ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಈ ವಾರ ಎಲಿಮಿನೇಷನ್ (Elimination) ಕುತೂಹಲವಾಗೇ ನಡೆದು ಹೋಗಿದೆ. ಮೊದಲಿಗೆ ರಿಷಾ (Risha) ಅವರು ಈ ವಾರ ಮನೆಯಿಂದ ಔಟ್ ಆಗ್ತಾರೆ ಅಂದುಕೊಂಡಿದ್ದ ವೀಕ್ಷಕರಿಗೆ ಕೊನೆಯಲ್ಲಿ ಸರ್‌ಪ್ರೈಸ್ ಎಲಿಮಿನೇಶನ್ ಅಂತೇ ಭಾಸವಾಗಿದೆ. ಹೌದು ಈಗ ಚಂದ್ರಪ್ರಭ (Chandraprabha) ಅವರು ಮನೆಯಿಂದ ಎಲಿಮಿನೇಟ್ ಆಗಿರೋದು ಕನ್‌ಫರ್ಮ್ ಆಗಿದೆ. ಕಳೆದ ಭಾನುವಾರದ ಎಪಿಸೋಡ್ನಲ್ಲಿ ಮಲ್ಲಮ್ಮ ಎಲಿಮಿನೇಟ್ ಆಗಿ ಹೊರಬಂದಿದ್ದರು. ಬೇಸರದಲ್ಲಿ ಇದ್ದ ವೀಕ್ಷಕರಿಗೆ ಈ ವಾರ ಫುಲ್ ಟ್ವಿಸ್ಟ್ (Twist) ಅನ್ನಿಸಿದೆ.
ಮಧ್ಯದಲ್ಲೇ ಎದ್ದು ಹೋದ ಚಂದ್ರಪ್ರಭ
ಈ ವಾರ ಸೂರಜ್, ಸ್ಪಂದನಾ, ಧ್ರುವ್, ಚಂದ್ರಪ್ರಭ, ಕಾಕ್ರೋಚ್ ಸುಧಿ, ರಕ್ಷಿತಾ, ಗಿಲ್ಲಿ ಹಾಗೂ ಅಶ್ವಿನಿ ಗೌಡ ಪತ್ರ ಸಿಗದೆ ನಾಮಿನೇಟ್ ಆಗಿದ್ದರು. ನಿನ್ನೆ ಅಶ್ವಿನಿ, ಧನುಷ್, ಗಿಲ್ಲಿ, ರಕ್ಷಿತಾ ಸೇವ್ ಆಗಿದ್ದರು. ಇನ್ನೇನು ಸುದೀಪ್ ಅವರು ರಿಷಾ ಅವರ ವಿಚಾರವಾಗಿ ಸ್ಪರ್ಧಿಗಳಿಗೆ ಟಾಸ್ಕ್ ಆಡಿಸುವಾಗ, ಏಕಾಏಕಿ ಮಧ್ಯದಲ್ಲಿ ಚಂದ್ರಪ್ರಭ ಅವರು ಎದ್ದು ಹೋಗುತ್ತಾರೆ.
ಇದನ್ನೂ ಓದಿ: Bigg Boss Kannada 12: ಡಮಾಲ್ ಡುಮಲ್ ಡಕ್ಕಾ, ಈ ಇಬ್ಬರು ಹೊರ ಹೋಗೋದು ಪಕ್ಕಾ?
ಸ್ಪರ್ಧಿಗಳು ಒಂದು ಕ್ಷಣ ಶಾಕ್ ಕೂಡ ಆದರು. ಬಳಿಕ ಚಂದ್ರಪ್ರಭ ಅವರನ್ನ ಮತ್ತೆ ಕರೆಸಿ ಕುಳಿಸುತ್ತಾರೆ ಸ್ಪರ್ಧಿಗಳು. ಸುದೀಪ್ ಈ ಬಗ್ಗೆ ವಿಚಾರಿಸಿದಾಗ, ನಾನು ಆಚೆ ಹೋಗುತ್ತೇನೆ ಎಂದು ಕಾರಣವನ್ನು ನೀಡಿದರು. ಆ ಬಳಿಕ ರಿಷಾ ಅವರ ರಿಸಲ್ಟ್ ನೋಡಿಕೊಂಡು ಸುದೀಪ್ ಮಾತನಾಡಿದ್ದಾರೆ.
