ಕಿರುಚಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ದಿನೇ ದಿನೇ ಟಾಸ್ಕ್‌ ಕಠಿಣವಾಗುತ್ತಿದೆ. ಸ್ಪರ್ಧಿಗಳ ಮಧ್ಯೆ ವಾಗ್ವಾದವೂ (Clash) ಜೋರಾಗಿದೆ. ಇದೀಗ ಹೊಸ ಪ್ರೋಮೊ ಔಟ್‌ (New Promo) ಆಗಿದ್ದು, ಗಿಲ್ಲಿ ಹಾಗೂ ಅಶ್ವಿನಿ ಗೌಡ (Ashwini Gowda) ಉಸ್ತುವಾರಿ ವಹಿಸಿಕೊಂಡಿದ್ದರು. ಆದರೆ ಆಟ ಆಡೋ ಸದಸ್ಯರಿಗಿಂತ ಉಸ್ತುವಾರಿಗಳ ಕದನ ಬಲು ಜೋರಾಗಿದೆ. ಈ ವೇಳೆ ಗಿಲ್ಲಿ (Gilli Nata) ಅವರು ಏಕವಚನ ಬಳಕೆ ಮಾಡಿದ್ದಾರೆ. ಅಶ್ವಿನಿ ಗೌಡ ಅವರ ಪಿತ್ತ ನೆತ್ತಿಗೇರಿದೆ.

ಟಾಸ್ಕ್‌ ಏನು?

ಡ್ರಮ್‌ ಭಾರ ಹೆಚ್ಚಿಸಲು, ಅದನ್ನು ಹೊತ್ತು ನಿಂತ ಸದಸ್ಯರು, ಡ್ರಮ್ಮನ್ನು ನೆಲಕ್ಕೆ ಇಳಿಸುವಂತೆ ಮಾಡಬೇಕು ಎಂಬುದು ಬಿಗ್‌ ಬಾಸ್‌ ಟಾಸ್ಕ್‌. ಈ ವೇಳೆ ಅಶ್ವಿನಿ ಹಾಗೂ ಗಿಲ್ಲಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಅಶ್ವಿನಿ ಅವರು, ʻಸರಿಯಾಗಿ ಉಸ್ತುವಾರಿ ಮಾಡುʼ ಎಂದು ಗಿಲ್ಲಿ ಮೇಲೆ ಮೊದಲಿಗೆ ಕೂಗಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಗಿಲ್ಲಿ ಅವರು, ʻನೀನು ಕರೆಕ್ಟ್‌ ಆಗಿ ಉಸ್ತುವಾರಿ ಮಾಡೊಮ್ಮೋʼ ಅಂತ ಕಿರುಚಾಡಿದ್ದಾರೆ. ಗಿಲ್ಲಿ ಏಕವಚನದಲ್ಲಿ ಮಾತನಾಡಿದ ಬಳಿಕ ಅಶ್ವಿನಿ ಪಿತ್ತ ನೆತ್ತಿಗೇರಿದೆ.

ಇದನ್ನೂ ಓದಿ: Bigg Boss Kannada: ಸುದೀಪ್‌ ಮಾತಿಗೂ ಬೆಲೆ ಇಲ್ವಾ? ಅಶ್ವಿನಿ ಗೌಡ - ಜಾಹ್ನವಿ ಉದ್ಧಟತನಕ್ಕೆ ಕಠಿಣ ಶಿಕ್ಷೆ ನೀಡಿದ ಬಿಗ್‌ ಬಾಸ್‌

ಅದಕ್ಕೆ ಅಶ್ವಿನಿ ಗೌಡ ಅವರು ʻನೀನು ಯಾವನೋ ನನಗೆ ನೀನು ತಾನು ಹೇಳೋಕೆʼ ಅಂತ ಅಬ್ಬರಿಸಿದ್ದಾರೆ. ʻನಿನ್ನ ವ್ಯಕ್ತಿತ್ವ ಏನು ಅಂತ ಗೊತ್ತಾಗತ್ತೆʼ ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಗಿಲ್ಲಿ, ʻವಟ ವಟ ಅಂತ ಬಿಪಿ ರೈಸ್‌ ಮಾಡ್ಕೋಬೇಡʼ ಎಂದಿದ್ದಾರೆ. ಪ್ರೋಮೋ ನೋಡಿದರೆ, ಟೀಂ ಜಗಳಕ್ಕಿಂತ, ಇಲ್ಲಿ ಉಸ್ತುವಾರಿಗಳದ್ದೇ ಕದನ ಜೋರಾದಂತಿದೆ.

