ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ತಮಗಾದ ಅವಮಾನಕ್ಕೆ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ

BBK 12: ಈ ಹಿಂದೆ ಗಿಲ್ಲಿ ಅವರು ಏಕವಚನ ಬಳಕೆ ಮಾಡಿ, ಅಶ್ವಿನಿ ಅವರು ನೋವಲ್ಲಿ ಕಣ್ಣಿರಿಟ್ಟಿದ್ದರು. ಇದೀಗ ಕ್ಯಾಪ್ಟನ್‌ ರಘು ಅವರು ಕೂಡ ಅಶ್ವಿನಿ ಅವರಿಗೆ ಏಕವಚನ ಬಳಕೆ ಮಾಡಿದ್ದು, ಇನ್ನಷ್ಟು ನೋವು ತರಿಸಿದೆ ಅಶ್ವಿನಿ ಅವರಿಗೆ. ಹೀಗಾಗಿ ಊಟ ಬಿಟ್ಟು ಕೂತಿದ್ದಾರೆ. ಮನೆಯವರು ಎಷ್ಟೇ ರಿಕ್ವೆಸ್ಟ್‌ ಮಾಡಿದರೂ ನಾನು ಊಟ ಮಾಡಲ್ಲ ಅಂತ ಕೂತಿದ್ದಾರೆ ಅಶ್ವಿನಿ ಗೌಡ. ಇನ್ನು ಧನುಷ್‌ ಹಾಗೂ ಅಭಿ ಅವರು ಅಶ್ವಿನಿ ಅವರನ್ನು ಸಮಧಾನ ಪಡಿಸಲು ನೋಡಿದರು. ಆದರೆ ಅತ್ತ ರಘು, ಅವರಿಗೆ ರಕ್ಷಿತಾ ಕೂಡ ಕನ್ವಿನ್ಸ್‌ ಮಾಡಲು ನೋಡಿದ್ದಾರೆ .

ತಮಗಾದ ಅವಮಾನಕ್ಕೆ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 20, 2025 8:38 AM

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಅಶ್ವಿನಿ ಗೌಡ (Ashwini Gowda) ಅವರು ಕಣ್ಣೀರಿಡುತ್ತಿದ್ದಾರೆ. ಈ ಹಿಂದೆ ಗಿಲ್ಲಿ (Gilli) ಅವರು ಏಕವಚನ ಬಳಕೆ ಮಾಡಿ, ಅಶ್ವಿನಿ ಅವರು ನೋವಲ್ಲಿ ಕಣ್ಣಿರಿಟ್ಟಿದ್ದರು. ಇದೀಗ ಕ್ಯಾಪ್ಟನ್‌ ರಘು (Captain Raghu) ಅವರು ಕೂಡ ಅಶ್ವಿನಿ ಅವರಿಗೆ ಏಕವಚನ ಬಳಕೆ ಮಾಡಿದ್ದು, ಇನ್ನಷ್ಟು ನೋವು ತರಿಸಿದೆ ಅಶ್ವಿನಿ ಅವರಿಗೆ. ಹೀಗಾಗಿ ಊಟ ಬಿಟ್ಟು ಕೂತಿದ್ದಾರೆ. ಮನೆಯವರು ಎಷ್ಟೇ ರಿಕ್ವೆಸ್ಟ್‌ ಮಾಡಿದರೂ ನಾನು ಊಟ ಮಾಡಲ್ಲ ಅಂತ ಕೂತಿದ್ದಾರೆ ಅಶ್ವಿನಿ ಗೌಡ.

ಅಶ್ವಿನಿ ಗೌಡ ಅವರು ಬಹುತೇಕ ಸಂದರ್ಭಗಳಲ್ಲಿ ಏಕವಚನ ಬಳಕೆ ಮಾಡುತ್ತಾರೆ. ಗಿಲ್ಲಿ ಪದೇ ಪದೇ ಹೀಯಾಳಿಸಿದ್ದನ್ನು ಅವರ ಬಳಿ ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಕಣ್ಣೀರು ಹಾಕಿದ್ದಾರೆ.