ಗಿಲ್ಲಿ ಸೇರಿದಂತೆ ಇನ್ನೂ ಕೆಲವರು ಹೋಗಿ ಅವರನ್ನು ಮತ್ತೆ ಒಳಗೆ ಕರೆದುಕೊಂಡು ಬಂದರು. ಆದರೆ ಅಂತಿಮವಾಗಿ ಅವರು ಬಯಸಿದಂತೆ ಅವರೇ ಹೊರಗೆ ಬಂದರು.
ರಿಷಾ ಸೇಫ್!
ಇನ್ನು ಸ್ಪರ್ಧಿಗಳು ಒಮ್ಮತ ನಿರ್ಧಾರ ಮಾಡಿ, ರಿಷಾ ಅವರನ್ನು ಸೇಫ್ ಮಾಡಿದ್ದಾರೆ. ಬಳಿಕ ಉಳಿದುಕೊಂಡಿದ್ದು, ಕಾಕ್ರೋಚ್ ಸುಧಿ ಹಾಗೂ ಚಂದ್ರಪ್ರಭ ಅವರು. ಆ ಸಮಯದಲ್ಲಿ ಕಾಕ್ರೂಚ್ ಸುಧಿ ತಮ್ಮಲ್ಲಿದ್ದ ವಿಶೇಷ ಅಧಿಕಾರ ಬಳಸಿದರು. ಆ ಅಧಿಕಾರ ಬಳಸುವ ಮೂಲಕ ಬಿಗ್ಬಾಸ್ ಮನೆಯಲ್ಲೇ ಉಳಿದುಕೊಂಡರು.
ಒಂದೂ ಮಾತನಾಡದೇ ಹೊರ ಬಂದ ಚಂದ್ರಪ್ರಭ
ಚಂದ್ರಪ್ರಭ ಅವರು ಬೇಸರದಲ್ಲೇ ಇದ್ದರು. ಬಿಗ್ಬಾಸ್ ಮನೆಯಲ್ಲಿ ಹೇಗಿರಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದರು. ಅದಕ್ಕೂ ಮುಂಚೆ ಚಂದ್ರಪ್ರಭ ಅವರಿಗೆ ಊಸರವಳ್ಳಿ ಎಂಬ ಬಿರುದನ್ನು ಧನುಷ್ ನೀಡಿದರು. ಅದು ಸಹ ಅವರಿಗೆ ಬಹಳ ಬೇಸರ ತರಿಸಿತು ಎನ್ನಲಾಗುತ್ತಿದೆ. ಅಂತಿಮವಾಗಿ, ಸುಧಿ ತಮ್ಮ ಇಮ್ಯೂನಿಟಿಯನ್ನು ಬಳಸಿಕೊಂಡಿದ್ದರಿಂದ ಚಂದ್ರಪ್ರಭ ಎಲಿಮಿನೇಟ್ ಆದರು.
ಇದನ್ನೂ ಓದಿ: Mahanati Winner: ವಂಶಿ ಮುಡಿಗೇರಿದ ಮಹಾನಟಿ ಕಿರೀಟ! ವಿಜೇತೆಗೆ ಸಿಕ್ಕ ಬಹುಮಾನ ಏನು?
ಇನ್ನು ಅವರ ಪತ್ನಿ ಕೂಡ ಏನಾಯ್ತು ಹೇಳಿ ಎಂದು ಮತ್ತೊಮ್ಮೆ ಕೇಳಿದರು. ಆಗಲೂ ಚಂದ್ರಪ್ರಭ ಮಾತನಾಡಲಿಲ್ಲ. ಅವರ ಬೇಸರಕ್ಕೆ ಕಾರಣ ಏನೆಂಬುದು ಕೊನೆಗೂ ಗೊತ್ತಾಗದೇ ಉಳಿದು ಹೋಯ್ತು. ಸುದೀಪ್ ಅವರು ಕೂಡ ಪ್ರತ್ಯೇಕವಾಗಿ ಮಾತನಾಡಿದರು. ಆಗಲೂ ಕೂಡ ಚಂದ್ರಪ್ರಭ ಪ್ರತಿಕ್ರಿಯಿಸಲಿಲ್ಲ.