ಕಲರ್ಸ್‌ ಕನ್ನಡ ಪ್ರೋಮೋ



ಗಿಲ್ಲಿ, ಅಶ್ವಿನಿಗೂ ಅಷ್ಟಕಷ್ಟೇ!

ನಿನ್ನೆಯ ಸಂಚಿಕೆಯಲ್ಲೂ ಗಿಲ್ಲಿ ಹಾಗೂ ಅಶ್ವಿನಿ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಗಿಲ್ಲಿ ಅವರಿಗೆ ಗುಲಾಮ ಅಂತ ಪಟ್ಟ ಬಂದಾಗ, ಅಶ್ವಿನಿ ಅವರು ಜಾಹ್ನವಿ ಜೊತೆಗೂಡಿ ಟೇಬಲ್‌ ಒರೆಸಲು ಆರ್ಡರ್‌ ಮಾಡಿದ್ದರು. ಇನ್ನೊಂದು ಕಡೆ ಅಶ್ವಿನಿ ಅವರಿಗೂ ಟಾಸ್ಕ್‌ ಇತ್ತು. ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಪದೇ ಪದೇ ಮನೆಯ ಮೂಲ ನಿಯಮವನ್ನು ಮುರಿಯುವ ಸ್ಪರ್ಧಿಯನ್ನು ಸೂಚಿಸಿ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಬಹುತೇಕ ಸ್ಪರ್ಧಿಗಳು ಅಶ್ವಿನಿ ಅವರ ಹೆಸರನ್ನು ಹೇಳಿದ್ದಾರೆ.

ಮನೆಯ ಸದಸ್ಯರ ಬಳಿ ಬಸ್ಕಿ ಹೊಡೆದು ನಿಯಮಗಳನ್ನು ಮುರಿಯುವುದಿಲ್ಲ ಎಂದು ಹೇಳಬೇಕು' ಎಂದು ಶಿಕ್ಷೆ ಕೊಟ್ಟಿದ್ದರು ಬಿಗ್‌ ಬಾಸ್‌, ಅಶ್ವಿನಿ ಅವರೂ ಅದರಂತೆ ಮಾಡಿದ್ದರು. ಆದರೆ ಗಿಲ್ಲಿ ಅವರ ವರ್ತನೆ ಕಂಡು ಅಶ್ವಿನಿ ಅವರಿಗೆ ಕೋಪ ಬರುವಂತೆ ಮಾಡಿತ್ತು.

ಇದನ್ನೂ ಓದಿ: Bigg Boss Kannada 12: ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡ ಅಶ್ವಿನಿ-ಜಾಹ್ನವಿ; ಇವರೆಲ್ಲರ ಕಣ್ಣು ಬೀಳಬಾರದಂತೆ!

ಗಿಲ್ಲಿ ಬಳಿ ಬಂದಾಗ ಅವರು ಕಾಲ ಮೇಲೆ ಕಾಲು ಹಾಕಿ ಕೂತಿದ್ದರು. ಇದು ಅಶ್ವಿನಿ ಗೌಡ ಕೋಪಕ್ಕೆ ಕಾರಣ ಆಗಿತ್ತು. `ತೀರಾ ಓವರ್‌ ಆಗಿ ಆಡಬೇಡ. ನಿನ್ನ ಧಿಮಾಕು ನಿನ್ನ ಹತ್ತಿರ ಇಟ್ಕೋ. ನಿನ್ನ ವ್ಯಕ್ತಿತ್ವ ಗೊತ್ತಾಗತ್ತೆ, ನನ್ನದಲ್ಲ' ಎಂದು ಗಿಲ್ಲಿಗೆ ಆವಾಜ್‌ ಹಾಕಿದ್ದರು.

Yashaswi Devadiga

View all posts by this author