ರಘು ಜೊತೆಗೆ ಕ್ಲ್ಯಾಶ್‌!

ಅಶ್ವಿನಿ ಏಕವಚನ ಬಳಕೆ ಮಾಡಿದ್ದಕ್ಕೆ ಗಿಲ್ಲಿ ಕೂಡ ಏಕವಚನ ಬಳಸಿದರು. ಈ ವಾರದಿಂದ ಕಣ್ಣೀರ ಇಡುತ್ತಲೇ ಇದ್ದಾರೆ . ಇನ್ನು ನಿನ್ನೆ ಪ್ರೋಮೋ ಒಂದನ್ನ ಬಿಗ್‌ ಬಾಸ್‌ ಹಂಚಿಕೊಂಡಿದ್ದರು. ಮನೆಯ ಕ್ಲೀನಿಂಗ್‌ ವಿಚಾರವಾಗಿ , ರಘು ಹಾಗೂ ಅಶ್ವಿನಿ ಮಧ್ಯೆ ವಾದ ನಡೆದಿತ್ತು. ಈ ವೇಳೆ ರಘು ಅವರು ಅಶ್ವಿನಿ ಅವರ ವಿರುದ್ಧ ಏಕವಚನ ಬಳಕೆ ಮಾಡಿದ್ದರು. ಇದು ಅಶ್ವಿನಿ ಅವರಿಗೆ ನೋವುಂಟು ಮಾಡಿದೆ. ಊಟ ಮಾಡದೇ ಈಗ ಕೂತಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ವರ್ತನೆ ಕಂಡು ಕಾವ್ಯ ಕಣ್ಣೀರು! ಕಾವು ಮುನಿಸಿಗೆ ಕಾರಣವೇನು?

ನನಗೆ ನಾನೇ ಸ್ಟ್ಯಾಂಡ್‌

ಪ್ರೋಮೋದಲ್ಲಿ, ಜಾಹ್ನವಿ ಅವರು ಅಶ್ವಿನಿ ಅವರ ಬಳಿ ಬಂದು ಊಟ ನೀಡಲು ಬರುತ್ತಾರೆ. ಆದರೆ ಅಶ್ವಿನಿ ಅವರು ಮಾಡುವುದಿಲ್ಲ. ʻನನಗೆ ತುಂಬಾ ನೋವಾಗಿದೆ. ನನ್ನ ವಯಸ್ಸಿಗೆ, ನನ್ನ ಮೆಚ್ಯುರಿಟಿಗೆ ಈ ಥರಹದ ಅವಮಾನ ನನಗಲ್ಲ. ನನ್ನ ಸ್ವಾಭಿಮಾನ ಕೊಂದುಕೊಂಡು ತಿನ್ನೋಕೆ ಮನಸ್ಸು ಬರುತ್ತಾ? ನನಗೆ ನಾನೇ ಸ್ಟ್ಯಾಂಡ್‌ ತೆಗೆದುಕೊಳ್ಳುವೆʼ ಎಂದು ಕಣ್ಣೀರಿಟ್ಟಿದ್ದಾರೆ.

ಬಿಗ್‌ ಬಾಸ್‌ ಪ್ರೋಮೋ

ಇನ್ನು ಧನುಷ್‌ ಹಾಗೂ ಅಭಿ ಅವರು ಅಶ್ವಿನಿ ಅವರನ್ನು ಸಮಧಾನ ಪಡಿಸಲು ನೋಡಿದರು. ಆದರೆ ಅತ್ತ ರಘು, ಅವರಿಗೆ ರಕ್ಷಿತಾ ಕೂಡ ಕನ್ವಿನ್ಸ್‌ ಮಾಡಲು ನೋಡಿದ್ದಾರೆ . ಇಷ್ಟು ದಿನ ಗಟ್ಟಿಯಾಗಿ ಹೋರಾಡುತ್ತಿದ್ದ ಅವರು ಈಗ ಕಣ್ಣೀರು ಹಾಕಲು ಆರಂಭಿಸಿದ್ದಾರೆ.

ಮರ್ಯಾದೆ ಬಿಟ್ಟು ಬದುಕಲಾರೆ

ನಿನ್ನೆಯ ಎಪಿಸೋಡ್‌ನಲ್ಲಿ ಅಶ್ವಿನಿ ಅವರು ಕಣ್ಣೀರಿಟ್ಟರು. ಗಿಲ್ಲಿ ಪದೇ ಪದೇ ಹೀಯಾಳಿಸಿದ್ದನ್ನು ಅವರ ಬಳಿ ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಟಾಸ್ಕ್ ನಡೆಯುವಾಗ ಅಶ್ವಿನಿ ಹಾಗೂ ಗಿಲ್ಲಿ ಉಸ್ತುವಾರಿ ಆಗಿದ್ದರು. ಅಶ್ವಿನಿ ಏಕವಚನ ಬಳಕೆ ಮಾಡಿದ್ದಕ್ಕೆ ಗಿಲ್ಲಿ ಕೂಡ ಏಕವಚನ ಬಳಸಿದರು. ಏಕವಚನ ಬಳಸೋಕೆ ಅವನು ಯಾರು? ಸತ್ತೋಗಬಹುದು, ಆದರೆ, ಮರ್ಯಾದಿ ಬಿಟ್ಟು ಬದುಕೋಕೆ ಆಗಲ್ಲʼ ಎಂದು ಅಶ್ವಿನಿ ಹೇಳಿದ್ದರು. ಇದಾದ ನಂತರ ರಘು ಅವರೂ ಏಕವಚನ ಬಳಕೆ ಮಾಡಿದ್ದು ಅಶ್ವಿನಿ ಅವರಿಗೆ ನೋವು ತರಿಸಿದೆ.

ರಘು ಗೌಡ ಜೊತೆ ಅಶ್ವಿನಿ ಗೌಡ ಜಗಳ

ನವೆಂಬರ್‌ 19ರ ಸಂಚಿಕೆಯ ಹೊಸ ಪ್ರೋಮೋವನ್ನು ಕಲರ್ಸ್‌ ಕನ್ನಡ ವಾಹಿನಿಯವರು ರಿಲೀಸ್‌ ಮಾಡಿದ್ದರು. ಅದರಲ್ಲಿ ಅಶ್ವಿನಿ ಗೌಡ ಮತ್ತು ರಘು ನಡುವೆ ದೊಡ್ಡ ಜಗಳವೇ ನಡೆದಿತ್ತು. ರಘು ಈಗ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಹಾಗಾಗಿ, ಮನೆ ಕೆಲಸ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿತ್ತು.

ಇದನ್ನೂ ಓದಿ: Bigg Boss Kannada: ಸುದೀಪ್‌ ಮಾತಿಗೂ ಬೆಲೆ ಇಲ್ವಾ? ಅಶ್ವಿನಿ ಗೌಡ - ಜಾಹ್ನವಿ ಉದ್ಧಟತನಕ್ಕೆ ಕಠಿಣ ಶಿಕ್ಷೆ ನೀಡಿದ ಬಿಗ್‌ ಬಾಸ್‌

ಇದರಿಂದ ರೋಸಿಹೋದ ಅಶ್ವಿನಿ ಗೌಡ, ಅಳುತ್ತಾ ಬಿಗ್‌ ಬಾಸ್‌ ಮನೆಯ ಬಾಗಿಲು ಬಡಿದಿದ್ದರು.‌ . "ನಾನು ಹೊರಗೆ ಹೋಗಬೇಕು" ಎಂದು ಹಠ ಮಾಡುತ್ತಿದ್ದ ಅಶ್ವಿನಿ ಗೌಡ ಅವರನ್ನು ಮನೆಯ ಸದಸ್ಯರು ಸಮಾಧಾನ ಮಾಡೋಕೆ ತುಂಬಾ ಪ್ರಯತ್ನಿಸಿದ್ದರು. ಆದರೀಗ ಹೊಸ ಪ್ರೋಮೋ ನೋಡಿದರೆ ಅಶ್ವಿನಿ ಕೋಪ ತಣ್ಣಗಾದಂತೆ ಇಲ್ಲ.